ರಾಮಾಯಣದಿಂದ ಬದಲಾಗುತ್ತದೆ ನಮ್ಮ ಜೀವನ; ಶಿವನಿಂದ ಶಾಪ ಪಡೆದು ರಾಮಾಯಣ ಓದಿ ಶಾಪ ವಿಮುಕ್ತನಾದ ಸೌದಾಸನ ಕಥೆ-hindu mythology people can come out of all obstacles in life by reading ramayana hindu culture religious news sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣದಿಂದ ಬದಲಾಗುತ್ತದೆ ನಮ್ಮ ಜೀವನ; ಶಿವನಿಂದ ಶಾಪ ಪಡೆದು ರಾಮಾಯಣ ಓದಿ ಶಾಪ ವಿಮುಕ್ತನಾದ ಸೌದಾಸನ ಕಥೆ

ರಾಮಾಯಣದಿಂದ ಬದಲಾಗುತ್ತದೆ ನಮ್ಮ ಜೀವನ; ಶಿವನಿಂದ ಶಾಪ ಪಡೆದು ರಾಮಾಯಣ ಓದಿ ಶಾಪ ವಿಮುಕ್ತನಾದ ಸೌದಾಸನ ಕಥೆ

ಹಿಂದೂಗಳ ಪವಿತ್ರ ಗ್ರಂಥ ಪುಸ್ತಕ ಮಾತ್ರವಲ್ಲ, ಅದು ಬಹಳ ಪೂಜ್ಯನೀಯ. ರಾಮಾಯಣ ಓದುವುದರಿಂದ, ಕೇಳುವುದರಿಂದ ಜೀವನದ ಬಹುತೇಕ ಕಷ್ಟಗಳು ನಿವಾರಣೆ ಆಗುತ್ತದೆ. ಸೌದಾಸನೆಂಬ ವ್ಯಕ್ತಿ , ರಾಕ್ಷಸನಾಗೆಂದು ಶಿವನಿಂದ ಶಾಪ ಪಡೆದು ನಂತರ ರಾಮಾಯಣ ಓದಿ ಶಾಪ ವಿಮುಕ್ತನಾದ ಕಥೆ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ರಾಮಾಯಣದಿಂದ ಬದಲಾಗುತ್ತದೆ ನಮ್ಮ ಜೀವನ; ಶಿವನಿಂದ ಶಾಪ ಪಡೆದು ರಾಮಾಯಣ ಓದಿ ಶಾಪ ವಿಮುಕ್ತನಾದ ಸೌದಾಸನ ಕಥೆ
ರಾಮಾಯಣದಿಂದ ಬದಲಾಗುತ್ತದೆ ನಮ್ಮ ಜೀವನ; ಶಿವನಿಂದ ಶಾಪ ಪಡೆದು ರಾಮಾಯಣ ಓದಿ ಶಾಪ ವಿಮುಕ್ತನಾದ ಸೌದಾಸನ ಕಥೆ

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥ. ರಾಮಾಯಣ ಎನ್ನುವುದು ಕೇವಲ ಪುಸ್ತಕವಲ್ಲ, ಅದು ಭಾರತೀಯರಿಗೆ ಬಹಳ ಪೂಜ್ಯನೀಯವಾದುದು. ರಾಮಾಯಣವನ್ನು ಶ್ರವಣ ಅಥವಾ ವಾಚನ ಮಾಡುವುದರಿಂದ ಜೀವನದಲ್ಲಿ ಸಕಲ ಪಾಪಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ ಇದೆ.

ಕಲಿಯುಗದ ಸಮಸ್ತ ಜನರ ಕಷ್ಟವನ್ನು ಬಗೆಹರಿಸುವ ದೈವ ಶ್ರೀ ರಾಮಚಂದ್ರ ಮಾತ್ರ ಎಂಬುದು ವಾಲ್ಮೀಕಿ ಮಹರ್ಷಿಗಳ ಅಭಿಮತ. ರಾಮಾಯಣ ಓದುವುದರಿಂದ ಎಲ್ಲಾ ರೀತಿಯ ಪಾಪ ಕರ್ಮಗಳಿಗೆ ಪ್ರಾಯಶ್ಚಿತ ದೊರೆಯುತ್ತದೆ. 

ರಾಮಾಯಣ ಕೇಳುವುದರಿಂದ ಸಕಲ ಪಾಪಗಳಿಂದ ಮುಕ್ತಿ

ಮಹಾರ್ಷಿ ನಾರದರು ಮಹಾಕಾವ್ಯವಾದ ರಾಮಾಯಣವನ್ನು ಮೊದಲು ಕೇಳುತ್ತಾರೆ. ರಾಮಾಯಣವನ್ನು ಓದುವುದರಿಂದ ಕೇಳುವುದರಿಂದ ದುಷ್ಟ ಗ್ರಹಗಳ ಬಾಧೆಯಿಂದ ದೂರವಾಗಬಹುದು ಎಂಬುದು ಸತ್ಯವಾದ ಮಾತು. ಇಷ್ಟು ಮಾತ್ರವಲ್ಲದೆ ಹಣಕಾಸಿನ ತೊಂದರೆಯೂ ದೂರವಾಗುತ್ತದೆ. ಮೊದಲು ಸರಿಯಾದ ಸಂಕಲ್ಪ ಮಾಡಿಕೊಂಡು ರಾಮಾಯಣವನ್ನು ಓದುವುದಾಗಲಿ ಅಥವಾ ಕೇಳುವುದಾಗಲಿ ಮಾಡಿದರೆ ಮನಸ್ಸಿನ ಆಸೆಗಳೆಲ್ಲಾ ಈಡೇರುತ್ತದೆ.

ಕಾರ್ತಿಕ ಮಾಸ, ಚೈತ್ರ ಮಾಸ ಮತ್ತು ಮಾಘ ಮಾಸಗಳಲ್ಲಿ ರಾಮಾಯಣ ಓದುವುದರಿಂದ ಅಥವಾ ಕೇಳುವುದರಿಂದ ಶುಭಫಲಗಳನ್ನು ಪಡೆಯಬಹುದಾಗಿದೆ. ರಾಮಾಯಣವನ್ನು ಓದುವ ವೇಳೆ ಶ್ರೀರಾಮಚಂದ್ರ ಪಟ್ಟಾಭಿಷೇಕದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕಾಗುತ್ತದೆ. ಇದರಿಂದಾಗಿ ಜೀವನದ ಎಲ್ಲಾ ರೀತಿಯ ಅಡೆತಡೆಗಳು ದೂರವಾಗುತ್ತವೆ. ಪುರಾಣದ ಕಥೆಯೊಂದರ ಪ್ರಕಾರ ಸೌದಾಸನೆಂಬ ವ್ಯಕ್ತಿಯು ಶಿವನ ಶಾಪದಿಂದ ರಾಕ್ಷಸನ ರೂಪವನ್ನು ಪಡೆದುಕೊಳ್ಳುತ್ತಾನೆ. ಆದರೆ ಅಕಸ್ಮಿಕವಾಗಿ ಶ್ರೀ ರಾಮಾಯಣದ ಕಥೆಯನ್ನು ಕೇಳುವ ಕಾರಣ ಶಾಪ ವಿಮುಕ್ತನಾಗಿ ಮಾನವ ರೂಪವನ್ನು ಮರಳಿ ಪಡೆಯುತ್ತಾನೆ.

ಸೋಮದತ್ತನಂಬ ಶಿವಭಕ್ತನ ಕಥೆ

ಸೋಮದತ್ತ ಎಂಬಾತ, ಕೃತ ಯುಗದಲ್ಲಿ ಎಲ್ಲರಿಗೂ ಉಪಕಾರ ಮಾಡುತ್ತಾ, ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿರುತ್ತಾನೆ. ಇವನ ಮತ್ತೊಂದು ಹೆಸರು ಸೌದಾಸ. ಈತ ಗೌತಮ ಮಹಾಋಷಿಗಳ ಶಿಷ್ಯನಾಗಿ ಸಕಲ ವೇದಗಳಲ್ಲಿ ಅಧ್ಯಯನವನ್ನು ಪೂರ್ಣಗೊಳಿಸುತ್ತಾನೆ. ಗೌತಮರಿಂದ ಸಂಪೂರ್ಣ ಜ್ಞಾನ ಪಡೆದುಕೊಳ್ಳುತ್ತಾನೆ. ಇವನು ಮಹಾನ್ ಶಿವ ಭಕ್ತ. ಒಮ್ಮೆ ಶಿವನ ಪೂಜೆ ಮಾಡುವ ವೇಳೆ ಗೌತಮರು ಶಿಷ್ಯನ ಬಳಿ ಆಗಮಿಸುತ್ತಾರೆ. ಪೂಜೆಯಲ್ಲಿ ತಲ್ಲೀನರಾದ ಸೌದಾಸನು ಎದ್ದು ತನ್ನ ಗುರುಗಳಿಗೆ ಗೌರವ ನೀಡುವುದಿಲ್ಲ ಆದರೆ ಗೌತಮರು ತಮ್ಮ ಶಿಷ್ಯನ ಬಗ್ಗೆ ತಿಳಿದಿದ್ದ ಕಾರಣ ಕೋಪಗೊಳ್ಳುವುದಿಲ್ಲ. ಅದರ ಬದಲು ತಮ್ಮ ಶಿಷ್ಯನ ರೀತಿ ನೀತಿಗಳು ಮತ್ತು ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುವ ರೀತಿಯನ್ನು ಕಂಡು ಸಂತೋಷ ಗೊಳ್ಳುತ್ತಾರೆ. ತಡವೆನಿಸಿದರೂ ಅವನಿಂದ ಎಲ್ಲಾ ರೀತಿಯ ಗೌರವ ಪಡೆಯುತ್ತಾರೆ. ಆದರೆ ಇದರಿಂದ ಸಮಾಧಾನಗೊಳ್ಳದ ಸ್ವಯಂ ಪರಮೇಶ್ವರನೇ ಸೌದಾಸನು ಗೌತಮನನ್ನು ನಡೆಸಿಕೊಂಡ ಪರಿಯನ್ನು ಇಷ್ಟಪಡುವುದಿಲ್ಲ. ಈ ಕಾರಣದಿಂದಾಗಿ ಕ್ರೋಧಗೊಂಡ ಶಿವನು ಸೌದಾಸನಿಗೆ ಭೂಲೋಕದಲ್ಲಿ ರಾಕ್ಷಸನಾಗಿ ಜನ್ಮಕಾಳುವಂತೆ ಶಾಪ ನೀಡುತ್ತಾನೆ.

ಇದರಿಂದ ಸೌದಾಸನು ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ. ರಾಕ್ಷಸನಾಗಿ ಜನ್ಮ ತಾಳಿದಮೇಲೆ ಶಿವನ ಪೂಜೆ ಮಾಡದೆ ಬಾಳುವುದಾದರೂ ಹೇಗೆ ಎಂಬ ಭಯ ಅವನಲ್ಲಿ ಕಾಡುತ್ತದೆ. ಕೊನೆಗೆ ಪರಮೇಶ್ವರನನ್ನು ಕುರಿತು ಪರಮೇಶ್ವರ ನೀನು ಸಕಲವನ್ನು ತಿಳಿದಿರುವವನು ನನಗೆ ತಿಳಿಯದಂತೆ ದೊಡ್ಡ ತಪ್ಪನ್ನೇ ಮಾಡಿದ್ದೇನೆ. ಈ ತಪ್ಪನ್ನು ಮನ್ನಿಸು ಎಂದು ಕೇಳಲು ಸಹ ನನ್ನಿಂದ ಸಾಧ್ಯವಾಗುತ್ತಿಲ್ಲ. ಆದರೆ ನಿನ್ನನ್ನು ಪೂಜಿಸದೆ ನಾನು ಹೇಗೆ ಜೀವಿಸಬಲ್ಲೆ. ಆದ ಕಾರಣ ಇದಕ್ಕೆ ನೀನೇ ಒಂದು ಪರಿಹಾರ ತಿಳಿಸಿಬಿಡು ಎಂದು ಕೇಳುತ್ತಾನೆ. ಆದರೆ ಶಿವನು ಯಾವುದೇ ರೀತಿ ಸ್ಪಂದಿಸುವುದಿಲ್ಲ. 

ಶಾಪ ವಿಮೋಚನೆಯ ಮಾರ್ಗವನ್ನು ಶಿಷ್ಯನಿಗೆ ತಿಳಿಸಿದ ಗೌತಮ ಮುನಿಗಳು

ಆಗ ಸ್ವಯಂ ಗೌತಮ ಮುನಿಗಳೇ ತನ್ನ ಶಿಷ್ಯ ಸೌದಾಸನಿಗೆ ಕಾರ್ತಿಕ ಮಾಸದಲ್ಲಿ ಶುಕ್ಲಪಕ್ಷದಲ್ಲಿ ಪಾಡ್ಯದಿಂದ ನವಮಿಯವರೆಗೂ ಒಂಬತ್ತು ದಿನಗಳ ಕಾಲ ರಾಮಾಯಣವನ್ನು ಪಾರಾಯಣ ಮಾಡಬೇಕು. ಆಗ ಮಾತ್ರ ಪರಮೇಶ್ವರನು ನೀಡಿರುವ ಶಾಪ ವಿಮುಕ್ತಿ ಆಗುತ್ತದೆ. ಈ ಶಾಪವು ಹನ್ನೆರಡು ವರ್ಷಗಳು ಮಾತ್ರ ಇರುತ್ತದೆ ಆನಂತರ ನೀನು ಶಾಪವಿಮುಕ್ತನಾಗುವೆ ಎಂದು ಹೇಳುತ್ತಾರೆ. ಗುರುಗಳ ಮತಿನಂತೆ ಸೌದಾಸನು ರಾಮನ ಪೂಜೆ ಮಾಡಿ, 9 ದಿನಗಳು ರಾಮಾಯಣವನ್ನು ಶ್ರವಣ ಮಾಡುತ್ತಾನೆ. ಆಗ ಅವನ ಶಾಪವು ದೂರವಾಗಿ ಮಾನವನ ಜನ್ಮ ಮರಳಿ ದೊರೆಯುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.