logo
ಕನ್ನಡ ಸುದ್ದಿ  /  ಕ್ರೀಡೆ  /  Washington Sundar: ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಟ್ವಿಟರ್ ಖಾತೆ ಹ್ಯಾಕ್; ಕ್ರಿಪ್ಟೋಕರೆನ್ಸಿ ಕುರಿತ ಟ್ವೀಟ್ ಪೋಸ್ಟ್

Washington Sundar: ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಟ್ವಿಟರ್ ಖಾತೆ ಹ್ಯಾಕ್; ಕ್ರಿಪ್ಟೋಕರೆನ್ಸಿ ಕುರಿತ ಟ್ವೀಟ್ ಪೋಸ್ಟ್

Jayaraj HT Kannada

Jun 05, 2023 01:45 PM IST

ವಾಷಿಂಗ್ಟನ್‌ ಸುಂದರ್

    • Washington Sundar Twitter Account Hacked: ವಾಷಿಂಗ್ಟನ್ ಸುಂದರ್ ಅವರ ಟ್ವಿಟರ್‌ ಖಾತೆ ಮೇಲೂ ಹ್ಯಾಕರ್‌ಗಳು ತಮ್ಮ ಕೈಚಳಕ ತೋರಿಸಿರುವಂತಿದೆ. ಅಧಿಕೃತ ಖಾತೆಯಲ್ಲಿ ಕ್ರಿಪ್ಟೋಕರೆನ್ಸಿ ಸಂಬಂಧಿತ ಪೋಸ್ಟ್‌ಗಳು ಕಾಣಿಸಿಕೊಂಡಿದೆ.
ವಾಷಿಂಗ್ಟನ್‌ ಸುಂದರ್
ವಾಷಿಂಗ್ಟನ್‌ ಸುಂದರ್ (PTI)

ಟೀಮ್‌ ಇಂಡಿಯಾ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಅವರ ಟ್ವಿಟರ್‌ ಖಾತೆ ಇಂದು (ಮೇ 5, ಸೋಮವಾರ) ಹ್ಯಾಕ್‌ ಆಗಿದೆ. ಹ್ಯಾಕರ್‌ಗಳು ತಮ್ಮ ಕೈಚಳಕ ತೋರಿದ್ದು, ಸುಂದರ್‌ ಅವರ ಅಧಿಕೃತ‌ ಟ್ವಿಟರ್‌ ಖಾತೆಯಲ್ಲಿ ಕೆಲವು ಕ್ರಿಪ್ಟೋಕರೆನ್ಸಿಗಳಿಗೆ ಬಳಕೆದಾರರನ್ನು ಲಿಂಕ್ ಮಾಡುವ ಕುರಿತಾಗಿ ಸರಣಿ ಟ್ವೀಟ್‌ಗಳ ಪೋಸ್ಟ್‌ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಈ ಬಗ್ಗೆ ಗೊಂದಲಕ್ಕೀಡಾದ ಅಭಿಮಾನಿಗಳಿಗೆ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಹೀಗಾಗಿ ಅಭಿಮಾನಿಯೊಬ್ಬರು ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ಟ್ವಿಟರ್‌ನಲ್ಲಿಯೇ ಸುಂದರ್‌ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುಂದರ್‌, 'ಇಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ವಾಷಿಂಗ್ಟನ್‌ ಅವರೇ ನೀಡಿದ ಪ್ರತಿಕ್ರಿಯೆಯೋ ಅಥವಾ ಹ್ಯಾಕರ್‌ಗಳೋ ಎಂಬ ಬಗ್ಗೆ ಗೊಂದಲ ಮೂಡಿದೆ.

ಇಲ್ಲ ಎಂಬುದನ್ನು ಬಿಟ್ಟರೆ, ವಾಷಿಂಗ್ಟನ್‌ ಸುಂದರ್‌ ಅವರಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಅಲ್ಲದೆ ಬಿಸಿಸಿಐ ಕೂಡಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಕ್ರಿಕೆಟಿಗರ ಖಾತೆಯನ್ನು ಇದೇ ಮೊದಲ ಬಾರಿ ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದಲ್ಲ. ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಅಧಿಕೃತ ಟ್ವಿಟರ್‌ ಖಾತೆ ಕೂಡಾ ಹ್ಯಾಕ್‌ ಆಗಿತ್ತು. ಲಖನೌ ಸೂಪರ್ ಜೈಂಟ್ಸ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ ಖಾತೆಯನ್ನು ಕೂಡಾ ಹ್ಯಾಕರ್‌ಗಳು ತಮ್ಮ ಕಂಟ್ರೋಲ್‌ಗೆ ತೆಗೆದುಕೊಂಡಿದ್ದರು.‌

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2023ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಸುಂದರ್ ಆಡಿದ್ದರು. ಆದರೆ, ಮಂಡಿರಜ್ಜು ಗಾಯದಿಂದಾಗಿ ಅವರು ಪಂದ್ಯಗಳಿಗೆ ಲಭ್ಯವಾಗಲಿಲ್ಲ. ಏಪ್ರಿಲ್ 27ರಂದು ಅವರ ಅಲಭ್ಯತೆ ಕುರಿತು ಫ್ರಾಂಚೈಸಿಯು ಘೋಷಿಸಿತ್ತು.

ವಿರಾಟ್ ಕೊಹ್ಲಿ (Virat Kohli) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರುಗಳ ನಡುವೆ ಉತ್ತಮ ಬ್ಯಾಟರ್ ಯಾರು ಎಂಬ ಬಗೆಗಿನ ಚರ್ಚೆ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ ಎರಡು ಹೆಸರುಗಳೊಂದಿಗೆ ಉದಯೋನ್ಮುಖ ತಾರೆ ಶುಬ್ಮನ್ ಗಿಲ್ (Shubman Gill) ಹೆಸರು ಕೂಡಾ ಇತ್ತೀಚೆಗೆ ಸೇರಿಕೊಂಡಿದೆ. ಅದಾಗಲೇ ಸಚಿನ್‌ ಜೊತೆಗೆ ದಿಗ್ಗಜ ಕ್ರಿಕೆಟ್‌ರ್‌ಗಳ ಪಟ್ಟಿಯನ್ನು ಸೇರಿಕೊಂಡಿರುವ ವಿರಾಟ್‌ಗೆ, ಗಿಲ್‌ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು