logo
ಕನ್ನಡ ಸುದ್ದಿ  /  ಕ್ರೀಡೆ  /  Pkl 10: ಹರಿಯಾಣ ಸ್ಟೀಲರ್ಸ್‌ ಸೋಲಿಸಿ ಚೊಚ್ಚಲ ಪ್ರೊ ಕಬಡ್ಡಿ ಲೀಗ್‌ ಟ್ರೋಫಿ ಗೆದ್ದ ಪುಣೆರಿ ಪಲ್ಟನ್‌

PKL 10: ಹರಿಯಾಣ ಸ್ಟೀಲರ್ಸ್‌ ಸೋಲಿಸಿ ಚೊಚ್ಚಲ ಪ್ರೊ ಕಬಡ್ಡಿ ಲೀಗ್‌ ಟ್ರೋಫಿ ಗೆದ್ದ ಪುಣೆರಿ ಪಲ್ಟನ್‌

Jayaraj HT Kannada

Mar 01, 2024 09:27 PM IST

google News

ಹರಿಯಾಣ ಸ್ಟೀಲರ್ಸ್‌ ಸೋಲಿಸಿ ಚೊಚ್ಚಲ ಪ್ರೊ ಕಬಡ್ಡಿ ಲೀಗ್‌ ಟ್ರೋಫಿ ಗೆದ್ದ ಪುಣೆರಿ ಪಲ್ಟನ್‌

    • Puneri Paltan: ಪ್ರೊ ಕಬಡ್ಡಿ ಲೀಗ್‌ 2024ರ ನೂತನ ಚಾಂಪಿಯನ್‌ ಆಗಿ ಪುಣೆರಿ ಪಲ್ಟನ್‌ ತಂಡ ಹೊರಹೊಮ್ಮಿದೆ. ಹರಿಯಾಣ ಸ್ಟೀಲರ್ಸ್‌ ವಿರುದ್ಧದ ರೋಚಕ ಫೈನಲ್‌ ಪಂದ್ಯ ಗೆದ್ದ ತಂಡವು ಇದೇ ಮೊದಲ ಬಾರಿಗೆ ಪಿಕೆಎಲ್‌ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದೆ.
ಹರಿಯಾಣ ಸ್ಟೀಲರ್ಸ್‌ ಸೋಲಿಸಿ ಚೊಚ್ಚಲ ಪ್ರೊ ಕಬಡ್ಡಿ ಲೀಗ್‌ ಟ್ರೋಫಿ ಗೆದ್ದ ಪುಣೆರಿ ಪಲ್ಟನ್‌
ಹರಿಯಾಣ ಸ್ಟೀಲರ್ಸ್‌ ಸೋಲಿಸಿ ಚೊಚ್ಚಲ ಪ್ರೊ ಕಬಡ್ಡಿ ಲೀಗ್‌ ಟ್ರೋಫಿ ಗೆದ್ದ ಪುಣೆರಿ ಪಲ್ಟನ್‌

ಪುಣೆರಿ ಪಲ್ಟನ್‌ ತಂಡವು (Puneri Paltan) ಪ್ರೊ ಕಬಡ್ಡಿ ಲೀಗ್‌ 2024ರ (Pro Kabaddi League) ಆವೃತ್ತಿಯ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಹರಿಯಾಣ ಸ್ಟೀಲರ್ಸ್‌ ವಿರುದ್ಧದ ರೋಚಕ ಫೈನಲ್‌ ಪಂದ್ಯದಲ್ಲಿ ಗೆದ್ದ ತಂಡವು ಪಿಕೆಎಲ್‌ ಇತಿಹಾಸದಲ್ಲೇ ಮೊಟ್ಟಮೊದಲ ಟ್ರೋಫಿ ಎತ್ತಿಹಿಡಿದಿದೆ. ಮಾರ್ಚ್ 1ರ ಶುಕ್ರವಾರ ರಾತ್ರಿ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಸ್ಲಾಮ್‌ ಇನಾಮ್ದಾರ್‌ ನೇತೃತ್ವದ ತಂಡ ಗೆದ್ದು ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಪಂದ್ಯಾವಳಿಯುದ್ದಕ್ಕೂ ಅಬ್ಬರಿಸಿದ್ದ ಪಲ್ಟನ್ಸ್‌, ಫೈನಲ್‌ ಪಂದ್ಯದಲ್ಲೂ ಪ್ರಬಲ ಪೈಪೋಟಿ ನೀಡಿತು. ಆರಂಭದಿಂದಲೂ ಲೀಡ್‌ ಕಾಯ್ದುಕೊಂಡು ಮುನ್ನಡೆಯಿತು. ಉಭಯ ತಂಡಗಳೂ ಸಮಬಲದ ಹೋರಾಟ ನಡೆಸುತ್ತಾ ಬಂದರೂ, ಪುಣೆ ಲೀಡ್‌ ಕಾಯ್ದುಕೊಂಡಿತು. ಅಂತಿಮವಾಗಿ 28-25 ಅಂಕಗಳ ಅಂತರದಿಂದ ತಂಡ ಟ್ರೋಫಿ ಗೆದ್ದತು. ಬಿ.ಸಿ. ರಮೇಶ್‌ ಮಾರ್ಗದರ್ಶನದಲ್ಲಿ ತಂಡವು ಮೊದಲ ಕಪ್‌ ಗೆದ್ದು ಬೀಗಿದೆ.

ಪಂಕಜ್‌ ಮೋಹಿತೆ ಒಟ್ಟು 9 ರೈಡ್‌ ಪಾಯಿಂಟ್‌ಗಳೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೋಹಿತ್‌ ಗೋಯತ್‌ ಕೂಡಾ 5 ಪಾಯಿಂಟ್‌ ಕಲೆ ಹಾಕಿದರು. ಟೂರ್ನಿಯಲ್ಲಿ ಅತಿ ಹೆಚ್ಚು ಟ್ಯಾಕಲ್‌ ಪಾಯಿಂಟ್‌ ಕಲೆ ಹಾಕಿದ ಮಹಮದ್ರೇಜಾ ಶಾಡ್ಲೋಯಿ 2 ಟ್ಯಾಕಲ್‌ ಪಾಯಿಂಟ್‌ ಗಳಿಸಿದರು. ನಾಯಕ ಅಸ್ಲಾಮ್‌ ಹಾಗೂ ಗೌರವ್‌ ತಲಾ 4 ಅಂಕ ತಂಡಕ್ಕೆ ತಂದರು.

ಇದನ್ನೂ ಓದಿ | PKL 2024: ಪ್ರೊ ಕಬಡ್ಡಿ ಲೀಗ್‌ 10ರ ಬಲಿಷ್ಠ ರೈಡರ್‌ ಯಾರು; ಸೂಪರ್‌ ರೈಡ್‌, ಸೂಪರ್‌ 10 ಅಂಕಿ-ಅಂಶಗಳು ಹೀಗಿವೆ

ಹರಿಯಾಣ ಪರ ಶಿವಂ ಪಟಾರೆ 6 ರೈಡ್‌ ಅಂಕ ಪಡೆದರೆ, ಸಿದ್ದಾರ್ಥ್‌ ದೇಸಾಯಿ 4 ಪಾಯಿಂಟ್‌ ಸಂಗ್ರಹಿಸಿದರು.

ಉಭಯ ತಂಡಗಳ ನಡುವೆ ಬಿಗಿ ಪೈಪೋಟಿ ಏರ್ಪಟ್ಟರೂ, ಒಂದು ಬಾರಿ ಹರಿಯಾಣವನ್ನು ಆಲೌಟ್‌ ಮಾಡುವಲ್ಲಿ ಪುಣೆ ಯಶಸ್ವಿಯಾಯ್ತು. ಈ ಪಂದ್ಯದಲ್ಲಿ ಯಾವುದೇ ಸೂಪರ್‌ 10 ಅಥವಾ ಡಿಫೆಂಡಿಂಗ್‌ನಲ್ಲಿ ಹೈ ಫೈವ್‌ ದಾಖಲಾಗಲಿಲ್ಲ. ಆದರೂ ಪುಣೆ ಮಾತ್ರವಲ್ಲದೆ ಹರಿಯಾಣ ಕೂಡಾ ಶಿಸ್ತುಬದ್ಧ ಆಟ ಆಡಿ ಗಮನ ಸೆಳೆಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಋತುವಿನಲ್ಲಿ ಫೈನಲ್‌ ಪ್ರವೇಶಿಸಿ, ಅಂತಿಮ ಪಂದ್ಯದಲ್ಲಿ ಸೋತು ಟ್ರೋಫಿಯಿಂದ ವಂಚಿತರಾಗಿದ್ದ ಪುಣೆರಿ ಪಲ್ಟನ್ ಈ ಬಾರಿ ಕೊನೆಗೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಲೀಗ್‌ ಹಂತದಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿದ ತಂಡವು, ಫೆಬ್ರವರಿ 28ರ ಬುಧವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು 37-21 ಅಂಕಗಳಿಂದ ಸೋಲಿಸಿ ಸತತ ಎರಡನೇ ವರ್ಷವೂ ಫೈನಲ್‌ಗೆ ಲಗ್ಗೆ ಇಟ್ಟಿತು. ಇದೀಗ ಹರಿಯಾಣ ವಿರುದ್ಧ ಗೆದ್ದು ಕಪ್‌ ಗೆದ್ದಿದೆ.‌

ಬೆಸ್ಟ್‌ ರೈಡರ್‌ ಮತ್ತು ಡಿಫೆಂಡರ್

ದಬಾಂಗ್‌ ಡೆಲ್ಲಿ ತಂಡದ ಅಶು ಮಲಿಕ್‌ ಪಿಕೆಎಲ್‌ 10ನೇ ಆವೃತ್ತಿಯ ಅತ್ಯುತ್ತಮ ರೈಡರ್‌ ಪ್ರಶಸ್ತಿ ಗೆದ್ದರು. ಟೂರ್ನಿಯಲ್ಲಿ ಅಶು ಒಟ್ಟು 276 ರೈಡ್‌ ಪಾಯಿಂಟ್‌ ಕಲೆ ಹಾಕಿದ್ದಾರೆ. ಚಾಂಪಿಯನ್‌ ಪುಣೆರಿ ಪಲ್ಟನ್‌ ತಡದ ಮೊಹಮದ್ರೇಜಾ ಶಾಡ್ಲೋಯಿ ಅತ್ಯುತ್ತಮ ಡಿಫೆಂಡರ್‌ ಪ್ರಶಸ್ತಿ ಗೆದ್ದರು. ಇವರು ಒರಸ್ಕತ ಟೂರ್ನಿಯಲ್ಲಿ ಒಟ್ಟು 99 ಟ್ಯಾಕಲ್ ಪಾಯಿಂಟ್‌ ಗಳಿಸಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ