logo
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್: ಇಂದಿನಿಂದ ಕುಸ್ತಿ ಶುರು, ಕಂಚಿನ ಪದಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಕಣಕ್ಕೆ; ಆಗಸ್ಟ್ 5ರ ವೇಳಾಪಟ್ಟಿ

ಪ್ಯಾರಿಸ್ ಒಲಿಂಪಿಕ್ಸ್: ಇಂದಿನಿಂದ ಕುಸ್ತಿ ಶುರು, ಕಂಚಿನ ಪದಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಕಣಕ್ಕೆ; ಆಗಸ್ಟ್ 5ರ ವೇಳಾಪಟ್ಟಿ

Jayaraj HT Kannada

Aug 05, 2024 05:18 AM IST

google News

ಪ್ಯಾರಿಸ್ ಒಲಿಂಪಿಕ್ಸ್: ಇಂದಿನಿಂದ ಕುಸ್ತಿ ಶುರು, ಕಂಚಿನ ಪದಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಕಣಕ್ಕೆ

    • Paris Olympics 2024: ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತದ ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್‌, ಇಂದು ಕಂಚಿನ ಪದಕ ಪಂದ್ಯದಲ್ಲಿ ಗೆಲ್ಲುವ ಭರವಸೆ ಹೊಂದಿದ್ದಾರೆ. ಆಗಸ್ಟ್‌ 5ರಂದು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಹಲವು ಈವೆಂಟ್‌ಗಳು ನಡೆಯುತ್ತಿವೆ. ಭಾರತದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್: ಇಂದಿನಿಂದ ಕುಸ್ತಿ ಶುರು, ಕಂಚಿನ ಪದಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಕಣಕ್ಕೆ
ಪ್ಯಾರಿಸ್ ಒಲಿಂಪಿಕ್ಸ್: ಇಂದಿನಿಂದ ಕುಸ್ತಿ ಶುರು, ಕಂಚಿನ ಪದಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಕಣಕ್ಕೆ

ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾನುವಾರ ಭಾರತ ಮಿಶ್ರ ಫಲಿತಾಂಶ ಪಡೆಯಿತು. ಇದೀಗ ಆಗಸ್ಟ್‌ 5ರ ಗುರುವಾರ ಕನಿಷ್ಠ ಒಂದು ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್ ಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ ಅವರ ಮುಂದೆ ಕಂಚಿನ ಪದಕ ಗೆಲ್ಲುವ ಅವಕಾಶವಿದೆ. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಪದಕ ಗೆಲ್ಲುವ ಸಾಧ್ಯತೆ ಅವರ ಬಳಿ ಇದೆ. ಸೋಮವಾರ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಅವರು ಮಲೇಷ್ಯಾದ ಲೀ ಜಿಯಾ ಝಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಭಾರತದ ಇಂದಿನ ವೇಳಾಪಟ್ಟಿ ಹೇಗಿದೆ ಎಂಬುದನ್ನು ನೋಡೋಣ.

ಸೋಮವಾರದಿಂದ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಆರಂಭವಾಗಲಿದೆ. ಮಹಿಳೆಯರ 68 ಕೆಜಿ ವಿಭಾಗದಲ್ಲಿ ಭಾರತದ ನಿಶಾ ದಹಿಯಾ ಪದಕ ಸುತ್ತಿಗೆ ಪ್ರವೇಶಿಸಲು ಎದುರು ನೋಡುತ್ತಿದ್ದಾರೆ. ಅವಿನಾಶ್ ಸೇಬಲ್ ಪುರುಷರ ಸ್ಟೀಪಲ್‌ಚೇಸ್ ಹೀಟ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಭಾರತದ ಟೇಬಲ್ ಟೆನಿಸ್ ಆಟಗಾರ್ತಿಯರು ಸೋಮವಾರ ಟೀಮ್ ಈವೆಂಟ್‌ನಲ್ಲಿ ಭಾಗಿಯಾಗುತ್ತಿದ್ದಾರೆ.

ಆಗಸ್ಟ್ 5ರ ಸೋಮವಾರದ ಭಾರತದ ವೇಳಾಪಟ್ಟಿ

ಮಧ್ಯಾಹ್ನ 12:30 : ಶೂಟಿಂಗ್ - ಸ್ಕೀಟ್ ಮಿಶ್ರ ತಂಡ ಅರ್ಹತಾ ಸುತ್ತಿನಲ್ಲಿ ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ.

ಮಧ್ಯಾಹ್ನ 1:30 : ಟೇಬಲ್ ಟೆನ್ನಿಸ್ - 16ರ ಸುತ್ತಿನಲ್ಲಿ ಮಹಿಳಾ ತಂಡದ ಸ್ಪರ್ಧೆ. ಭಾರತ vs ರೊಮೇನಿಯಾ. (ಶ್ರೀಜಾ ಅಕುಲಾ, ಮನಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರನ್ನೊಳಗೊಂಡ ಭಾರತ ತಂಡ)

ಮಧ್ಯಾಹ್ನ 3:25 : ಅಥ್ಲೆಟಿಕ್ಸ್ - ಮಹಿಳೆಯರ 400 ಮೀಟರ್‌ ಹೀಟ್ಸ್‌ನಲ್ಲಿ ಕಿರಣ್ ಪಹಲ್.

ಮಧ್ಯಾಹ್ನ 3:45 : ಸೈಲಿಂಗ್ - ನೇತ್ರಾ ಕುಮನನ್. ಮಹಿಳೆಯರ ಡಿಂಗಿ ಓಟ 9 ಮತ್ತು 10ರಲ್ಲಿ.

ಸಂಜೆ 6:10 : ಸೈಲಿಂಗ್ - ಪುರುಷರ ಡಿಂಗಿ ಓಟ 9 ಮತ್ತು 10 ರಲ್ಲಿ ವಿಷ್ಣು ಸರವಣನ್.

ಸಂಜೆ 6 ಗಂಟೆ : ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ ಕಂಚಿನ ಪದಕ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿಯಾ ಝಿ ವಿರುದ್ಧ ಲಕ್ಷ್ಯ ಸೇನ್

ಸಂಜೆ 6:30ರಿಂದ : ಕುಸ್ತಿ - ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ನಿಶಾ ದಹಿಯಾ. (ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್‌ ಪಂದ್ಯಗಳು ಕೂಡ ನಡೆಯಲಿವೆ).

ರಾತ್ರಿ 10:31 : ಅಥ್ಲೆಟಿಕ್ಸ್ - ಪುರುಷರ 3000 ಮೀಟರ್‌ ಸ್ಟೀಪಲ್‌ಚೇಸ್ ಹೀಟ್ಸ್‌ನಲ್ಲಿ ಅವಿನಾಶ್ ಸೇಬಲ್.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ