PKL 11: ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ದುಬಾರಿ ಆಟಗಾರ ಸಚಿನ್ ತನ್ವಾರ್ ಐತಿಹಾಸಿಕ ಸಾಧನೆ: ದಿಗ್ಗಜರ ಪಟ್ಟಿಗೆ ಸೇರ್ಪಡೆ
Nov 08, 2024 10:30 AM IST
ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ದುಬಾರಿ ಆಟಗಾರ ಸಚಿನ್ ತನ್ವಾರ್ ಐತಿಹಾಸಿಕ ಸಾಧನೆ.
- Sachin Tanwar: ಸಚಿನ್ ತನ್ವಾರ್, ಪ್ರೊ ಕಬಡ್ಡಿ ಲೀಗ್ನಲ್ಲಿ ದಾಖಲೆಯೊಂದನ್ನು ಬರೆಯುವ ಮೂಲಕ ಅತ್ಯಂತ ದುಬಾರಿ ಆಟಗಾರ ಪರ್ದೀಪ್ ನರ್ವಾಲ್ ಸೇರಿದಂತೆ ಅನೇಕ ದಿಗ್ಗಜರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಮಂಗಳವಾರ (ನವೆಂಬರ್ 5) ನಡೆದ ಪಂದ್ಯದಲ್ಲಿ ಅರ್ಜುನ್ ದೇಶ್ವಾಲ್ 1000 ರೇಡ್ ಪಾಯಿಂಟ್ಸ್ ಪೂರೈಸಿದ್ದರು. ಇದೀಗ ಸಚಿನ್ ತನ್ವಾರ್ ಈ ಸಾಧನೆ ಮಾಡಿದ್ದಾರೆ.
ಪ್ರೊ ಕಬಡ್ಡಿ ಲೀಗ್‌ನ 11 ನೇ ಋತುವಿನಲ್ಲಿ (Pro Kabaddi Leauge 11), ತಮಿಳ್ ತಲೈವಾಸ್‌ನ ಅನುಭವಿ ರೈಡರ್ ಸಚಿನ್ ತನ್ವಾರ್ (Sachin Tanwar) ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಇವರು ಪ್ರೊ ಕಬಡ್ಡಿ ಲೀಗ್ನಲ್ಲಿ ತಮ್ಮ 1000 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ತೆಲುಗು ಟೈಟಾನ್ಸ್ (Telugu Titans) ವಿರುದ್ಧದ ಪಂದ್ಯದಲ್ಲಿ ಸಚಿನ್ ತನ್ವಾರ್ 9 ಅಂಕಗಳನ್ನು ಗಳಿಸಿದ ತಕ್ಷಣ, ಅವರು ಪಿಕೆಎಲ್‌ನಲ್ಲಿ 1000 ರೇಡ್ ಅಂಕಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು. ಈ ಮೂಲಕ ಪರ್ದೀಪ್ ನರ್ವಾಲ್ ಸೇರಿದಂತೆ ದಿಗ್ಗಜ ಆಟಗಾರರ ಪಟ್ಟಿಗೆ ಸಚಿನ್ ತನ್ವಾರ್ ಸೇರ್ಪಡೆಯಾಗಿದ್ದಾರೆ. ಮಂಗಳವಾರ (ನವೆಂಬರ್ 5) ನಡೆದ ಪಂದ್ಯದಲ್ಲಿ ಅರ್ಜುನ್ ದೇಶ್ವಾಲ್ (Arjun Deshwal) 1000 ರೇಡ್ ಪಾಯಿಂಟ್ಸ್ ಪೂರೈಸಿದ್ದರು. ಇದೀಗ ಸಚಿನ್ ತನ್ವಾರ್ ಈ ಸಾಧನೆ ಮಾಡಿದ್ದಾರೆ.
135ನೇ ಪಂದ್ಯದಲ್ಲಿ ಈ ದಾಖಲೆ
ತಮ್ಮ ಪಿಕೆಎಲ್ ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 135 ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಅವಧಿಯಲ್ಲಿ 1000 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದೀಗ ಅವರು ಪಿಕೆಎಲ್‌ನಲ್ಲಿ 1000 ರೇಡ್ ಅಂಕ ಗಳಿಸಿದ 8ನೇ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು, 1000 ರೇಡ್ ಪಾಯಿಂಟ್‌ಗಳನ್ನು ಗಳಿಸಿದ ಅನೇಕ ಶ್ರೇಷ್ಠ ಆಟಗಾರರಿದ್ದಾರೆ. ಪಿಕೆಎಲ್ 2024 ಹರಾಜಿನ ಸಮಯದಲ್ಲಿ ಸಚಿನ್ ತನ್ವಾರ್ ಅವರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಲಾಯಿತು. ಈ ಋತುವಿನಲ್ಲಿ ಅವರಿಂದ ಸಾಕಷ್ಟು ನಿರೀಕ್ಷೆ ಇದೆ. ಇಲ್ಲಿಯವರೆಗೆ ಅವರ ಪ್ರದರ್ಶನ ಮಿಶ್ರಿತವಾಗಿದ್ದರೂ, ಪಂದ್ಯಾವಳಿ ಮುಂದುವರೆದಂತೆ ಅವರು ತಮ್ಮ ಲಯವನ್ನು ಕಂಡುಕೊಳ್ಳುತ್ತಿದ್ದಾರೆ.
ಸಾವಿರ ರೇಡ್ ಅಂಕ ಪಡೆದವರು ಯಾರು?
ಇದುವರೆಗೆ ಪಿಕೆಎಲ್ ಇತಿಹಾಸದಲ್ಲಿ ಒಟ್ಟು 8 ಆಟಗಾರರು 1000 ರೇಡ್ ಅಂಕಗಳನ್ನು ಗಳಿಸಿದ್ದಾರೆ. ಪರ್ದೀಪ್ ನರ್ವಾಲ್ ಅವರ ಹೆಸರಿನಲ್ಲಿ ಗರಿಷ್ಠ 1725 ರೇಡ್ ಪಾಯಿಂಟ್ಗಳಿವೆ. ಅವರು ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರೇಡ್ ಅಂಕಗಳನ್ನು ಗಳಿಸಿದ ಆಟಗಾರ. ಇದರ ನಂತರ, ಮಣಿಂದರ್ ಸಿಂಗ್ ಎರಡನೇ ಸ್ಥಾನದಲ್ಲಿದ್ದಾರೆ, ಇವರು ಇದುವರೆಗೆ 148 ಪಂದ್ಯಗಳಲ್ಲಿ 1465 ಅಂಕಗಳನ್ನು ಗಳಿಸಿದ್ದಾರೆ. 132 ಪಂದ್ಯಗಳಲ್ಲಿ 1254 ರೇಡ್ ಪಾಯಿಂಟ್‌ಗಳನ್ನು ಗಳಿಸಿರುವ ಹೈ-ಫ್ಲೈಯರ್ ಪವನ್ ಕುಮಾರ್ ಸೆಹ್ರಾವತ್ ಮೂರನೇ ಸ್ಥಾನದಲ್ಲಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ 'ಶೋಮ್ಯಾನ್' ರಾಹುಲ್ ಚೌಧರಿ ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 1045 ರೇಡ್ ಪಾಯಿಂಟ್ ಗಳಿಸಿದ್ದಾರೆ. ಇದರ ನಂತರ ನವೀನ್ ಕುಮಾರ್ ಮತ್ತು ದೀಪಕ್ ಹೂಡಾ ಬರುತ್ತಾರೆ. ನವೀನ್ ಕುಮಾರ್ ಇದುವರೆಗೆ 95 ಪಂದ್ಯಗಳಲ್ಲಿ 1029 ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಭಾರತ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ 157 ಪಂದ್ಯಗಳಲ್ಲಿ 1020 ರೇಡ್ ಪಾಯಿಂಟ್‌ಗಳನ್ನು ಪಡೆದಿದ್ದರು. ಇದರ ನಂತರ ಸಚಿನ್ ತನ್ವರ್ ಮತ್ತು ಅರ್ಜುನ್ ದೇಶ್ವಾಲ್ ಇದ್ದಾರೆ.
ವರದಿ: ವಿನಯ್ ಭಟ್
ಇದನ್ನೂ ಓದಿ: IPL Auction 2025: ಐಪಿಎಲ್ ಹರಾಜಿಗೂ ಮುನ್ನವೇ ಆರ್ಸಿಬಿಗೆ ನಾಲ್ವರು ಆಟಗಾರರನ್ನು ಹೆಸರಿಸಿದ ಡಿವಿಲಿಯರ್ಸ್