logo
ಕನ್ನಡ ಸುದ್ದಿ  /  ಕ್ರೀಡೆ  /  Man Vs Wild: ಅಡ್ವೆಂಚರ್​ ಶೋಗೆ ಕೊಹ್ಲಿ ಎಂಟ್ರಿ; ಕಾಡು ಸುತ್ತಲು ಪ್ರಿಯಾಂಕಾ ಸಾಥ್​; ವಿರಾಟ್ ಸಿಂಹದಂತೆ ಆಕ್ರಮಣಕಾರಿ ಎಂದ ಬೇರ್​​​ಗ್ರಿಲ್ಸ್

Man vs Wild: ಅಡ್ವೆಂಚರ್​ ಶೋಗೆ ಕೊಹ್ಲಿ ಎಂಟ್ರಿ; ಕಾಡು ಸುತ್ತಲು ಪ್ರಿಯಾಂಕಾ ಸಾಥ್​; ವಿರಾಟ್ ಸಿಂಹದಂತೆ ಆಕ್ರಮಣಕಾರಿ ಎಂದ ಬೇರ್​​​ಗ್ರಿಲ್ಸ್

Prasanna Kumar P N HT Kannada

Jun 07, 2023 03:19 PM IST

google News

ವಿರಾಟ್​ ಕೊಹ್ಲಿ, ಬೇರ್​​​ಗ್ರಿಲ್ಸ್, ಪ್ರಿಯಾಂಕ ಚೋಪ್ರಾ

    • ವಿಶ್ವದ ಅತ್ಯಂತ ಜನಪ್ರಿಯ​ ಶೋ ‘ಮ್ಯಾನ್​​​​ ವರ್ಸಸ್ ವೈಲ್ಡ್‌’ ಎಂದರೆ ತಪ್ಪಾಗಲ್ಲ. ಈ ಸಾಹಸಮಯ ಶೋನಲ್ಲಿ ಕಾಣಿಸಿಕೊಳ್ಳಲು ವಿಶ್ವದ ಪ್ರಸಿದ್ಧ ವ್ಯಕ್ಯಿಗಳೇ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಈ ಗ್ರೇಟ್​ ಅಡ್ವೆಂಚರ್ ನಡೆಸಿಕೊಡುವ ಬೇರ್​​ ಗ್ರಿಲ್ಸ್ (Bear Grylls)​​ ಮಾತ್ರ ಈ ಅಗ್ರೆಸ್ಸಿವ್​​​​ ಕ್ರಿಕೆಟಿಗನೇ ಬೇಕೆಂದು ಹೇಳಿದ್ದಾರೆ.
ವಿರಾಟ್​ ಕೊಹ್ಲಿ, ಬೇರ್​​​ಗ್ರಿಲ್ಸ್, ಪ್ರಿಯಾಂಕ ಚೋಪ್ರಾ
ವಿರಾಟ್​ ಕೊಹ್ಲಿ, ಬೇರ್​​​ಗ್ರಿಲ್ಸ್, ಪ್ರಿಯಾಂಕ ಚೋಪ್ರಾ

‘ಮ್ಯಾನ್​​​​ ವರ್ಸಸ್ ವೈಲ್ಡ್‌’, (Man vs Wild) ಇದು ವಿಶ್ವದಲ್ಲಿ ಅತ್ಯಂತ ಜನಪ್ರಿಯ ಮತ್ತು ಸಂಚಲನ ಸೃಷ್ಟಿಸಿರುವ ರಿಯಾಲಿಟಿ ಶೋ. ಶೋ ನಡೆಸಿಕೊಡುವ ಬೇರ್ ಗ್ರಿಲ್ಸ್ (Bear Grylls) ಸಹ, ವಿಶ್ವಕ್ಕೆ ಪರಿಚಿತ. ಗ್ರಿಲ್ಸ್​​​​​ ಒಬ್ಬ ಮಹಾಸಾಹಸಿ. ದಟ್ಟಾರಣ್ಯದಲ್ಲಿ ಬಿಟ್ಟರೂ, ಎಲ್ಲ ಅಡೆತಡೆಗಳನ್ನೂ ಗೆದ್ದು ಬರುವ ಮಾಂತ್ರಿಕ. ಗ್ರಿಲ್ಸ್​ಗೆ ಆಕಾಶ, ಭೂಮಿ, ಕಾಡು-ಗುಡ್ಡ, ಮರುಭೂಮಿ ಎಲ್ಲವೂ ಆತನಿಗೆ ಒಂದೇ. ನರ ಹಂತಕ ಪ್ರಾಣಿಗಳ ಜೊತೆಗೂ ಕಾಲ ಕಳೆದಿದ್ದಾರೆ. ಈತನ ಜೊತೆ ಪ್ರಯಾಣ ಮಾಡಬೇಕು ಅಂದರೆ ಗುಂಡಿಗೆ ಗಟ್ಟಿ ಇರಲೇಬೇಕು ಎಂಬುದು ಸಾಕಷ್ಟು ಜನರ ಮಾತು.

ಐಕಾನ್​ ವ್ಯಕ್ತಿಗಳೇ ಗೆಸ್ಟ್​

ಬದುಕಿರುವ ಕೀಟ, ಚೇಳು, ಹಾವು ತಿನ್ನುವ ಗ್ರಿಲ್ಸ್​​, ನರಹಂತಕ ಪ್ರಾಣಿಗಳ ಜೊತೆಗೂ ಕಾಲ ಕಳೆದು ಹೋರಾಟ ನಡೆಸಿದ್ದಾರೆ. ಸಾಕಷ್ಟು ಸಲ ಸಾವಿನ ಕದ ತಟ್ಟಿ ಪಾರಾಗಿದ್ದೂ ಇದೆ. ಮೊದಲು ಒಬ್ಬರೇ ಸಾಹಸ ಮಾಡುತ್ತಿದ್ದರು. ಬಳಿಕ ಗಣ್ಯ ವ್ಯಕ್ತಿಗಳನ್ನೂ ಶೋಗೆ ಕರೆತಂದರು. ಗಣ್ಯ ವ್ಯಕ್ತಿಗಳೊಂದಿಗಿನ ಸಾಹಸ, ಪ್ರೇಕ್ಷಕರನ್ನ ಮತ್ತಷ್ಟು ಆಕರ್ಷಿಸುತ್ತಿದೆ. ಈತನ ಧೈರ್ಯ, ಹುಚ್ಚಾಟ, ಸಾಹಸಕ್ಕೆ ಪ್ರೇಕ್ಷಕನಿಂದ ಮಾರುಹೋಗಿದ್ದಾನೆ. ಈ ಕಾರಣಕ್ಕೆ ಡಿಸ್ಕವರಿ ಚಾನೆಲ್, ಟಿಆರ್​ಪಿ ಗಗನಕ್ಕೆ ಏರಿದೆ.

ಅತಿರಥ ಮಹಾರಥರು

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಪ್ರಧಾನಿ ನರೇಂದ್ರ ಮೋದಿ, ನಟರಾದ ಅಕ್ಷಯ್ ಕುಮಾರ್, ರಣವೀರ್ ಸಿಂಗ್, ರಜನಿಕಾಂತ್ ಅವರಂಥ ಅತಿರಥ ಮಹಾರಥರನ್ನೇ ಕಾಡುಮೇಡು ಅಲೆಸಿದ ಈ ಛಲಗಾರ, ಈಗ ಈ ಶೋಗೆ ಕ್ರಿಕೆಟಿಗರನ್ನು ಕರೆಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ವಿಶ್ವ ಕ್ರಿಕೆಟ್​ನಲ್ಲಿ ಅಬ್ಬರಿಸಿದ​ ಕ್ರಿಕೆಟರ್, ಡಿಸ್ಕವರಿ ವೀರ ಗ್ರಿಲ್​​​ ಜೊತೆಗೆ​​​ ಸಾಹಸಕ್ಕಿಳಿಯಲು ವೇದಿಕೆ ಸಿದ್ಧವಾಗಿದೆ. ಅವರು ಯಾರೂ ಅಲ್ಲ, ​‘ಮ್ಯಾನ್​​​​ ವರ್ಸಸ್ ವೈಲ್ಡ್‌’ ಬೇರ್​ ಗ್ರಿಲ್ಸ್ ಕಾರ್ಯಕ್ರಮದಲ್ಲಿ ವಿರಾಟ್​​ ಕೊಹ್ಲಿ (Virat Kohli) ಭಾಗಿಯಾಗುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗುಟ್ಟು ಬಿಟ್ಟುಕೊಡದ ಬೇರ್​

ಸದ್ಯ ವಿಶ್ವ ಟೆಸ್ಟ್​ ಚಾಂಪಿಯನ್​​ ಫೈನಲ್​​ಗಾಗಿ ಇಂಗ್ಲೆಂಡ್​​ನಲ್ಲಿರುವ ಕೊಹ್ಲಿ, ಆ ಬಳಿಕ ಒಂದು ತಿಂಗಳು ರೆಸ್ಟ್​ ಪಡೆಯಲಿದ್ದಾರೆ. ತದ ನಂತರ ಮುಂದಿನ ಸರಣಿಗಳಿಗೆ ಸಜ್ಜಾಗಲಿದ್ದಾರೆ. ಇದರ ಬೆನ್ನಲ್ಲೇ ಕೊಹ್ಲಿ, ದಟ್ಟಾರಣ್ಯದಲ್ಲಿ ಸಾಹಸ ಮೆರೆದ ಗ್ರಿಲ್ಸ್,​​​​​​ ಜೊತೆಗೆ ಸಾಹಸಕ್ಕಿಳಿಯಲು ಸಿದ್ದರಾಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಟೀಮ್​ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್​ ಶೀಘ್ರದಲ್ಲೇ ಈ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಆದರೆ ಗ್ರಿಲ್ಸ್​ ಅವರು ಈ ಬಗ್ಗೆ ಎಲ್ಲೂ ಗುಟ್ಟುಬಿಟ್ಟಿಲ್ಲ. ಈ ಕುರಿತು ನಾನು ಈಗಲೇ ಹೇಳುವುದಿಲ್ಲ. ಆದರೆ ಒಂದು ಯೋಜನೆಯ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಅದರಂತೆ ಮುಂದುವರೆಯುತ್ತಿದ್ದೇವೆ. ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆ ಎಂದು ಹಿಂದೂಸ್ತಾನ್ ಟೈಮ್ಸ್​ ವರದಿ ಮಾಡಿದೆ. ಈ ಶೋಗೆ ಕೊಹ್ಲಿ ಜೊತೆಗೆ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಇರಲಿದ್ದಾರೆ ಎಂದು ವರದಿ ಹೇಳಿದೆ.

ಕೊಹ್ಲಿ - ಪ್ರಿಯಾಂಕಾ ಸ್ಫೂರ್ತಿದಾಯಕ ಕಥೆ

ವಿಶ್ವ ಕ್ರಿಕೆಟ್​​ನಲ್ಲಿ ಅತಿಹೆಚ್ಚು ಫ್ಯಾನ್​​ ಫಾಲೋಯಿಂಗ್​ ಹೊಂದಿರುವ ಕೊಹ್ಲಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಶೋ ನಡೆಸುವ ಆಸೆ ಇದೆ. ಮೈದಾನದಲ್ಲಿ ಕೊಹ್ಲಿ ಹೋರಾಟ, ಸಾಹಸ ನಿಜಕ್ಕೂ ಅದ್ಭುತ. ಅಂತಹ ಆಟಗಾರನೊಂದಿಗೆ ಕಾಡಿನಲ್ಲಿ ಈ ಸಾಹಸ ನಡೆಸಿದರೆ, ಮತ್ತಷ್ಟು ಅದ್ಭುತವಾಗಿರುತ್ತದೆ. ಕೊಹ್ಲಿ ಸಿಂಹದಂತೆ ಎಷ್ಟು ಆಕ್ರಮಣಕಾರಿಯೋ ಅಷ್ಟೇ ಸಹೃದಯಿ ಕೂಡ ಹೌದು. ಅವರ, ಕೊಹ್ಲಿ ಜೊತೆಗೆ ಪ್ರಿಯಾಂಕಾ ಗಾಂಧಿ ಅವರದ್ದು ಸ್ಫೂರ್ತಿದಾಯಕ ಕಥೆ ಕೇಳುತ್ತಾ ಪ್ರಯಾಣ ನಡೆಸಿದರೆ, ರೋಮಾಂಚನ ಆಗಿರುತ್ತದೆ ಎಂದು ​​ಗ್ರಿಲ್ಸ್​ ಹೇಳಿದ್ದಾರೆ. 

ಮೋದಿ, ರಜನಿ, ಅಕ್ಕಿ​ ಸಾಹಸಕ್ಕೆ ಸಲಾಂ

ಭಾರತದ ಜನಪ್ರಿಯ ವ್ಯಕ್ತಿಗಳಾದ ಪ್ರಧಾನಿ ಮೋದಿ, ಅಕ್ಷಯ್​​ ಕುಮಾರ್​​ ರಜನಿಕಾಂತ್​​, ರಣವೀರ್​ ಸಿಂಗ್​ ನಡೆಸಿದ ಸಾಹಸಕ್ಕೆ ಜನರು ಸಲಾಂ ಹೊಡೆದಿದ್ದಾರೆ. ಮೋದಿ ಕತ್ತಿ ಹಿಡಿದು ಬೇಟೆಗೆ ಇಳಿದಿದ್ದರೆ, ರಣವೀರ್​ ಸಿಂಗ್​ರನ್ನು ಕರಡಿ ಓಡಿಸಿಕೊಂಡು ಬಂದಿತ್ತು. ಅಕ್ಷಯ್​ ಕುಮಾರ್​ ನದಿ ದಾಟುವಾಗ ಮೊಸಳೆ ಕಾಣಿಸಿಕೊಂಡಿತ್ತು. ಹೀಗೆ ಸಾಕಷ್ಟು ದೃಶ್ಯಗಳಿವೆ.

ಮೈದಾನದ ಹೊರಗೆ ಮತ್ತು ಒಳಗೆ ಕೊಹ್ಲಿ, ಅಗ್ರೆಸ್ಸಿವ್​ ಪ್ಲೇಯರ್. ​ ಮಹಾನ್​ ಸಾಹಸಿ. ಆತನ ವಿರಾಟ ರೂಪ, ಕೆಚ್ಚೆದೆಯ ಹೋರಾಟಕ್ಕೆ ಕ್ರಿಕೆಟ್​ ಫ್ಯಾನ್ಸ್​ ಮಾತ್ರವಲ್ಲ, ಇಡೀ ಜಗತ್ತೇ ನಿಬ್ಬೆರಗಾಗಿದೆ. ಈಗ ಇಂಥದ್ದೇ ಸಾಹಸಕ್ಕೆ ಕೊಹ್ಲಿ ಜೊತೆಗೆ ಮಾಡುವ ಆಸೆಯನ್ನ ಗ್ರಿಲ್ಸ್​​​​​​​​​ ಹೇಳಿದ್ದಾರೆ. ಜೊತೆಗೆ ಬಾಲಿವುಡ್​ ಬೆಡಗಿ ಪ್ರಿಯಾಂಕ ಚೋಪ್ರಾರನ್ನೂ ಈ ಶೋಗೆ ಕರೆ ತರುವ ಬಯಕೆ ಇದೆ ಎಂದಿದ್ದಾರೆ. ಆದರೆ ಇನ್ನೂ ಇದ್ಯಾವುದು ಖಚಿತ ಮಾಹಿತಿಯಲ್ಲ. ಮೂಲಗಳಿಂದ ಸಿಕ್ಕ ಮಾಹಿತಿಯಾಗಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ