logo
ಕನ್ನಡ ಸುದ್ದಿ  /  ಕ್ರೀಡೆ  /  Asia Cup 2023: ಕೊನೆಗೂ ಇತ್ಯರ್ಥವಾಯ್ತು ಏಷ್ಯಾಕಪ್​ ಜಟಾಪಟಿ; ನಿಮಗೆ ಅರ್ಧ, ನಮಗೆ ಅರ್ಧ ಎಂದ ಪಿಸಿಬಿ; ಪಾಕ್​-ಲಂಕಾದಲ್ಲಿ ಟೂರ್ನಿ ಆಯೋಜನೆ

Asia Cup 2023: ಕೊನೆಗೂ ಇತ್ಯರ್ಥವಾಯ್ತು ಏಷ್ಯಾಕಪ್​ ಜಟಾಪಟಿ; ನಿಮಗೆ ಅರ್ಧ, ನಮಗೆ ಅರ್ಧ ಎಂದ ಪಿಸಿಬಿ; ಪಾಕ್​-ಲಂಕಾದಲ್ಲಿ ಟೂರ್ನಿ ಆಯೋಜನೆ

Prasanna Kumar P N HT Kannada

Jun 11, 2023 03:04 PM IST

google News

ಕೊನೆಗೂ ಇತ್ಯರ್ಥವಾಯ್ತು ಏಷ್ಯಾಕಪ್​ ಜಟಾಪಟಿ

    • ಏಷ್ಯನ್ ಕ್ರಿಕೆಟ್ ಕೌನ್ಸಿಲ್​ಗೆ (ACC) ಸೇರಿದ ಎಲ್ಲಾ ದೇಶಗಳು ಪಾಕಿಸ್ತಾನದ ಜೊತೆಗೆ ಶ್ರೀಲಂಕಾದಲ್ಲೂ (Sri Lanka) ಟೂರ್ನಿ ಆಯೋಜನೆಗೆ ಒಪ್ಪಿಗೆ ಎಂದು ವರದಿಯಾಗಿದೆ.
 ಕೊನೆಗೂ ಇತ್ಯರ್ಥವಾಯ್ತು ಏಷ್ಯಾಕಪ್​ ಜಟಾಪಟಿ
ಕೊನೆಗೂ ಇತ್ಯರ್ಥವಾಯ್ತು ಏಷ್ಯಾಕಪ್​ ಜಟಾಪಟಿ

ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿ (Asia Cup 2023) ಆಯೋಜನೆಗೆ ಸಂಬಂಧಿಸಿದ ನಡೆಯುತ್ತಿದ್ದ​ ಜಟಾಪಟಿಗೆ ಬ್ರೇಕ್​ ಬಿದ್ದಿದೆ. ಏಷ್ಯಾಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ (Pakistan Cricket Board) ಪ್ರಸ್ತಾವಿತ ಹೈಬ್ರಿಡ್ ಮಾದರಿಯನ್ನು (Hybrid Model) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ಅನುಮೋದಿಸುವ ಸಾಧ್ಯತೆಯಿದೆ. ಆ ಮೂಲಕ ಒಂದು ವರ್ಷದಿಂದ ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆಯುತ್ತಿದ್ದ ವಿವಾದ ಅಂತ್ಯಗೊಂಡಂತೆ ಕಾಣುತ್ತಿದೆ.

ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ (India vs Pakistan) ಬರುವುದಿಲ್ಲ ಎಂಬ ಕಾರಣಕ್ಕೆ ಪಿಸಿಬಿ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿತು. ಆದರೆ ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC)ಯ ಎಲ್ಲಾ ದೇಶಗಳು ಪಾಕಿಸ್ತಾನದ ಜೊತೆಗೆ ಶ್ರೀಲಂಕಾದಲ್ಲೂ (Sri Lanka) ಟೂರ್ನಿ ಆಯೋಜನೆಗೆ ಒಪ್ಪಿಗೆ ಎಂದು ವರದಿಯಾಗಿದೆ.

2023ರ ಏಷ್ಯಾಕಪ್​ ಟೂರ್ನಿಯನ್ನು ಪಾಕಿಸ್ತಾನದ ಜೊತೆಗೆ ಶ್ರೀಲಂಕಾದಲ್ಲೂ ಆಯೋಜನೆಗೂ ಎಸಿಸಿಯ ಎಲ್ಲಾ ದೇಶಗಳು ಅಂಗೀಕಾರ ನೀಡಿವೆ. ಈ ಹಿಂದೆ ಪಿಸಿಬಿ ಸೂಚಿಸಿದ ಹೈಬ್ರಿಡ್​ ಮಾದರಿಯಲ್ಲೇ ಟೂರ್ನಿ ನಡೆಯಲಿದೆ. ಈ ಹಿಂದೆ ಹೈಬ್ರಿಡ್​ ಮಾದರಿಯಲ್ಲಿ ಪಾಕಿಸ್ತಾನದ ಜೊತೆಗೆ ಯುಎಇನಲ್ಲಿ ನಡೆಸುವ ಯೋಜನೆ ರೂಪಿಸಿತ್ತು. ಆದರೆ ಈಗ ಯುಎಇ ಬದಲಿಗೆ ಶ್ರೀಲಂಕಾದಲ್ಲಿ ನಡೆಸಲು ಚಿಂತಿಸಿದೆ.

ಹಂಚಿಕೆಯಾದ ಪಂದ್ಯಗಳು

ಟೂರ್ನಿಯಲ್ಲಿ ನಡೆಯುವ ಒಟ್ಟು ಪಂದ್ಯಗಳನ್ನು ಪಾಕ್​ ಮತ್ತು ಶ್ರೀಲಂಕಾ ದೇಶಗಳಲ್ಲಿ ಹಂಚಿಕೆಯಾಗಿವೆ. ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆಯಲಿವೆ. ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಇದರಲ್ಲಿ ಭಾರತದ ಪಂದ್ಯಗಳು ಮತ್ತು ಫೈನಲ್​ ಪಂದ್ಯವೂ ಸೇರಿದೆ. ಶ್ರೀಲಂಕಾದಲ್ಲಿ ಹೆಚ್ಚು ಪಂದ್ಯಗಳನ್ನು ನಡೆಸಲು ಅದಕ್ಕೆ ಪಿಸಿಬಿ ಕೂಡ ಒಪ್ಪಿಗೆ ನೀಡಿದೆ.

ಅಂದರೆ, ಪಾಕಿಸ್ತಾನದ ಪಂದ್ಯಗಳು (ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ವಿರುದ್ಧ) ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಭಾರತದೊಂದಿಗೆ ಇತರ ದೇಶಗಳು ಆಡುವ ಪಂದ್ಯಗಳು ಲಂಕಾದಲ್ಲಿ ನಡೆಯುತ್ತವೆ. ಆದರೆ ಸ್ಥಳಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಈ ಪ್ರಸ್ತಾವನೆಗೆ ಬಿಸಿಸಿಐ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿದುಬಂದಿದೆ.

ನಾವೂ ವಿಶ್ವಕಪ್‌ಗೆ ಬರುತ್ತೇವೆ

ಏಷ್ಯಾಕಪ್​ ಟೂರ್ನಿ ನಮ್ಮ ದೇಶಕ್ಕೆ ಆತಿಥ್ಯ ಸಿಗಲಿಲ್ಲ ಎಂದರೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಈ ಹಿಂದೆ ಪಾಕಿಸ್ತಾನ ಹೇಳಿತ್ತು. ಅಷ್ಟೆ ಅಲ್ಲದೆ ಈ ವರ್ಷ ನಡೆಯುವ ಏಕದಿನ ವಿಶ್ವಕಪ್​​ನಲ್ಲೂ (ODI World Cup 2023) ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಏಷ್ಯಾಕಪ್ ಪಂಚಾಯತಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಏಕದಿನ ವಿಶ್ವಕಪ್​ಗೂ ಬರುವುದಾಗಿ ಪಾಕಿಸ್ತಾನ, ಐಸಿಸಿಗೆ ಭರವಸೆ ನೀಡಿದೆ ಎಂದು ಗೊತ್ತಾಗಿದೆ.

ಆದರೆ, ಈ ಬಗ್ಗೆ ಎರಡೂ ಮಂಡಳಿಗಳು ಮತ್ತು ಐಸಿಸಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಇನ್ನೆರಡು ದಿನಗಳಲ್ಲಿ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಲಿದೆ. ಈ ಸಂದರ್ಭದಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗುವ ಸಾಧ್ಯತೆ ಇದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (ಅಹಮದಾಬಾದ್) ಭಾರತ-ಪಾಕಿಸ್ತಾನ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ