logo
ಕನ್ನಡ ಸುದ್ದಿ  /  ಕ್ರೀಡೆ  /  ಮಲೇಷ್ಯಾ ಓಪನ್: ಕ್ವಾರ್ಟರ್ ಫೈನಲ್ ಲಗ್ಗೆ ಇಟ್ಟ ಸಾತ್ವಿಕ್-ಚಿರಾಗ್ ಜೋಡಿ; ಅಶ್ವಿನಿ-ತನಿಶಾಗೂ ಗೆಲುವು

ಮಲೇಷ್ಯಾ ಓಪನ್: ಕ್ವಾರ್ಟರ್ ಫೈನಲ್ ಲಗ್ಗೆ ಇಟ್ಟ ಸಾತ್ವಿಕ್-ಚಿರಾಗ್ ಜೋಡಿ; ಅಶ್ವಿನಿ-ತನಿಶಾಗೂ ಗೆಲುವು

Jayaraj HT Kannada

Jan 11, 2024 09:52 PM IST

google News

ಮಲೇಷ್ಯಾ ಓಪನ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.

    • Malaysia Open Super 1000: ವಿಶ್ವದ ನಂ.2 ಜೋಡಿಯಾದ ಸಾತ್ವಿಕ್ ಮತ್ತು ಚಿರಾಗ್ ಫ್ರಾನ್ಸ್‌ನ ಲುಕಾಸ್ ಕಾರ್ವಿ ಮತ್ತು ರೊನಾನ್ ಲಾಬರ್ ಅವರನ್ನು 21-11, 21-18 ಅಂತರದಿಂದ ಸೋಲಿಸಿದರು.
ಮಲೇಷ್ಯಾ ಓಪನ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
ಮಲೇಷ್ಯಾ ಓಪನ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. (PTI)

ಮಲೇಷ್ಯಾ ಓಪನ್ ಸೂಪರ್ 1000 (Malaysia Open Super 1000) ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty) ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗೆಲುವಿನ ಆಕರ್ಷಕ ಓಟ ಮುಂದುವರೆಸಿದ ಅವರು, ಮತ್ತೊಂದು ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ಅತ್ತ ಗುರುವಾರ (ಜನವರಿ 11) ನಡೆದ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ಸೋತು ಪರಾಭವಗೊಂಡಿದ್ದಾರೆ. ಎರಡನೇ ಸುತ್ತಿನಲ್ಲಿ ಹಾಂಗ್ ಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ವಿರುದ್ಧ 13-21 17-21 ಅಂತರದಲ್ಲಿ ಸೋತಿದ್ದಾರೆ.

ಇದನ್ನೂ ಓದಿ | ಗಾಂಬಿಯಾ ಫುಟ್ಬಾಲ್ ಆಟಗಾರರಿದ್ದ ವಿಮಾನ ತುರ್ತು ಭೂಸ್ಪರ್ಶ; ಎಲ್ಲರೂ ಸೇಫ್

ವಿಶ್ವದ ನಂಬರ್‌ 2 ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಮತ್ತು ಚಿರಾಗ್, 2023ರಲ್ಲಿ ಭರ್ಜರಿ ಆರು ಪ್ರಶಸ್ತಿಗಳೊಂದಿಗೆ ಮಿಂಚಿದ್ದರು. ವಿಶ್ವದ ಯಶಸ್ವಿ ಬ್ಯಾಡ್ಮಿಂಟನ್‌ ಜೋಡಿಯಾಗಿ ಹೊರಹೊಮ್ಮಿದರು. ಹೊಸ ವರ್ಷದಲ್ಲೂ ತಮ್ಮ ಅಮೋಘ ಗೆಲುವಿನ ಓಟ ಮುಂದುವರೆಸಿದ ಅವರು, 2024ರ ಮೊದಲ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಫ್ರಾನ್ಸ್‌ನ ವಿಶ್ವದ ನಂಬರ್ 36 ಶ್ರೇಯಾಂಕದ ಜೋಡಿಯಾದ ಲುಕಾಸ್ ಕಾರ್ವಿ ಮತ್ತು ರೊನಾನ್ ಲ್ಯಾಬರ್ ಅವರನ್ನು 21-11 21-18ರ ನೇರ ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದಿದ್ದಾರೆ. ಮುಂದಿನ ಹಂತದಲ್ಲಿ ಅವರು ಚೀನಾದ ವಿಶ್ವದ ನಂಬರ್ 32ನೇ ಜೋಡಿಯಾದ ಹೀ ಜಿ ಟಿಂಗ್ ಮತ್ತು ರೆನ್ ಕ್ಸಿಯಾಂಗ್ ಯು ಅವರನ್ನು ಎದುರಿಸಲಿದ್ದಾರೆ.

ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಜೋಡಿಗೆ ರೋಚಕ ಗೆಲುವು

ಕಳೆದ ತಿಂಗಳು ಗುವಾಹಟಿ ಮಾಸ್ಟರ್ಸ್ ಸೂಪರ್ 100 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಜೋಡಿ ಕೂಡಾ ಗೆದ್ದು ಬೀಗಿದರು. ಅವರು ಏಳನೇ ಶ್ರೇಯಾಂಕದ ಜಪಾನಿನ ಜೋಡಿಯಾದ ವಕಾನಾ ನಾಗಹರಾ ಮತ್ತು ಮಯು ಮಟ್ಸುಮೊಟೊ ಅವರನ್ನು 21-19, 13-21, 21-15ರಿಂದ ರೋಚಕವಾಗಿ ಸೋಲಿಸಿದರು.

ಇದನ್ನೂ ಓದಿ | PKL 10: ತೆಲುಗು ಟೈಟಾನ್ಸ್ ಮಣಿಸಿದ ವಾರಿಯರ್ಸ್; ಪವನ್ ಸೆಹ್ರಾವತ್ ತಂಡಕ್ಕೆ ಹತ್ತನೇ ಹೀನಾಯ ಸೋಲು

ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಿರುವ ಸಾತ್ವಿಕ್ ಮತ್ತು ಚಿರಾಗ್, ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. ಮೊದಲ ಗೇಮ್‌ನಲ್ಲಿ ವಿರಾಮದ ವೇಳೆಗೆ 11-2ರಿಂದ ಮುನ್ನಡೆ ಸಾಧಿಸಿದರು. ಆ ಬಳಿಕ ಫ್ರೆಂಚ್ ಜೋಡಿ 12-14ರಿಂದ ಮುನ್ನಡೆ ಸಾಧಿಸಿತು. ಶೀಘ್ರದಲ್ಲೇ ಕಂಬ್ಯಾಕ್‌ ಮಾಡಿದ ಭಾರತೀಯರು ಲೀಡ್‌ನೊಂದಿಗೆ ಮೊದಲ ಸೆಟ್‌ ಗೆದ್ದರು.

ಜನವರಿ 10ರ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಸೋತು ಹೊರಬಿದ್ದರು.

ವಿಡಿಯೋ ನೋಡಿ | Pradeep Eshwar : ಪ್ರತಾಪ್ ಸಿಂಹನಷ್ಟು ಅಯೋಗ್ಯ, ಮುಠ್ಠಾಳ ಇಲ್ಲ : ಸಿದ್ಧರಾಮಯ್ಯರ ಬಗ್ಗೆ ಮಾತಾಡ್ತಾರೆ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ