ಆಂಧ್ರಪ್ರದೇಶದ ಸಿಂಹಾಚಲ ಬೆಟ್ಟದಲ್ಲಿದೆ ವರಾಹ ನರಸಿಂಹಸ್ವಾಮಿ ದೇಗುಲ; ಇಲ್ಲಿ ಪೂಜೆ ಸಲ್ಲಿಸಿದರೆ ಇನ್ನಿಲ್ಲ ಶತ್ರು ಭಯ-indian temple varaha narasimhaswamy temple situated in andhra pradesh simhachala hill hindu religion sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆಂಧ್ರಪ್ರದೇಶದ ಸಿಂಹಾಚಲ ಬೆಟ್ಟದಲ್ಲಿದೆ ವರಾಹ ನರಸಿಂಹಸ್ವಾಮಿ ದೇಗುಲ; ಇಲ್ಲಿ ಪೂಜೆ ಸಲ್ಲಿಸಿದರೆ ಇನ್ನಿಲ್ಲ ಶತ್ರು ಭಯ

ಆಂಧ್ರಪ್ರದೇಶದ ಸಿಂಹಾಚಲ ಬೆಟ್ಟದಲ್ಲಿದೆ ವರಾಹ ನರಸಿಂಹಸ್ವಾಮಿ ದೇಗುಲ; ಇಲ್ಲಿ ಪೂಜೆ ಸಲ್ಲಿಸಿದರೆ ಇನ್ನಿಲ್ಲ ಶತ್ರು ಭಯ

ಸುಮಾರು 13 ನೇ ಶತಮಾನದಲ್ಲಿ ನಿರ್ಮಿಸಲಾದ ಆಂಧ್ರದ ಸಿಂಹಾಚಲಂನಲ್ಲಿರುವ ವರಾಹ ನರಸಿಂಹಸ್ವಾಮಿ ದೇವಾಲಯ ಬಹಳ ವೈಶಿಷ್ಟ್ಯತೆಗೆ ಕಾರಣವಾಗಿದೆ. ಇಲ್ಲಿ ವರ್ಷಕ್ಕೆ ಒಮ್ಮೆ ಅಕ್ಷಯ ತೃತೀಯದೊಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ನರಸಿಂಹಸ್ವಾಮಿಯನ್ನು ಶ್ರೀಗಂಧದಿಂದ ಮುಚ್ಚಲಾಗಿರುತ್ತದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಆಂಧ್ರಪ್ರದೇಶದ ಸಿಂಹಾಚಲ ಬೆಟ್ಟದಲ್ಲಿದೆ ವರಾಹ ನರಸಿಂಹಸ್ವಾಮಿ ದೇಗುಲ; ಇಲ್ಲಿ ಪೂಜೆ ಸಲ್ಲಿಸಿದರೆ ಇನ್ನಿಲ್ಲ ಶತ್ರು ಭಯ
ಆಂಧ್ರಪ್ರದೇಶದ ಸಿಂಹಾಚಲ ಬೆಟ್ಟದಲ್ಲಿದೆ ವರಾಹ ನರಸಿಂಹಸ್ವಾಮಿ ದೇಗುಲ; ಇಲ್ಲಿ ಪೂಜೆ ಸಲ್ಲಿಸಿದರೆ ಇನ್ನಿಲ್ಲ ಶತ್ರು ಭಯ (@rahuljha226241, @Kickass_monk)

ಆಂಧ್ರಪ್ರದೇಶದಲ್ಲಿ ಇರುವ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ವಿಶಾಖಪಟ್ಟಣದ ಸಿಂಹಾಚಲ ಬೆಟ್ಟದಲ್ಲಿ ಇರುವ ದೇವಾಲಯವೇ ಶ್ರೀ ವರಾಹಲಕ್ಷ್ಮೀ ನರಸಿಂಹ ದೇವಸ್ಥಾನ ಕೂಡಾ ಒಂದು. ಇಲ್ಲಿ ಭಗವಾನ್ ವಿಷ್ಣುವು ವರಾಹ ನರಸಿಂಹಸ್ವಾಮಿಯ ರೂಪದಲ್ಲಿ ನೆಲೆಗೊಂಡಿದ್ದಾನೆ. ಭಗವಾನ್ ವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ಹಿರಣ್ಯಕಶಿಪುವಿನಿಂದ ರಕ್ಷಿಸಲು ಸಿಂಹದ ತಲೆ ಮತ್ತು ಮಾನವ ದೇಹದ ಅವತಾರ ಎತ್ತುತ್ತಾನೆ.

ತಿರುಪತಿ ನಂತರ ಈ ದೇವಾಲಯವೇ ಆಂಧ್ರದ 2ನೇ ದೊಡ್ಡ ದೇವಾಲಯ

ಪ್ರತಿ ವರ್ಷ ಅಕ್ಷಯ ತೃತೀಯದ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ವರಾಹ ನರಸಿಂಹಸ್ವಾಮಿಯ ವಿಗ್ರಹವನ್ನು ದ್ರವ ರೂಪ್ಪದ ಶ್ರೀಗಂಧದಿಂದ ಮುಚ್ಚುವುದು ಇಲ್ಲಿನ ವಿಶೇಷ. ಸಿಂಹಾಚಲಂ ದೇವಾಲಯವು ಕೋಟೆಯ ಒಳಗೆ ಇರುವಂತೆ ಕಾಣುತ್ತದೆ. ಈ ದೇವಾಲಯವು ಅತ್ಯಂತ ವಿಶಾಲವಾಗಿದೆ. ಈ ದೇವಾಲಯವು ಪಶ್ಚಿಮಕ್ಕೆ ಮುಖಮಾಡಿದೆ. ದೇವಾಲಯದ ಬಳಿ ಎರಡು ಕಲ್ಯಾಣಿಗಳು ಕಂಡುಬರುತ್ತದೆ. ದೇವಾಲಯದ ಬಳಿ ಸ್ವಾಮಿ ಪುಷ್ಕರಿಣಿ ಇದೆ. ಬೆಟ್ಟದ ಬುಡದಲ್ಲಿ ಗಂಗಾಧರ ದೇವಾಲಯವಿದೆ. ಇಲ್ಲಿ ಹಲವಾರು ಸಣ್ಣ ಪುಟ್ಟ ದೇಗುಲಗಳನ್ನು ಕಾಣಬಹುದು. ಇಲ್ಲಿ ನಡೆಯುವ ದೇವಾಲಯದ ಧಾರ್ಮಿಕ ಆಚರಣೆಗಳು ಮತ್ತು ಪದ್ಧತಿಗಳನ್ನು ವೈಷ್ಣವ ತತ್ವಜ್ಞಾನಿ ರಾಮಾನುಜರು ಆರಂಭಿಸಿದ್ದು ಎನ್ನಲಾಗಿದೆ.

ಇದನ್ನೂ ಓದಿ: ಸಶರೀರ ಬೃಂದಾವನಸ್ಥರಾದ ಕಲಿಯುಗದ ಕಾಮಧೇನು ಗುರು ರಾಘವೇಂದ್ರರ ಆರಾಧನೆ ಯಾವಾಗ? ಇಲ್ಲಿದೆ ವಿವರ

ಆಂಧ್ರಪ್ರದೇಶದ ತಿರುಮಲದ ನಂತರ ಸಿಂಹಾಚಲದ ಈ ದೇವಾಲಯವೇ ಎರಡನೇ ಅತಿ ದೊಡ್ಡ ದೇವಾಲಯವಾಗಿದೆ. ಸಂತಾನ ಸಮಸ್ಯೆ ಇರುವವರು ಇಲ್ಲಿ ಪೂಜಿಸಿದರೆ ಸಂತಾನಪ್ರಾಪ್ತಿಯಾಗುತ್ತದೆ ಎಂದು ಭಕ್ತರು ಹೇಳುತ್ತಾರೆ. ಪ್ರತಿ ವರ್ಷ ಕಲ್ಯಾಣೋತ್ಸವ ಮತ್ತು ಚಂದನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದೇವಸ್ಥಾನದಲ್ಲಿ ಶ್ರೀ ನರಸಿಂಹ ಜಯಂತಿಯ ದಿನದಂದು ವಿಶೇಷ ಪುಜಾ ಕೈಕಂರ್ಯಗಳು ನಡೆಯುತ್ತವೆ. ನವರಾತ್ರಿಯ ವೇಳೆ 10 ದಿನಗಳ ಕಾಲ ವಿಜೃಂಭಣೆಯ ಆಚರಣೆಯನ್ನು ಕಾಣಬಹುದು. ಈ ದೇವಸ್ಥಾನದಲ್ಲಿ ಭಕ್ತರು, ಇತರ ಭಕ್ತರಿಗೆ ಕಾಮನ ಹುಣ್ಣಿಮೆಯ ದಿನದಂದು ಹೆಸರುಬೇಳೆಯಿಂದ ಮಾಡಿದ ಖಾದ್ಯವನ್ನು ಪಾನಕವನ್ನು ಹಂಚಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಸಿಂಹಾಚಲದಲ್ಲಿ ಆಚರಿಸಲಾಗುವ ಹಬ್ಬ ಹರಿದಿನಗಳು ದ್ರಾವಿಡ ಸಂಪ್ರದಾಯವನ್ನು ಹೋಲುತ್ತದೆ. ಬಹುತೇಕ ಎಲ್ಲಾ ಭಾಷೆಯ ಪ್ರಸಿದ್ಧ ಕವಿಗಳು ಲೇಖಕರು ದೇವಾಲಯದ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಬರೆದಿದ್ದಾರೆ.

ವಿಷ್ಣುವಿನ ಭಕ್ತರಾದ ಜಯ-ವಿಜಯರು

ಈ ದೇವಾಲಯವು ಕಳಿಂಗನ ವಾಸ್ತುಶಿಲ್ಪವನ್ನು ಹೋಲುತ್ತದೆ. ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಪೂರ್ವ ಗಂಗಾ ರಾಜನಾಗಿದ್ದ ಒಂದನೇ ನರಸಿಂಗ ದೇವನು ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ. ಸಿಂಹಾಚಲಂನ ಸ್ಥಳ ಪುರಾಣದ ಬಗ್ಗೆ ವಿಷ್ಣು ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ವಿಷ್ಣುಭಕ್ತರಾದ ಪ್ರಹ್ಲಾದನು ಈ ದೇವಾಲಯನ್ನು ನಿರ್ಮಿಸಿದನೆಂದು ಹೇಳಲಾಗಿದೆ. ಒಮ್ಮೆ, ಬ್ರಹ್ಮದೇವನ ಮಾನಸ ಪುತ್ರರು ವಿಷ್ಣುವಿನ ನಿವಾಸ ವೈಕುಂಠಕ್ಕೆ ಮಕ್ಕಳ ರೂಪದಲ್ಲಿ ಭೇಟಿ ನೀಡುತ್ತಾರೆ. ವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಅವರನ್ನು ಗುರುತಿಸದೆ ಪ್ರವೇಶವನ್ನು ನಿರಾಕರಿಸುತ್ತಾರೆ. ಆಗ ಅಸಮಾಧಾನದಿಂದ, ಅವರು ದೈವತ್ವವನ್ನು ತ್ಯಜಿಸಿ, ಭೂಲೋಕದಲ್ಲಿ ಜೀವನ ನಡೆಸಬೇಕು ಎಂದು ಶಪಿಸುತ್ತಾರೆ. ಸ್ವಯಂ ವಿಷ್ಣುವೇ ಬ್ರಹ್ಮಕುಮಾರರ ಶಾಪವನ್ನು ಹಿಂತೆಗೆದುಕೊಳ್ಳುವಲ್ಲಿ ವಿಫಲನಾಗುತ್ತಾನೆ.

ಇದನ್ನೂ ಓದಿ: ಆ.16 ರಂದು ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ; ಈ 5 ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಹಣಕಾಸು ನಷ್ಟ

ತನ್ನ ಅಪಜಯಕ್ಕೆ ಪಶ್ಚಾತ್ತಾಪ ಪಡುತ್ತಾನೆ. ಆ ನಂತರ ಬ್ರಹ್ಮಕುಮಾರರು ಎರಡು ಪರಿಹಾರಗಳನ್ನು ನೀಡುತ್ತಾರೆ. ಏಳು ಜನ್ಮದಲ್ಲಿ ಮಾನವ ಜೀವನದಲ್ಲಿ ವಿಷ್ಣುವಿನ ಭಕ್ತರಾಗಿ ಬಾಳಬಹುದು. ಅಥವಾ ಮೂರು ಬಾರಿ ರಾಕ್ಷಸರ ರೂಪದಲ್ಲಿ ಹುಟ್ಟಿ ವಿಷ್ಣುವಿನಿಂದ ಪ್ರಾಣತ್ಯಾಗ ಮಾಡಬೇಕಾಗುತ್ತದೆ ಎಂಬಂ ಆಯ್ಕೆ ನೀಡುತ್ತಾರೆ. ವಿಷ್ಣುವನ್ನು ಅಗಲಿ 7 ಜನ್ಮಗಳು ಇರಲು ಆಗದೆ, ರಾಕ್ಷಸ ರೂಪದಲ್ಲಿ ಅವತರಿಸಲು ಒಪ್ಪುತ್ತಾರೆ. ಆದ್ದರಿಂದ ಶತ್ರುಗಳಾಗಿ ಜಯ-ವಿಜಯರು ಭೂಲೋಕದಲ್ಲಿ ಜನ್ಮ ತಾಳಲು ನಿರ್ಧರಿಸುತ್ತಾರೆ.

ಈ ದೇವಾಲಯದಲ್ಲಿ ಪೂಜೆ ಮಾಡಿದರೆ ಶತ್ರುಗಳ ಭಯ ನಿವಾರಣೆಯಾಗುತ್ತದೆ. ಸತ್ಯಯುಗದಲ್ಲಿ ಜಯ-ವಿಜಯರು ಮೊದಲ ರಾಕ್ಷಸ ಜೀವನದಲ್ಲಿ, ಕಶ್ಯಪ ಮತ್ತು ದಿತಿ (ದಕ್ಷನ ಮಗಳು) ಋಷಿಗಳಿಗೆ ಜಯ-ವಿಜಯರು ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಾಗಿ ಜನಿಸುತ್ತಾರೆ. ಹಿರಣ್ಯಾಕ್ಷನು ಭೂಮಿಯು ತನ್ನ ಚೈತನ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತಾನೆ. ಆಗ ವಿಷ್ಣುವು ವರಾಹ ಎಂದು ಕರೆಯಲ್ಪಡುವ ಹಂದಿಯ ರೂಪವನ್ನು ಪಡೆದುಕೊಂಡು ಭೂಮಿಯನ್ನು ಸಾಮಾನ್ಯ ಸ್ಥಿತಿಗೆ ಮರುಳುವಂತೆ ಮಾಡುತ್ತಾನೆ. ಈ ಸ್ಥಳದಲ್ಲಿ ಭೂದೇವಿಯನ್ನು ರಕ್ಷಿಸಿದ್ದಕ್ಕೆ ಪುರಾವೆ ದೊರೆಯುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.