PKL 2024: ಪ್ರೊ ಕಬಡ್ಡಿ ಲೀಗ್ 10ರ ಬಲಿಷ್ಠ ರೈಡರ್ ಯಾರು; ಸೂಪರ್ ರೈಡ್, ಸೂಪರ್ 10 ಅಂಕಿ-ಅಂಶಗಳು ಹೀಗಿವೆ
Pro Kabaddi Season 10: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಹಲವಾರು ಪ್ರತಿಭೆಗಳು ಹೊರಹೊಮ್ಮಿವೆ. ಪಿಕೆಎಲ್ 2024ರ ಲೀಗ್ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ಟಾಪ್ ರೈಡರ್‌ಗಳು, ಹೆಚ್ಚು ಬಾರಿ ಸೂಪರ್ 10 ಕಲೆ ಹಾಕಿದ ಆಟಗಾರರು ಸೇರಿದಂತೆ, ಈ ಬಾರಿಯ ಪಿಕೆಎಲ್‌ನ ಪ್ರಮುಖ ಅಂಕಿ-ಅಂಶಗಳು ಹೀಗಿವೆ.
ಸರಿಸುಮಾರು ಮೂರು ತಿಂಗಳಿಂದ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ (Pro Kabaddi League) ಪಂದ್ಯಾವಳಿಯ 10ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಮಾರ್ಚ್ 1ರ ಶುಕ್ರವಾರ, ಪಿಕೆಎಲ್ 2024ರ ಆವೃತ್ತಿಯ ಫೈನಲ್ ಪಂದ್ಯ ನಡೆಯುತ್ತಿದ್ದು, ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣವು ಪ್ರಶಸ್ತಿ ಸುತ್ತಿನ ಹಣಾಹಣಿಗೆ ಸಜ್ಜಾಗಿದೆ. ಸೆಮಿಫೈನಲ್ ಪಂದ್ಯಗಳಲ್ಲಿ ಗೆದ್ದ ಪುಣೆರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ (Puneri Paltan vs Haryana Steelers) ತಂಡಗಳು ಟ್ರೋಫಿ ಗೆಲುವಿಗೆ ಮುಖಾಮುಖಿಯಾಗುತ್ತಿವೆ. ಈ ಎರಡು ತಂಡಗಳಲ್ಲಿ ಯಾವ ತಂಡ ಗೆದ್ದರೂ, ಪ್ರೊ ಕಬಡ್ಡಿ ಪಂದ್ಯಾವಳಿಯು ಹೊಸ ತಂಡವೊಂದರ ಚಾಂಪಿಯನ್ ಪಟ್ಟಕ್ಕೆ ವೇದಿಕೆಯಾಗಲಿದೆ.
2024ರ ಕಬಡ್ಡಿ ಪಂದ್ಯಾವಳಿಯಲ್ಲಿ ಹಲವಾರು ಪ್ರತಿಭೆಗಳು ಹೊರಹೊಮ್ಮಿವೆ. ರೈಡಿಂಗ್, ಟ್ಯಾಕಲ್‌ಗಳಲ್ಲಿ ಹಲವು ಯುವ ಆಟಗಾರರು ಮಿಂಚಿದ್ದಾರೆ. ಲೀಗ್ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ಟಾಪ್ ರೈಡರ್‌ಗಳು, ಹೆಚ್ಚು ಬಾರಿ ಸೂಪರ್ 10 ಕಲೆ ಹಾಕಿದ ರೈಡರ್‌ಗಳು ಸೇರಿದಂತೆ, ಈ ಬಾರಿಯ ಪಿಕೆಎಲ್‌ನ ಪ್ರಮುಖ ದಾಖಲೆಗಳನ್ನು ನೋಡೋಣ.
ಪಿಕೆಎಲ್ 10ನೇ ಆವೃತ್ತಿಯಲ್ಲಿ ಅತಿ ಹೆಚ್ಚು ರೈಡ್ ಪಾಯಿಂಟ್ ಕಲೆ ಹಾಕಿದವರು
- ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) -276
- ಅಶು ಮಲಿಕ್ (ದಬಾಂಗ್ ದೆಹಲಿ ಕೆಸಿ) -276
- ಪವನ್ ಸೆಹ್ರಾವತ್ (ತೆಲುಗು ಟೈಟಾನ್ಸ್) -202
- ಮಣಿಂದರ್ ಸಿಂಗ್ (ಬೆಂಗಾಲ್ ವಾರಿಯರ್ಸ್) -197
- ನರೇಂದರ್ ಹೋಶಿಯಾರ್ (ತಮಿಳು ತಲೈವಾಸ್) -186
ಪ್ರೊ ಕಬಡ್ಡಿ ಲೀಗ್ ಸೀಸನ್ 10ರಲ್ಲಿ ಅತಿ ಹೆಚ್ಚು ಸೂಪರ್ 10 ಕಲೆ ಹಾಕಿದವರು (ಪ್ರತಿ ಪಂದ್ಯದಲ್ಲೂ ಕನಿಷ್ಠ 10 ರೈಡ್ ಪಾಯಿಂಟ್)
- ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) -23 ಪಂದ್ಯಗಳಲ್ಲಿ 17
- ಅಶು ಮಲಿಕ್ (ದಬಾಂಗ್ ಡೆಲ್ಲಿ ಕೆಸಿ) - 23 ಪಂದ್ಯಗಳಲ್ಲಿ 15
- ಪವನ್ ಸೆಹ್ರಾವತ್ (ತೆಲುಗು ಟೈಟಾನ್ಸ್) - 21 ಪಂದ್ಯಗಳಲ್ಲಿ 13
- ನರೇಂದ್ರ ಹೋಶಿಯಾರ್ (ತಮಿಳು ತಲೈವಾಸ್) - 21 ಪಂದ್ಯಗಳಲ್ಲಿ 11
- ಗುಮಾನ್ ಸಿಂಗ್ (ಯು ಮುಂಬಾ) - 18 ಪಂದ್ಯಗಳಲ್ಲಿ 9
ಇದನ್ನೂ ಓದಿ | ಚೊಚ್ಚಲ ಪಿಕೆಎಲ್ ಟ್ರೋಫಿ ಗೆಲ್ಲಲು ಪುಣೆರಿ ಪಲ್ಟನ್ vs ಹರಿಯಾಣ ಸ್ಟೀಲರ್ಸ್ ಸಜ್ಜು; ಹೀಗಿದೆ ತಂಡದ ಬಲಾಬಲ
ಪಿಕೆಎಲ್ ಸೀಸನ್ 10ರಲ್ಲಿ ಅತಿ ಹೆಚ್ಚು ಸೂಪರ್ ರೈಡ್‌ಗಳು
- ಅಶು ಮಲಿಕ್ (ದಬಾಂಗ್ ದೆಹಲಿ) - 23 ಪಂದ್ಯಗಳಲ್ಲಿ 9
- ಪಾರ್ತೀಕ್ ದಹಿಯಾ (ಗುಜರಾತ್ ಜೈಂಟ್ಸ್) - 20 ಪಂದ್ಯಗಳಲ್ಲಿ 9
- ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) - 23 ಪಂದ್ಯಗಳಲ್ಲಿ 7
- ವಿನಯ್ ತೆವಾಟಿಯಾ (ಹರಿಯಾಣ ಸ್ಟೀಲರ್ಸ್) - 22 ಪಂದ್ಯಗಳಲ್ಲಿ 6
- ಸೋನು ಜಗ್ಲಾನ್ (ಗುಜರಾತ್ ಜೈಂಟ್ಸ್) - 18 ಪಂದ್ಯಗಳಲ್ಲಿ 5
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಅತಿ ಹೆಚ್ಚು ಡು ಆರ್ ಡೈ ರೈಡ್ ಪಾಯಿಂಟ್‌ಗಳು
- ಅಶು ಮಲಿಕ್ (ದಬಾಂಗ್ ಡೆಲ್ಲಿ) - 23 ಪಂದ್ಯಗಳಲ್ಲಿ 41
- ವಿನಯ್ ತೆವಾಟಿಯಾ (ಹರಿಯಾಣ ಸ್ಟೀಲರ್ಸ್) - 22 ಪಂದ್ಯಗಳಲ್ಲಿ 39
- ಸಚಿನ್ ತನ್ವಾರ್ (ಪಟ್ನಾ ಪೈರೇಟ್ಸ್) - 22 ಪಂದ್ಯಗಳಲ್ಲಿ 38
- ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) - 23 ಪಂದ್ಯಗಳಲ್ಲಿ 36
- ಪಾರ್ತೀಕ್ ದಹಿಯಾ (ಗುಜರಾತ್ ಜೈಂಟ್ಸ್) - 20 ಪಂದ್ಯಗಳಲ್ಲಿ 33
ಅತಿ ಹೆಚ್ಚು ರೈಡ್ ಪಾಯಿಂಟ್ ಕಲೆ ಹಾಕಿದ ತಂಡಗಳು
- ಬೆಂಗಾಲ್ ವಾರಿಯರ್ಸ್ - 22 ಪಂದ್ಯಗಳಲ್ಲಿ 504
- ಪಟ್ನಾ ಪೈರೇಟ್ಸ್ - 24 ಪಂದ್ಯಗಳಲ್ಲಿ 495
- ಯು ಮುಂಬಾ - 22 ಪಂದ್ಯಗಳಲ್ಲಿ 486
- ಹರಿಯಾಣ ಸ್ಟೀಲರ್ಸ್ - 24 ಪಂದ್ಯಗಳಲ್ಲಿ 475
- ದಬಾಂಗ್ ಡೆಲ್ಲಿ - 23 ಪಂದ್ಯಗಳಲ್ಲಿ 474
ಅತಿ ಹೆಚ್ಚು ಸೂಪರ್ ರೈಡ್ ಮಾಡಿದ ತಂಡಗಳು
- ಗುಜರಾತ್ ಜೈಂಟ್ಸ್ - 23 ಪಂದ್ಯಗಳಲ್ಲಿ 18
- ಬೆಂಗಳೂರು ಬುಲ್ಸ್ - 22 ಪಂದ್ಯಗಳಲ್ಲಿ 16
- ಹರಿಯಾಣ ಸ್ಟೀಲರ್ಸ್ - 24 ಪಂದ್ಯಗಳಲ್ಲಿ 16
- ದಬಾಂಗ್ ಡೆಲ್ಲಿ - 23 ಪಂದ್ಯಗಳಲ್ಲಿ 13
- ಜೈಪುರ ಪಿಂಕ್ ಪ್ಯಾಂಥರ್ಸ್ - 23 ಪಂದ್ಯಗಳಲ್ಲಿ 13
(This copy first appeared in Hindustan Times Kannada website. To read more like this please logon to kannada.hindustantimes.com)