Mohammed Siraj: ನೀನು 600 ವಿಕೆಟ್ ಪಡೆದರೆ ನನಗೇನು, ನಾನು ಹೆದರಲ್ಲ; ಆ್ಯಂಡರ್ಸನ್ ವಿರುದ್ಧದ ಸ್ಲೆಡ್ಜಿಂಗ್ ಘಟನೆ ನೆನೆದ ಸಿರಾಜ್
Jun 02, 2023 01:48 PM IST
ಜೇಮ್ಸ್ ಆ್ಯಂಡರ್ಸನ್ ವಿರುದ್ಧದ ಸ್ಲೆಡ್ಜಿಂಗ್ ಘಟನೆ ನೆನೆದ ಮೊಹಮ್ಮದ್ ಸಿರಾಜ್
- ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ (ICC World Test Championship 2023) ಸಲುವಾಗಿ ಈಗಾಗಲೇ ಲಂಡನ್ಗೆ ತಲುಪಿರುವ ಮೊಹಮ್ಮದ್ ಸಿರಾಜ್, 2021ರಲ್ಲಿ ಕೈಗೊಂಡಿದ್ದ ಇಂಗ್ಲೆಂಡ್ ಪ್ರವಾಸದಲ್ಲಿ ವೇಗಿ ಜೇಮ್ಸ್ ಆ್ಯಂಡರ್ಸನ್ ಜೊತೆ ನಡೆಸಿದ್ದ ವಾಗ್ವಾದಕ್ಕೆ ಸಂಬಂಧಿಸಿ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ಬಾರ್ಡರ್ ಗವಾಸ್ಕರ್ ಟ್ರೋಫಿ 2020-21ರ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಪ್ರಸ್ತತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship) ಪಂದ್ಯದಲ್ಲಿ ಪ್ರಮುಖ ಆಗಿದ್ದಾರೆ. ಜಸ್ಪ್ರಿತ್ ಬೂಮ್ರಾ (Mohammed Siraj) ಅವರ ಅಲಭ್ಯತೆಯಲ್ಲಿ ಸಿರಾಜ್ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಸಲುವಾಗಿ ಈಗಾಗಲೇ ಇಂಗ್ಲೆಂಡ್ನ ಲಂಡನ್ಗೆ ತಲುಪಿರುವ ಸಿರಾಜ್, 2021ರಲ್ಲಿ ಕೈಗೊಂಡಿದ್ದ ಇಂಗ್ಲೆಂಡ್ ಪ್ರವಾಸದಲ್ಲಿ ವೇಗಿ ಜೇಮ್ಸ್ ಆ್ಯಂಡರ್ಸನ್ ಜೊತೆ ನಡೆಸಿದ್ದ ವಾಗ್ವಾದಕ್ಕೆ ಸಂಬಂಧಿಸಿ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ (Virat Kohli Captancy) ಟೀಮ್ ಇಂಡಿಯಾ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ (Ind vs Eng Test Series) ಕೈಗೊಂಡಿತ್ತು.
ಸಿರೀಸ್ ಡಿಸೈಡರ್ ಪಂದ್ಯ ಮುಂದೂಡಿಕೆ
ಈ ಸರಣಿಯಲ್ಲಿ ಭಾರತ ಮೊದಲ ನಾಲ್ಕು ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1 ರಲ್ಲಿ ಸೋಲು ಕಂಡಿತ್ತು. ಮತ್ತೊಂದು ಪಂದ್ಯ ಡ್ರಾ ಸಾಧಿಸಿತ್ತು. ಆದರೆ ಕೊನೆಯ ಟೆಸ್ಟ್ ಪಂದ್ಯಕ್ಕೆ ಕೊರೊನಾ ಕಾಟ ಎದುರಾಗಿತ್ತು. ಪರಿಣಾಮ ಸಿರೀಸ್ ಡಿಸೈಡರ್ ಈ ಟೆಸ್ಟ್ ಪಂದ್ಯವನ್ನು 2022ರ ಪ್ರವಾಸಕ್ಕೆ ಮುಂದೂಡಲಾಗಿತ್ತು. ಆದರೆ ಅದಾಗಲೇ ಟೀಮ್ ಇಂಡಿಯಾ ಕ್ಯಾಪ್ಟನ್ ಪಟ್ಟದಿಂದ ಕೊಹ್ಲಿ ಹಿಂದೆ ಸರಿದಿದ್ದರು.
ಆಗ ಕೊನೆಯ ಪಂದ್ಯವನ್ನು ಗೆಲ್ಲುವ ಜವಾಬ್ದಾರಿ ರೋಹಿತ್ ಶರ್ಮಾ ಹೆಗಲೇರಿತ್ತು. ಆದರೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ನೂತನ ನಾಯಕ ರೋಹಿತ್ಗೆ ಕೊರೊನಾ ವಕ್ಕರಿಸಿತು. ಪರಿಣಾಮ ವೇಗಿ ಜಸ್ಪ್ರೀತ್ ಬೂಮ್ರಾ ಅವರಿಗೆ ತಂಡದ ನಾಯಕತ್ವದ ಹೆಗಲೇರಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲಿಗೆ ಶರಣಾಯಿತು. ಸರಣಿಯು 2-2ರಲ್ಲಿ ಸಮಬಲ ಸಾಧಿಸಿತು.
ಭಾರತದ ಬೌಲರ್ಗಳೇ ತಿರುಗೇಟು
2021ರಲ್ಲಿ ನಡೆದ ಈ ಸರಣಿಯಲ್ಲಿ ಪ್ರಮುಖವಾಗಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬೂಮ್ರಾ ಅವರನ್ನು ಇಂಗ್ಲೆಂಡ್ ಟಾರ್ಗೆಟ್ ಮಾಡಿತ್ತು. ಆದರೆ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಆಯಿತು. ನಮ್ಮ ಬೌಲರ್ಗಳೇ ಇಂಗ್ಲೆಂಡ್ ಅನುಭವಿ ಬೌಲರ್ಗಳಾದ ಜೇಮ್ಸ್ ಆ್ಯಂಡರ್ಸನ್ರನ್ನು ಟಾರ್ಗೆಟ್ ಮಾಡಿದರು. ಮಾನಸಿಕ ಕಿರುಕುಳ ನೀಡುವ ಮೂಲಕ ಮೇಲುಗೈ ಸಾಧಿಸಿದರು.
ಲಾರ್ಡ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರಿತ್ ಬೂಮ್ರಾ ಅವರು ಬೌನ್ಸರ್ಗಳ ಮೂಲಕ ಜೇಮ್ಸ್ ಆ್ಯಂಡರ್ಸನ್ಗೆ ಭಾರಿ ತೊಂದರೆ ಕೊಟ್ಟರು. ಹಾಗಾಗಿ ಬೂಮ್ರಾ ಬ್ಯಾಟಿಂಗ್ಗೆ ಬಂದಾಗ ಇಂಗ್ಲೆಂಡ್ ಬೌಲರ್ಗಳು ತಿರುಗೇಟು ನೀಡುವ ಲೆಕ್ಕಾಚಾರ ಹಾಕಿಕೊಂಡರು. ಇದು ಟೀಮ್ ಇಂಡಿಯಾವನ್ನು ಕೆರಳಿಸಿತು. ಇದರ ಪರಿಣಾಮ ಭಾರತ ತಂಡಕ್ಕೆ ಐತಿಹಾಸಿಕ ಜಯ ಲಭಿಸಿತು. ಆದರೆ ಇಂಗ್ಲೆಂಡ್ 2ನೇ ಇನ್ನಿಂಗ್ಸ್ನಲ್ಲಿ ಕುಸಿತ ಕಂಡಿತು.
ಗಲಾಟೆ ಏನು ನಡೆದಿತ್ತು
ಅಂದು ನಡೆದ ವಾಗ್ವಾದದ ಕುರಿತು ಸಿರಾಜ್ ಇದೀಗ ಪ್ರತಿಕ್ರಿಯಿಸಿದ್ದಾರೆ. ನಾನು ಮತ್ತು ಜಸ್ಪ್ರಿತ್ ಬೂಮ್ರಾ ಬ್ಯಾಟಿಂಗ್ ಮಾಡುತ್ತಿದ್ದಾಗ ಜೇಮ್ಸ್ ಕೋಪ ತರಿಸಿತು. ಹಾಗಾಗಿ ನಾನು ತಕ್ಷಣವೇ ಬೈದು ಬಿಟ್ಟಿದ್ದೆ. ಬಳಿಕ ಆ್ಯಂಡರ್ಸನ್ ಬ್ಯಾಟಿಂಗ್ಗೆ ಬಂದಾಗ ನೀನು 600 ವಿಕೆಟ್ ಪಡೆದಿರಬಹುದು. ಆದರೆ ನಾನು ನಿಮ್ಮನ್ನು ಗೌರವಿಸದ ಕಾರಣ ಹೆದರುವುದಿಲ್ಲ ಎಂದಿದ್ದೆ ಎಂದು ಸಿರಾಜ್ ಬಹಿರಂಗಪಡಿಸಿದ್ದಾರೆ.
ಈ ಮಾತುಗಳನ್ನು ಹೇಳಿದ ಬೆನ್ನಲ್ಲೇ ಆ್ಯಂಡರ್ಸನ್ ಬೇಸರಕ್ಕೆ ಒಳಗಾದರು. ತಕ್ಷಣವೇ ಹೋಗಿ ವಿರಾಟ್ ಕೊಹ್ಲಿಗೆ ಈ ವಿಷಯವನ್ನು ಹೇಳಿದರು. ಆಗ ವಿರಾಟ್ ಭಾಯ್, ಯಾಕೆ ಸುಮ್ಮನೆ ಅವರೊಂದಿಗೆ ಗಲಾಟೆ ಮಾಡ್ಕೊಂತೀಯಾ? ಸುಮ್ಮನಿರು ಎಂದಿದ್ದರು. ಅಕ್ಷರ್ ಪಟೇಲ್ (Axar Patel), ರಿಷಭ್ ಪಂತ್ (Rishabh Pant) ಕೂಡ ನನ್ನೊಂದಿಗೆ ಸೇರಿ ಆ್ಯಂಡರ್ಸನ್ ಅವರನ್ನು ಟಾರ್ಗೆಟ್ ಮಾಡಿದರು. ಒಟ್ಟಿನಲ್ಲಿ ಆ ಸೀರಿಸ್ ಅನ್ನು ಸಖತ್ ಎಂಜಾಯ್ ಮಾಡಿದೆವು ಎಂದು ಸಿರಾಜ್ ಹೇಳಿದ್ದಾರೆ.