IPL 2023: ಐಪಿಎಲ್ನ ಜನಪ್ರಿಯ ತಂಡದಲ್ಲೂ ಸಿಎಸ್ಕೆ ಮತ್ತೆ ಚಾಂಪಿಯನ್; ವಿರಾಟ್ ಕೊಹ್ಲಿ ಹೆಚ್ಚು ಪ್ರಸಿದ್ಧ ಆಟಗಾರ, ಹೊರಬಿತ್ತು ವರದಿ
Jun 26, 2023 04:01 PM IST
ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ
- Dhoni-Kohli: ಮೇ 28ರಂದು ಮುಕ್ತಾಯಗೊಂಡ ಐಪಿಎಲ್ನಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದಕ್ಕೆ ಸೋಷಿಯಲ್ ಮೀಡಿಯಾದ ವರಿದಿಯೊಂದು ಬಹಿರಂಗಗೊಂಡಿದೆ. ಈ ಯಾವ ತಂಡ, ಯಾವ ಆಟಗಾರ ಈ ಬಾರಿ ಅಧಿಕ ಜನಪ್ರಿಯಗೊಂಡಿದೆ ಎಂಬುದು ತಿಳಿದಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಎಂಎಸ್ ಧೋನಿ ನೇತೃತ್ವದ ಸಿಎಸ್ಕೆ ಐದನೇ ಬಾರಿಗೆ ಟ್ರೋಫಿ ಗೆದ್ದಿದೆ. ಇದರೊಂದಿಗೆ ಅತಿಹೆಚ್ಚು ಟ್ರೋಫಿ ಗೆದ್ದಿದ್ದ ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟಿತು. ಈ ಐಪಿಎಲ್ಗೂ ಮುನ್ನ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂಬ ಸುದ್ದಿ ಹರಡಿದ್ದರ ಪರಿಣಾಮ ಚೆನ್ನೈ ತಂಡಕ್ಕೆ ಹೆಚ್ಚು ಬೆಂಬಲ ಸಿಕ್ಕಿತ್ತು. ಹಾಗಾಗಿ ಈ ಬಾರಿಯ ಐಪಿಎಲ್ ಭಾರಿ ಯಶಸ್ವಿಯಾಗಿತ್ತು.
ಚೆನ್ನೈ ಜನಪ್ರಿಯ ತಂಡ
ಮೇ 28ರಂದು ಮುಕ್ತಾಯಗೊಂಡ ಐಪಿಎಲ್ನಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದಕ್ಕೆ ಸೋಷಿಯಲ್ ಮೀಡಿಯಾದ ವರಿದಿಯೊಂದು ಬಹಿರಂಗಗೊಂಡಿದೆ. ಈ ಯಾವ ತಂಡ, ಯಾವ ಆಟಗಾರ ಈ ಬಾರಿ ಅಧಿಕ ಜನಪ್ರಿಯಗೊಂಡಿದೆ ಎಂಬುದು ತಿಳಿದಿದೆ. ಈ ವರದಿಯ ಪ್ರಕಾರ ಚಾಂಪಿಯನ್ ಪಟ್ಟ ಅಲಂಕರಿಸಿದ ಚೆನ್ನೈ ತಂಡವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೆನ್ನೈ 7.6 ಮಿನಿಯನ್ನಷ್ಟು ಚೆನ್ನೈ ತಂಡವು ಸೋಷಿಯಲ್ ಮೀಡಿಯಾದಲ್ಲಿ ಹುಡುಕಲ್ಪಟ್ಟಿದೆ. ಎರಡನೇ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ತಂಡವಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್, 6.2 ಮಿಲಿಯನ್ನಷ್ಟು ಹುಡುಕಾಟಕ್ಕೆ ಒಳಗಾಗಿದೆ. ಇನ್ನು ಮುಂಬೈ ತಂಡವನ್ನು 5.4 ಮಿಲಿಯನ್ನಷ್ಟು ಹುಡುಕಾಟ ನಡೆಸಲಾಗಿದೆ. ಮುಂಬೈ 3ನೇ ಸ್ಥಾನದಲ್ಲಿದೆ. ಚೆನ್ನೈ ಇಷ್ಟರಮಟ್ಟಿಗೆ ಜನಪ್ರಿಯತೆ ಗಳಿಸಲು ಧೋನಿಯೇ ಕಾರಣ. ಅವರದ್ದು ಈ ಐಪಿಎಲ್ ಕೊನೆ ಎಂದು ವರದಿಯಾಗಿದ್ದರ ಪರಿಣಾಮ ಸಿಎಸ್ಕೆ ಹೆಚ್ಚು ಹುಡುಕಾಟಕ್ಕೆ ಒಳಗಾಗಿದೆ.
ಜನಪ್ರಿಯ ಆಟಗಾರ ಕೊಹ್ಲಿ
ಸಿಎಸ್ಕೆ ಹೆಚ್ಚು ಜನಪ್ರಿಯ ತಂಡವಾಗಿ ಹೊರಹೊಮ್ಮಿದರೆ, ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಪ್ರಸಿದ್ಧ ಪಡೆದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. 2023ರ ಐಪಿಎಲ್ ವೇಳೆ ವಿರಾಟ್ ಕೊಹ್ಲಿಯನ್ನು 7 ಮಿಲಿಯನ್ ಹೆಚ್ಚು ಬಾರಿ ಹುಡುಕಾಟಕ್ಕೆ ಒಳಗಾಗಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಎಂಎಸ್ ಧೋನಿ ಇದ್ದು, 6 ಮಿಲಿಯನ್ ಜನ ಸರ್ಚ್ ಮಾಡಿದ್ದಾರೆ. 3ನೇ ಸ್ಥಾನದಲ್ಲಿ ಇರುವ ರೋಹಿತ್ ಶರ್ಮಾ ಅವರ ಕುರಿತು 3 ಮಿಲಿಯನ್ ಜನ ಹುಡುಕಾಟ ನಡೆಸಿದ್ದಾರೆ.
ಗಂಭೀರ್-ವಾಕ್ಸಮರವೇ ಇದಕ್ಕೆ ಕಾರಣ
ಕೊಹ್ಲಿ ಹೆಚ್ಚು ಹುಡುಕಾಟಕ್ಕೆ ಒಳಗಾಗಲು ಕಾರಣ ಇದೆ. ಅದುವೆ ವಿರಾಟ್-ಗಂಭೀರ್ ಜಗಳ. ಈ ಐಪಿಎಲ್ನಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ವಾಕ್ಸಮರ ಇದಾಗಿತ್ತು. ಮೇ 1ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ಆರ್ಸಿಬಿ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡು ಭರ್ಜರಿ ಗೆಲುವು ಸಾಧಿಸಿತು.
ಪಂದ್ಯದ ಬಳಿಕ ಎಲ್ಸಿಜಿ ಬೌಲರ್ ನವೀನ್ ಉಲ್ ಹಕ್ ಮತ್ತು ವಿರಾಟ್ ಕೊಹ್ಲಿ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲೂ ಕೊಹ್ಲಿ-ಗಂಭೀರ್ ಮಧ್ಯೆ ಗಲಾಟೆ ನಡೆಯಿತು. ಜೋರು ಜೋರಾಗಿ ಗಲಾಟೆ ಮಾಡಿಕೊಂಡರು. ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲು ಕಾರಣ ಮೊದಲಿನಿಂದಲೂ ಇಬ್ಬರ ಮಧ್ಯೆ ಇರುವ ಮುನಿಸು. ಹಾಗಾಗು ಅತಿ ಹೆಚ್ಚು ಎಂಗೇಜಿಂಗ್ ಪೀಪಲ್ ಎಂದು ಬಹಿರಂಗಗೊಂಡಿದೆ.
5 ಸಿಕ್ಸರ್ ಸಿಡಿಸಿ ಲೀಸ್ಟ್ಗೆ ಬಂದ ರಿಂಕು
ಇನ್ನು ಹೆಚ್ಚು ಹುಡುಕಾಟಕ್ಕೆ ಒಳಗಾದ ಪಟ್ಟಿಗೆ ಕೊಹ್ಲಿ, ಗಂಭೀರ್, ನವೀನ್ ಜೊತೆಗೆ ಐದು ಎಸೆತಗಳಿಗೆ ಐದು ಸಿಕ್ಸರ್ ಸಿಡಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ ಕಾರಣವಾಗಿದ್ದ ರಿಂಕು ಸಿಂಗ್ ಕೂಡ ಸೇರಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಗೆಲುವಿಗೆ ಕೊನೆಯ 5 ಎಸೆತಗಳಿಗೆ 30 ರನ್ ಬೇಕಿತ್ತು. ಆಗ ಯಶ್ ದಯಾಳ್ ಬೌಲಿಂಗ್ ಮಾಡುತ್ತಿದ್ದರು. ಐದು ಎಸೆತಗಳಿಗೆ ಐದೂ ಸಿಕ್ಸರ್ ಸಿಡಿಸಿದ ರಿಂಕು ಸಿಂಗ್ ರೋಚಕ ಗೆಲುವಿಗೆ ಸಾಕ್ಷಿಯಾಗಿದ್ದರು. ಪರಿಣಾಮ ಅತ್ಯಂತ ಜನಪ್ರಿಯ ಪಡೆದ ಆಟಗಾರ ಎನಿಸಿದ್ದಾರೆ.