Kannada News  /  Astrology  /  Astrology Zodiac Signs Details About People Who Born In Mrigashira Nakshatra Janma Kundali Taurus Gemini Rsm

Mrigashira Nakshatra: ಐಷಾರಾಮಿ ಜೀವನ ಇಷ್ಟಪಡುವುದಿಲ್ಲ,ಅಡುಗೆಯಲ್ಲಿ ಬಹಳ ಆಸಕ್ತಿ;ಮೃಗಶಿರಾ ನಕ್ಷತ್ರದವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ

ಮೃಗಶಿರಾ ನಕ್ಷತ್ರದವರ ಬಗ್ಗೆ ಮಾಹಿತಿ
ಮೃಗಶಿರಾ ನಕ್ಷತ್ರದವರ ಬಗ್ಗೆ ಮಾಹಿತಿ (PC: Freepik)

ಮೃಗಶಿರಾ ನಕ್ಷತ್ರದವರು ಉತ್ಸಾಹದಿಂದ ಕೆಲಸ ಕಾರ್ಯದಲ್ಲಿ ಮುಂದುವರೆಯುತ್ತಾರೆ. ಯಾರಲ್ಲೂ ಬೇದ ಭಾವ ತೋರುವುದಿಲ್ಲ. ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಈ ನಕ್ಷತ್ರದವರಿಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ರುಚಿಕರ ಆಹಾರವನ್ನು ಸದಾ ಬಯಸುತ್ತಾರೆ. ತಂಪು ಪಾನಿಯಗಳು ಐಸ್ ಕ್ರೀಮ್‌ನಂತಹ ಆಹಾರ ಪದಾರ್ಥಗಳು ಇವರಿಗೆ ಇಷ್ಟ.

ಮೃಗಶಿರಾ ನಕ್ಷತ್ರವು ಧೈರ್ಯಕ್ಕೆ ಆಗರ. ಈ ನಕ್ಷತ್ರದ ಒಂದು ಮತ್ತು ಎರಡನೇ ಪಾದಗಳು ವೃಷಭ ರಾಶಿಯಲ್ಲಿ ಬಂದರೆ, ಮೂರು ನಾಲ್ಕನೇ ಪಾದಗಳು ಮಿಥುನ ರಾಶಿಯಲ್ಲಿ ಬರುತ್ತದೆ. ಈ ಕಾರಣದಿಂದ ಮಿಥುನ ಮತ್ತು ವೃಷಭ ರಾಶಿಯ ಒಟ್ಟಾರೆ ಗುಣ ಧರ್ಮಗಳು ಈ ನಕ್ಷತ್ರದಲ್ಲಿ ಜನಿಸಿದವರಿಗೆ ದೊರೆಯುತ್ತದೆ.

ಟ್ರೆಂಡಿಂಗ್​ ಸುದ್ದಿ

ಒಮ್ಮೆ ಮನದ್ದು ಮಾಡಿದರೆ ಮೃಗಶಿರಾ ನಕ್ಷತ್ರದವರು ಯಾವುದೇ ಕೆಲಸ ಮಾಡಬಲ್ಲರು. ಸದಾ ಉತ್ಸಾಹದ ಚಿಲುಮೆ ಆಗಿರುತ್ತಾರೆ. ಇವರ ಸಂತೋಷಕ್ಕೆ ಪಾರವಿಲ್ಲ. ಎಂತಹ ಕಷ್ಟಕರವಾದ ಕೆಲಸವಿದ್ದರೂ ಸರಿಯೇ ಬೇರೆಯವರ ಸ್ಪೂರ್ತಿಯಿಂದ ಇವರು ಕೆಲಸವನ್ನು ಸಂಪೂರ್ಣಗೊಳಿಸುತ್ತಾರೆ. ಇವರು ಯಾರ ಸಹಾಯವನ್ನು ಕೇಳುವುದಿಲ್ಲ . ಅಲಂಕಾರ ಪ್ರಿಯರು . ಒಮ್ಮೆ ಹಾಕಿದ ಬಟ್ಟೆಯನ್ನು ಇನ್ನೊಮ್ಮೆ ಹಾಕುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಇವರಿಗೆ ದುರಾಸೆ ಇರುವುದಿಲ್ಲ. ಹಣದ ತೊಂದರೆ ಉಂಟಾಗದು. ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಯಾರ ಮೇಲೆ ಆಗಲಿ ಇರುವ ಪ್ರೀತಿಯನ್ನು ತೋರ್ಪಡಿಸುವುದಿಲ್ಲ.

ಮೃಗಶಿರಾ ನಕ್ಷತ್ರದವರು ಉತ್ಸಾಹದಿಂದ ಕೆಲಸ ಕಾರ್ಯದಲ್ಲಿ ಮುಂದುವರೆಯುತ್ತಾರೆ. ಯಾರಲ್ಲೂ ಬೇದ ಭಾವ ತೋರುವುದಿಲ್ಲ. ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಈ ನಕ್ಷತ್ರದವರಿಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ರುಚಿಕರ ಆಹಾರವನ್ನು ಸದಾ ಬಯಸುತ್ತಾರೆ. ತಂಪು ಪಾನಿಯಗಳು ಐಸ್ ಕ್ರೀಮ್‌ನಂತಹ ಆಹಾರ ಪದಾರ್ಥಗಳು ಇವರಿಗೆ ಇಷ್ಟ. ಸಮಾಜಕ್ಕೆ ಉಪಯೋಗವಾಗುವ ಹಲವು ಕಾರ್ಯಗಳನ್ನು ಮಾಡುತ್ತಾರೆ. ರಾಜಕೀಯ ಇಷ್ಟವಿಲ್ಲದೆ ಹೋದರೂ ರಾಜಕೀಯದ ವ್ಯಕ್ತಿಗಳನ್ನು ಪೋಷಿಸುತ್ತಾರೆ. ಬೇಗನೆ ಏಳುವುದಿಲ್ಲ ಹಾಗೇ ರಾತ್ರಿ ಬೇಗನೆ ಮಲಗುವುದೂ ಇಲ್ಲ. ಮಧ್ಯಾಹ್ನ ವಿಶ್ರಾಂತಿ ತೆಗೆದುಕೊಳ್ಳುವುದರಲ್ಲಿ ಇವರೇ ಮೊದಲಿಗರು.

ಈ ನಕ್ಷತ್ರದವರು ಸದಾ ಹೋರಾಟ ಓಡಾಟದಲ್ಲಿ ಇರಬೇಕೆಂದು ಬಯಸುತ್ತಾರೆ. ಒಡವೆಗಳ ಬಗ್ಗೆ ಆಸಕ್ತಿ ಇರದು. ಆದರೆ ಎಷ್ಟೇ ಬಟ್ಟೆಗಳಿದ್ದರೂ ಇವರಿಗೆ ಸಾಲದು. ಐಷಾರಾಮಿ ಜೀವನ ಇಷ್ಟಪಡುವುದಿಲ್ಲ. ಎಲ್ಲರೊಂದಿಗೆ ಬೆರೆತು ಬಾಳುತ್ತಾರೆ. ಇವರು ಇರುವ ಕಡೆ ಹಾಸ್ಯಕ್ಕೆ ಕೊರತೆ ಇರದು. ಒಂದಕ್ಕಿಂತಲೂ ಹೆಚ್ಚು ವಾಹನಗಳನ್ನು ಕೊಳ್ಳುವ ಇಚ್ಛೆ ಇರುತ್ತದೆ. ಒಟ್ಟಾರೆ ಇವರು ಸುಖವಾಗಿ ಬಾಳುವುದಲ್ಲದೆ ಬೇರೆಯವರ ಸುಖ ಸಂತೋಷದ ಬಾಳುವೆಗೂ ಕಾರಣರಾಗುತ್ತಾರೆ. ಸಂಗೀತ ಜ್ಞಾನ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳು

ಶಾಂತರಾದರೂ ಕೋಪ ಬಂದಾಗ ಉಗ್ರವಾಗಿ ವರ್ತಿಸುತ್ತಾರೆ; ಕೃತ್ತಿಕಾ ನಕ್ಷತ್ರದವರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ಜ್ಯೋತಿಷ್ಯದಲ್ಲಿ ಎಲ್ಲರ ಗುಣ ಲಕ್ಷಣವನ್ನು ತಿಳಿಯಬಹುದಾಗಿದೆ. ಇಂದು ಕೃತ್ತಿಕಾ ನಕ್ಷತ್ರಕ್ಕೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ತಿಳಿಯೋಣ. ಅಶ್ವಿನಿ ಮತ್ತು ಭರಣಿ ನಕ್ಷತ್ರಗಳ ನಾಲ್ಕೂ ಪಾದಗಳು ಮೇಷ ರಾಶಿಯಲ್ಲಿ ಬರುತ್ತವೆ. ಆದರೆ ಕೃತ್ತಿಕ ನಕ್ಷತ್ರದ ಒಂದನೇ ಪಾದ ಮೇಷದಲ್ಲಿಯೂ, ಉಳಿದ ಮೂರೂ ಪಾದಗಳು ವೃಷಭದಲ್ಲಿಯೂ ಬರುತ್ತದೆ. ಆದ್ದರಿಂದ ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರ ಫಲವು ಎರಡೂ ರಾಶಿಯನ್ನು ಅವಲಂಬಿಸಿರುತ್ತದೆ. ಕೃತ್ತಿಕಾ ನಕ್ಷತ್ರದವರ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

ಸ್ತ್ರೀ ಗ್ರಹವಾದ ಚಂದ್ರನ ಬಗ್ಗೆ ನಿಮಗೆಷ್ಟು ಗೊತ್ತು; ಚಂದ್ರನಿಗೆ ಸಂಬಂಧಿಸಿದ ಧಾನ್ಯ, ಬಣ್ಣ, ಲೋಹದ ಬಗ್ಗೆ ಇಲ್ಲಿದೆ ಮಾಹಿತಿ

ಜಾತಕದಲ್ಲಿ ಸೂರ್ಯ ಮತ್ತು ಚಂದ್ರರಿಗೆ ಕೇವಲ ಒಂದು ಮನೆಯ ಅಧಿಪತ್ಯವಿದೆ. ಸೂರ್ಯನಂತೆ ಮುಖ್ಯವಾದ ಗ್ರಹ ಎಂದರೆ ಚಂದ್ರ. ಚಂದ್ರನು ಸ್ತ್ರೀಗ್ರಹ. ಗೋಚಾರದಲ್ಲಿ ಅತಿ ವೇಗವಾಗಿ ಚಲಿಸುವ ಗ್ರಹ ಎಂದರೆ ಚಂದ್ರ ಮಾತ್ರ. ಚಂದ್ರನು ಒಬ್ಬ ಮನುಷ್ಯನ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತಾನೆ. ಚಂದ್ರನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

ವಿಭಾಗ