Kabaddi Championships: ಕಬಡ್ಡಿಯಲ್ಲಿ ಭಾರತವೇ ಬಲಿಷ್ಠ; ಇರಾನ್ ಮಣಿಸಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದ ಪವನ್ ಬಳಗ
Jan 09, 2024 08:03 PM IST
ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ಪ್ರಶಸ್ತಿ ಗೆದ್ದ ಭಾರತ ತಂಡ
- Asian Kabaddi Championships: ಏಷ್ಯಾದ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಇದು ಎಂಟನೇ ಪ್ರಶಸ್ತಿಯಾಗಿದೆ.
ಶುಕ್ರವಾರ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ (Asian Kabaddi Championship 2023) ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಿದ ಭಾರತದ ಪುರುಷರ ಕಬಡ್ಡಿ ತಂಡವು ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇರಾನ್ ವಿರುದ್ಧ 42-32 ಅಂತರದಿಂದ ಗೆದ್ದಿದ್ದಾರೆ.
ವಿಶ್ವದ ಅತ್ಯಂತ ಬಲಿಷ್ಠ ಕಬಡ್ಡಿ ತಂಡವಾದ ಭಾರತವು, ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಈ ಮೂಲಕ ಎಂಟನೇ ಪ್ರಶಸ್ತಿ ಗೆದ್ದಿದೆ. ಈ ಹಿಂದೆ ಒಟ್ಟು ಏಳು ಬಾರಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾ, ತನ್ನ ಬಲಿಷ್ಠ ದಾಖಲೆಯನ್ನು ಮುಂದುವರೆಸಿದೆ.
ಆಕ್ರಮಣಕಾರಿ ಆಟ ಪ್ರಾರಂಭಿಸಿದ ಇರಾನ್‌ಗೆ, ಮುನ್ನಡೆ ಪಡೆಯಲು ಭಾರತ ಅವಕಾಶ ನೀಡಲಿಲ್ಲ. ತಮ್ಮ ಅನುಭವ ಹಾಗೂ ಚಾಣಾಕ್ಷತನ ಪ್ರತದರ್ಶಿಸಿದ ನಾಯಕ ಪವನ್ ಸೆಹ್ರಾವತ್, ಎರಡು ಟಚ್ ಪಾಯಿಂಟ್‌ಗಳೊಂದಿಗೆ ಮೊದಲ ಆಲ್-ಔಟ್ ಮಾಡಿದರು. ಅಲ್ಲದೆ ತಂಡಕ್ಕೆ 10-4ರ ಆರಂಭಿಕ ಮುನ್ನಡೆ ತಂದುಕೊಟ್ಟರು. ಇರಾನಿಯನ್ನರ ಮೇಲೆ ಒತ್ತಡ ಹೆಚ್ಚಿಸಿದ ಭಾರತ ಮತ್ತೊಮ್ಮೆ ಆಲ್-ಔಟ್ ಮಾಡಿತು. ವಿರಾಮದ ವೇಳೆಗೆ ಭಾರತ 23-11ರಿಂದ ಮುಂದಿತ್ತು.
ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್ರೇಜಾ ಚಿಯಾನೆಹ್ ಅವರು ತಮ್ಮ ತಂಡವನ್ನು ಪುನರಾಗಮನ ಮಾಡಲು ಪ್ರಯತ್ನಿಸಿದರು. ಆದರೆ, ಅವರ ಪ್ರಯತನ ಕೈ ಹಿಡಿಯಲಿಲ್ಲ. ಮತ್ತೊಂದು ಬಾರಿ ಆಲ್-ಔಟ್ ಆದ ತಂಡವು 14-33ರ ಹಿನ್ನಡೆ ಅನುಭವಿಸಿತು. ಅಂತಿಮವಾಗಿ ಭರ್ಜರಿ ಅಂತರದೊಂದಿಗೆ ಜಯ ಸಾಧಿಸಿತು.
"ಇರಾನ್ ವಿರುದ್ಧದ ಫೈನಲ್ ಪಂದ್ಯದಲ್ಲಿ 42-32 ಅಂಕಗಳೊಂದಿಗೆ, ಟೀಮ್ ಇಂಡಿಯಾ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಸಂಪೂರ್ಣ ತಂಡಕ್ಕೆ ಅಭಿನಂದನೆಗಳು," ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಟ್ವೀಟ್ ಮಾಡಿದೆ.
2017ರಲ್ಲಿ ಇರಾನ್‌ನಲ್ಲಿ ನಡೆದ ಕೊನೆಯ ಆವೃತ್ತಿಯ ಫೈನಲ್ ಪಂದ್ಯದಲ್ಲಿಯೂ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿತ್ತು. ಈವರೆಗೆ ಭಾರತವು ಒಟ್ಟು ಎಂಟು ಟ್ರೋಫಿಗಳನ್ನು ಗೆದ್ದಿದೆ. ಒಂದು ಆವೃತ್ತಿಯಲ್ಲಿ ಮಾತ್ರ ಇರಾನ್ ಗೆದ್ದಿದ್ದು, ಆಡಿದ ಉಳಿದ ಎಲ್ಲಾ ಆವೃತ್ತಿಗಳಲ್ಲಿ ಭಾರತವೇ ಚಾಂಪಿಯನ್ ಆಗಿದೆ.
ಹೀಲ್ಸ್ ಧರಿಸಿ ನಡೆಯುವುದೇ ಕಷ್ಟ. ಅದರಲ್ಲೂ ಸಮತಟ್ಟಿಲ್ಲದ ಜಾಗದಲ್ಲಿ ನಡೆಯುವುದೆಂದರೆ ಮಹಿಳೆಯರು ಕಷ್ಟಪಡುತ್ತಾರೆ. ಸಾಮಾನ್ಯವಾಗಿ ಪಾರ್ಟಿ, ಗೆಟ್ ಟುಗೆದರ್ ಇರುವಂತಹ ಸಾಮಯದಲ್ಲಿ ಮಾತ್ರ ಸ್ತ್ರೀಯರು ಹೈ ಹೀಲ್ಸ್ ಧರಿಸುತ್ತಾರೆ. ಆದರೆ, ಪ್ರತಿ ಹೆಜ್ಜೆಯನ್ನು ಕೂಡಾ ಸೂಕ್ಷ್ಮವಾಗಿರಿಸಿ ಕೆಳಗೆ ಬೀಳದಂತೆ ಸಮತೋಲನ ಕಾಪಾಡಿಕೊಂಡು ನಡೆಯಬೇಕಾಗುತ್ತದೆ. ಇನ್ನೂ ಕೆಲವು ಮಹಿಳೆಯರು ಹೈ ಹೀಲ್ಸ್ ಧರಿಸಿ ನಡೆಯಲು ಕಷ್ಟವಾಗುತ್ತದೆ ಎಂದು ಅದನ್ನು ಧರಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ಪುರುಷ ಹೈ ಹೀಲ್ಸ್ ಧರಿಸಿ ವೇಗವಾಗಿ ಓಡಿ ದಾಖಲೆ ಮಾಡಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ವಿಭಾಗ