Personality Test: ನಿಮ್ಮ ಅಭ್ಯಾಸ, ನಡವಳಿಕೆಗಳೇ ವ್ಯಕ್ತಿತ್ವ ವ್ಯಾಖ್ಯಾನಿಸುತ್ತೆ
ನಿಮ್ಮ ನಡವಳಿಕೆಯಿಂದಲೇ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು. ಧರಿಸುವ ಬಟ್ಟೆಯಿಂದ ಹಿಡಿದು, ನಿಮ್ಮ ನಡಿಗೆ, ಬರವಣಿಗೆ ಹಾಗೂ ಹವ್ಯಾಸಗಳ ಆಧಾರದಲ್ಲಿ ನಿಮ್ಮ ಸ್ವಭಾವ ಏನು ಎಂಬುದನ್ನು ತಿಳಿಯಲು ಸಾಧ್ಯವಿದೆ. ಈ ಕುರಿತ ವಿವರ ಇಲ್ಲಿದೆ.
ವ್ಯಕ್ತಿತ್ವ ಪರೀಕ್ಷೆಯು ಒಬ್ಬ ವ್ಯಕ್ತಿಯ ಚಿಂತನೆ, ನಡವಳಿಕೆ ಮತ್ತು ಭಾವನಾತ್ಮಕ ನಿಲುವುಗಳನ್ನು ವಿಶ್ಲೇಷಿಸಲು ಬಳಸುವ ಮಾನಸಿಕ ರೋಗನಿರ್ಣಯ ಸಾಧನವಾಗಿದೆ. ಈ ವಿಧಾನದಿಂದ ಮನುಷ್ಯನ ವ್ಯಕ್ತಿತ್ವ, ಭಾವನಾತ್ಮಕ ಸ್ಥಿರತೆ, ಮುಕ್ತತೆ ಸೇರಿದಂತೆ ವಿವಿಧ ಅಂಶಗಳನ್ನು ತಿಳಿಯಬಹುದು. ವ್ಯಕ್ತಿಯು ಅಂತರ್ಮುಖಿಯೋ ಅಥವಾ ಬಹಿರ್ಮುಖ ಸ್ವಭಾವ ಹೊಂದಿದ್ದಾರೆಯೋ ಎಂಬುದನ್ನು ಅಳೆಯಬಹುದು. ಈ ಮಾದರಿಯ ಮೌಲ್ಯಮಾಪನದ ಮೂಲಕ ವ್ಯಕ್ತಿತ್ವದ ವಿವಿಧ ಅಂಶಗಳನ್ನು ಅಳೆಯಲಾಗುತ್ತದೆ. ಮನೋವಿಜ್ಞಾನಿಗಳು ಇದಕ್ಕಾಗಿ ಪೂರ್ವ-ರೂಪಿಸಿದ ಪ್ರಶ್ನೆಗಳು ಮತ್ತು ಸನ್ನಿವೇಶಗಳನ್ನು ಬಳಸುತ್ತಾರೆ.
ವೈಯಕ್ತಿಕ ಬೆಳವಣಿಗೆ ಸಲುವಾಗಿ ಆಗಾಗ ವ್ಯಕ್ತಿತ್ವ ಪರೀಕ್ಷೆ ಕುರಿತ ಮಾತುಗಳು ಮುನ್ನೆಲೆಗೆ ಬರುತ್ತವೆ. ವ್ಯಕ್ತಿಯ ಸ್ವಭಾವ ಕುರಿತ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಅರ್ಥೈಸಲು ಕೆಲವು ರೀತಿಯ ವ್ಯಕ್ತಿತ್ವ ಪರೀಕ್ಷಾ ಸಾಧನಗಳನ್ನು ಅನುಸರಿಸಲಾಗುತ್ತದೆ. ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವ 7 ಸಾಮಾನ್ಯ ಅಭ್ಯಾಸಗಳು ಹೀಗಿವೆ.
ನಡಿಗೆ ಶೈಲಿ
ಜರ್ನಲ್ ಆಫ್ ನಾನ್‌ವರ್ಬಲ್ ಬಿಹೇವಿಯರ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಡೆಯುವ ಶೈಲಿ ಮತ್ತು ವ್ಯಕ್ತಿತ್ವದ ಗುಣಗಳ ನಡುವೆ ನಿಕಟ ಸಂಬಂಧವಿದೆ. ದೈಹಿಕ ಆಕ್ರಮಣಶೀಲ ಸ್ವಭಾವ ಹೊಂದಿರುವವರು ತಮ್ಮ ದೇಹದ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಪರಸ್ಪರ ಹೊಂದಿಸಿ ನಡೆಯುತ್ತಾರೆ. ನಿಧಾನವಾಗಿ, ಮೃದುವಾಗಿ ಹೆಜ್ಜೆ ಹಾಕುವುದು ಅಂತರ್ಮುಖಿ, ವಿನಯಶೀಲ ವ್ಯಕ್ತಿತ್ವದ ಲಕ್ಷಣಗಳಾಗಿರಬಹುದು ಎಂದು ಸಂಶೋಧನಾ ವರದಿಗಳು ತಿಳಿಸಿವೆ.
ಕೆಲಸದ ಒತ್ತಡ
ಕೆಲಸ ಸಮಯದಲ್ಲಿ ಒತ್ತಡ ಎದುರಾದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಯಬೇಕು. ಸಣ್ಣ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವ ಅಥವಾ ಹೆಚ್ಚಿನ ಮಟ್ಟದ ಆತ್ಮಸಾಕ್ಷಿ ಹೊಂದಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚು ಒತ್ತಡ ಅನುಭವಿಸುವ ಸಾಧ್ಯತೆಯಿದೆ.
ಶಾಪಿಂಗ್ ವಿಧಾನ
ನಿಮ್ಮ ಮೆಚ್ಚಿನ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗುತ್ತೀರಾ ಅಥವಾ ಆನ್‌ಲೈನ್ ಶಾಪಿಂಗ್ ಮಾಡುತ್ತೀರಾ ಎಂಬ ಪ್ರಶ್ನೆ ಇಡೋಣ. ಹದಿಹರೆಯದವರ ಶಾಪಿಂಗ್ ಅಭ್ಯಾಸಗಳನ್ನು ಪರಿಶೀಲಿಸುವ ಬ್ರೀಝೇಲ್ ಮತ್ತು ಲ್ಯೂಗ್ ಅವರ ಅಧ್ಯಯನದ ಪ್ರಕಾರ, ಬಹಿರ್ಮುಖ ವ್ಯಕ್ತಿತ್ವದ ಜನರು ಆನ್‌ಲೈನ್‌ನಲ್ಲಿ ಅನಲಾಗ್ ಎನ್‌ಕೌಂಟರ್‌ಗಳನ್ನು ಬಯಸುತ್ತಾರೆ. ಅದಕ್ಕಾಗಿಯೇ ಅವರು ಮಾಲ್‌ಗಳಲ್ಲಿ ಹೆಚ್ಚು ಸಮಯದೊಂದಿಗೆ ಮತ್ತು ಹಣ ವ್ಯಯಿಸುತ್ತಾರೆ.
ಗೋಹರಿ ಮತ್ತು ಹಂಝೀ ಅವರ ಸಂಶೋಧನೆಯ ಪ್ರಕಾರ, ಉದ್ವೇಗದಿಂದ ಶಾಪಿಂಗ್ ಮಾಡುವವರು ಮಾನಸಿಕ ಯಾತನೆಗೆ ಹೆಚ್ಚು ಗುರಿಯಾಗಬಹುದು. ಏಕೆಂದರೆ ಶಾಪಿಂಗ್ ಮಾನಸಿಕ ಅಸ್ವಸ್ಥತೆಯಿಂದ ಸ್ವಲ್ಪ ವಿರಾಮ ನೀಡುತ್ತದೆ ಎಂದು ವರದಿ ಹೇಳುತ್ತದೆ. ಆನ್‌ಲೈನ್ ಹೊರತಾಗಿ ಆಫ್‌ಲೈನ್‌ನಲ್ಲಿ ಖರೀದಿಸುವ ನಿರ್ಧಾರವು ಆಯಾ ವ್ಯಕ್ತಿತ್ವದ ಲಕ್ಷಣಗಳು ಮತ್ತು ವೈಯಕ್ತಿಕ ಆದ್ಯತೆಗಳು ಸೇರಿದಂತೆ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ.
ಬಟ್ಟೆಗಳು
ವ್ಯಕ್ತಿ ತೊಡುವ ಬಟ್ಟೆ ಕೂಡಾ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಎರಿಕ್ಸನ್ ಮತ್ತು ಸರ್ಗಿ (1992) ಅಧ್ಯಯನದ ಪ್ರಕಾರ, ವೃತ್ತಿ-ಆಧಾರಿತ ಜನರು ಹೆಚ್ಚು ಔಪಚಾರಿಕವಾಗಿ ಮತ್ತು ವೃತ್ತಿಪರವಾಗಿ ಉಡುಗೆ ತೊಡುತ್ತಾರೆ. ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಅಧ್ಯಯನವು, ಸಾಂದರ್ಭಿಕ ಉಡುಪನ್ನು ಆಯ್ಕೆಮಾಡುವ ಜನರು ಆಗಾಗ್ಗೆ ಅಸಮರ್ಥನೀಯ ದೃಷ್ಟಿಕೋನ ಹೊಂದಿರುತ್ತಾರೆ. ಅಲ್ಲದೆ ಇವರು ಹೆಚ್ಚು ಮುಕ್ತವಾಗಿರಲು ಬಯಸುತ್ತಾರೆ ಎಂದು ತಿಳಿಸಿದೆ.
ಬರವಣಿಗೆಯ ಶೈಲಿ
ಬರವಣಿಗೆ ಕೂಡಾ ಲೇಖಕರ ವಿಶಿಷ್ಟ ಲಕ್ಷಣಗಳನ್ನು ಬಹಿರಂಗಪಡಿಸಬಹುದು. ಎಡಗೈಯಲ್ಲಿ ಬರೆಯುವ ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟಪಡುತ್ತಾರೆ. ಇದೇ ವೇಳೆ ಬಲಗೈಯಲ್ಲಿ ಬರೆಯುವವರು ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Skin Care: ಅಲರ್ಜಿ, ರಿಂಗ್ವರ್ಮ್, ದದ್ದು ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ