logo
ಕನ್ನಡ ಸುದ್ದಿ  /  ಕ್ರೀಡೆ  /  Shahid Afridi: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏನಾದರೂ ದೆವ್ವ ಇದ್ಯಾ; ಅಲ್ಲಿಯೇ ಆಡಿ ಗೆದ್ದು ಬನ್ನಿ; ಪಾಕ್​ಗೆ ಶಾಹಿದ್ ಅಫ್ರಿದಿ ಸಲಹೆ

Shahid Afridi: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏನಾದರೂ ದೆವ್ವ ಇದ್ಯಾ; ಅಲ್ಲಿಯೇ ಆಡಿ ಗೆದ್ದು ಬನ್ನಿ; ಪಾಕ್​ಗೆ ಶಾಹಿದ್ ಅಫ್ರಿದಿ ಸಲಹೆ

Prasanna Kumar P N HT Kannada

Jun 18, 2023 06:03 PM IST

google News

ಪಾಕಿಸ್ತಾನ ಮಾಜಿ ಆಟಗಾರ ಶಾಹಿದ್​ ಅಫ್ರಿದಿ

    • ಅಹ್ಮದಾಬಾದ್​ ಮೈದಾನದಲ್ಲಿ ಆಡಲ್ಲ ಎಂದು ಹೇಳಿದ್ದ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ಗೆ ತಮ್ಮದೇ ದೇಶದ ಮಾಜಿ ಆಟಗಾರ ಶಾಹಿದ್​ ಅಫ್ರಿದಿ ಅವರು ತರಾಟೆ ತೆಗೆದುಕೊಂಡಿದ್ದಾರೆ. ಅದೇ ಪಿಚ್​​ನಲ್ಲಿ ಆಡಿ ಗೆದ್ದು ತೋರಿಸಬೇಕು ಎಂದು ಸೂಚಿಸಿದ್ದಾರೆ. 
ಪಾಕಿಸ್ತಾನ ಮಾಜಿ ಆಟಗಾರ ಶಾಹಿದ್​ ಅಫ್ರಿದಿ
ಪಾಕಿಸ್ತಾನ ಮಾಜಿ ಆಟಗಾರ ಶಾಹಿದ್​ ಅಫ್ರಿದಿ

ಇದೇ ವರ್ಷ ಅಕ್ಟೋಬರ್​ನಿಂದ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ (ODI World Cup) ಪಾಕಿಸ್ತಾನ (Pakistan) ಭಾಗವಹಿಸಲಿದೆಯೇ? ಇಲ್ಲವೇ? ಈ ಬಗ್ಗೆ ಇನ್ನೂ ಅಸ್ಪಷ್ಟತೆ ಮುಂದುವರಿದಿದೆ. ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ (Asia Cup 2023) ಆಯೋಜಿಸಲು ಒಪ್ಪಿಕೊಂಡಿದೆ. ಜೊತೆಗೆ ಏಕದಿನ ವಿಶ್ವಕಪ್​ನಲ್ಲಿ ಆಡುವುದಾಗಿ ಹೇಳಿತ್ತು.

ವಿಶ್ವಕಪ್‌ ಆಡಲು ಭಾರತಕ್ಕೆ ಪ್ರಯಾಣಿಸಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ. ನಮ್ಮ ಸರ್ಕಾರ ಒಪ್ಪಿಗೆ ಸೂಚಿಸಿದರೆ, ಭಾರತಕ್ಕೆ ಬರುತ್ತೇವೆ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ (Najam Sethi) ಹೇಳಿಕೆ ನೀಡಿರುವುದು ಹೊಸ ಗೊಂದಲ ಸೃಷ್ಟಿಸಿದೆ. ಅಲ್ಲದೆ, ಭಾರತ-ಪಾಕಿಸ್ತಾನ (India vs Pakistan) ಪಂದ್ಯವನ್ನು ಅಹ್ಮದಾಬಾದ್​​ನಲ್ಲಿ ಹೊರತುಪಡಿಸಿ ಬೇರೆಡೆ ಆಡಬೇಕು ಎಂದು ಸೇಥಿ ಮತ್ತೊಮ್ಮೆ ವಿನಂತಿಸಿದ್ದಾರೆ.

ಅಫ್ರಿದಿ ಪ್ರತಿಕ್ರಿಯೆ

ಈ ಹಿಂದೆಯೂ ನಜಮ್​ ಸೇಥಿ ಸೇರಿದಂತೆ ಪಾಕ್​​ ಆಟಗಾರರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಮ್ಮ ಪಂದ್ಯಗಳನ್ನು ಆಡಿಸಬಾರದು. ಚೆನ್ನೈ, ಬೆಂಗಳೂರು, ಕೋಲ್ಕತ್ತಾದಲ್ಲಿ ನಮ್ಮ ಪಂದ್ಯಗಳನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದ್ದರು. ಇದೀಗ ನಜಮ್ ಸೇಥಿ ಅವರ ಹೇಳಿಕೆಗೆ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ (Shahid Afridi) ಪ್ರತಿಕ್ರಿಯಿಸಿದ್ದಾರೆ.

ಅದೇನು ದೆವ್ವನಾ?

ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ಪಂದ್ಯಗಳನ್ನು ಆಡಲು ನಮ್ಮ (ಪಾಕಿಸ್ತಾನ) ತಂಡಕ್ಕೆ ಏಕೆ ಭಯ? ಪಿಸಿಬಿಗೆ ನೇರವಾಗಿ ಪ್ರಶ್ನಿಸಿದ್ದಾರೆ. ವೇಳಾಪಟ್ಟಿ ಪ್ರಕಾರದಂತೆ ಅಲ್ಲಿಗೆ ತೆರಳಿ ಭರ್ಜರಿ ಪ್ರದರ್ಶನ ನೀಡಿ ಗೆಲ್ಲುವಂತೆ ಸೂಚಿಸಿದ್ದಾರೆ. ನೀವು ಅಹ್ಮದಾಬಾದ್​​​ನಲ್ಲಿ ಏಕೆ ನಿರಾಕರಿಸುತ್ತಿದ್ದೀರಿ? ಅಲ್ಲೇನಾದರೂ ದೆವ್ವ ಇದಿಯಾ? ಎಂದು ಪ್ರಶ್ನಿಸಿದ್ದಾರೆ.

ಸವಾಲು ಸ್ವೀಕರಿಸಿ

ಒಂದು ವೇಳೆ ಇದೇ ನಿಮಗೆ ಸಮಸ್ಯೆಯಾಗಿದ್ದರೆ, ಅದನ್ನೇ ಸವಾಲಾಗಿ ಸ್ವೀಕರಿಸಿ. ವೇಳಾಪಟ್ಟಿಯಂತೆ ಭಾರತಕ್ಕೆ ಹೋಗಿ, ಲಕ್ಷಾಂತರ ಭಾರತೀಯ ಅಭಿಮಾನಿಗಳ ಸಮ್ಮುಖದಲ್ಲಿ ಗೆದ್ದು ತೋರಿಸಿ. ಇದಲ್ಲವೇ ನಿಜವಾದ ಮಜಾ. ನಮಗೆ ಪಾಕಿಸ್ತಾನದ ಗೆಲುವು ಮುಖ್ಯ. ಅವರಿಗೆ (ಭಾರತಕ್ಕೆ) ಅಲ್ಲಿ ಪಂದ್ಯಗಳನ್ನು ಆಯೋಜಿಸುವುದು ಮುಖ್ಯ. ಅಲ್ಲಿಯೇ ಆಡಿ. ಅವರು ಬಯಸಿದ ಪಿಚ್‌ನಲ್ಲಿ ಆಡಿ. ಪಂದ್ಯವನ್ನು ಗೆಲ್ಲಿರಿ. ಇದು ನಿಜವಾದ ಯಶಸ್ಸು' ಎಂದು ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವೇಳಾಪಟ್ಟಿಗೆ ಪಾಕ್ ಅಡ್ಡಿ

ಏಕದಿನ ವಿಶ್ವಕಪ್ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಈ ಬಗ್ಗೆ ಐಸಿಸಿ ಅಂತಿಮ ಕಸರತ್ತು ನಡೆಸುತ್ತಿದೆ. ಅಹ್ಮದಾಬಾದ್‌ನಲ್ಲಿ ಆಡಲ್ಲ ಎಂದು ಪಿಸಿಬಿ ಹೊಸ ಬೇಡಿಕೆಗಳನ್ನು ಇಡುತ್ತಿದೆ. ಕೆಲವು ಸ್ಥಳಗಳಲ್ಲಿ ಮಾತ್ರ ಪಂದ್ಯಗಳನ್ನು ಆಡಬೇಕೆಂದು ಒತ್ತಾಯಿಸುತ್ತಿದೆ. ವಿಶ್ವಕಪ್ ವೇಳಾಪಟ್ಟಿ ವಿಳಂಬವಾಗುತ್ತಿದೆ. ಈ ವಿವಾದ ತೆರವಾದರೆ, ವಿಶ್ವಕಪ್ ವೇಳಾಪಟ್ಟಿ ಅಧಿಕೃತವಾಗಿ ಹೊರಬೀಳುವ ಸಾಧ್ಯತೆ ಇದೆ.

ನಮ್ಮ ಪರಿಸ್ಥಿತಿ ಈಗ ಭಾರತದಂತಿದೆ

ಬಿಸಿಸಿಐ ಪರಿಸ್ಥಿತಿ ನಮಗೆ ಅರ್ಥವಾಗಿದೆ. ನಮ್ಮ ದೇಶದಲ್ಲಿ ಆಡಬೇಕಾದರೆ, ಅವರ ಸರ್ಕಾರದ ಅನುಮತಿ ತೆಗೆದುಕೊಳ್ಳಬೇಕು. ನಮ್ಮ ದೇಶದಲ್ಲಿ ಆಡಬೇಕಾದರೆ ನಮ್ಮ ಸರ್ಕಾರದ ಅನುಮತಿ ಪಡೆಯಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ನಮ್ಮ ಪರಿಸ್ಥಿತಿ ಈಗ ಭಾರತದಂತೆಯೇ ಇದೆ ಎಂದು 2 ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ನಜಮ್ ಸೇಥಿ ಹೇಳಿದ್ದಾರೆ.

ಸರ್ಕಾರ ಅನುಮತಿ ಕೊಟ್ರೆ ಮಾತ್ರ

ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಹೋಗಲು ನಾವು ನಮ್ಮ ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ಐಸಿಸಿಗೂ ವಿವರಣೆ ನೀಡಿದ್ದೇವೆ. ನಾವು ಮೊದಲು ವಿನಂತಿಸಿದ ಸ್ಥಳಗಳಲ್ಲಿ ಅಹ್ಮದಾಬಾದ್​ ಇಲ್ಲ. ಆದರೆ, ಭಾರತ ನಮ್ಮೊಂದಿಗೆ (ಪಾಕಿಸ್ತಾನ) ಪಂದ್ಯವನ್ನು ಅಲ್ಲಿಯೇ ನಡೆಸಲು ಚಿಂತಿಸುತ್ತಿದೆ. ಈ ಬಗ್ಗೆ ನಾವು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ನಮಗೆ ಅನುಮತಿ ನೀಡಬೇಕು ಎಂದು ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ