S Letter: ನಿಮ್ಮ ಹೆಸರಿನ ಮೊದಲ ಅಕ್ಷರ ಎಸ್ ನಿಂದ ಆರಂಭವಾಗುತ್ತಿದ್ದರೆ ನೀವು ಅದೃಷ್ಟವಂತರು; ಜೀವನ ಹೀಗಿರುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  S Letter: ನಿಮ್ಮ ಹೆಸರಿನ ಮೊದಲ ಅಕ್ಷರ ಎಸ್ ನಿಂದ ಆರಂಭವಾಗುತ್ತಿದ್ದರೆ ನೀವು ಅದೃಷ್ಟವಂತರು; ಜೀವನ ಹೀಗಿರುತ್ತೆ

S Letter: ನಿಮ್ಮ ಹೆಸರಿನ ಮೊದಲ ಅಕ್ಷರ ಎಸ್ ನಿಂದ ಆರಂಭವಾಗುತ್ತಿದ್ದರೆ ನೀವು ಅದೃಷ್ಟವಂತರು; ಜೀವನ ಹೀಗಿರುತ್ತೆ

S Letter: ನಿಮ್ಮ ಹೆಸರು ಕೂಡ ಎಸ್ ಅಕ್ಷರದಿಂದಲೇ ಆರಂಭವಾಗುತ್ತಾ? ಹಾಗಿದ್ದರೆ ನೀವು ನಿಮ್ಮ ಬಗ್ಗೆ ತಿಳಿದುಕೊಳ್ಳುವ ಸಾಕಷ್ಟು ವಿಷಯಗಳಿವೆ. ಹೆಸರು ಎಸ್ ಅಕ್ಷರದಿಂದ ಆರಂಭವಾಗುತ್ತಿದ್ದರೆ ನಿಮಗೆ ತುಂಬಾ ಚೆನ್ನಾಗಿ ಕೂಡಿ ಬರುತ್ತದೆ. ಅದೇ ಹೆಸರಿನಲ್ಲಿ ಎಸ್ ಪದೇ ಪದೆ ರಿಪೀಟ್ ಆಗಿದ್ದರೆ ನೀವು ಜೀನವದಲ್ಲಿ ಜಯವನ್ನು ಪಡೆಯುತ್ತೀರಿ.

ನಿಮ್ಮ ಹೆಸರು ಎಸ್ ನಿಂದ ಆರಂಭವಾಗುತ್ತಿದ್ದರೆ ನಿಮ್ಮ ಅದೃಷ್ಟದ ಬಗ್ಗೆ ತಿಳಿದುಕೊಳ್ಳಿ
ನಿಮ್ಮ ಹೆಸರು ಎಸ್ ನಿಂದ ಆರಂಭವಾಗುತ್ತಿದ್ದರೆ ನಿಮ್ಮ ಅದೃಷ್ಟದ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಹೆಸರಿನ ಮೊದಲ ಅಕ್ಷರ ಎಸ್ ಆಗಿದ್ದರೆ, ನೀವು ಕೆಲವೊಂದು ಆಸಕ್ತಿಕರ ವಿಷಯಗಳನ್ನು ತಿಳಿದುಕೊಳ್ಳಬೇಕು. ನಿಮ್ಮ ಹೆಸರೂ ಎಸ್ ಅಕ್ಷರದಿಂದ ಶುರುವಾದರೆ ಏನು ಮಾಡಬೇಕು? ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಹಲವು ವಿಷಯಗಳಿವೆ. ಹೆಸರು ಎಸ್ ಅಕ್ಷರದಿಂದ ಪ್ರಾರಂಭವಾಗಿದ್ದರೆ ಅನೇಕ ಜನರು ನಿಮಗಾಗಿ ಸೇರುತ್ತಾರೆ. ಅದೇ ಎಸ್ ಅಕ್ಷರ ನಿಮ್ಮ ಹೆಸರಿನಲ್ಲಿ ಹೆಚ್ಚು ಪುನರಾವರ್ತಿಸಿದ್ದರೆ ನಿಮ್ಮ ಜೀವನದಲ್ಲಿ ನೀವು ಒಂದರ ನಂತರ ಒಂದರಂತೆ ಯಶಸ್ಸನ್ನು ಪಡೆಯುತ್ತೀರಿ.

ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ಒಂದೊಂದು ಅಕ್ಷರಕ್ಕೂ ಒಂದೊಂದು ವಿಶೇಷ ಇರುತ್ತದೆ. ವರ್ಣಮಾಲೆಯು ವ್ಯಕ್ತಿಯ ಜೀವನದ ಮೇಲೆ ಸಹ ಪರಿಣಾಮ ಬೀರುತ್ತದೆ. ಎಸ್ ಅಕ್ಷರವು ಯಶಸ್ಸು ಮತ್ತು ಮನ್ನಣೆಯ ಸಂಕೇತವೆಂದು ಹೇಳಬಹುದು. ನಾಲ್ಕು ಜನರ ನಡುವೆ ನೀವು ಇದ್ದಾಗ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.

ನಿಮ್ಮ ಮನಸ್ಸು ಬೆಣ್ಣೆ

ನಿಮ್ಮ ಹೆಸರು ಎಸ್ ಈ ಅಕ್ಷರದಿಂದ ಪ್ರಾರಂಭವಾದರೆ ನೀವು ಹೆಚ್ಚು ಪ್ರೀತಿಸುತ್ತೀರಿ. ಹಾಗೆಯೇ ನಿಮ್ಮ ಮನಸ್ಸು ಬೆಣ್ಣೆಯಂತಿರುತ್ತದೆ. ದೇವರ ಮೇಲಿನ ನಂಬಿಕೆಯೂ ನಿಮಗೆ ಹೆಚ್ಚಿರುತ್ತದೆ. ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಕಷ್ಟಪಡುತ್ತಾರೆ. ಇನ್ನೂ ಹೆಚ್ಚು ಬುದ್ಧಿವಂತರು ಆಗಿರುತ್ತಾರೆ.

ಕೆಲವರು ಶತ್ರುಗಳಂತೆ ನೋಡುತ್ತಾರೆ

ನಿಮ್ಮ ಜೀವನದಲ್ಲಿ ಅನೇಕ ತಿರುವುಗಳಿರುತ್ತವೆ. ನಿಮ್ಮ ಮಾತುಗಳಿಂದ ನೀವು ಯಾರನ್ನಾದರೂ ಬದಲಾಯಿಸಬಹುದು. ಒಮ್ಮೊಮ್ಮೆ ಉತ್ತಮ ವ್ಯಕ್ತಿತ್ವದವರಾಗಿದ್ದರೂ ನಿಮ್ಮ ಮಾತು ಕೆಲವರನ್ನು ಶತ್ರುಗಳನ್ನಾಗಿ ನೋಡುವಂತೆ ಮಾಡುತ್ತದೆ.

ತಪ್ಪುಗಳಿಂದ ಕಲಿಯುತ್ತೀರಿ

ನೀವು ಮಾಡುವ ಪ್ರತಿ ಕೆಲಸದಲ್ಲೂ ತಪ್ಪುಗಳ ಕಾಣಿಸಿದ ಕೂಡಲೇ ನೀವು ಅವುಗಳನ್ನು ತಿದ್ದಿಕೊಳ್ಳುತ್ತೀರಿ. ಅವುಗಳಿಂದ ಕಲಿಯುತ್ತೀರಿ. ತಪ್ಪು ಮಾಡಿದರೆ ಅದನ್ನು ಸುಲಭವಾಗಿ ಸರಿಪಡಿಸಿಕೊಳ್ಳುತ್ತೀರಿ. ಅದನ್ನು ಮತ್ತೆಂದೂ ಮಾಡಲು ಹೋಗುವುದಿಲ್ಲ. ಹೆಚ್ಚು ಗೌರವಾನ್ವಿತರಾಗಿರುತ್ತೀರಿ. ನೀವು ಸಂಗೀತವನ್ನು ಸಹ ಪ್ರೀತಿಸುತ್ತೀರಿ. ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಹೆಸರಿನಲ್ಲಿ ಎಸ್ ಅಕ್ಷರ ಹೆಚ್ಚು ಬಾರಿ ಬಳಕೆಯಾಗಿದ್ದರೆ ನೀವು ಜೀವನದಲ್ಲಿ ಅನೇಕ ಯಶಸ್ಸನ್ನು ಪಡೆಯುತ್ತೀರಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.