Vishwakarma Puja: ಸೆಪ್ಟೆಂಬರ್ 17 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ-devotional festival for prosperity perform vishwakarma puja on september 17 in ravi yoga sukarma yoga rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vishwakarma Puja: ಸೆಪ್ಟೆಂಬರ್ 17 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ

Vishwakarma Puja: ಸೆಪ್ಟೆಂಬರ್ 17 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ

Vishwakarma Puja 2024: ಹಿಂದೂ ಧರ್ಮದಲ್ಲ, ವಿಶ್ವಕರ್ಮ ದೇವರನ್ನು ದೇವರುಗಳು ಮತ್ತು ದೇವತೆಗಳ ಕುಶಲಕರ್ಮಿ ಎಂದು ಕರೆಯಲಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ ಪ್ರತಿವರ್ಷ ವಿಶ್ವಕರ್ಮ ಪೂಜೆಯ ದಿನದಂದು ವಿಶ್ವಕರ್ಮ ದೇವರನ್ನು ಪೂಜಿಸಲಾಗುತ್ತದೆ.

Vishwakarma Puja: ಸೆಪ್ಟೆಂಬರ್ 16 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ
Vishwakarma Puja: ಸೆಪ್ಟೆಂಬರ್ 16 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ

Vishwakarma Puja 2024: ಜೀವನದಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ವಿಶ್ವಕರ್ಮ ಪೂಜೆ ಬಹಳ ಮುಖ್ಯ. ಬ್ರಹ್ಮಾಂಡದ ಸೃಷ್ಟಿಯಲ್ಲಿ ಭಗವಾನ್ ವಿಶ್ವಕರ್ಮ ಬ್ರಹ್ಮಾಜಿಗೆ ಸಹಾಯ ಮಾಡಿದರು ಎಂದು ನಂಬಲಾಗಿದೆ. ಭಗವಾನ್ ವಿಶ್ವಕರ್ಮನನ್ನು ವಿಶ್ವದ ಮೊದಲ ಕುಶಲಕರ್ಮಿ ಎಂದು ಪರಿಗಣಿಸಲಾಗಿದೆ. ಈ ದಿನ ಕಲಾವಿದರು, ಉದ್ಯಮಿಗಳು ಹಾಗೂ ಕುಶಲಕರ್ಮಿಗಳಿಗೆ ಬಹಳ ಮಹತ್ವದ್ದಾಗಿದೆ. ದೃಕ್ ಪಂಚಾಂಗದ ಪ್ರಕಾರ, 2024 ರ ಸೆಪ್ಟೆಂಬರ್ 17 ರಂದು ರವಿ ಯೋಗ ಮತ್ತು ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ನಡೆಯಲಿದೆ. ಈ ದಿನ ವಿಶ್ವಕರ್ಮನನ್ನು ಬಟ್ಟೆ, ಆಯುಧಗಳಿಂದ ಅಲಂಕರಿಸಲಾಗುತ್ತದೆ. ವಿಶ್ವಕರ್ಮ ದೇವರ ಪೂಜಾ ವಿಧಾನ ಸೇರಿದಂತೆ ಆಸಕ್ತಿರ ಮಾಹಿತಿ ಇಲ್ಲಿ ನೀಡಲಾಗಿದೆ.

ಜ್ಯೋತಿಷಿ ಪಂಡಿತ್ ವಾಗೀಶ್ವರಿ ಪ್ರಸಾದ್ ಅವರ ಪ್ರಕಾರ, 2024 ರ ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಪೂಜೆ ನಡೆಯಲಿದೆ. ಈ ನಿರ್ದಿಷ್ಟ ದಿನದಂದು ಕುಶಲಕರ್ಮಿಗಳು, ಬಡಗಿಗಳು, ಯಂತ್ರೋಪಕರಣಗಳು, ಕಮ್ಮಾರರು ಹಾಗೂ ಕಾರ್ಮಿಕರು ವಿಶ್ವಕರ್ಮನನ್ನು ಪೂಜಿಸುತ್ತಾರೆ. ವಿಶ್ವಕರ್ಮ ಪೂಜೆಯ ಸರಳ ವಿಧಾನವನ್ನು ತಿಳಿದುಕೊಳ್ಳೋಣ.

ವಿಶ್ವಕರ್ಮ ದೇವರ ಆರಾಧನ

  • ವಿಶ್ವಕರ್ಮ ಪೂಜೆಯ ದಿನದಂದು ಬೆಳಿಗ್ಗೆ ಬೇಗನೆ ಎದ್ದೇಳಬೇಕು
  • ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ
  • ದೇವರ ಪ್ರತಿಷ್ಠಾಪನೆಗಾಗಿ ಕೆಂಪು ಅಥವಾ ಹಳದಿ ಬಟ್ಟೆಯನ್ನು ಸಿದ್ಧಮಾಡಿಕೊಳ್ಳಿ
  • ಭಗವಾನ್ ವಿಶ್ವಕರ್ಮನ ಪ್ರತಿಮೆ ಅಥವಾ ಚಿತ್ರವನ್ನು ಬಟ್ಟೆಯ ಮೇಲೆ ಪ್ರತಿಷ್ಠಾಪಿಸಿ
  • ವಿಶ್ವಕರ್ಮ ದೇವರಿಗೆ ಹಣ್ಣುಗಳು, ಹೂವುಗಳು, ಧೂಪದ್ರವ್ಯಗಳು ಹಾಗೂ ನೈವೇದ್ಯವನ್ನು ಅರ್ಪಿಸಿ

ಇದನ್ನೂ ಓದಿ: ಜಾತಕದಲ್ಲಿನ ದೋಷ ನಿವಾರಣೆ, ಸಂತಾನ ಫಲ ಪ್ರಾಪ್ತಿಗೆ ಹೆಸರುವಾಸಿ ಈ ಕಾಕಣಿ ಕ್ಷೇತ್ರ; ದೇವಾಲಯದ ರೋಚಕ ಕಥೆ ಇಲ್ಲಿದೆ

  • ಎಲ್ಲಾ ಯಂತ್ರಗಳು ಹಾಗೂ ಕೆಲಸ ಮಾಡುವ ವಸ್ತುಗಳಿಗೆ ಅರಿಶಿನ-ಅಕ್ಕಿಯನ್ನು ಹಚ್ಚಿ
  • ಪೂಜೆಯ ಸಮಯದಲ್ಲಿ ಶ್ರೀ ಹರಿ ವಿಷ್ಣುವನ್ನು ಧ್ಯಾನಿಸಿ
  • ವಿಶ್ವಕರ್ಮ ದೇವರನ್ನು ಧ್ಯಾನ ಮಾಡುತ್ತಾ ಪೂಜೆಯನ್ನು ಆರಂಭಿಸಿ
  • ದೇವರ ಮುಂದೆ ದೀಪವನ್ನು ಬೆಳಗಿಸಿ.
  • ಪೂಜಾ ಸ್ಥಳದಲ್ಲಿ 8 ದಳಗಳಿಂದ ಕೂಡಿದ ಕಮಲದ ರಂಗೋಲಿಯನ್ನು ಬಿಡಿಸಿ
  • ಅದರಲ್ಲಿ 7 ರೀತಿಯ ಧಾನ್ಯಗಳನ್ನು ಇಡಿ
  • ಒಂದು ಪಾತ್ರೆಯಲ್ಲಿ 7 ರೀತಿಯ ಮಣ್ಣು, ಐದು ಮರಗಳ ಎಲೆಗಳು, ಅಡಿಕೆ, ದಕ್ಷಿಣೆ ಹಾಕಿ ಮುಚ್ಚಿಡಿ

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಿ ವಿಧಾನ; ಪೂಜೆಗೆ ಬೇಕಾದ ಸಾಮಗ್ರಿಗಳೇನು, ಬಾಲ ಗೋಪಾಲನನ್ನು ಪೂಜಿಸುವುದು ಹೇಗೆ?

  • ವಿಷ್ಣು ಮತ್ತು ವಿಶ್ವಕರ್ಮ ಹೆಸರಿನಲ್ಲಿ ಆರತಿ ಬೆಳಗಿಸಿ
  • ಯಂತ್ರಗಳು, ಉಪಕರಣಗಳು ಹಾಗೂ ಸಲಕರಣೆಗಳಿಗೆ ಆರತಿ ಬೆಳಗಿಸಿ
  • ಅಂತಿಮವಾಗಿ ಪೂಜೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಸಾದ ವಿತರಿಸಿ ಮತ್ತು ಅದನ್ನು ನೀವೂ ಸೇವಿಸಿ

ಇದನ್ನೂ ಓದಿ: ಆಂಧ್ರಪ್ರದೇಶದ ಸಿಂಹಾಚಲ ಬೆಟ್ಟದಲ್ಲಿದೆ ವರಾಹ ನರಸಿಂಹಸ್ವಾಮಿ ದೇಗುಲ; ಇಲ್ಲಿ ಪೂಜೆ ಸಲ್ಲಿಸಿದರೆ ಇನ್ನಿಲ್ಲ ಶತ್ರು ಭಯ

ಪುರಾಣಗಳ ಪ್ರಕಾರ, ವಿಶ್ವಕರ್ಮ ದೇವರು ಪುಷ್ಪಕ ವಿಮಾನ, ಚಿನ್ನದ ಲಂಕೆ, ಭೋಲೆನಾಥನ ತ್ರಿಶೂಲ, ರಾವಣನ ಲಂಕಾ, ಶ್ರೀಕೃಷ್ಣನ ದ್ವಾರಕಾ ನಗರ, ದೇವರು ಮತ್ತು ದೇವತೆಗಳ ಆಯುಧಗಳನ್ನು ಸೃಷ್ಟಿಸಿದನು. ಈ ದಿನ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ ಭಗವಾನ್ ವಿಶ್ವಕರ್ಮನನ್ನು ಪೂಜಿಸಲಾಗುತ್ತದೆ. ಇದರಿಂದ ಜೀವನದಲ್ಲಿ ಪ್ರಗತಿ ಇರುತ್ತದೆ. ಕರ್ನಾಟಕದಲ್ಲೂ ಸಡಗರ, ಸಂಭ್ರಮದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.