logo
ಕನ್ನಡ ಸುದ್ದಿ  /  ಕ್ರೀಡೆ  /  Pkl-10 2023: ಪ್ರೋ ಕಬಡ್ಡಿ ಲೀಗ್ ಆರಂಭ ಯಾವಾಗ, ನೇರಪ್ರಸಾರ ವೀಕ್ಷಿಸುವುದೇಗೆ? ಇಲ್ಲಿದೆ ವಿವರ

PKL-10 2023: ಪ್ರೋ ಕಬಡ್ಡಿ ಲೀಗ್ ಆರಂಭ ಯಾವಾಗ, ನೇರಪ್ರಸಾರ ವೀಕ್ಷಿಸುವುದೇಗೆ? ಇಲ್ಲಿದೆ ವಿವರ

Prasanna Kumar P N HT Kannada

Oct 12, 2023 07:00 AM IST

google News

ಪ್ರೋ ಕಬಡ್ಡಿ ಲೀಗ್.

    • Pro Kabaddi League 2023: ಬಹುನಿರೀಕ್ಷಿತ ಪ್ರೋ ಕಬಡ್ಡಿ ಲೀಗ್​ ಮುಕ್ತಾಯಗೊಂಡಿದೆ. ಪ್ರಾರಂಭ ಯಾವಾಗ? ಎಲ್ಲಿ ವೀಕ್ಷಿಸಬೇಕು? ಈ ಹಿಂದಿನ ಚಾಂಪಿಯನ್ ತಂಡಗಳು ಯಾವುವು ಎಂಬುದಕ್ಕೆ ಸಂಬಂಧಿಸಿ ಉತ್ತರ ಇಲ್ಲಿದೆ.
ಪ್ರೋ ಕಬಡ್ಡಿ ಲೀಗ್.
ಪ್ರೋ ಕಬಡ್ಡಿ ಲೀಗ್. (ಸಾಂದರ್ಭಿಕ ಚಿತ್ರ.)

ಸೀಸನ್ 10ರ ಪ್ರೋ ಕಬ್ಬಡಿ ಲೀಗ್ (Pro Kabaddi League 2023)​ ಮೆಗಾ ಹರಾಜು (Mega Auction) ಮುಕ್ತಾಯಗೊಂಡಿದೆ. 2 ದಿನಗಳ ಕಾಲ ನಡೆದ ಈ ಆಕ್ಷನ್​​ನಲ್ಲಿ ಘಟಾನುಘಟಿ ಆಟಗಾರರಿಗೆ 12 ತಂಡಗಳು ಮಣೆ ಹಾಕಿವೆ. ನಿರೀಕ್ಷೆಯಂತೆ ಬಲಿಷ್ಠ ಆಟಗಾರರು ಭಾರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ ತಮ್ಮ ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಲೀಗ್​ ಯಾವಾಗ ಆರಂಭವಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

2014ರಲ್ಲಿ ಪ್ರಾರಂಭವಾದಾಗಿನಿಂದ ಲೀಗ್, ಇತ್ತೀಚಿನ ವರ್ಷಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಉದ್ಘಾಟನಾ ಋತುವಿನಲ್ಲಿ 435 ಮಿಲಿಯನ್ ವೀಕ್ಷಕರನ್ನು ಸೆಳೆದಿತ್ತು. ಅಂದರೆ ಶ್ರೀಮಂತ ಕ್ರಿಕೆಟ್ ಲೀಗ್​ ಐಪಿಎಲ್​​ಗಿಂತಲೂ ಕೆಲವೇ ಮಿಲಿಯನ್ ಕಡಿಮೆ. ಇದೀಗ ಈ ಟೂರ್ನಿ 10ನೇ ಆವೃತ್ತಿಯು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಒಂದು ಟ್ರೋಫಿಗಾಗಿ 12 ತಂಡಗಳು ಸೆಣಸಾಟ ನಡೆಸಲಿವೆ.

ಪ್ರೋ ಕಬಡ್ಡಿ ಲೀಗ್​ನಲ್ಲಿ ನಡೆಯುವ ಪಂದ್ಯಗಳೆಷ್ಟು?

ಈ ಋತುವಿನ ಪ್ರೊ ಕಬಡ್ಡಿ ಲೀಗ್​​ನಲ್ಲಿ ಒಟ್ಟು 137 ಪಂದ್ಯಗಳಲ್ಲಿ ಚಾಂಪಿಯನ್‌ಶಿಪ್ ಗೆಲ್ಲಲು 12 ತಂಡಗಳು ಪರಸ್ಪರ ಸ್ಪರ್ಧಿಸಲಿವೆ.

ಪಾಲ್ಗೊಳ್ಳುವ ತಂಡಗಳು

  • ಬೆಂಗಾಲ್ ವಾರಿಯರ್ಸ್
  • ಬೆಂಗಳೂರು ಬುಲ್ಸ್
  • ದಬಾಂಗ್ ಡೆಲ್ಲಿ
  • ಗುಜರಾತ್ ಜೈಂಟ್ಸ್
  • ಹರಿಯಾಣ ಸ್ಟೀಲರ್ಸ್
  • ಜೈಪುರ ಪಿಂಕ್ ಪ್ಯಾಂಥರ್ಸ್
  • ಪಾಟ್ನಾ ಪೈರೇಟ್ಸ್
  • ಪುಣೇರಿ ಪಲ್ಟನ್
  • ತಮಿಳು ತಲೈವಾಸ್
  • ತೆಲುಗು ಟೈಟಾನ್ಸ್
  • ಯು ಮುಂಬಾ
  • ಯುಪಿ ಯೋಧಾ
     

ಪ್ರೋ ಕಬಡ್ಡಿ ಲೀಗ್​ನಲ್ಲಿ ಆರಂಭ ಯಾವಾಗ?

ಪ್ರಸಕ್ತ ಸಾಲಿನ ಹಾಗೂ 10ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್​​​ ಇದೇ ವರ್ಷ ಡಿಸೆಂಬರ್​ 2 ರಂದು ಪ್ರಾರಂಭವಾಗಲಿದೆ.

ಅಂಕ ನಿರ್ಧರಿಸುವುದೇಗೆ?

ಗೆದ್ದ ತಂಡಕ್ಕೆ 5 ಅಂಕ, ಸೋತ ತಂಡಕ್ಕೆ 0 ಅಂಕ ನೀಡಲಾಗುತ್ತದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡರೆ ಎರಡೂ ತಂಡಗಳಿಗೆ 3 ಅಂಕ ಸಿಗುತ್ತದೆ.

ಪ್ರೊ ಕಬಡ್ಡಿ ಲೀಗ್ 2023 ವೇಳಾಪಟ್ಟಿ

2023ರ ಪ್ರೊ ಕಬಡ್ಡಿ ಲೀಗ್‌ನ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಪ್ರತಿ ಕ್ಷಣದ ಅಪ್ಡೇಟ್ಸ್​​ಗಾಗಿ ನಮ್ಮನ್ನು ಅನುಕರಿಸುತ್ತಿರಿ.

ಪ್ರೊ ಕಬಡ್ಡಿ ಲೀಗ್ ಅನ್ನು ಎಲ್ಲಿ ವೀಕ್ಷಿಸಬೇಕು?

ಪ್ರೊ ಕಬಡ್ಡಿ ಲೀಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಸ್ಟಾರ್​ಸ್ಪೋರ್ಟ್ಸ್​​​ನ ವಿವಿಧ ಭಾಷೆಗಳಲ್ಲಿ ಲಭ್ಯವಾಗಲಿದೆ. ಪರ್ಯಾಯವಾಗಿ, ಪಂದ್ಯಗಳನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಬಹುದು.

ಈವರೆಗೂ ಚಾಂಪಿಯನ್ ಆದ ತಂಡಗಳ ಪಟ್ಟಿ

ವರ್ಷಸೀಸನ್ಚಾಂಪಿಯನ್ರನ್ನರ್​​ಅಪ್ಅಂತರದ ಗೆಲುವು
2014ಸೀಸನ್-1ಜೈಪುರ ಪಿಂಕ್ ಪ್ಯಾಂಥರ್ಸ್ಯು ಮುಂಬಾ11 ಅಂಕಗಳು
2015ಸೀಸನ್-2ಯು ಮುಂಬಾಬೆಂಗಳೂರು ಬುಲ್ಸ್6 ಅಂಕಗಳು
2016ಸೀಸನ್-3ಪಾಟ್ನಾ ಪೈರೆಟ್ಸ್​ಯು ಮುಂಬಾ 3 ಅಂಕಗಳು
2016ಸೀಸನ್-4ಪಾಟ್ನಾ ಪೈರೆಟ್ಸ್​ಜೈಪುರ ಪಿಂಕ್ ಪ್ಯಾಂಥರ್ಸ್8 ಅಂಕಗಳು
2017ಸೀಸನ್-5ಪಾಟ್ನಾ ಪೈರೆಟ್ಸ್​ಗುಜರಾತ್ ಜೈಂಟ್ಸ್17 ಅಂಕಗಳು
2018ಸೀಸನ್-6ಬೆಂಗಳೂರು ಬುಲ್ಸ್ಗುಜರಾತ್ ಜೈಂಟ್ಸ್5 ಅಂಕಗಳು
2019ಸೀಸನ್-7ಬೆಂಗಾಲ್ ವಾರಿಯರ್ಸ್ದಬಾಂಗ್ ಡೆಲ್ಲಿ5 ಅಂಕಗಳು
2021ಸೀಸನ್-8ದಬಾಂಗ್ ಡೆಲ್ಲಿಪಾಟ್ನಾ ಪೈರೆಟ್ಸ್​1 ಅಂಕ
2022ಸೀಸನ್-9ಜೈಪುರ ಪಿಂಕ್ ಪ್ಯಾಂಥರ್ಸ್ಪುಣೇರಿ ಪಲ್ಟನ್ಸ್4 ಅಂಕಗಳು

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ