ಕರಾವಳಿಯಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ: ಆದ್ಯಪಾಡಿಯಲ್ಲಿ ಗುಡ್ಡ ಕುಸಿತ, ಹಲವೆಡೆ ಹಾನಿ, ಕಡಲು ಪ್ರಕ್ಷುಬ್ದ, ಬೋಟ್‌ಗಳಿಗೆ ಹಾನಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರಾವಳಿಯಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ: ಆದ್ಯಪಾಡಿಯಲ್ಲಿ ಗುಡ್ಡ ಕುಸಿತ, ಹಲವೆಡೆ ಹಾನಿ, ಕಡಲು ಪ್ರಕ್ಷುಬ್ದ, ಬೋಟ್‌ಗಳಿಗೆ ಹಾನಿ

ಕರಾವಳಿಯಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ: ಆದ್ಯಪಾಡಿಯಲ್ಲಿ ಗುಡ್ಡ ಕುಸಿತ, ಹಲವೆಡೆ ಹಾನಿ, ಕಡಲು ಪ್ರಕ್ಷುಬ್ದ, ಬೋಟ್‌ಗಳಿಗೆ ಹಾನಿ

Cyclone Fengal: ಫೆಂಗಲ್ ಚಂಡಮಾರುತದ ಅಬ್ಬರದ ಕಾರಣ ಕರಾವಳಿ ಜಿಲ್ಲೆಗಳಲ್ಲೂ ಮಳೆಯಾಗಿದ್ದು, ದಕ್ಷಿಣ ಕನ್ನಡದ ಆದ್ಯಪಾಡಿಯಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದು ಬೋಟ್‌ಗಳು ಹಾನಿಗೀಡಾಗಿವೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕರಾವಳಿಯಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ: ಆದ್ಯಪಾಡಿಯಲ್ಲಿ ಗುಡ್ಡ ಕುಸಿತ, ಹಲವೆಡೆ ಹಾನಿ, ಕಡಲು ಪ್ರಕ್ಷುಬ್ದ, ಬೋಟ್‌ಗಳಿಗೆ ಹಾನಿಗೀಡಾಗಿವೆ.
ಕರಾವಳಿಯಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ: ಆದ್ಯಪಾಡಿಯಲ್ಲಿ ಗುಡ್ಡ ಕುಸಿತ, ಹಲವೆಡೆ ಹಾನಿ, ಕಡಲು ಪ್ರಕ್ಷುಬ್ದ, ಬೋಟ್‌ಗಳಿಗೆ ಹಾನಿಗೀಡಾಗಿವೆ.

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಫೈಂಗಲ್ ಚಂಡಮಾರುತದ ಪರಿಣಾಮ ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಮಧ್ಯಾಹ್ನದವರೆಗೆ ಧಾರಾಕಾರ ಮಳೆ, ಗಾಳಿ ಸಹಿತ ಸುರಿದಿದ್ದು, ಇದರ ಪರಿಣಾಮ, ಹಲವೆಡೆ ಹಾನಿ, ಕೃತಕ ನೆರೆ ಉಂಟಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ಕಡೆಗಳಲ್ಲಿ ಹಾಗೂ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಹೆಬ್ರಿ, ಕಾರ್ಕಳ, ಕೋಟ, ಬ್ರಹ್ಮಾವರ, ಹಿರಿಯಡ್ಕ, ಕಡಪಾಡಿ, ಮಲ್ಪೆ ಹಾಗೂ ಉಡುಪಿಯ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿಯಿತು. ಶಾಲೆ, ಪಿಯು ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.

ಸಮುದ್ರ ಪ್ರಕ್ಷುಬ್ದ, ಕಡಲಿಗಿಳಿಯದ ಮೀನುಗಾರರು, ಬೋಟುಗಳಿಗೆ ಹಾನಿ

ಉಳ್ಳಾಲದಲ್ಲಿ ಸಮುದ್ರ ಪ್ರಕ್ಷುಬ್ದವಾಗಿದ್ದರೆ, ಅರಬ್ಬಿ ಸಮುದ್ರದಲ್ಲಿ ಗಾಳಿ ಒತ್ತಡ ಮತ್ತು ಅಲೆಗಳ ಅಬ್ಬರ ಹೆಚ್ಚಾಗಿದ್ದ ಕಾರಣ, ಮೀನುಗಾರಿಕೆ ನಡೆಸುವ ದೋಣಿಗಳೆಲ್ಲವೂ ದಡ ಸೇರಿವೆ. ಈಗಾಗಲೇ ಕಡಲಿಗಿಳಿದಿದ್ದ ಬೋಟುಗಳು ಹಲವೆಡೆ ಸಮೀಪದ ದಡ ಸೇರಿದ್ದರೆ, ಮಲ್ಪೆ ಬಂದರಿನಲ್ಲಿ ಪರ್ಸೀನ್, ನಾಡದೋಣಿಗಳು ಮೀನುಗಾರಿಕೆ ನಡೆಸದೆ ದಡದಲ್ಲೇ ಉಳಿದಿದ್ದವು. ಮೀನುಗಾರಿಕೆಯಲ್ಲಿ ಬಲೆ ಬೀಸುವ ದೋಣಿಗಳು ಮಂಗಳೂರು ಬಂದರಿನಲ್ಲಿ ಲಂಗರು ಹಾಕಲಾಗಿದ್ದರೂ ಸುಮಾರು ಹತ್ತು ದೋಣಿಗಳು ಮಳೆ, ಕಡಲ ಅಬ್ಬರಕ್ಕೆ ಹಾನಿಯಾಗಿವೆ. ಕೊಚ್ಚಿಹೋಗಲಿದ್ದ ಬೋಟುಗಳನ್ನು ಮೀನುಗಾರರು ಪ್ರಯಾಸಪಟ್ಟು ಹಿಡಿದುಕೊಂಡು ಬರಬೇಕಾಯಿತು.

ಆದ್ಯಪಾಡಿಯಲ್ಲಿ ಕುಸಿದ ಗುಡ್ಡ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಲವೆಡೆ ಹಾನಿಗಳು ಸಂಭವಿಸಿವೆ. ನರಿಂಗಾನ ಎಂಬಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಬೋಳಿಯಾರ್ ಎಂಬಲ್ಲಿ ಗುಡ್ಡ ಕುಸಿದಿದ್ದರೆ, ತೊಕ್ಕೊಟ್ಟಿನಲ್ಲಿ ಮರದ ಮಿಲ್ ಒಂದಕ್ಕೆ ಹಾನಿಯಾಗಿದೆ. ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಕೃತಕ ನೆರೆಯಿಂದ ರಸ್ತೆ ಜಲಾವೃತವಾಗಿದೆ. ಮಂಗಳೂರು ನಗರದ ಸಿ.ಜಿ.ಕಾಮತ್ ರಸ್ತೆಯ ಮನೆಗೆ ಹಾನಿಯಾಗಿದೆ. ಕಿನ್ಯಾ ಗ್ರಾಮದಲ್ಲಿ ನೆರೆ ಪರಿಸ್ಥಿತಿ ವೀಕ್ಷಿಸಲು ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿದರು. ಉಡುಪಿಯ ನೀಲಾವರ ಸಮೀಪ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ.

ಬಜಪೆ ಸಮೀಪದ ಅದ್ಯಪಾಡಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಇದರಿಂದ ಬಜಪೆ ಆದ್ಯಪಾಡಿಯ ಸಂಪರ್ಕ ಕಡಿದುಹೋಗಿದೆ. ಮಂಗಳೂರು ವಿಮಾನನಿಲ್ದಾಣ ಕೆಳಭಾಗದ ಅದ್ಯಪಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಭಾಗದಿಂದ ಮಣ್ಣು ನೀರು ಹರಿದುಬರುತ್ತಿದೆ. ಗುಡ್ಡದ ಕೆಳಭಾಗದ ಮನೆಗೆ ಹಾನಿ ಸಂಭವಿಸಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಸಂಪರ್ಕ ರಸ್ತೆಗೆ ಹಾನಿಯಾಗಿದೆ. ರಸ್ತೆ ಮೇಲೆ ಭಾರೀ ಪ್ರಮಾಣದ ಮಣ್ಞು ಬಿದ್ದಿದ್ದರೆ, ವಿದ್ಯುತ್ ಕಂಬಗಳು ಉರುಳಿಹೋಗಿವೆ.

ರಸ್ತೆ ಸಂಚಾರಕ್ಕೆ ಅಡಚಣೆ

ಕೆಸರುಮಿಶ್ರಿತ ನೀರು ರಸ್ತೆಯಲ್ಲಿ ಹರಿದು, ದ್ವಿಚಕ್ರವಾಹನ ಸವಾರರು ಪರದಾಟ ಅನುಭವಿಸಬೇಕಾಯಿತು.
ಕೆಸರುಮಿಶ್ರಿತ ನೀರು ರಸ್ತೆಯಲ್ಲಿ ಹರಿದು, ದ್ವಿಚಕ್ರವಾಹನ ಸವಾರರು ಪರದಾಟ ಅನುಭವಿಸಬೇಕಾಯಿತು.

ಮಂಗಳೂರು ಮಹಾನಗರದಲ್ಲಿ ಬೆಳಗ್ಗೆ ಸುಮಾರು 11 ಗಂಟೆವೇಳೆಗೆ ಬಿಸಿಲಿನ ವಾತಾವರಣ ಇದ್ದರೂ ನೀರು ನಿಂತಿದ್ದ ಕಾರಣ ಹಲವು ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡು ಸಂಚಾರಕ್ಕೆ ತೊಂದರೆ ಉಂಟಾಯಿತು. ಮಂಗಳೂರಿನ ಅಲ್ಲಲ್ಲಿ ರಸ್ತೆಯಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ಹೊಂಡಗಳು ಎಲ್ಲಿವೆ ಎಂಬುದೇ ಗೊತ್ತಾಗದೆ ಕೆಲ ವಾಹನಗಳು ಅಪಘಾತಕ್ಕೀಡಾದವು. ಅದೇ ರೀತಿ ಹೆದ್ದಾರಿಯಲ್ಲೂ ಸಮಸ್ಯೆ ಉಂಟಾಗಿದ್ದು, ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಕಾಮಗಾರಿ ನಡೆಯುತ್ತಿರುವ ಬಿ.ಸಿ.ರೋಡ್ ನಿಂದ ಗುಂಡ್ಯವರೆಗಿನ ಪ್ರದೇಶಗಳಲ್ಲಿ ಕೆಸರುಮಿಶ್ರಿತ ನೀರು ರಸ್ತೆಯಲ್ಲಿ ಹರಿದು, ದ್ವಿಚಕ್ರವಾಹನ ಸವಾರರು ಪರದಾಟ ಅನುಭವಿಸಬೇಕಾಯಿತು.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner