logo
ಕನ್ನಡ ಸುದ್ದಿ  /  ಕ್ರೀಡೆ  /  ಖೇಲ್ ರತ್ನ, ಅರ್ಜುನ ಪ್ರಶಸ್ತಿ ಮರಳಿಸಿದ ವಿನೇಶ್ ಫೋಗಾಟ್; ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ಬಂದ ಕುಸ್ತಿಪಟು

ಖೇಲ್ ರತ್ನ, ಅರ್ಜುನ ಪ್ರಶಸ್ತಿ ಮರಳಿಸಿದ ವಿನೇಶ್ ಫೋಗಾಟ್; ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ಬಂದ ಕುಸ್ತಿಪಟು

Prasanna Kumar P N HT Kannada

Dec 31, 2023 01:44 PM IST

google News

ಖೇಲ್ ರತ್ನ, ಅರ್ಜುನ ಪ್ರಶಸ್ತಿಯನ್ನು ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ಬಂದ ವಿನೇಶ್ ಫೋಗಾಟ್.

    • Vinesh Phogat: ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನುಕುಸ್ತಿಪಟು ವಿನೇಶ್​ ಫೋಗಟ್ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಯೇ ತೊರೆದು ಹೋಗಿದ್ದಾರೆ.
ಖೇಲ್ ರತ್ನ, ಅರ್ಜುನ ಪ್ರಶಸ್ತಿಯನ್ನು ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ಬಂದ ವಿನೇಶ್ ಫೋಗಾಟ್.
ಖೇಲ್ ರತ್ನ, ಅರ್ಜುನ ಪ್ರಶಸ್ತಿಯನ್ನು ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ಬಂದ ವಿನೇಶ್ ಫೋಗಾಟ್.

ಲೈಂಗಿಕ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್​ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಕುರಿತು ಬೇಸರ ವ್ಯಕ್ತಪಡಿಸಿದ ಭಾರತದ ಕುಸ್ತಿಪಟುಗಳು (2023 Indian wrestlers protest) ತಮಗೆ ಸಿಕ್ಕಿರುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮರಳಿಸುವ ಮೂಲಕ ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದಾರೆ. ಇದೀಗ ತಮ್ಮ ಪ್ರಶಸ್ತಿಗಳನ್ನು ಮರಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತಮ್ಮ ಪ್ರಶಸ್ತಿಗಳನ್ನು ಮರಳಿಸುವುದಾಗಿ ಹೇಳಿದ್ದ ಖ್ಯಾತ ಕುಸ್ತಿಪಟು ವಿನೇಶ್ ಫೋಗಾಟ್ (Vinesh Phogat), ಡಿಸೆಂಬರ್ 30ರಂದು ಖೇಲ್ ರತ್ನ (Khel Ratna), ಅರ್ಜುನ ಪ್ರಶಸ್ತಿಯನ್ನು (Arjuna Award) ದೆಹಲಿ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲೇ ಇಟ್ಟು ಬಂದಿದ್ದಾರೆ. ಪ್ರಧಾನಿ ನಿಲುವಿಗೆ ಕ್ರೀಡಾ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸರು ತಡೆದರು

ಕಾಮನ್​ವೆಲ್ತ್ ಗೇಮ್ಸ್​ ಮತ್ತು ಏಷ್ಯನ್ ಗೇಮ್ಸ್​​ನಲ್ಲಿ ಚಿನ್ನವನ್ನು ಗೆದ್ದ ವಿನೇಶ್, ತಮ್ಮ ಸಿಕ್ಕ ಪ್ರಶಸ್ತಿಗಳನ್ನು ಪ್ರಧಾನಿ ಮುಂಭಾಗ ಇಡಲು ಯತ್ನಿಸಿದರು. ಆದರೆ ಅಲ್ಲಿನ ಪೊಲೀಸರು ಅವಕಾಶ ನೀಡದೆ ಕರ್ತವ್ಯ ಪಥದಲ್ಲೇ ತಡೆದರು. ಹಾಗಾಗಿ ಕ್ರೀಡಾಪಟುಗಳು ತಮ್ಮ ಪ್ರಶಸ್ತಿಗಳನ್ನು ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ಹೋದರು.

ಅದಕ್ಕೂ ಮುನ್ನ ಸಾಕ್ಷಿ ಮಲಿಕ್, ಕುಸ್ತಿಗೆ ಕಣ್ಣೀರಿನ ವಿದಾಯ ಹೇಳಿದರು. ವಿನೇಶ್​​​ಗೂ ಮುನ್ನ ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಕರ್ತವ್ಯ ಪಥದಲ್ಲೇ ಇಟ್ಟು ಹೋಗಿದ್ದರು. ಬ್ರಿಜ್ ಭೂಷಣ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಒಂದು ವರ್ಷದಿಂದ ಪ್ರತಿಭಟನೆ ನಡೆಸಲಾಗತ್ತಿದೆ.

ಸಂಜಯ್ ಸಿಂಗ್ ವಿರುದ್ಧವೂ ಆಕ್ರೋಶ

ಆದರೆ, ಯಾವುದೇ ನ್ಯಾಯ ಸಿಗಲಿಲ್ಲ. ಬ್ರಿಜ್​ ಭೂಷಣ್ ವಿರುದ್ಧ ಪ್ರಕರಣ ದಾಖಲಾದ ನಂತರ ಅವರು ಡಬ್ಲ್ಯುಎಫ್​ಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ತದನಂತರ ಹಲವು ತಿಂಗಳುಗಳ ಬಳಿಕ ನಡೆದ ಚುನಾವಣೆಯಲ್ಲಿ ಬ್ರಿಜ್​ಭೂಷಣ್ ಆಪ್ತರಾದ ಸಂಜಯ್ ಸಿಂಗ್ ಅವರೇ ಪಟ್ಟಕ್ಕೇರಿದ್ದರು. ಇದರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.

ಡಬ್ಲ್ಯುಎಫ್​ಐ ವಜಾ

ಈ ಬೆನ್ನಲ್ಲೇ ಕೆಲವು ದಿನಗಳ ನಂತರ ಅವರ ನೇತೃತ್ವದ ಭಾರತೀಯ ಕುಸ್ತಿ ಫೆಡರೇಷನ್​ ಅನ್ನು ವಜಾಗೊಳಿಸಿ ಕೇಂದ್ರ ಕ್ರೀಡಾ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿತ್ತು. ನಿಯಮ ಮತ್ತು ನಿಬಂಧನೆಗಳನ್ನ ಪಾಲಿಸದೆ ರಾಷ್ಟ್ರೀಯ ಸ್ಪರ್ಧೆಗಳನ್ನು ತರಾತುರಿಯಲ್ಲಿ ಆಯೋಜಿಸಲಾಗಿತ್ತು. ಕಾರಣ ಕ್ರೀಡಾ ಸಚಿವಾಲಯ ಈ ನಿರ್ಧಾರಗಳನ್ನು ಕೈಗೊಂಡಿದೆ.

ವಿನೇಶ್ ಅವರಿಗೆ 2020ರಲ್ಲಿ ದೇಶದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು 2016 ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾವನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿದರೂ ಕುಸ್ತಿಪಟುಗಳ ಈ ರೀತಿಯ ವರ್ತನೆ ತೋರುತ್ತಿರುವುದು ನಿಜಕ್ಕೂ ವಿಷಾದನಿಯ ಸಂಗತಿ.

ತಾತ್ಕಾಲಿಕ ಸಮಿತಿ ರಚನೆಗೆ ಸೂಚನೆ

ಕ್ರೀಡಾ ಸಂಸ್ಥೆಯ ವ್ಯವಹಾರಗಳನ್ನು ನಿರ್ವಹಿಸಲು ತಾತ್ಕಾಲಿಕ ಸಮಿತಿ ರಚನೆಗೆ ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಸೂಚಿಸಿದೆ. ಆದಷ್ಟು ಬೇಗ ಕುಸ್ತಿ ಚಟುವಟಿಕೆಗಳ ಪುನರಾರಂಭಕ್ಕೆ ಬಜರಂಗ್ ಪುನಿಯಾ ಸಚಿವಾಲಯಕ್ಕೆ ಒತ್ತಾಯಿಸಿದ್ದು, ನಿರ್ಧಾರ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ