ಮನು ಭಾಕರ್​ ಚಿನ್ನಕ್ಕೆ ಹೋರಾಟ, ಸಿಂಧು-ಪ್ರಣಯ್ ಮತ್ತು ಕನ್ನಡಿಗರಿಬ್ಬರು ಕಣಕ್ಕೆ; ಜುಲೈ 28ರ ಭಾರತದ ವೇಳಾಪಟ್ಟಿ
ಕನ್ನಡ ಸುದ್ದಿ  /  ಕ್ರೀಡೆ  /  ಮನು ಭಾಕರ್​ ಚಿನ್ನಕ್ಕೆ ಹೋರಾಟ, ಸಿಂಧು-ಪ್ರಣಯ್ ಮತ್ತು ಕನ್ನಡಿಗರಿಬ್ಬರು ಕಣಕ್ಕೆ; ಜುಲೈ 28ರ ಭಾರತದ ವೇಳಾಪಟ್ಟಿ

ಮನು ಭಾಕರ್​ ಚಿನ್ನಕ್ಕೆ ಹೋರಾಟ, ಸಿಂಧು-ಪ್ರಣಯ್ ಮತ್ತು ಕನ್ನಡಿಗರಿಬ್ಬರು ಕಣಕ್ಕೆ; ಜುಲೈ 28ರ ಭಾರತದ ವೇಳಾಪಟ್ಟಿ

India Full Schedule: ಜುಲೈ 27ರ ಶನಿವಾರ ಸವಾಲಿನ ಆರಂಭ ಪಡೆದ ಭಾರತದ ಕ್ರೀಡಾಪಟುಗಳು ಜುಲೈ 28ರಂದು ಮತ್ತಷ್ಟು ಭರವಸೆಗಳನ್ನು ಹೊತ್ತು ತರಲು ಸಜ್ಜಾಗಿದ್ದಾರೆ.

ಮನು ಭಾಕರ್​ ಚಿನ್ನಕ್ಕೆ ಹೋರಾಟ, ಕನ್ನಡಿಗರಿಬ್ಬರ ಈಜು ಸ್ಪರ್ಧೆ, ಸಿಂಧು-ಪ್ರಣಯ್ ಆರಂಭ; ಜುಲೈ 28ರ ಭಾರತದ ವೇಳಾಪಟ್ಟಿ
ಮನು ಭಾಕರ್​ ಚಿನ್ನಕ್ಕೆ ಹೋರಾಟ, ಕನ್ನಡಿಗರಿಬ್ಬರ ಈಜು ಸ್ಪರ್ಧೆ, ಸಿಂಧು-ಪ್ರಣಯ್ ಆರಂಭ; ಜುಲೈ 28ರ ಭಾರತದ ವೇಳಾಪಟ್ಟಿ

2024ರ ಪ್ಯಾರಿಸ್ ಒಲಿಂಪಿಕ್ಸ್​​​ನ ಶೂಟಿಂಗ್​​ನಲ್ಲಿ ಮಿಶ್ರ ಫಲಿತಾಂಶ, ರೋಯಿಂಗ್​ನಲ್ಲಿ ಸಿಹಿ ಸುದ್ದಿ, ಬ್ಯಾಡ್ಮಿಂಟನ್​​​, ಹಾಕಿ, ಟೇಬಲ್​​ ಟೆನಿಸ್​​ನಲ್ಲಿ ಶುಭಾರಂಭ ಕಂಡ ಭಾರತ, ಇಂದು (ಜುಲೈ 28ರ ಭಾನುವಾರ) ಹಲವು ಭರವಸೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಚಿನ್ನದ ಪದಕದ ಸ್ಫರ್ಧೆಯಲ್ಲಿ ಮನು ಭಾಕರ್ ಕಣಕ್ಕಿಳಿಯುತ್ತಿದ್ದರೆ​, ಸ್ಟಾರ್​ ಷಟ್ಲರ್​ಗಳಾದ ಪಿವಿ ಸಿಂಧು, ಎಚ್‌ಎಸ್ ಪ್ರಣಯ್, ಬಾಕ್ಸರ್ ನಿಖತ್ ಜರೀನ್ ಅವರಂತಹ ದೊಡ್ಡ ಹೆಸರುಗಳು ಅಭಿಯಾನ ಆರಂಭಿಸಲು ಸಜ್ಜಾಗಿವೆ.

ಸವಾಲಿನ ಆರಂಭ ಪಡೆದ ಭಾರತೀಯರು, ಕ್ರೀಡಾಕೂಟದ ಎರಡನೇ ದಿನದಂದು ಮತ್ತಷ್ಟು ಭರವಸೆಗಳನ್ನು ಹೊತ್ತು ತರಲು ತಯಾರಿ ನಡೆಸಿದ್ದಾರೆ. ಭಾರತದ ಏಕೈಕ ರೋವರ್ ಬಾಲರಾಜ್ ಪನ್ವಾರ್ ಅವರು ತಮ್ಮ ಮೊದಲ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದು, ಪುರುಷರ ಸಿಂಗಲ್ ಸ್ಕಲ್ಸ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದರು. 25ರ ಹರೆಯದ ಅವರು ಇಂದು ರಿಪಿಚೇಜ್ ಸುತ್ತಿನಲ್ಲಿ ಭಾಗವಹಿಸಲಿದ್ದು, ಅಂತಿಮ ಹಂತಕ್ಕೆ ಬಂದು ಪದಕಕ್ಕಾಗಿ ಸ್ಪರ್ಧಿಸುವ ಅವಕಾಶ ಇದೆ.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ಗೆ ಅರ್ಹತೆ ಪಡೆದ ಮನುಭಾಕರ್​, 580 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು. ಇದೀಗ ಚಿನ್ನದ ಪದಕದ ಸ್ಪರ್ಧೆಯಲ್ಲಿ ಭಾರತಕ್ಕಾಗಿ ಚೊಚ್ಚಲ ಪದಕ ಗೆಲ್ಲುವ ತವಕದಲ್ಲಿದ್ದಾರೆ. ಆದರೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ, ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಭಾರತೀಯ ಶೂಟರ್​​ಗಳು ನಿರಾಸೆ ಮೂಡಿಸಿದರು. ಆದರೆ ಬ್ಯಾಡ್ಮಿಂಟನ್ ಸಿಂಗಲ್ಸ್​​-ಡಬಲ್ಸ್​​ನಲ್ಲಿ ಭಾರತೀಯ ಷಟ್ಲರ್​​ಗಳು ಶುಭಾರಂಭ ಕಂಡಿದ್ದಾರೆ. ಹಾಗೆಯೇ ಹಾಕಿ ತಂಡವೂ ಭರ್ಜರಿ ಗೆಲುವು ಸಾಧಿಸಿದೆ.

ಪ್ಯಾರಿಸ್​ ಒಲಿಂಪಿಕ್ಸ್: ಜುಲೈ 28ರ ಭಾರತ ಸ್ಪರ್ಧೆಗಳ ವೇಳಾಪಟ್ಟಿ

ಮಧ್ಯಾಹ್ನ 12:45: ಶೂಟಿಂಗ್ – 10 ಮೀಟರ್ ಏರ್ ರೈಫಲ್ ವುಮೆನ್ಸ್​ ಕ್ವಾಲಿಫಿಕೇಷನ್ (ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್)

ಮಧ್ಯಾಹ್ನ 12:45: ಬ್ಯಾಡ್ಮಿಂಟನ್ – ಮಹಿಳೆಯರ ಸಿಂಗಲ್ಸ್ ಗುಂಪು ಹಂತ (ಪಿವಿ ಸಿಂಧು)

ಮಧ್ಯಾಹ್ನ 1:18: ರೋಯಿಂಗ್ – ಪುರುಷರ ಸಿಂಗಲ್ಸ್ ಸ್ಕಲ್ಸ್ ರೆಪೆಚೇಜ್ ಹಂತ (ಬಾಲರಾಜ್ ಪನ್ವಾರ್)

ಮಧ್ಯಾಹ್ನ 2:15: ಟೇಬಲ್ ಟೆನ್ನಿಸ್ – ಮಹಿಳೆಯರ ಸಿಂಗಲ್ಸ್ ರೌಂಡ್-64 (ಶ್ರೀಜಾ ಅಕುಲಾ)

ಮಧ್ಯಾಹ್ನ 2:45: ಶೂಟಿಂಗ್ – 10 ಮೀ ಏರ್ ರೈಫಲ್ ಮೆನ್ಸ್ ಕ್ವಾಲಿಫಿಕೇಷನ್ (ಸಂದೀಪ್ ಸಿಂಗ್, ಅರ್ಜುನ್ ಬಾಬುತಾ)

ಮಧ್ಯಾಹ್ನ 3.00: ಟೇಬಲ್ ಟೆನ್ನಿಸ್ – ಪುರುಷರ ಸಿಂಗಲ್ಸ್ ರೌಂಡ್-64 (ಶರತ್ ಕಮಲ್)

ಮಧ್ಯಾಹ್ನ 3.16: ಈಜು – ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಹೀಟ್ಸ್ (ಶ್ರೀಹರಿ ನಟರಾಜ್)

ಮಧ್ಯಾಹ್ನ 3:30: ಈಜು – ಮಹಿಳೆಯರ 200ಮೀ ಫ್ರೀಸ್ಟೈಲ್ ಹೀಟ್ಸ್ (ಧಿನಿಧಿ ದೇಸಿಂಗು)

ಮಧ್ಯಾಹ್ನ 3:30: ಶೂಟಿಂಗ್ – ಮಹಿಳೆಯರ 10 ಮೀ ಏರ್ ಪಿಸ್ತೂಲ್ ಫೈನಲ್ (ಮನು ಭಾಕರ್)

ಮಧ್ಯಾಹ್ನ 3:50: ಬಾಕ್ಸಿಂಗ್ - ಮಹಿಳೆಯರ 50 ಕೆಜಿ, ರೌಂಡ್-32 (ನಿಖತ್ ಜರೀನ್)

ಸಂಜೆ 4:30: ಟೇಬಲ್ ಟೆನ್ನಿಸ್ – ಮಹಿಳೆಯರ ಸಿಂಗಲ್ಸ್, ರೌಂಡ್-64 (ಮಾನಿಕಾ ಬಾತ್ರಾ)

ಸಂಜೆ 8:30: ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ ಗುಂಪು ಹಂತ (ಹೆಚ್​ಎಸ್​ ಪ್ರಣಯ್)

ಸಂಜೆ 5:45: ಆರ್ಚರಿ – ಮಹಿಳಾ ತಂಡದ ಕ್ವಾರ್ಟರ್‌ಫೈನಲ್ (ಅಂಕಿತಾ ಭಕತ್, ಭಜನ್ ಕೌರ್, ದೀಪಿಕಾ ಕುಮಾರಿ)

ಸಂಜೆ 7:17: ಆರ್ಚರಿ – ಮಹಿಳಾ ತಂಡದ ಸೆಮಿಫೈನಲ್‌ಗಳು (ಅರ್ಹತೆಗೆ ಒಳಪಟ್ಟಿರುತ್ತದೆ)

ಸಂಜೆ 8:18: ಆರ್ಚರಿ – ಮಹಿಳಾ ತಂಡದ ಕಂಚಿನ ಪದಕದ ಪಂದ್ಯ (ಅರ್ಹತೆಗೆ ಒಳಪಟ್ಟಿರುತ್ತದೆ)

ಸಂಜೆ 8:41: ಆರ್ಚರಿ – ಮಹಿಳಾ ತಂಡದ ಚಿನ್ನದ ಪದಕದ ಪಂದ್ಯ (ಅರ್ಹತೆಗೆ ಒಳಪಟ್ಟಿರುತ್ತದೆ)

ಒಲಿಂಪಿಕ್ಸ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.