Rajinikanth Birthday: ರಜನಿಕಾಂತ್ ಜನ್ಮದಿನ; 74ನೇ ವರ್ಷಕ್ಕೆ ಕಾಲಿಟ್ಟ ಸೂಪರ್ ಸ್ಟಾರ್
ಕನ್ನಡ ಸುದ್ದಿ  /  ಮನರಂಜನೆ  /  Rajinikanth Birthday: ರಜನಿಕಾಂತ್ ಜನ್ಮದಿನ; 74ನೇ ವರ್ಷಕ್ಕೆ ಕಾಲಿಟ್ಟ ಸೂಪರ್ ಸ್ಟಾರ್

Rajinikanth Birthday: ರಜನಿಕಾಂತ್ ಜನ್ಮದಿನ; 74ನೇ ವರ್ಷಕ್ಕೆ ಕಾಲಿಟ್ಟ ಸೂಪರ್ ಸ್ಟಾರ್

74ನೇ ವರ್ಷಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ರಜನಿಕಾಂತ್‌ ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಪ್ರತಿವರ್ಷವೂ ಸಂಭ್ರಮದಿಂದ ಅವರ ಜನ್ಮದಿನವನ್ನು ಆಚರಿಸುತ್ತಾ ಶುಭಾಶಯ ಕೋರುತ್ತಾರೆ.

74ನೇ ವರ್ಷಕ್ಕೆ ಕಾಲಿಟ್ಟ ಸೂಪರ್ ಸ್ಟಾರ್
74ನೇ ವರ್ಷಕ್ಕೆ ಕಾಲಿಟ್ಟ ಸೂಪರ್ ಸ್ಟಾರ್

ರಜನಿಕಾಂತ್ ತಮ್ಮ 74ನೇ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಿಕೊಳ್ಳುತ್ತಿದ್ದಾರೆ. ಹಿಂದಿನ ವರ್ಷ ತಮ್ಮ ಕುಟುಂಬದೊಡನೆ ಸಿಂಪಲ್ ಆಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಡಿಸೆಂಬರ್ 12, 1950 ರಂದು ಜನಿಸಿದವರು. ಸಾಕಷ್ಟು ಅಭಿಮಾನಿಗಳನ್ನು ತಮ್ಮ ನಟನೆ ಹಾಗೂ ವ್ಯಕ್ತಿತ್ವದಿಂದ ಹೊಂದಿದ್ದಾರೆ. ಶಿವಾಜಿ ರಾವ್ ಗಾಯಕ್ವಾಡ್ ಎಂಬಲ್ಲಿ ಇವರು ಜನಿಸಿದ್ದರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟರಲ್ಲಿ ಒಬ್ಬರು. ಅವರ ವಿಶಿಷ್ಟ ಶೈಲಿಗೆ ಹೆಸರುವಾಸಿಯಾದ ರಜನಿಕಾಂತ್ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ.

ರಜನಿಕಾಂತ್‌ಗಾಗಿ ನಿರ್ಮಾಣವಾಗಿದೆ ದೇವಾಲಯ

ಮಧುರೈನಲ್ಲಿ ರಜನಿಕಾಂತ್‌ಗಾಗಿ ದೇವಾಲಯವನ್ನೇ ನಿರ್ಮಾಣ ಮಾಡಿದ್ದಾರೆ. ಆ ಮಟ್ಟಿಗಿನ ಅಭಿಮಾನ ಜನರಿಗೆ ಇದೆ. ಆ ದೇವಾಲಯದಲ್ಲಿ ರಜನಿಕಾಂತ್‌ ಅವರನ್ನು ಆರಾಧಿಸುತ್ತಾರೆ. ರಜನಿಕಾಂತ್ ಹುಟ್ಟುಹಬ್ಬ ಅವರ ಅಭಿಮಾನಿಗಳಿಗೆ ಸಾಮಾನ್ಯ ಸಂದರ್ಭವಲ್ಲ. ಅವರ ನಿವಾಸದ ಹೊರಗೆ ಸೇರುವುದರಿಂದ ಹಿಡಿದು ಗ್ರ್ಯಾಂಡ್ ಕೇಕ್ ಕತ್ತರಿಸುವವರೆಗೆ ತುಂಬಾ ಉತ್ಸಾಹದಿಂದ ಸಂಭ್ರಮಿಸುತ್ತಾರೆ.

ಒಂದೊಂದು ಸಿನಿಮಾದಲ್ಲೂ ಒಂದೊಂದು ರೀತಿಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಅಭಿನಯಿಸಿದ್ದಾರೆ. ಅವರ ಈ ವಿಶಿಷ್ಟ ರೀತಿಯನ್ನೇ ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಅವರು ತಮ್ಮ ವಯಸ್ಸನ್ನೂ ಮೀರಿ ಅಭಿನಯಿಸುತ್ತಾ ಜನರಿಗೆ ಮನರಂಜನೆ ನೀಡುತ್ತಾರೆ. ಒಂದೊಂದು ಸಿನಿಮಾದಲ್ಲೂ ಒಂದೊಂದು ಹೊಸ ಅವತಾರದಲ್ಲಿ ಜನರ ಮುಂದೆ ಬರುತ್ತಾರೆ. ತಮ್ಮ ವೃತ್ತಿಜೀವನದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಸಿನಿ ಕ್ಷೇತ್ರದಲ್ಲಿ ಇಂದಿಗೂ ಚಟುವಟಿಕೆಯಲ್ಲಿದ್ದಾರೆ.

ಪರಿಶ್ರಮ ಪಟ್ಟರೆ ಯಾವುದೇ ರೀತಿಯ ಯಶಸ್ಸು ಸಾಧಿಸಬಹುದು ಎಂದು ಯುವಕರಲ್ಲಿ ಸ್ಫೂರ್ತಿ ತುಂಬುವ ನಟ ಇವರು. ರಜನಿಕಾಂತ್ ಅವರ ಮೊದಲ ಕೆಲಸ ಬಸ್ ಕಂಡಕ್ಟರ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಂದು ಅವರು ಅತ್ಯದ್ಭುತ ನಟನಾಗಿ ಹೊರ ಹೊಮ್ಮಿದ್ದಾರೆ.

ಈಗಿನ ಕಾಲದ ಹೀರೋಗಳೇ ನಾಚುವಂತೆ ಅಭಿನಯಿಸುತ್ತಾರೆ. ಜನಮನ ಗೆದ್ದ ನಿಜ ಜೀವನದ ನಾಯಕ ಎಂದು ಹಲವು ಅಭಿಮಾನಿಗಳು ಅವರನ್ನು ಕೊಂಡಾಡುತ್ತಾರೆ.ತಮ್ಮ ಸ್ಟೈಲ್ ಮತ್ತು ಮ್ಯಾನರಿಸಂ ಮೂಲಕ ಇವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ತಲೈವಾ ಎಂದೇ ಎಲ್ಲರೂ ಇವರನ್ನು ಪ್ರೀತಿಯಿಂದ ಕರೆಯುತ್ತಾರೆ.

ಅಭಿಮಾನಿಗಳಿಗೆ ಹಬ್ಬ

ಪ್ರತಿವರ್ಷ ಅವರ ಅಭಿಮಾನಿಗಳು ತಮ್ಮ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸುವ ಸಲುವಾಗಿ ಅವರ ಚೆನ್ನೈ ನಿವಾಸದ ಹೊರಗೆ ನೆರೆದಿರುತ್ತಾರೆ. ಪೋಸ್ಟರ್‌ಗಳು ಮತ್ತು ಫಲಕಗಳನ್ನು ತರುತ್ತಾರೆ. ಕಳೆದ ವರ್ಷ, ಆಚರಣೆಗಳ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದು ಅಭಿಮಾನಿಗಳು ತಮ್ಮ ಶುಭಾಶಯವನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸಿದ್ದರು.

Whats_app_banner