logo
ಕನ್ನಡ ಸುದ್ದಿ  /  ಕ್ರೀಡೆ  /  Daryl Harper: ಪಂದ್ಯ ಗೆಲ್ಲಲು ಈ ಹಂತಕ್ಕೂ ಹೋಗುವುದು ಕಂಡು ಖೇದವುಂಟಾಯ್ತು; ಧೋನಿಯ ಸಮಯ ವ್ಯರ್ಥ ಚಾಣಾಕ್ಷತೆಗೆ ಅಂಪೈರ್ ಹಾರ್ಪರ್ ಅಸಮಾಧಾನ

Daryl Harper: ಪಂದ್ಯ ಗೆಲ್ಲಲು ಈ ಹಂತಕ್ಕೂ ಹೋಗುವುದು ಕಂಡು ಖೇದವುಂಟಾಯ್ತು; ಧೋನಿಯ ಸಮಯ ವ್ಯರ್ಥ ಚಾಣಾಕ್ಷತೆಗೆ ಅಂಪೈರ್ ಹಾರ್ಪರ್ ಅಸಮಾಧಾನ

Prasanna Kumar P N HT Kannada

May 26, 2023 10:44 PM IST

ಎಂಎಸ್​ ಧೋನಿ ವಿರುದ್ಧ ಅಸಮಾಧಾನ ಹೊರ ಹಾಕಿದ ಮಾಜಿ ಅಂಪೈರ್ ಡೇರಿಲ್​ ಹಾರ್ಪರ್.

    • ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಶಿಸ್ತಿಗೆ ಹೆಸರಾದ ಮಹೇಂದ್ರ ಸಿಂಗ್ ಧೋನಿ, ಬೌಲರ್​​ಗಾಗಿ ಅಂಪೈರ್​​ಗಳ ಜತೆ ವಾಗ್ವಾದ ನಡೆಸಿ ಸಮಯ ವ್ಯರ್ಥ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದೀಗ ಆಸ್ಟ್ರೇಲಿಯಾದ ಅಂಪೈರ್​ವೊಬ್ಬರು ಧೋನಿ ಅವರ ಚಾಣಾಕ್ಷ ನಡೆಯನ್ನು ಟೀಕಿಸಿದ್ದಾರೆ.
ಎಂಎಸ್​ ಧೋನಿ ವಿರುದ್ಧ ಅಸಮಾಧಾನ ಹೊರ ಹಾಕಿದ ಮಾಜಿ ಅಂಪೈರ್ ಡೇರಿಲ್​ ಹಾರ್ಪರ್.
ಎಂಎಸ್​ ಧೋನಿ ವಿರುದ್ಧ ಅಸಮಾಧಾನ ಹೊರ ಹಾಕಿದ ಮಾಜಿ ಅಂಪೈರ್ ಡೇರಿಲ್​ ಹಾರ್ಪರ್.

16ನೇ ಆವೃತ್ತಿಯ ಐಪಿಎಲ್​ನ ಮೊದಲ ಕ್ವಾಲಿಫೈಯರ್ (IPL Qualifier 1) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್​ ಧೋನಿ (CSK Captain MS Dhoni) ಸಮಯ ವ್ಯರ್ಥ ಮಾಡಿರುವ ಘಟನೆಗೆ ಸಂಬಂಧಿಸಿ ಈಗಲೂ ಚರ್ಚೆ ನಿಂತಿಲ್ಲ. ಆಸ್ಟ್ರೇಲಿಯಾದ ಕ್ರಿಕೆಟ್​ ಅಂಪೈರ್​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧೋನಿ ಅವರ ಚಾಣಾಕ್ಷ ನಡೆಯನ್ನು ಟೀಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಶಿಸ್ತಿಗೆ ಹೆಸರಾದ ಮಹೇಂದ್ರ ಸಿಂಗ್ ಧೋನಿ, ಬೌಲರ್​​ಗಾಗಿ ಅಂಪೈರ್​​ಗಳ ಜತೆ ವಾಗ್ವಾದ ನಡೆಸಿ ಸಮಯ ವ್ಯರ್ಥ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ಅತೀ ಬುದ್ದಿವಂತಿಕೆ ಅವರಿಗೆ ತಿರುಗುಬಾಣವಾಗುವ ಸಾಧ್ಯತೆ ಇದೆ. ಅಂಪೈರ್​ ಜೊತೆ ವಾಗ್ವಾದ ನಡೆಸಿದ್ದನ್ನು ಮ್ಯಾಚ್ ರೆಫ್ರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಫೈನಲ್​ ಪಂದ್ಯಕ್ಕೆ ಬ್ಯಾನ್ ಆಗುತ್ತಾರೆ ಎನ್ನಲಾಗಿದೆ.

ಇದೀಗ ಈ ಕುರಿತು ಐಸಿಸಿ ಹಾಗೂ ಆಸ್ಟ್ರೇಲಿಯಾದ ಮಾಜಿ ಅಂಪೈರ್ ಡೇರಿಲ್​ ಹಾರ್ಪರ್ (ICC umpire Daryl Harper), ಎಂಎಸ್​​ ಧೋನಿ ನಡೆಯನ್ನು ಟೀಕಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ತಮ್ಮ ಸಮಯವನ್ನು ವ್ಯರ್ಥ ಮಾಡಿದರು ಎಂಬುದು ಎಲ್ಲರಿಗೂ ತಿಳಿದಿದೆ. ಅಂಪೈರ್‌ಗಳಿಗೂ ಅದು ಗೊತ್ತಾಗಿ ಏನು ಮಾಡಬೇಕೆಂದು ತೋಚದೆ ನಗುತ್ತಾ ನಿಂತಿದ್ದರು ಎಂದು ಫೀಲ್ಡ್​ ಅಂಪೈರ್​ಗಳನ್ನೂ ಜಾಡಿಸಿದ್ದಾರೆ.

ಈ ಘಟನೆಯು ನನ್ನನ್ನು ಆಳವಾಗಿ ಕಲಕಿದೆ. ಧೋನಿ ಅಭಿಮಾನಿಯಾಗಿ ನನಗೆ ಈ ಘಟನೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮಹಿಯಂತಹ ವ್ಯಕ್ತಿ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು ಅಚ್ಚರಿ ಮೂಡಿಸಿದೆ. ಅದನ್ನು ನೋಡುತ್ತಾ ಅಂಪೈರ್​ಗಳು ಸುಮ್ಮನಿದ್ದದ್ದೂ ನನ್ನ ಮನಸಿಗೆ ಭಾರ ಎನಿಸಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲ ವ್ಯಕ್ತಿಗಳ ಇಮೇಜ್​ ಕ್ರೀಡಾ ಸ್ಪೂರ್ತಿಗಿಂತ, ಕ್ರೀಡಾ ಕಾನೂನುಗಳಿಗಿಂತ ಹೆಚ್ಚಾಗಿರುತ್ತದೆ. ಧೋನಿ ಇಮೇಜ್, ಜನಪ್ರಿಯತೆ ಮತ್ತು ಕ್ರೇಜ್ ಬಗ್ಗೆ ಹೇಳುವುದಾದರೆ, ಐಪಿಎಲ್ ಮತ್ತು ಬಿಸಿಸಿಐ ಕೂಡ ಸರಿ ಹೊಂದುವುದಿಲ್ಲ. ಇದೇ ಕಾರಣಕ್ಕೆ ಅಂಪೈರ್‌ಗಳಿಗೂ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಆದರೆ, ಧೋನಿಯಂತಹ ವ್ಯಕ್ತಿ ಪಂದ್ಯವನ್ನು ಗೆಲ್ಲಲು ತುಂಬಾ ಕೆಳಮಟ್ಟಕ್ಕಿಳಿದಿರುವುದು ನನಗೆ ನಿರಾಶೆ ತಂದಿದೆ. ಅದು ಕೀಡಾ ಸ್ಪೂರ್ತಿಗೆ ವಿರುದ್ಧವಾಗಿತ್ತು. ಅಂಪೈರ್​​ಗಳಿಗೆ ಅಗೌರವ ಸೂಚಿಸಿದರು. ನ್ಯಾಯಯುತವಾಗಿ ಆಡಿ ಪಂದ್ಯ ಸೋತಿದ್ದರೂ ನನಗೆ ಬೇಸರ ಉಂಟು ಆಗುತ್ತಿರಲಿಲ್ಲ ಎಂದು ಮಾಜಿ ಅಂಪೈರ್​​​ ಹೇಳಿದ್ದಾರೆ.

ಅಸಲಿಗೆ ನಡೆದಿದ್ದೇನು?

ಗುಜರಾತ್ ಟೈಟಾನ್ಸ್ ಬ್ಯಾಟಿಂಗ್​ ಮಾಡುತ್ತಿದ್ದಾಗ 16ನೇ ಓವರ್​ ಅನ್ನು ಮಥೀಶ ಪತಿರಾಣಗೆ (Matheesha Pathirana) ಧೋನಿ ನೀಡಿದ್ದರು. ಆದರೆ ಮೈದಾನದಿಂದ 9 ನಿಮಿಷಗಳ ಕಾಲ ಹೊರಗಿದ್ದ ಪತಿರಾಣರನ್ನು ಅಂಪೈರ್ ತಡೆದು ಬೌಲಿಂಗ್​ ಮಾಡಲು ಅವಕಾಶ ನೀಡಲಿಲ್ಲ. ಮೈದಾನದಿಂದ ಹೊರಗಿದ್ದ ಸಮಯದಷ್ಟೇ ಮೈದಾನದಲ್ಲಿ ಸಮಯ ಕಳೆದ ಬಳಿಕವೇ ಬೌಲಿಂಗ್​ ಮಾಡಬೇಕಾಗುತ್ತದೆ. ಆದರೆ ಪತಿರಾಣ ಬೌಲಿಂಗ್​ ಮಾಡಲು ಬಂದಾಗ ಕೇವಲ 4 ನಿಮಿಷಗಳು ಆಗಿತ್ತು.

ಪತಿರಾಣ ಅವರನ್ನು ತಡೆದ ಕಾರಣ ಧೋನಿ ಪ್ರಶ್ನಿಸಿದ್ದರು. ಆಗ ಧೋನಿಗೆ ನಿಯಮವನ್ನು ವಿವರಿಸಿದ್ದರು. ಈ ವೇಳೆ ಚಾಣಾಕ್ಷತೆ ಮೆರೆದ ಧೋನಿ ಲೆಗ್ ಅಂಪೈರ್ ಹಾಗೂ ಸ್ಟ್ರೈಟ್ ಅಂಪೈರ್​ಗಳ ಜೊತೆ ಹೆಚ್ಚು ಚರ್ಚಿಸಿದರು. ಆ ಮೂಲಕ 4 ನಿಮಿಷಗಳ ಆಟ ವ್ಯರ್ಥ ಮಾಡಿದರು. ಆಗ ಪತಿರಾಣ ಮೈದಾನದಲ್ಲಿ ಇರಬೇಕಾದ ಸಮಯ ಪೂರ್ಣವಾಯಿತು. ಆಗ ನಿಯಮದ ಪ್ರಕಾರವೇ ಪತಿರಾಣ ಅವರಿಂದ ಬೌಲಿಂಗ್​ ಮಾಡಿಸಲು​ ಧೋನಿ ಸಮಯ ವ್ಯರ್ಥ ಮಾಡಿದ್ದರು. ಧೋನಿ ಅವರ ಈ ಚಾಣಾಕ್ಷ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

    ಹಂಚಿಕೊಳ್ಳಲು ಲೇಖನಗಳು