ದೀಪಾವಳಿ 2024: ಶಾಸ್ತ್ರದ ಪ್ರಕಾರ ದೀಪ ಹಚ್ಚಲು ಯಾವ ಎಣ್ಣೆ ಬಳಸಬಾರದು; ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೀಪಾವಳಿ 2024: ಶಾಸ್ತ್ರದ ಪ್ರಕಾರ ದೀಪ ಹಚ್ಚಲು ಯಾವ ಎಣ್ಣೆ ಬಳಸಬಾರದು; ಇಲ್ಲಿದೆ ಮಾಹಿತಿ

ದೀಪಾವಳಿ 2024: ಶಾಸ್ತ್ರದ ಪ್ರಕಾರ ದೀಪ ಹಚ್ಚಲು ಯಾವ ಎಣ್ಣೆ ಬಳಸಬಾರದು; ಇಲ್ಲಿದೆ ಮಾಹಿತಿ

ದೀಪಾವಳಿ ಎಂದರೆ ದೀಪಗಳ ಹಬ್ಬ. ಈ ಹಬ್ಬವು ಕೆಟ್ಟತನದ ವಿರುದ್ಧ ಒಳ್ಳೆಯತನದ ವಿಜಯವನ್ನು ಸಂಕೇತಿಸುತ್ತದೆ. ದೀಪಾವಳಿಯಲ್ಲಿ ದೀಪ ಬೆಳಗಿಸುವುದು ವಾಡಿಕೆ. ದೀಪ ಹಚ್ಚಲು ಸಾಮಾನ್ಯವಾಗಿ ಎಣ್ಣೆಯನ್ನ ಬಳಸಲಾಗುತ್ತದೆ. ಆದರೆ ಶಾಸ್ತ್ರದ ಪ್ರಕಾರ ಯಾವ ಎಣ್ಣೆ ದೀಪ ಹಚ್ಚಲು ಸೂಕ್ತವಲ್ಲ ಎಂಬ ವಿವರ ಇಲ್ಲಿದೆ ನೋಡಿ.

ಶಾಸ್ತ್ರದ ಪ್ರಕಾರ ದೀಪ ಹಚ್ಚಲು ಯಾವ ಎಣ್ಣೆ ಬಳಸಬಾರದು; ಇಲ್ಲಿದೆ ಮಾಹಿತಿ
ಶಾಸ್ತ್ರದ ಪ್ರಕಾರ ದೀಪ ಹಚ್ಚಲು ಯಾವ ಎಣ್ಣೆ ಬಳಸಬಾರದು; ಇಲ್ಲಿದೆ ಮಾಹಿತಿ (PC: Canva)

ಬೆಳಕಿನ ಹಬ್ಬ ದೀಪಾವಳಿಯಲ್ಲಿ ದೀಪಗಳನ್ನು ಬೆಳಗಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಬ್ಬದಲ್ಲಿ ಮನೆಯ ಸುತ್ತಲೂ ದೀಪ ಬೆಳಗಿಸುವ ಮೂಲಕ ಅಜ್ಞಾನವನ್ನು, ಕತ್ತಲೆಯನ್ನು ದೂರ ಮಾಡಲಾಗುತ್ತದೆ. ಹಣತೆ ದೀಪಗಳು ದೀಪಾವಳಿಯ ಸಮಯದಲ್ಲಿ ಇಡೀ ಭಾರತವನ್ನು ಬೆಳಗುತ್ತವೆ ಎಂದರೂ ತಪ್ಪಾಗಲಿಕ್ಕಿಲ್ಲ.

ಇತ್ತೀಚಿನ ವರ್ಷಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಕ್ಯಾಂಡಲ್ ಬಳಕೆಯ ಪ್ರಮಾಣ ಹೆಚ್ಚಾದರೂ ಸಂಪ್ರದಾಯದ ಪ್ರಕಾರ ಹಣತೆ ದೀಪವನ್ನು ಈಗಲೂ ಬಳಸಲಾಗುತ್ತಿದೆ. ಹಣತೆ ದೀಪಕ್ಕೆ ಎಣ್ಣೆ ಹಚ್ಚಿ, ಅದರ ಬತ್ತಿ ಇಟ್ಟು ದೀಪ ಬೆಳಲಾಗುತ್ತದೆ. ಹಿಂದೂ ಧರ್ಮದಲ್ಲಿ ದೀಪ ಹಚ್ಚುವುದಕ್ಕೆ ದೀಪಾವಳಿ ಮಾತ್ರವಲ್ಲ ಬೇರೆ ದಿನಗಳಲ್ಲಿ ವಿಶೇಷ ಮಹತ್ವವಿದೆ.

ಹಿಂದೂಗಳ ಮನೆಗಳಲ್ಲಿ ಪ್ರತಿದಿನ ದೇವರಿಗೆ ದೀಪ ಹಚ್ಚುವ ಪದ್ಧತಿ ಇದೆ. ಯಾವುದೇ ಪೂಜೆ, ಪುನಸ್ಕಾರ, ಶುಭಕಾರ್ಯದ ಆರಂಭಕ್ಕೂ ಮುನ್ನ ದೀಪ ಬೆಳಗುವ ಸಂಪ್ರದಾಯ ಹಿಂದೂಗಳಲ್ಲಿದೆ. ಆದರೆ ದೀಪಾವಳಿ ಸಮಯದಲ್ಲಿ ಹೆಚ್ಚು ಹೆಚ್ಚು ದೀಪಗಳನ್ನು ಬಳಸಲಾಗುತ್ತದೆ. ಆದರೆ ದೀಪ ಹಚ್ಚುವುದಕ್ಕೂ ಕೆಲವೊಂದು ಕ್ರಮಗಳಿವೆ. ಅದರಲ್ಲಿ ದೀಪಕ್ಕೆ ಬಳಸುವ ಎಣ್ಣೆ ಕೂಡ ಮುಖ್ಯವಾಗುತ್ತದೆ. ದೀಪಕ್ಕೆ ಯಾವ ಎಣ್ಣೆ ಬಳಸುವುದು ಸೂಕ್ತ, ಯಾವ ಎಣ್ಣೆ ಬಳಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ತುಪ್ಪದ ದೀಪಕ್ಕೆ ವಿಶೇಷ ಮಹತ್ವವಿದೆ. ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ದೀಪ ಹಚ್ಚಲು ಎಳ್ಣೆಣ್ಣೆ ಬಳಸುತ್ತಾರೆ. ಈ ಎಲ್ಲವೂ ಆಧ್ಮಾತಿಕ ನೆಲೆಗಟ್ಟಿನಲ್ಲೂ ವಿಶೇಷ ಪ್ರಾಮುಖ್ಯವನ್ನು ಹೊಂದಿವೆ.

ಆದರೆ ದೀಪ ಹಚ್ಚುವಾಗ ಕೆಲವು ಎಣ್ಣೆಗಳನ್ನು ಬಳಸಬಾರದು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಬಳಕೆಯಲ್ಲಿರುವ ಈ ಎಣ್ಣೆಗಳನ್ನು ದೀಪ ಹಚ್ಚಲು ಬಳಸಬಾರದು ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ತುಂಬಿರುತ್ತದೆ ಎಂದು ಕೂಡ ಹೇಳಲಾಗುತ್ತದೆ. ಹಾಗಾದರೆ ದೀಪ ಹಚ್ಚಲು ಯಾವ ಎಣ್ಣೆ ಬಳಸಬಾರದು ನೋಡಿ.

ಕಡಲೆಎಣ್ಣೆ

ಶೇಂಗಾ ಎಣ್ಣೆ ಎಂದೂ ಕರೆಯುವ ಈ ಎಣ್ಣೆ ಆಹಾರ ಖಾದ್ಯಗಳಿಗೆ ರುಚಿ ನೀಡುತ್ತದೆ. ಆದರೆ ಇದನ್ನು ಯಾವುದೇ ಕಾರಣಕ್ಕೂ ದೀಪ ಹಚ್ಚಲು ಬಳಸಬಾರದು.

ಸೂರ್ಯಕಾಂತಿ ಎಣ್ಣೆ

ಭಾರತದಲ್ಲಿ ಅಡುಗೆಗೆ ಹೆಚ್ಚು ಬಳಸುವ ಎಣ್ಣೆ ಸೂರ್ಯಕಾಂತಿ ಎಣ್ಣೆ. ಇದನ್ನು ಆರೋಗ್ಯಕ್ಕೂ ಉತ್ತಮ ಎಂದು ಹೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಇದನ್ನು ದೇವರ ದೀಪ ಹಚ್ಚಲು ಬಳಸಬೇಡಿ.

ತಾಳೆ ಎಣ್ಣೆ

ತಾಳೆ ಎಣ್ಣೆಯನ್ನು ಕೆಲವು ಕಡೆ ಪೂಜೆಗೆ ಅಥವಾ ದೀಪ ಹಚ್ಚಲು ಬಳಸಲಾಗುತ್ತದೆ. ಆದರೆ ತಾಳೆ ಎಣ್ಣೆಯು ದರ ಕಡಿಮೆಯಾದರೂ ದೀಪ ಹಚ್ಚಲು ಯೋಗ್ಯವಲ್ಲ.

ಹತ್ತಿ ಎಣ್ಣೆ

ಹತ್ತಿ ಎಣ್ಣೆಯ ಬಳಕೆಯೂ ಕೂಡ ದೀಪ ಹಚ್ಚಲು ಒಳ್ಳೆಯದಲ್ಲ. ಶಾಸ್ತ್ರದ ಪ್ರಕಾರ ದೀಪಾವಳಿಗೆ ಮಾತ್ರವಲ್ಲ ಯಾವುದೇ ಶುಭ ಸಂದರ್ಭಗಳಲ್ಲಿ ದೀಪ ಹಚ್ಚುವಾಗಲೂ ಹತ್ತಿ ಎಣ್ಣೆ ಬಳಕೆ ಉತ್ತಮವಲ್ಲ.

ಇದರೊಂದಿಗೆ ಸಸ್ಯಜನ್ಯ ಎಣ್ಣೆ, ರೈಸ್ ಬ್ರಾನ್ ಆಯಿಲ್, ಸಿಂಥೆಟಿಕ್ ಎಣ್ಣೆಗಳನ್ನು ಕೂಡ ದೀಪ ಹಚ್ಚಲು ಬಳಸಬಾರದು ಬಳಸಬಾರದು ಎಂದು ಶಾಸ್ತ್ರ ಹೇಳುತ್ತದೆ.

(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.