Paris Olympics: ಸತತ 3ನೇ ದಿನವೂ ಲೋಗೋ ಬದಲಿಸಿದ ಗೂಗಲ್; ಇಂದು ಡೂಡಲ್ ಗೌರವ ಸಲ್ಲಿಸಿದ್ದು ಯಾವ ಕ್ರೀಡೆಗೆ?
Jul 28, 2024 12:13 PM IST
ಸತತ 3ನೇ ದಿನವೂ ಲೋಗೋ ಬದಲಿಸಿದ ಗೂಗಲ್; ಇಂದು ಡೂಡಲ್ ಗೌರವ ಸಲ್ಲಿಸಿದ್ದು ಯಾವ ಕ್ರೀಡೆಗೆ?
- Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ಅಧಿಕೃತವಾಗಿ ಪ್ರಾರಂಭವಾಗಿದ್ದು, ಇಂದು (ಜುಲೈ 28ರ) ಎರಡನೇ ದಿನಕ್ಕೆ ಕಾಲಿಟ್ಟಿದೆ. ಫುಟ್ಬಾಲ್ ಸ್ಪರ್ಧೆಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಗೂಗಲ್ ದಿನಕ್ಕೊಂದು ಡೂಡಲ್ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟಕ್ಕೆ ಗೌರವ ಸಲ್ಲಿಸುತ್ತಿದೆ. ಜುಲೈ 27ರಂದು ಸ್ಕೇಟ್ಬೊರ್ಡಿಂಗ್ಗೆ ನಮನ ಸಲ್ಲಿಸಿದ್ದ ಗೂಗಲ್ ಇಂದು ಅಂದರೆ ಜುಲೈ 28ರ ಭಾನುವಾರ ಫ್ರೆಂಚ್ ರಾಜಧಾನಿಯಲ್ಲಿ ನಿಗದಿಪಡಿಸಲಾದ ಫುಟ್ಬಾಲ್ ಸ್ಪರ್ಧೆಗೆ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಗೂಗಲ್ ಈ ಸ್ಪರ್ಧೆಯನ್ನು ಅನಿಮೇಟೆಡ್ ಡೂಡಲ್ನೊಂದಿಗೆ ಸೆಲೆಬ್ರೇಟ್ ಮಾಡಿದೆ. ಒಂದು ಪಕ್ಷಿ ಆವಕಾಡೊ ಹಣ್ಣಿನೊಂದಿಗೆ ಹೆಡ್ಶಾಟ್ ಮಾಡಲು ಪ್ರಯತ್ನಿಸುವುದನ್ನು ಈ ಅನಿಮೇಟೆಡ್ ಚಿತ್ರ ತೋರಿಸುತ್ತಿದೆ. ಇನ್ನೊಂದು ಪಕ್ಷಿ ಗೋಲು ಕೀಪರ್ನಂತೆ ಹಣ್ಣನ್ನು ತಡೆಯಲು ಕುತೂಹಲದಿಂದ ಕಾಯುತ್ತಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇಂದು ಪುರುಷರು ಮತ್ತು ಮಹಿಳೆಯರ ಫುಟ್ಬಾಲ್ ಸ್ಪರ್ಧೆಗಳು ಆರಂಭಗೊಳ್ಳಲಿವೆ. ಫ್ರಾನ್ಸ್, ಜಪಾನ್, ಯುಎಸ್, ಸ್ಪೇನ್ ಸೇರಿದಂತೆ ಹಲವಾರು ಪ್ರಮುಖ ದೇಶಗಳು ಎರಡೂ ವಿಭಾಗಗಳಿಗೆ ಸ್ಪರ್ಧಿಸುತ್ತಿವೆ. ಉದ್ಘಾಟನಾ ಸಮಾರಂಭಕ್ಕೂ ಗೂಗಲ್ ತನ್ನ ಲೋಗೋ ಬದಲಿಸಿತ್ತು.
ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಮಹಿಳೆಯರ ಫುಟ್ಬಾಲ್ ತಂಡಗಳು
ಗುಂಪು - ಎ: ಫ್ರಾನ್ಸ್, ಕೆನಡಾ, ಕೊಲಂಬಿಯಾ, ನ್ಯೂಜಿಲೆಂಡ್
ಗುಂಪು - ಬಿ: ಜರ್ಮಿನಿ, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಜಾಂಬಿಯಾ
ಗುಂಪು - ಸಿ: ಸ್ಪೇನ್, ಬ್ರೆಜಿಲ್, ಜಪಾನ್, ನೈಜಿರಿಯಾ.
ಮಹಿಳೆಯರ ಎ ಗುಂಪಿನಲ್ಲಿ ಕೆನಡಾ, ಫ್ರಾನ್ಸ್, ಬಿ ಗುಂಪಿನಲ್ಲಿ ಜರ್ಮನಿ, ಯುನೈಟೆಡ್ ಸ್ಟೇಟ್ಸ್ ಹಾಗೂ ಸಿ ಗುಂಪಿನಲ್ಲಿ ಸ್ಪೇನ್ ಬ್ರೆಜಿಲ್ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿವೆ.
ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಪುರುಷರ ಫುಟ್ಬಾಲ್ ತಂಡಗಳು
ಗುಂಪು - ಎ: ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್, ನ್ಯೂಜಿಲೆಂಡ್, ಗಿನಿಯಾ
ಗುಂಪು - ಬಿ: ಅರ್ಜೆಂಟೀನಾ, ಮೊರಾಕ್ಕೋ, ಉಕ್ರೇನ್, ಇರಾಕ್
ಗುಂಪು - ಸಿ: ಸ್ಪೇನ್, ಈಜಿಪ್ಟ್, ಡೊನಿಮಿಕ್ ರಿಪಬ್ಲಿಕ್, ಉಜ್ಬೇಕಿಸ್ತಾನ್
ಗುಂಪು - ಡಿ: ಜಪಾನ್, ಪೆರುಗ್ವೆ, ಮಾಲಿ, ಇಸ್ರೇಲ್.
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ 32 ಕ್ರೀಡಾ ವಿಭಾಗಗಳ 329 ಸ್ಪರ್ಧೆಗಳಲ್ಲಿ ಸ್ಪರ್ಧಿಸಲು 206 ದೇಶಗಳ 10,500ಕ್ಕೂ ಅಧಿಕ ಕ್ರೀಡಾಪಟುಗಳು ಫ್ರಾನ್ಸ್ನಲ್ಲಿ ಜಮಾಯಿಸಿದ್ದಾರೆ. ಕ್ರೀಡಾಕೂಟವು ಜುಲೈ 26 ರಂದು ಪ್ರಾರಂಭವಾಗಿದ್ದು, ಆಗಸ್ಟ್ 11 ರಂದು ಕೊನೆಗೊಳ್ಳಲಿದೆ.