Annayya Serial: ತಾಯಿ ಬಗ್ಗೆ ತಪ್ಪು ತಿಳಿದು ದಿನವೂ ಕೊರಗುತ್ತಿದ್ದಾನೆ ಶಿವು; ಪಾರು ಮಾಡಿದ ನಿರ್ಧಾರದಿಂದ ಬದಲಾಗಬಹುದು ಬದುಕು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ತಾಯಿ ಬಗ್ಗೆ ತಪ್ಪು ತಿಳಿದು ದಿನವೂ ಕೊರಗುತ್ತಿದ್ದಾನೆ ಶಿವು; ಪಾರು ಮಾಡಿದ ನಿರ್ಧಾರದಿಂದ ಬದಲಾಗಬಹುದು ಬದುಕು

Annayya Serial: ತಾಯಿ ಬಗ್ಗೆ ತಪ್ಪು ತಿಳಿದು ದಿನವೂ ಕೊರಗುತ್ತಿದ್ದಾನೆ ಶಿವು; ಪಾರು ಮಾಡಿದ ನಿರ್ಧಾರದಿಂದ ಬದಲಾಗಬಹುದು ಬದುಕು

ಅಣ್ಣಯ್ಯ ಧಾರಾವಾಹಿಯಲ್ಲಿ ಕಥೆ ಇನ್ನಷ್ಟು ಚುರುಕುಗೊಳ್ಳುತ್ತಿದೆ. ಅಣ್ಣಯ್ಯನ ನೋವು, ವೀರಭದ್ರನ ಕಟುಕತನ ಎಲ್ಲವೂ ಹೆಚ್ಚುತ್ತಿದೆ. ಪಾರುಗೆ ಕರುಣೆ ಬಂದಿದೆ. ತನ್ನ ಮನೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಭಾವನೆ ಬಂದಿದೆ.

ತಾಯಿ ಬಗ್ಗೆ ತಪ್ಪು ತಿಳಿದು ದಿನವೂ ಕೊರಗುತ್ತಿದ್ದಾನೆ ಶಿವು
ತಾಯಿ ಬಗ್ಗೆ ತಪ್ಪು ತಿಳಿದು ದಿನವೂ ಕೊರಗುತ್ತಿದ್ದಾನೆ ಶಿವು

ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯ ತುಂಬಾ ನೋವು ಅನುಭವಿಸುತ್ತಿದ್ದಾನೆ. ಅವನ ಎಲ್ಲಾ ನೋವಿಗೂ ಅವನ ಮಾವ ವೀರಭದ್ರನೇ ಕಾರಣ. ಆದರೆ ಆ ಬಗ್ಗೆ ಯಾವ ಸತ್ಯವೂ ಇನ್ನೂ ಶಿವುಗೆ ಗೊತ್ತಾಗಿಲ್ಲ. ಇದೆಲ್ಲ ತನ್ನಿಂದ ತಾನೇ ಆಗಿರುವುದು ಮಾವ ಮಾಡಿದ್ದಲ್ಲ ಎಂದೇ ಶಿವು ಅಂದುಕೊಂಡಿದ್ದಾನೆ. ಪಾರು ಮಾತ್ರ ಎಲ್ಲ ಗಮನಿಸುತ್ತಾ ಇದ್ದಾಳೆ. ಇದರಲ್ಲಿ ತನ್ನ ತಂದೆಯದ್ದೇ ತಪ್ಪಿದೆ ಎನ್ನುವುದು ಅವಳಿಗೆ ಗೊತ್ತಿದೆ. ಹೇಗಾದರೂ ಮಾಡಿ ತನ್ನ ಅಪ್ಪನಿಂದ ಶಿವುವನ್ನು ಕಾಪಾಡಬೇಕು ಎಂದು ಅವಳು ಅಂದುಕೊಂಡಿದ್ದಾಳೆ.

ಇನ್ನು ವೀರಭದ್ರ ಮನೆಯಲ್ಲಿ ತಾನು ಶಿವು ತಾಯಿಗೆ ಏನು ಮಾಡಿದ್ದೇನೆ ಎನ್ನುವುದನ್ನು ವಿವರಿಸುತ್ತಾ ಇದ್ದಾನೆ. ಶಿವು ತಾಯಿಯನ್ನು ಜೈಲಿಗೆ ಸೇರಿಸಿದ್ದೇ ಅವನು. ಹಿಂದೆ ಅವಳು ಎಲ್ಲ ಜವಾಬ್ಧಾರಿಗಳನ್ನು ಹೊತ್ತಿದ್ದಳು. ಆದರೆ ಅದನ್ನು ಸಹಿಸಲಾಗದ ವೀರಭದ್ರ ಅವಳಿಗೆ ಮೋಸ ಮಾಡಿದ್ದಾನೆ. ಬಂಗಾರದ ಬಳೆ ತೊಡುತ್ತಿದ್ದ ಅವಳ ಕೈಗಳು ಈಗ ಬೇಡಿ ತೊಟ್ಟುಕೊಂಡಿದೆ. ಅವಳು ಅಂದು ಹತ್ತಾರು ಜನಕ್ಕೆ ಅನ್ನ ನೀಡುತ್ತಿದ್ದಳಂತೆ. ಆದರೆ ಇಂದು ಅವಳೆ ಸಾಲಲ್ಲಿ ನಿಂತು ಅನ್ನಕ್ಕಾಗಿ ಬೇಡುವಂತಾಗಿದೆ.

ಇದೆಲ್ಲವನ್ನೂ ಹೇಳುತ್ತಾ ವೀರಭದ್ರ ವಿಕೃತಾನಂದ ಪಡುತ್ತಾನೆ. ಇತ್ತ ಶಿವು ಬೇಸರದಲ್ಲಿ ನೀನು ಯಾಕೆ ಅಂದು ಓಡಿ ಹೋದೆ? ನೀನು ನಿನ್ನ ಕೆಟ್ಟ ನೆರಳನ್ನು ನಮ್ಮ ಮನೆಯ ಮೇಲೆ ಬೀಳದಂತೆ ಎಂದಾದರೂ ತಡೆದಿದ್ದೀಯಾ? ಎಂದೆಲ್ಲ ಬಹುಶಃ ತನ್ನ ತಾಯಿಯನ್ನು ನೆನಪು ಮಾಡಿಕೊಂಡು ಮರದ ಹತ್ತಿರ ಮಾತಾಡುತ್ತಾ ಇರುತ್ತಾನೆ. ಅದನ್ನು ಪಾರು ನೋಡಿರುತ್ತಾಳೆ. ಅವಳಿಗೆ ಅವನ ಮಾತನ್ನು ಆಲಿಸಬೇಕು ಎನಿಸುತ್ತದೆ. ಆಗ ಅವಳಿಗೆ ಅರ್ಥ ಆಗುತ್ತದೆ. ಶಿವು ಯಾವುದೋ ನೋವಲ್ಲಿದ್ದಾನೆ ಎಂದು.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner