ಚಾಣಕ್ಯ ನೀತಿ: ಈ ಅನುಕೂಲಗಳು ಇಲ್ಲದೆ ಕಡೆ ಇದ್ದರೆ ಕಷ್ಟಗಳು ತಪ್ಪಿದ್ದಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ
ಆಚಾರ್ಯ ಚಾಣಕ್ಯರು ಮನುಷ್ಯನ ಜೀವನಕ್ಕೆ ಅನುಕೂಲವಾಗುವಂಥ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರವಾಗಿರುತ್ತದೆ. ಅಲ್ಲದೆ ಅಂದುಕೊಂಡ ಯಶಸ್ಸು ಸಾಧಿಸಬಹುದು. ಯಾವ ಸ್ಥಳಗಳಲ್ಲಿ ವಾಸಿಸಿದರೆ ಕಷ್ಟಗಳು ಎದುರಾಗಬಹುದು ಎಂದು ಚಾಣಕ್ಯ ಹೇಳಿದ್ದಾರೆ.
ಚಾಣಕ್ಯ, ಭಾರತೀಯ ಇತಿಹಾಸದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯನ ಸೂತ್ರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಏಕೆಂದರೆ ಚಾಣಕ್ಯನ ನೀತಿಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಚಾಣಕ್ಯನ ನೀತಿಗಳಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಮನೆ ನಿರ್ಮಾಣದ ಬಗ್ಗೆಯೂ ಚಾಣಕ್ಯ ಕೆಲವು ವಿಶೇಷ ವಿಷಯಗಳನ್ನು ವಿವರಿಸಿದ್ದಾರೆ.
ಯಾವ ಸ್ಥಳಗಳಲ್ಲಿ ಮನೆ ನಿರ್ಮಿಸಬೇಕು?
ವಾಸ್ತವವಾಗಿ, ಮನೆಯು ಒಬ್ಬ ವ್ಯಕ್ತಿಯು ಆರಾಮ ಮತ್ತು ಶಾಂತಿಯನ್ನು ಕಂಡುಕೊಳ್ಳುವ ಸ್ಥಳವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಕುಟುಂಬವನ್ನು ಪ್ರೀತಿಸುತ್ತಾನೆ. ಪ್ರತಿಯೊಬ್ಬರೂ ತಮ್ಮ ಕುಟುಂಬದಲ್ಲಿ ಸಂತೋಷವಾಗಿರಲು ಬಯಸುತ್ತಾರೆ. ಇದಕ್ಕಾಗಿ, ನಿಮ್ಮ ಮನೆ ಸರಿಯಾದ ಸ್ಥಳದಲ್ಲಿರುವುದು ಬಹಳ ಮುಖ್ಯ. ಆದರೆ ಮನೆಯನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅನೇಕರಿಗೆ ತಿಳಿದಿಲ್ಲ. ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಯಾವ ಸ್ಥಳದಲ್ಲಿ ಮನೆ ಕಟ್ಟಬೇಕು. ಎಲ್ಲಿ ವಾಸಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ.
ಇದನ್ನೂ ಓದಿ: ಅತಿಯಾಗಿ ಹಣ ಖರ್ಚು ಮಾಡುವ ರಾಶಿಗಳು; ನಿಮ್ಮದು ಯಾವ ರಾಶಿ? ಅನಿರೀಕ್ಷಿತ ವೆಚ್ಚ ನಿಯಂತ್ರಿಸಲು ಈ ರೀತಿ ಮಾಡಿ
- ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿ ಗೌರವವಿಲ್ಲದ ದೇಶದಲ್ಲಿ ಇರಬಾರದು. ಹಾಗೆಯೇ, ಜ್ಞಾನ ಮತ್ತು ಗುಣಗಳನ್ನು ಪಡೆಯಲು ಅವಕಾಶವಿಲ್ಲದ ಸ್ಥಳದಲ್ಲಿ ವಾಸಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.
- ಉದ್ಯೋಗಕ್ಕೆ ಸೇರಲು, ಹೊಸ ಉದ್ಯೋಗ ಹುಡುಕಲು ಅಥವಾ ಮತ್ತಾವ ಕಾರಣಕ್ಕೋ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ. ದೇಶ ಸುತ್ತು ಕೋಶ ಓದು ಎಂಬಂತೆ ಹೊಸ ವಿಷಯಗಳನ್ನು ಕಲಿಯಲು ಜನರು ಹೀಗೆ ಪ್ರಯಾಣಿಸುತ್ತಾರೆ. ಆದರೆ ಉದ್ಯೋಗವಾಗಲೀ, ಹೊಸ ವಿಷಯಗಳನ್ನು ಕಲಿಯಲು ಅವಕಾಶವೇ ಇಲ್ಲದ ಕಡೆಯಲ್ಲಿ ಇರಲೇಬಾರದು ಎನ್ನುತ್ತಾರೆ ಚಾಣಕ್ಯ.
- ಚಾಣಕ್ಯ ನೀತಿಶಾಸ್ತ್ರದ ಪ್ರಕಾರ, ನೀವು ವಾಸಿಸುವ ಸ್ಥಳದಲ್ಲಿ ವೇದಗಳನ್ನು ತಿಳಿದಿರುವ ಬ್ರಾಹ್ಮಣ ಇಲ್ಲದಿದ್ದರೆ, ಆ ಸ್ಥಳ ವಾಸಿಸಲು ಯೋಗ್ಯವಲ್ಲ. ಇದರ ಹೊರತಾಗಿ, ನದಿ ಅಥವಾ ವೈದ್ಯರಿಲ್ಲದ ಸ್ಥಳದಲ್ಲಿ ವಾಸಿಸುವುದು ಕೂಡಾ ಸರಿಯಲ್ಲ.
ಇದನ್ನೂ ಓದಿ: ದಕ್ಷಿಣ ದಿಕ್ಕಿಗೆ ಸಂಬಂಧಿಸಿದಂತೆ ವಾಸ್ತು ಟಿಪ್ಸ್; ಸಮಸ್ಯೆಗಳನ್ನು ತಪ್ಪಿಸಲು ಅನುಸರಿಸಬೇಕಾದ ನಿಯಮಗಳೇನು?
- ಕೆಲಸ, ವ್ಯಾಪಾರ, ಸಾರಿಗೆ ವ್ಯವಸ್ಥೆ ಇಲ್ಲದ ಜಾಗದಲ್ಲಿ ನೆಲೆಯೂರಬಾರದು ಎನ್ನುತ್ತದೆ ಚಾಣಕ್ಯನ ನೀತಿ. ಏಕೆಂದರೆ ಈ ರೀತಿ ಅನುಕೂ ಇದ್ದಾಗ ಮಾತ್ರ ಸ್ವಂತ ಜೀವನ ನಡೆಸಲು ಅಥವಾ ಒಬ್ಬರನ್ನು ಬೆಂಬಲಿಸಲು, ಕುಟುಂಬವನ್ನು ಬೆಳೆಸಲು ಸಾಧ್ಯ. ಸ್ನೇಹಿತ, ಸಂಬಂಧಿಕರು, ಸಹಾಯಕರು ಇಲ್ಲದಿದ್ದರೆ, ವಿಪತ್ತಿನ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.
- ಉತ್ತಮ ಶಿಕ್ಷಣ ಮತ್ತು ಉತ್ತಮ ನಡವಳಿಕೆಯು ಮಕ್ಕಳ ಭವಿಷ್ಯವನ್ನು ಸುಧಾರಿಸುತ್ತದೆ. ಶಿಕ್ಷಣ ಸಂಸ್ಥೆಗಳು ಇಲ್ಲದ ಜಾಗದಲ್ಲಿ ಮಕ್ಕಳು ಶಿಕ್ಷಣ ಮುಂದುವರಿಸುವುದು ಅಸಾಧ್ಯ. ಅಂತಹ ಸ್ಥಳಗಳಲ್ಲಿ ವಾಸಿಸುವ ಮಕ್ಕಳು ಶಿಕ್ಷಣವನ್ನು ಕಳೆದುಕೊಳ್ಳುತ್ತಾರೆ.
ಇಷ್ಟೆಲ್ಲಾ ಮೂಲಭೂತ ಸೌಕರ್ಯಗಳು ಇರದ ಕಡೆ ವಾಸಿಸಲೇಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.