ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜುಲೈ 11 ಸಂಖ್ಯಾಶಾಸ್ತ್ರ ಭವಿಷ್ಯ; ಯಾವ ರಾಡಿಕ್ಸ್‌ ನಂಬರ್‌ನವರಿಗೆ ಈ ದಿನ ಯಾವ ರೀತಿ ಫಲ ದೊರೆಯಲಿದೆ?

ಜುಲೈ 11 ಸಂಖ್ಯಾಶಾಸ್ತ್ರ ಭವಿಷ್ಯ; ಯಾವ ರಾಡಿಕ್ಸ್‌ ನಂಬರ್‌ನವರಿಗೆ ಈ ದಿನ ಯಾವ ರೀತಿ ಫಲ ದೊರೆಯಲಿದೆ?

ಜ್ಯೋತಿಷ್ಯದಂತೆಯೇ, ಸಂಖ್ಯಾಶಾಸ್ತ್ರವು ಸಹ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ತಿಳಿಸುತ್ತದೆ. ಪ್ರತಿ ಹೆಸರಿನ ಪ್ರಕಾರ ರಾಶಿಚಕ್ರ ಚಿಹ್ನೆ ಇರುವಂತೆಯೇ, ಸಂಖ್ಯಾಶಾಸ್ತ್ರದಲ್ಲಿ ಪ್ರತಿ ಸಂಖ್ಯೆಗೆ ಅನುಗುಣವಾಗಿ ಸಂಖ್ಯೆಗಳಿವೆ. ಸಂಖ್ಯಾಶಾಸ್ತ್ರದ ಪ್ರಕಾರ ಜುಲೈ 11 ರಂದು ಯಾವ ರಾಡಿಕ್ಸ್‌ ನಂಬರ್‌ನವರಿಗೆ ಯಾವ ರೀತಿಯ ಫಲ ದೊರೆಯಲಿದೆ ನೋಡೋಣ.

ಜುಲೈ 11 ಸಂಖ್ಯಾಶಾಸ್ತ್ರ ಭವಿಷ್ಯ; ಯಾವ ರಾಡಿಕ್ಸ್‌ ನಂಬರ್‌ನವರಿಗೆ ಈ ದಿನ ಯಾವ ರೀತಿ ಫಲ ದೊರೆಯಲಿದೆ?
ಜುಲೈ 11 ಸಂಖ್ಯಾಶಾಸ್ತ್ರ ಭವಿಷ್ಯ; ಯಾವ ರಾಡಿಕ್ಸ್‌ ನಂಬರ್‌ನವರಿಗೆ ಈ ದಿನ ಯಾವ ರೀತಿ ಫಲ ದೊರೆಯಲಿದೆ?

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಸಂಖ್ಯೆಯನ್ನು ಕಂಡುಹಿಡಿಯಲು, ನಿಮ್ಮ ಜನ್ಮ ದಿನಾಂಕ, ತಿಂಗಳು ಮತ್ತು ವರ್ಷವನ್ನು ಯುನಿಟ್ ಅಂಕೆಗೆ ಸೇರಿಸಿ ಮತ್ತು ಬರುವ ಸಂಖ್ಯೆ ನಿಮ್ಮ ಅದೃಷ್ಟದ ಸಂಖ್ಯೆಯಾಗಿದೆ. ಉದಾಹರಣೆಗೆ ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 7 ಅನ್ನು ಹೊಂದಿರುತ್ತಾರೆ. ಜುಲೈ 11 ರಂದು ಯಾವ ರಾಡಿಕ್ಸ್‌ ನಂಬರ್‌ನವರ ಭವಿಷ್ಯ ಯಾವ ರೀತಿ ಇದೆ ತಿಳಿಯೋಣ.

ರಾಡಿಕ್ಸ್ 1

ರಾಡಿಕ್ಸ್ 1 ಹೊಂದಿರುವ ಜನರು ಉತ್ತಮ ಆರೋಗ್ಯ ಹೊಂದಿರುತ್ತಾರೆ. ನಿಮ್ಮ ಕೆಲಸಕ್ಕೆ ಕುಟುಂಬದಿಂದ ಬೆಂಬಲ ಸಿಗಲಿದೆ. ನಿಮ್ಮಲ್ಲಿ ಕೆಲವರು ಆಸ್ತಿಯಿಂದ ಲಾಭ ಗಳಿಸುವ ಸಾಧ್ಯತೆಯಿದೆ. ಪ್ರಯಾಣದ ಸಾಧ್ಯತೆಗಳಿವೆ. ನೀವು ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿಯಾಗಬಹುದು.

ರಾಡಿಕ್ಸ್‌ 2

ರಜಾದಿನವನ್ನು ಯೋಜಿಸುವವರಿಗೆ ಇದು ಉತ್ತಮ ಸಮಯ. ಕೆಲವರಿಗೆ ತಾವು ಬಯಸುತ್ತಿದ್ದ ಸ್ಥಳಕ್ಕೆ ವರ್ಗಾವಣೆ ದೊರೆಯಬಹುದು. ನಿಮ್ಮಲ್ಲಿ ಕೆಲವರು ಹಿಂದಿನ ಹೂಡಿಕೆಗಳಿಂದ ಹೆಚ್ಚು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯುವ ಸಾಧ್ಯತೆಯಿದೆ. ಶನಿಯ ಸಂಚಾರದಿಂದ ಈ 3 ರಾಶಿಯವರು ಶ್ರೀಮಂತರಾಗುತ್ತಾರೆ, ನವೆಂಬರ್‌ವರೆಗಿನ ಸಮಯ ಸುವರ್ಣ ಅವಧಿಯಾಗಿದೆ.

ರಾಡಿಕ್ಸ್ 3‌

ಫಿಟ್ನೆಸ್ ಬಗ್ಗೆ ಜಾಗರೂಕರಾಗಿರುವಿರಿ, ಆರ್ಥಿಕ ಲಾಭ ಇದೆ. ಕಚೇರಿ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಆಲೋಚನೆಗಳು ಧನಾತ್ಮಕ ಫಲಿತಾಂಶಗಳನ್ನು ನೀಡಲಿವೆ. ಕುಟುಂಬದಲ್ಲಿ ಎಲ್ಲವೂ ಸಂತೋಷದಿಂದ ಕೂಡಿರುತ್ತದೆ. ಭೂಮಿ, ಕಟ್ಟಡ, ವಾಹನ ಖರೀದಿ ಸಾಧ್ಯತೆ

ರಾಡಿಕ್ಸ್‌ 4

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರು ಯಶಸ್ಸನ್ನು ಪಡೆಯಬಹುದು. ನೀವು ಕೆಲಸದ ವಿಚಾರದಲ್ಲಿ ಪ್ರಶಂಸೆ ದೊರೆಯಲಿದೆ.

ರಾಡಿಕ್ಸ್ 5

ಇಂದು ರಾಡಿಕ್ಸ್ ಸಂಖ್ಯೆ 5 ಹೊಂದಿರುವ ಜನರು ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಹೂಡಿಕೆಗೆ ಇಂದು ಉತ್ತಮ ಸಮಯ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡಲು ಸಾಕಷ್ಟು ಹಣ ದೊರೆಯುತ್ತದೆ. ಉದ್ಯಮಿಗಳು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ.

ರಾಡಿಕ್ಸ್‌ 6

ಕೆಲವರ ಕೆಲಸಗಳಿಗೆ ತೊಂದರೆಯಾಗಬಹುದು. ಕೆಲಸದ ಸ್ಥಳದಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲವನ್ನು ಮುಗಿಸಿಲು ಶ್ರಮ ಪಡಲಿದ್ದೀರಿ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಹೊಸ ಮನೆ ಕೊಳ್ಳುವ ನಿಮ್ಮ ಬಹಳ ದಿನಗಳ ಆಸೆ ನೆರವೇರಲಿದೆ.

ರಾಡಿಕ್ಸ್‌ 7

ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಇಂದು ನಿಮಗೆ ಉತ್ತಮ ಸಮಯ. ನಿಮ್ಮಲ್ಲಿ ಕೆಲವರ ಆರೋಗ್ಯ ಸುಧಾರಿಸುತ್ತದೆ. ಕೆಲವರು ಕುಟುಂಬ ಸಮೇತ ಪ್ರವಾಸಕ್ಕೆ ಹೋಗಲಿದ್ದೀರಿ. ರಿಯಲ್ ಎಸ್ಟೇಟ್ ಉತ್ತಮ ಆದಾಯವನ್ನು ನೀಡುತ್ತದೆ.

ರಾಡಿಕ್ಸ್‌ 8

ಇಂದು ನೀವು ಖರ್ಚು ಮಾಡುವುದಕ್ಕಿಂತ ಉಳಿತಾಯ ಮಾಡುವತ್ತ ಗಮನ ಹರಿಸುವಿರಿ. ಹಣಕಾಸಿನ ವಿಷಯದಲ್ಲಿ ಕಟ್ಟು ನಿಟ್ಟಾಗಿರುತ್ತೀರಿ. ಹವಾಮಾನ ವೈಪರೀತ್ಯದಿಂದ ಆರೋಗ್ಯ ಏರು ಪೇರಾಗುವ ಸಾಧ್ಯತೆ ಇದೆ, ಎಚ್ಚರಿಕೆಯಿಂದಿರಿ. ಕುಟುಂಬಕ್ಕೆ ಗುಣಮಟ್ಟದ ಸಮಯ ನೀಡಲಿದ್ದೀರಿ.

ರಾಡಿಕ್ಸ್‌ 9

ಇಂದು ನಿಮಗೆ ಶುಭದಿನವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಗಳಿಕೆಯ ಹೊಸ ಮಾರ್ಗಗಳನ್ನು ತೆರೆಯಲು ನೀವು ಮಾಡುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.