ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಪದಕ ಗೆದ್ದ ಪಾರುಲ್ ಚೌಧರಿ; 5000 ಮೀ ಓಟದಲ್ಲಿ ಬಂಗಾರ ಸಾಧನೆ
Oct 03, 2023 06:43 PM IST
ಪಾರುಲ್ ಚೌಧರಿ
- Parul Chaudhary: ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ಒಂದು ದಿನದ ಒಳಗೆ, ಪಾರುಲ್ ಚೌಧರಿ ಮತ್ತೊಂದು ಪದಕ ಗೆದ್ದಿದ್ದಾರೆ. ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಮಹಿಳೆಯರ 5000 ಮೀಟರ್ ಓಟದಲ್ಲಿ ಭಾರತದ ಪಾರುಲ್ ಚೌಧರಿ (Parul Chaudhary) ಐತಿಹಾಸಿಕ ಬಂಗಾರ ಗೆದ್ದಿದ್ದಾರೆ. ಜಪಾನ್‌ನ ರಿರಿಕಾ ಹಿರೋನಾಕಾ ಅವರೊಂದಿಗಿನ ರೋಚಕ ಪೈಪೋಟಿಯಲ್ಲಿ ಕೊನೆಗೂ ಪಾರುಲ್ ಅಗ್ರಸ್ಥಾನ ಪಡೆದ್ದಿದಾರೆ. ಆ ಮೂಲಕ ಪ್ರಸಕ್ತ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಒಂದು ಬೆಳ್ಳಿ ಬಳಿಕ ಈಗ ಬಂಗಾರ ತಮ್ಮದಾಗಿಸಿಕೊಂಡಿದ್ದಾರೆ.
2023ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೂರನೇ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ದಾಖಲೆಯನ್ನು ಪಾರುಲ್ ಮಾಡಿದ್ದಾರೆ. ಜಪಾನ್ ಎದುರಾಳಿಯನ್ನು ಕೊನೆಯವರೆಗೂ ಹಿಂಬಾಲಿಸಿದ ಅವರು,ಅಂತಿಮ ಹಂತದಲ್ಲಿ ಮುನ್ನುಗ್ಗಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈಗಾಗಲೇ ಸೋಮವಾರ ನಡೆದ ಆಟದಲ್ಲಿ ಪಾರುಲ್ 3000 ಮೀಟರ್ ಮಹಿಳೆಯರ ಸ್ಟೀಪಲ್ ಚೇಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಇದೀಗ ಬಂಗಾರದ ರೂಪದಲ್ಲಿ ಎರಡನೇ ಪದಕ ಗೆದ್ದಿದ್ದಾರೆ.
ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತ ಸದ್ಯ ಮೂರು ಸ್ವರ್ಣ ಪದಕಗಳನ್ನು ಗೆದ್ದಿದೆ. ಈಗಾಗಲೇ ಶಾಟ್‌ಪುಟ್‌ನಲ್ಲಿ ತಜಿಂದರ್‌ಪಾಲ್ ಸಿಂಗ್ ಬಂಗಾರ ಗೆದ್ದಿದ್ದಾರೆ. ಮತ್ತೊಂದೆಡೆ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸೇಬಲ್ ಕೂಡಾ ಚಿನ್ನ ಗೆದ್ದಿದ್ದಾರೆ. ತಜಿಂದರ್‌ಪಾಲ್ ಸಿಂಗ್ ಅವರು ತಮ್ಮ ಏಷ್ಯನ್ ಗೇಮ್ಸ್ ಚಿನ್ನವನ್ನು ರಕ್ಷಿಸಿಕೊಂಡರೆ, ಸೇಬಲ್ ಹಳೆಯ ದಾಖಲೆ ಮುರಿದು ಅಗ್ರಸ್ಥಾನ ಪಡೆದಿದ್ದಾರೆ.
ಏಷ್ಯನ್ ಗೇಮ್ಸ್ 10ನೇ ದಿನ್ ಭಾರತ ಗೆದ್ದ ಪದಕಗಳು
- ಚಿನ್ನದ ಪದಕ: ಮಹಿಳೆಯರ 5000 ಮೀಟರ್ ಓಟ : ಪಾರುಲ್ ಚೌಧರಿ
- ಕಂಚಿನ ಪದಕ: ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ವಿತ್ಯಾ ರಾಮರಾಜ್
- ಕಂಚಿನ ಪದಕ: ಮಹಿಳೆಯರ 54 ಕೆಜಿ ಬಾಕ್ಸಿಂಗ್‌ನಲ್ಲಿ ಪ್ರೀತಿ ಪವಾರ್
- ಕಂಚಿನ ಪದಕ: ಪುರುಷರ ಕ್ಯಾನೋ ಡಬಲ್ 1000 ಮೀಟರ್‌ನಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್
ಭಾರತ ಈವರೆಗೆ ಗೆದ್ದ ಪದಕಗಳ ಸಂಖ್ಯೆ
ಚಿನ್ನ: 14
ಬೆಳ್ಳಿ: 25
ಕಂಚು: 26
ಹಾಂಕಾಂಗ್ ವಿರುದ್ಧ 13-0 ಅಂತರದ ಗೆಲುವು; ಸೆಮಿಫೈನಲ್ ಲಗ್ಗೆ ಇಟ್ಟ ಭಾರತ ಮಹಿಳೆಯರ ಹಾಕಿ ತಂಡ
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಹಾಕಿ ಪಂದ್ಯದಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಹಾಂಗ್‌ಝೌನಲ್ಲಿ ನಡೆದ ಪೂಲ್ ಎ ಪಂದ್ಯದಲ್ಲಿ ಹಾಂಕಾಂಗ್ ಚೀನಾ ವಿರುದ್ಧ ಭಾರತ ಮಹಿಳಾ ಹಾಕಿ ತಂಡ 13-0 ಅಂತರದ ಭರ್ಜರಿ ಜಯ ಸಾಧಿಸಿದೆ. ಪರುಷರ ತಂಡದಂತೆ ವನಿತೆಯರ ತಂಡ ಕೂಡಾ ಎರಡಂಕಿ ಗೋಲುಗಳನ್ನು ಗಳಿಸಿ ಭರ್ಜರಿ ಪ್ರದರ್ಶನ ನೀಡಿದೆ.