Personality Test: ಮೂಗು ಚೂಪಾಗಿದ್ದರೆ ಅದೃಷ್ಟನಾ? ಮೂಗಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ-horoscope astrology sharp shape of nose character is it good or bad prediction sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Personality Test: ಮೂಗು ಚೂಪಾಗಿದ್ದರೆ ಅದೃಷ್ಟನಾ? ಮೂಗಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ

Personality Test: ಮೂಗು ಚೂಪಾಗಿದ್ದರೆ ಅದೃಷ್ಟನಾ? ಮೂಗಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ

ಮೂಗು ಚೂಪಾಗಿದ್ದು, ನೋಡೋಕೆ ಚಿಕ್ಕದಾಗಿ ಕಾಣುತ್ತಿದ್ದರೆ ಇವರ ವ್ಯಕ್ತಿತ್ವ ಇತರರಿಗಿಂತ ಭಿನ್ನವಾಗಿರುತ್ತದೆ. ಇವರು ಜೀವನದಲ್ಲಿ ಎಂತಹ ಸಂದರ್ಭ ಬಂದರೂ ಘನತೆ ಗೌರವವನ್ನು ಕಾಪಾಡಿಕೊಂಡು ಬರುತ್ತಾರೆ. ಇವರ ಬಗ್ಗೆ ಮತ್ತಷ್ಟು ಆಕಸ್ತಿಕರ ವಿಚಾರಗಳು ಇಲ್ಲಿವೆ. (ಬರಹ: ಜ್ಯೋತಿಷಿ ಎಚ್. ಸತೀಶ್)

ಚೂಪಾದ ಮೂಗಿನ ಆಕಾರ ಇರುವವರು ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ತಿಳಿಯಿರಿ
ಚೂಪಾದ ಮೂಗಿನ ಆಕಾರ ಇರುವವರು ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ತಿಳಿಯಿರಿ

ಮನುಷ್ಯನ ಕಣ್ಣು, ಕಿವಿ, ಮೂಗು, ಹಣೆ, ಕೈಬೆರಳುಗಳು, ಕಾಲು ಬೆರಳುಗಳಿಂದ ಅವರ ವ್ಯಕ್ತಿತ್ವವನ್ನು ತಿಳಿಯಬಹುದು. ಅದರಲ್ಲೂ ಮೂಗು ಯಾವ ಆಕಾರದಲ್ಲಿ ಇದ್ದರೆ ಏನೆಲ್ಲಾ ಲಾಭಗಳಿವೆ, ಅವರ ವ್ಯಕ್ತಿತ್ವ ಅಂತಹದು ಎಂಬುದನ್ನು ಇಲ್ಲಿ ತಿಳಿಯೋಣ. ಕೆಲವರ ಮೂಗು ಚೂಪಾಗಿದ್ದರು ಅಳತೆಯಲ್ಲಿ ಚಿಕ್ಕದಾಗಿರುತ್ತದೆ. ಇವರು ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ನಿಸ್ಸೀಮರು. ತತ್ವಜ್ಞಾನಿಗಳು ಕೇವಲ ಬುದ್ದಿವಾದ ಹೇಳದೆ ತಮ್ಮ ಜೀವನದಲ್ಲಿಯೂ ಒಳ್ಳೆಯ ರೀತಿ ನೀತಿಗಳನ್ನು ಅಳವಡಿಸಿಕೊಳ್ಳುತ್ತಾರೆ. ಎಂತಹ ಸಂದರ್ಭ ಬಂದರೂ ಗೌರವ ಮತ್ತು ಘನತೆಯನ್ನು ಕಾಪಾಡಿಕೊಂಡು ಜೀವನ ನಡೆಸುತ್ತಾರೆ. ಆರಂಭಿಸಿದ ಯಾವುದೇ ಕೆಲಸ ಕಾರ್ಯಗಳಾದರೂ ಮೇಲುಗೈ ಸಾಧಿಸುತ್ತಾರೆ. ಬೇರೆಯವರ ಅಧೀನದಲ್ಲಿ ಕೆಲಸ ಮಾಡಲು ಇವರ ಮನಸ್ಸು ಒಪ್ಪುವುದಿಲ್ಲ. ಇವರಿಗೆಸಂಬಂಧಿಸಿ ಜೀರ್ಣಾಂಗಕ್ಕೆ ಸಂಬಂಧಿಸಿದ ತೊಂದರೆ ಸದಾ ಕಾಡುತ್ತದೆ.

ಮೂಗು ಚೂಪಾಗಿರುವವರು ಹೀಗೂ ಇರ್ತಾರಾ?

ಮೂಗು ಚೂಪಾಗಿ ನೋಡೋಕೆ ಸಣ್ಣ ಸಣ್ಣದಾಗಿ ಇದ್ದರೆ ಇಂಥವರು ಚಿಕ್ಕ ವಯಸ್ಸಿನಲ್ಲಿ ಬಹುಮುಖ ಪ್ರತಿಭೆಯಾಗಿರುತ್ತಾರೆ. ಕೇವಲ ಕುಟುಂಬದವರಲ್ಲದೆ ನೆರೆಹೊರೆಯವರ ಪ್ರೀತಿ-ವಿಶ್ವಾಸವನ್ನು ಗಳಿಸುತ್ತಾರೆ. ವಿದ್ಯಾಭ್ಯಾಸದಲ್ಲಿ ಆರಂಭದಲ್ಲಿ ಹಿಂದುಳಿದರು ಕ್ರಮೇಣವಾಗಿ ಉನ್ನತಮಟ್ಟವನ್ನು ತಲುಪುತ್ತಾರೆ. ಕುಟುಂಬದ ಹಿರಿಯರ ಕೆಲಸ ಕಾರ್ಯಗಳಲ್ಲಿ ಸಹಕಾರ ನೀಡುವ ಇವರು ಬಾಲ್ಯದಲ್ಲಿಯೇ ಹಣ ಗಳಿಸಲು ಆರಂಭಿಸುತ್ತಾರೆ.

ಇವರಿಗೆ ವಿದ್ಯಾಭ್ಯಾಸವು ಕಡಿಮೆ ಮಟ್ಟದಲ್ಲಿ ಇದ್ದರೂ ಬುದ್ಧಿ ಶಕ್ತಿಯು ಅಪಾರವಾಗಿರುತ್ತದೆ. ಇವರ ಊಹಾಶಕ್ತಿಯು ವಿಶೇಷವಾಗಿರುತ್ತದೆ. ಆರಂಭದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡದೆ ಹೋದರು ಕ್ರಮೇಣವಾಗಿ ಹಣದ ಅವಶ್ಯಕತೆ ಹೆಚ್ಚುತ್ತದೆ. ಇದರಿಂದ ದುಡಿಯಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

ವಿದ್ಯಾಭ್ಯಾಸವು ಮುಗಿದ ತಕ್ಷಣ ಇವರಿಗೆ ಉದ್ಯೋಗ ಲಭಿಸುತ್ತದೆ. ಆರಂಭದಲ್ಲಿ ಸಾಮಾನ್ಯ ದರ್ಜೆಯ ಉದ್ಯೋಗ ಇವರದಾಗುತ್ತದೆ. ಆದರೆ ದಿನ ಕಳೆದಂತೆ ಇವರ ಬುದ್ಧಿಶಕ್ತಿಗೆ ತಕ್ಕನಾದಂತಹ ಉದ್ಯೋಗವು ದೊರೆಯುತ್ತದೆ. ಗಳಿಸಿದ ಹಣವನ್ನೆಲ್ಲ ಬೇರೆಯವರಿಗೆ ಖರ್ಚು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಇವರು ಯೋಗದಂತಹ ವ್ಯಾಯಾಮವನ್ನು ಅನುಸರಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಅತಿಯಾಗಿ ತಿನ್ನುವಿಕೆ ಇವರಿಗೆ ಅನಾರೋಗ್ಯ ಉಂಟಾಗಲು ಕಾರಣವಾಗುತ್ತದೆ. ಇವರ ಕಾರ್ಯವೈಖರಿಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಮೆಚ್ಚುಗೆ ಮತ್ತು ಜನಪ್ರಿಯತೆಯು ಕೇವಲ ಮಾತಿನ ರೂಪದಲ್ಲಿ ಇರುತ್ತದೆ.

ಇವರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ವಂಶಾನುಗತವಾಗಿ ಬಂದ ಪ್ರಾಚೀನ ವಿದ್ಯೆ ಮತ್ತು ಕಲೆಯೊಂದು ಇವರಿಗೆ ವರದಾನವಾಗುತ್ತದೆ. ದಿನ ಕಳೆದಂತೆ ಹಣವನ್ನು ಉಳಿಸಲು ಸಫರಾಗುತ್ತಾರೆ. ಮುಖ್ಯವಾದ ವಿಚಾರವೆಂದರೆ ಹಣಕಾಸಿನ ವಿಚಾರವನ್ನು ರಹಸ್ಯವಾಗಿ ಇರಿಸುವುದು ಒಳ್ಳೆಯದು. ಸುಳ್ಳನ್ನು ಹೇಳಿ ಇವರಿಂದ ಹಣದ ಸಹಾಯ ಪಡೆಯುವ ಜನರು ಸುತ್ತಮುತ್ತಲು ಇರುತ್ತಾರೆ. ಕಣ್ಣೀರಿಗೆ ಇವರ ಮನಸ್ಸು ಮೇಣದಂತೆ ಕರಗುತ್ತದೆ. ಸ್ವಂತ ಬುದ್ಧಿವಂತಿಕೆಯನ್ನು ಹಣಕಾಸಿನ ವಿಚಾರದಲ್ಲಿ ಇವರು ಬಳಸುವುದಿಲ್ಲ.

ಜೀವನದಲ್ಲಿ ಹಲವು ರೀತಿಯ ಸವಾಲುಗಳನ್ನೂ ಎದುರಿಸಬೇಕಾಗುತ್ತೆ

ಇದನ್ನೂ ಓದಿ: ನಿಮ್ಮ ಅಭ್ಯಾಸ, ನಡವಳಿಕೆಗಳೇ ವ್ಯಕ್ತಿತ್ವ ವ್ಯಾಖ್ಯಾನಿಸುತ್ತೆ

ಇವರಿಗೆ ವಯಸ್ಸು ಮೀರಿದ ನಂತರ ವಿವಾಹವಾಗುತ್ತದೆ. ಆದರೆ ವಿವಾಹದ ವೇಳೆ ಕೆಲವೊಂದು ವಿವಾದಗಳನ್ನು ಎದುರಿಸುತ್ತಾರೆ. ಆತ್ಮೀಯರ ಸಹಾಯದಿಂದ ವಿವಾದಗಳಿಗೆ ಪರಿಹಾರ ದೊರೆತು ನೆಮ್ಮದಿ ಉಂಟಾಗುತ್ತದೆ. ದಂಪತಿ ನಡುವೆ ಉತ್ತಮ ಬಾಂಧವ್ಯ, ಪ್ರೀತಿ, ವಿಶ್ವಾಸ ಸದಾ ನೆಲೆಸಿರುತ್ತದೆ. ಬೇರೆಯವರ ಕಾರಣಕ್ಕಾಗಿ ಕೆಲವೊಮ್ಮೆ ದಂಪತಿ ನಡುವೆ ವಾದ ವಿವಾದಗಳು ಉಂಟಾಗುತ್ತವೆ. ವಿವಾಹ ನಂತರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ನಿರೀಕ್ಷೆಗೂ ಮೀರಿದ ಆದಾಯ ಗಳಿಸುತ್ತಾರೆ. ಕಾನೂನಿಗೆ ಹೆದರುವ ಇವರು ಸ್ವಂತ ಆಸ್ತಿಯನ್ನು ಗಳಿಸಲು ಹಿಂಜರಿಯುತ್ತಾರೆ. ಉದ್ಯೋಗದ ಸಲುವಾಗಿ ದಂಪತಿಗಳು ಹಲವು ವರುಷಗಳು ದೂರ ಉಳಿಯಬೇಕಾಗುತ್ತದೆ.

ಮೂಗು ಚೂಪಾಗಿರುವ ಇವರಿಗೆ ಜನ ಮೆಚ್ಚುವ ಗುಣವಿರುವ ಮಕ್ಕಳಿರುತ್ತಾರೆ. ಮಕ್ಕಳಿಗಾಗಿ ಯಾವುದೇ ಅನುಕೂಲ ನೀಡಲು ಬದ್ಧರಾಗುತ್ತಾರೆ. ಆದರೆ ಇವರ ಮಕ್ಕಳು ಸ್ವತಂತ್ರವಾಗಿ ಜೀವನ ನಿರ್ವಹಿಸುವ ತೀರ್ಮಾನಕ್ಕೆ ಬರುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗಳಿಸಿದ ಆದಾಯದಲ್ಲಿ ಸಿಂಹ ಪಾಲು ಖರ್ಚಾಗುತ್ತದೆ. ಇವರ ಏಳಿಗೆಯನ್ನು ಕಂಡು ಅಸೂಯೆ ಪಡುವ ಸಂಬಂಧಿಕರು ಮತ್ತು ಸ್ನೇಹಿತರಿಗೆ ಬರವಿರುವುದಿಲ್ಲ. ಹಣಕಾಸಿನ ಬಗ್ಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.