Varasiddhi Vinayaka Vrata: ಗಣೇಶ ಚತುರ್ಥಿಯಂದು ವರಸಿದ್ಧಿ ವಿನಾಯಕ ವ್ರತಾಚರಣೆಯ ಹಿಂದಿನ ಕಥೆ ತಿಳಿಯಿರಿ-devotional festival story behind varasiddhi vinayaka vrata celebration ganaesha chaturthi 2024 sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Varasiddhi Vinayaka Vrata: ಗಣೇಶ ಚತುರ್ಥಿಯಂದು ವರಸಿದ್ಧಿ ವಿನಾಯಕ ವ್ರತಾಚರಣೆಯ ಹಿಂದಿನ ಕಥೆ ತಿಳಿಯಿರಿ

Varasiddhi Vinayaka Vrata: ಗಣೇಶ ಚತುರ್ಥಿಯಂದು ವರಸಿದ್ಧಿ ವಿನಾಯಕ ವ್ರತಾಚರಣೆಯ ಹಿಂದಿನ ಕಥೆ ತಿಳಿಯಿರಿ

ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿಯನ್ನು ದೇಶದ ಪ್ರಮುಖ ನಗರಲ್ಲಿ ಅದ್ಧೂರಿಯಾಗಿ ಆಚರಿಸಲು ಅಂತಿಮ ಹಂತ ಸಿದ್ಧತೆಗಳು ನಡೆದಿವೆ. ಮಾರುಕಟ್ಟೆಯಿಂದ ಊರಿಗೆ ಬರೋಕೆ ವಿನಾಯಕನೂ ಸಿದ್ಧವಾಗಿದ್ದಾನೆ. ಈ ಸಂದರ್ಭದಲ್ಲಿ ವರಸಿದ್ಧಿ ವಿನಾಯಕ ವ್ರತಾಚರಣೆಯ ಹಿಂದಿನ ಕಥೆ ತಿಳಿಯಿರಿ. (ವರದಿ ಎಚ್ ಸತೀಶ್, ಜ್ಯೋತಿಷಿ)

ಗಣೇಶ ಚತುರ್ಥಿ ಹಬ್ಬ ಹಿನ್ನೆಲೆಯಲ್ಲಿ ವರಸಿದ್ಧಿ ವಿನಾಯಕ ವ್ರತಾಚರಣೆಯ ಹಿಂದಿನ ಕಥೆ ತಿಳಿಯಿರಿ
ಗಣೇಶ ಚತುರ್ಥಿ ಹಬ್ಬ ಹಿನ್ನೆಲೆಯಲ್ಲಿ ವರಸಿದ್ಧಿ ವಿನಾಯಕ ವ್ರತಾಚರಣೆಯ ಹಿಂದಿನ ಕಥೆ ತಿಳಿಯಿರಿ

ಬಹು ನಿರೀಕ್ಷಿತ ಗಣೇಶ ಚತುರ್ಥಿ ಬಂದೇ ಬಿಡ್ತು. ಭಕ್ತರದಲ್ಲಿ ಖುಷಿ ಹೆಚ್ಚಾಗುತ್ತಿದೆ. ದೇಶಾದ್ಯಂತ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ನಡೆದಿದ್ದು, ಅಂತಿಮ ಹಂತಕ್ಕೆ ಬಂದಿವೆ. ಮಾರುಕಟ್ಟೆಗೆ ಬಂದಿರುವ ವಿನಾಯಕ ಮನೆ, ಸಾರ್ವಜನಿಕ ಪೆಂಡಾಲ್‌ಗಳಿಗೆ ಬರೋಕೆ ಕೆಲವೇ ಗಂಟೆಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಭಗವಾನ್ ಗಣೇಶನ ಭಕ್ತರು ವರಸಿದ್ಧಿ ವಿನಾಯಕ ವ್ರತಾಚರಣೆ (Varasiddhi Vinayaka Vrata) ಬಗ್ಗೆ ಜೋತಿಷಿ ಎಚ್ ಸತೀಶ್ ಅವರು ಬರೆದಿದ್ದಾರೆ. ಕೌರವರು ಮತ್ತು ಪಾಂಡವರ ನಡುವೆ ರಾಜ್ಯಾಧಿಕಾರಕ್ಕಾಗಿ ಕಲಹ ಉಂಟಾಗುತ್ತದೆ. ನ್ಯಾಯದ ಹಾದಿಯಲ್ಲಿದ್ದರೂ ಪಾಂಡವರ ಪಾಲಿಗೆ ಅಧಿಕಾರವು ಮರೀಚಿಕೆಯಾಗುತ್ತದೆ. ಧರ್ಮರಾಯನು ಈ ಎಲ್ಲಾ ವಿಚಾರಗಳಿಂದ ಯೋಚನೆಗೀಡಾಗುತ್ತಾನೆ. ಅಧಿಕಾರದ ಆಸೆ ಇಲ್ಲದೆ ಹೋದರು ಅಧಿಕಾರ ಪಡೆಯುವುದು ಪಾಂಡವರ ಹಕ್ಕಾಗಿರುತ್ತದೆ.

ಗುರು ಹಿರಿಯರ ಆದೇಶದಂತೆ ಧರ್ಮರಾಯನು ವರಸಿದ್ಧಿವಿನಾಯಕ ವ್ರತವನ್ನು ಮಾಡಿದ ನಂತರ ಯುದ್ದದಲ್ಲಿ ಜಯಗಳಿಸುತ್ತಾನೆ. ಈ ವ್ರತವನ್ನುಸ್ವಯಂ ಶಿವನೇ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ತಿಳಿಸುತ್ತಾನೆ. ಗಂಗೆಯನ್ನು ಭೂಮಿಗೆ ಕರೆತರುವ ವೇಳೆ ಎದುರು ಆಗುವ ಅಡ್ಡಿ ಆತಂಕಗಳನ್ನು ಭಗೀರಥನು ವರಸಿದ್ಧಿ ವಿನಾಯಕ ವ್ರತ ಮಾಡಿನ ನಂತರ ಗಂಗೆಯನ್ನು ಭೂಮಿಗೆ ತರುವ ಸವಾಲನ್ನು ಗೆಲ್ಲುತ್ತಾನೆ.

ವರಸಿದ್ದಿ ವಿನಾಯಕ ವ್ರತವು ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನ ಆಚರಿಸಬೇಕಾಗುತ್ತದೆ. ಬೆಳಗಿನ ವೇಳೆ ಸ್ನಾನಾದಿಗಳನ್ನು ಮುಗಿಸಿ ಪೂಜೆಯನ್ನು ಆರಂಭಿಸಬೇಕು. ಬಂಗಾರ, ಬೆಳ್ಳಿ ಅಥವಾ ಮಣ್ಣಿನಿಂದ ತಯಾರಿಸಿದ ಗಣಪತಿಯ ಪ್ರತಿಮೆಯನ್ನು ಮನೆಯ ಉತ್ತರ ಭಾಗದಲ್ಲಿ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ತುಂಬಿ ಅದರಲ್ಲಿ ಇರಿಸಬೇಕು. 21 ಬಗೆಯ ಪತ್ರದಿಂದ ಪೂಜಿಸುವುದು ಒಳ್ಳೆಯದು. ಸಾಧ್ಯವಾಗದೆಹೋದಲ್ಲಿ ಅತಿ ಮುಖ್ಯವಾದ ಗರಿಕೆಯನ್ನು ಪೂಜೆಗೆ ಬಳಸಬೇಕು. 21 ಗರಿಕೆಯನ್ನು ತೆಗೆದುಕೊಂಡು ಅದರ ತುದಿಗೆ ಗಂಧವನ್ನು ಲೇಪಿಸಿ, ಗಣಪತಿಯ 21 ನಾಮಗಳನ್ನು ಜಪಿಸುತ್ತಾ ಪೂಜೆ ಮಾಡುವುದು ವಾಡಿಕೆ.

ವರಸಿದ್ಧಿ ವಿನಾಯಕ ವ್ರತಾಚರಣೆಯಿಂದ ಆಗುವ ಲಾಭಗಳು

ತುಪ್ಪದಿಂದಮಾಡಿದ 21 ರೀತಿಯ ತಿಂಡಿ ತಿನಿಸುಗಳನ್ನು ಗಣಪತಿಗೆ ಅರ್ಪಿಸಬೇಕು. ವ್ರತವು ಸಂಪೂರ್ಣವಾದ ನಂತರ ಉಪಾಯನ ದಾನವನ್ನು ನೀಡಿದಲ್ಲಿ ಸಂಪೂರ್ಣ ಫಲವು ದೊರೆಯುತ್ತದೆ. ಇದನ್ನು ಯಾವುದೇ ಜಾತಿ ಭೇದವಿಲ್ಲದೆ, ಲಿಂಗ ಭೇದವಿಲ್ಲದೆ ಆಚರಿಸಬಹುದಾಗಿದೆ. ಈ ವ್ರತವನ್ನು ಆಚರಿಸಿದಲ್ಲಿ ವಿದ್ಯಾಲಾಭ, ಧನಲಾಭ ಮತ್ತು ಮಾನಸಿಕ ಶಕ್ತಿ ದೊರೆಯುತ್ತದೆ. ಬಹು ಮುಖ್ಯವಾಗಿ ಮಾಡಬೇಕಾದ ಕೆಲಸ ಕಾರ್ಯಗಳಲ್ಲಿ ಎದುರಾಗುವ ಅಡ್ಡಿ ಆತಂಕಗಳು ದೂರವಾಗುತ್ತವೆ. ನಮ್ಮ ಸಂಕಲ್ಪಕ್ಕೆ ಅನುಗುಣವಾಗಿ ಪದಗಳನ್ನು ಪಡೆಯಬಹುದು ಎಂದು ಕಾಂಗ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ವಿನಾಯಕ ಚತುರ್ದಶಿಯಚಂದನ ದರ್ಶನವನ್ನು ಮಾಡಬಾರದು ಒಂದು ವೇಳೆ ಚಂದನ ದರ್ಶನವನ್ನು ಮಾಡಿದರೆ ಮಾಡಿದ ಪೂಜೆಯ ಫಲಗಳು ದೊರೆಯುವುದಿಲ್ಲ.ಅಲ್ಲದೆ ನಾವು ಮಾಡದ ತಪ್ಪಿಗೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಒಂದು ವೇಳೆ ಚಂದ್ರನ ದರ್ಶನವಾಗಲಿ ಈ ಕೆಳಕಂಡ ಕಥೆಯನ್ನು ಓದುವುದರಿಂದ ಅಥವಾ ಕೇಳುವುದರಿಂದ ಮುಂದಾಗುವ ತೊಂದರೆಗಳಿಂದ ಪಾರಾಗಬಹುದು. ಆಕಸ್ಮಿಕವಾಗಿ ಶ್ರೀಕೃಷ್ಣನು ಸಿದ್ಧಿ ವಿನಾಯಕ ವ್ರತದ ದಿನ ಚಂದನ ದರ್ಶನವನ್ನು ಮಾಡುತ್ತಾನೆ. ಆನಂತರ ದೇವನಾದರೂ ಸಹ ಅವನ ಮೇಲೆ ಕಳ್ಳತನದ ಅಪವಾದ ಒಂದು ಬರುತ್ತದೆ. ಅದರಿಂದ ಶ್ರೀಕೃಷ್ಣನು ಹೇಗೆ ಪಾರಾಗುತ್ತಾನೆ ಎಂಬುದು ಈ ಕಥೆಯಿಂದ ತಿಳಿದು ಬರುತ್ತದೆ. ಚಂದ್ರ ದರ್ಶನ ಮಾಡಿದವರು ಈ ಕಥೆಯನ್ನು ಕೇಳಿದರೆ ದೋಷ ಪರಿಹಾರವಾಗುತ್ತದೆ.

ಮಣಿಯ ಕಥೆಯನ್ನೂ ತಿಳಿದುಕೊಳ್ಳಿ

ಶ್ರೀ ಕೃಷ್ಣಪರಮಾತ್ಮನು ವಿಶ್ವಕರ್ಮನ ಸಹಾಯದಿಂದ ಸಮುದ್ರದ ಮಧ್ಯದಲ್ಲಿ ದ್ವಾರಕಾ ಪಟ್ಟಣವನ್ನು ನಿರ್ಮಿಸಿಕೊಳ್ಳುತ್ತಾನೆ. ಆ ನಗರದಲ್ಲಿ ಉಗ್ರ ಸೇನಾ ಎಂಬ ರಾಜನಿರುತ್ತಾನೆ. ಅವನ ಮಕ್ಕಳೇ ಸತ್ರಾಜಿತ ಮತ್ತು ಪ್ರಸೇನ. ಇವರಲ್ಲಿಸತ್ಯಾಜಿತನು ಸೂರ್ಯದೇವರ ಪರಮಭಕ್ತ. ಸೂರ್ಯನನ್ನು ಕುರಿತು ಕಠಿಣ ತಪಸ್ಸು ಮಾಡಿ ಸ್ಯಮಂತಕ ಮಣಿಯನ್ನು ಪಡೆಯುತ್ತಾನೆ. ಈ ಮಣಿಯನ್ನು ನೀಡುವಾಗ ಸೂರ್ಯನು ಒಂದು ವೇಳೆ ಇದನ್ನು ಶುಚಿ ಇಲ್ಲದವರು ಧರಿಸಿದರೆ ಅವರು ನಾಶ ಹೊಂದುತ್ತಾರೆ ಎಂದು ತಿಳಿಸಿ ಮಾಯವಾಗುತ್ತಾನೆ. ಶ್ರೀಕೃಷ್ಣನಿಗೆ ಈ ಮಣಿಯ ಮೇಲೆ ಆಸೆ ಇರುತ್ತದೆ. ಆದ್ದರಿಂದ ಸತ್ಯಾಜಿತನು ಇದನ್ನು ಪ್ರಸೇನನಿಗೆ ನೀಡುತ್ತಾನೆ. ಈ ಮಣಿಯನ್ನು ಪಡೆದ ನಂತರ ಒಮ್ಮೆ ಪ್ರಸೇನಾ ಮತ್ತು ಶ್ರೀಕೃಷ್ಣರು ಪರಸ್ಪರ ಭೇಟಿಯಾಗುತ್ತಾರೆ.

ಮರಳಿ ಹೋಗುವಾಗ ಸಿಂಹವೊಂದು ಎದುರಾಗಿ ಪ್ರಸೇನನನ್ನು ಕೊಂದು ಮಣಿಯನ್ನು ತೆಗೆದುಕೊಳ್ಳುತ್ತದೆ. ಇದನ್ನು ಗಮನಿಸಿದ ಜಾಂಬವಂತನೆಂಬ ಕರಡಿಯು ಸಿಂಹವನ್ನು ಕೊಂದು ಮಣಿಯನ್ನು ತೆಗೆದುಕೊಂಡು ಹೋಗಿ ತನ್ನ ಮಗುವಿರುವ ತೊಟ್ಟಿಲಿಗೆ ಕಟ್ಟುತ್ತೆ, ಆದರೆ ಉಳಿದವರು ಮಣಿಯ ಮೇಲಿನ ಆಸೆಗಾಗಿ ಶ್ರೀಕೃಷ್ಣನೇ ಪ್ರಸೇನನನ್ನು ಕೊಂದಿರುವುದಾಗಿ ಆಪಾದಿಸುತ್ತಾರೆ. ತನ್ನದಲ್ಲದ ತಪ್ಪನ್ನು ಎದುರಿಸಬೇಕಾಗುತ್ತದೆ. ಆದರೆ ಇದರ ನಿಜಾಂಶವನ್ನು ತಿಳಿಯಲು ಕೃಷ್ಣನು ಕಾಡಿಗೆ ಮರಳುತ್ತಾನೆ. ಪ್ರಸೇನಾ ಮತ್ತು ಅದರ ಕುದುರೆಯ ಶವವು ಅಲ್ಲಿ ಕಂಡು ಬರುತ್ತದೆ. ಅಲ್ಲಿ ಕಾಣುವ ಕರಡಿಯ ಹೆಜ್ಜೆಯ ಗುರುತನ್ನು ಅನುಸರಿಸಿ ಜಾಂಬವಂತನ ಅರಮನೆಗೆ ಬರುತ್ತಾನೆ. ಅಲ್ಲಿ ತೊಟ್ಟಿಲಿಗೆ ಈ ಮಣಿಯನ್ನು ಕಟ್ಟಿರುತ್ತಾನೆ.

ಆ ಮಣಿಯನ್ನು ಶ್ರೀಕೃಷ್ಣನಿಗೆ ಮರಳಿ ನೀಡಲು ತಿಳಿಸಿದಾಗ ಜಾಂಬವಂತನು ಒಪ್ಪುವುದಿಲ್ಲ. ಆಗ ಇವರಿಬ್ಬರ ನಡುವೆ ಘೋರವಾದ ಯುದ್ಧವೇ ನಡೆಯುತ್ತದೆ. ಸರಿಸಮಾನರಾದ ಇಬ್ಬರು ಯುದ್ಧದಲ್ಲಿ ಸೋಲುವುದಿಲ್ಲ. ಕೊನೆಗೆ ಶ್ರೀಕೃಷ್ಣನು ಶ್ರೀರಾಮನ ರೂಪವನ್ನು ತೋರುತ್ತಾನೆ. ಆಗ ಜಾಂಬವಂತನು ಶ್ರೀಕೃಷ್ಣನಿಗೆ ಸ್ಯಮಂತಕ ಮಣಿಯನ್ನು ನೀಡುವುದಲ್ಲದೆ ತನ್ನ ಮಗಳಾದ ಜಾಂಬವತಿಯನ್ನು ಕೊಟ್ಟು ವಿವಾಹ ಮಾಡುತ್ತಾನೆ. ಆನಂತರ ಶ್ರೀಕೃಷ್ಣನು ಸ್ಯಮಂತಕಮಣಿಯನ್ನು ಸತ್ರಾಜಿತನಿಗೆ ನೀಡುತ್ತಾನೆ.

ಆಗ ಸತ್ಯಾಜಿತನು ಆ ಮಣಿಯನ್ನು ಕೃಷ್ಣನಿಗೆ ನೀಡುವುದಲ್ಲದೆ ತನ್ನ ಮಗಳಾದ ಸತ್ಯಭಾಮೆಯನ್ನು ನೀಡಿ ವಿವಾಹ ಮಾಡುತ್ತಾನೆ. ಶ್ರೀ ನಾರದರು ಕೃಷ್ಣನ ಎಲ್ಲಾ ಕಷ್ಟಗಳಿಗೂ ಭಾದ್ರಪದ ಮಾಸದ ಶುಕ್ರಪಕ್ಷತ ಚೌತಿಯನ್ನು ಚಂದನ ದರ್ಶನಮಾಡಿದ್ದೇ ಕಾರಣ ಎಂದು ತಿಳಿಸುತ್ತಾರೆ. ಆದ್ದರಿಂದ ವರಸಿದ್ಧಿ ವಿನಾಯಕ ವ್ರತವನ್ನು ಮಾಡುವುದರಿಂದ ಇದರಿಂದ ಪಾರಾಗಬಹುದು ಎಂದು ತಿಳಿಸುತ್ತಾರೆ. ಅಲ್ಲದೆ ಈ ಕತೆಯನ್ನು ಕೇಳಿದರೆ ಬಾದ್ರಪದ ಮಾಸದ ಶುದ್ಧ ಚೌತಿಯಂದು ಚಂದ್ರನ ದರ್ಶನದಿಂದ ಉಂಟಾಗುವ ತೊಂದರೆಯಿಂದ ಪಾರಾಗಬಹುದು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.