ಕಲರ್ಸ್ ವಾಹಿನಿಯಲ್ಲಿ ನಗೆಗಡಲು -ಮತ್ತೆ ಬರ್ತಿದೆ ಮಜಾ ಟಾಕೀಸ್; ವರಲಕ್ಷ್ಮೀ ಇಲ್ಲ ಅಂದ್ರೆ ಮಜಾನೇ ಇಲ್ಲ ಎಂದ ವೀಕ್ಷಕರು
ಅಪರ್ಣಾ ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ನಟಿಸುತ್ತಿದ್ದ ಮಜಾ ಟಾಕೀಸ್ ಇದೀಗ ಇನ್ನೊಮ್ಮೆ ಕಿರುತೆರೆಗೆ ಅಪ್ಪಳಿಸಲಿದ್ದು, ಅಭಿಮಾನಿಗಳು ವರಲಕ್ಷ್ಮಿಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಸಹಜ ಎಂಬಂತೆ ಪ್ರೋಮೋದಲ್ಲೇ ಹೊರಬಿದ್ದಿದೆ.
ಕನ್ನಡ ಕಿರುತೆರೆಯಲ್ಲಿ ಒಂದೊಮ್ಮೆ ಖ್ಯಾತಿಯ ಉತ್ತುಂಗಕ್ಕೇರಿದ್ದ ಕಾಮಿಡಿ ಶೋ ಮಜಾ ಟಾಕೀಸ್. ಇದೀಗ ಇನ್ನೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಮಾಹಿತಿ ನೀಡಿದೆ. ಆದರೆ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಶೋನಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ಮಿಂದೇಳುವಂತೆ ಮಾಡುತ್ತಿದ್ದ ಒನ್ ಅಂಡ್ ಓನ್ಲಿ ವರಲಕ್ಷ್ಮಿ, ಅರ್ಥಾತ್ ಅಪರ್ಣಾ ವಸ್ತಾರೆ ಅವರು ಮಾತ್ರ ಈ ಬಾರಿ ಕಾಣಿಸಿಕೊಳ್ಳುತ್ತಿಲ್ಲ.
ಹೌದು, ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಕಾಮಿಡಿ ಶೋ ಹಲವು ಸೀಸನ್‌ಗಳಲ್ಲಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿತ್ತು. ಸದ್ಯ ಕಿರುತೆರೆಯಲ್ಲಿ ಈ ಮಾದರಿಯ ಬೇರೆ ಕಾಮಿಡಿ ಶೋ ಯಾವುದೂ ಪ್ರಸಾರವಾಗುತ್ತಿರಲಿಲ್ಲ. ಈ ಎಲ್ಲ ಕಾರಣಕ್ಕೆ ಮತ್ತೊಮ್ಮೆ ಮಜಾ ಟಾಕೀಸ್ ಪ್ರೇಕ್ಷಕರನ್ನು ಆವರಿಸುವ ಉತ್ಸಾಹದಿಂದ ಕಿರುತೆರೆಗೆ ಅಪ್ಪಳಿಸುತ್ತಿದ್ದು, ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಈ ಕುರಿತು ಮಾಹಿತಿ ಲಭ್ಯವಾಗಿದೆ. ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡಿದೆ. ಮಜಾ ಟಾಕೀಸ್ ಪ್ರಸಾರ ಆರಂಭವಾಗಲಿದೆ. 'ಟೆನ್ಷನ್ ಬಿಟ್ಟಾಕಿ ನಗೋಕೆ ರೆಡಿಯಾಗಿ'' ಎಂದು ಘೋಷಿಸಿರುವ ಕಲರ್ಸ್ ಕನ್ನಡ ವಾಹಿನಿ, ಕರ್ನಾಟಕದ ನಂಬರ್ 1 ಕಾಮಿಡಿ ಶೋ ಮಜಾ ಟಾಕೀಸ್ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ಹೇಳಿದ್ದಾರೆ.
ಒನ್ ಅಂಡ್ ಓನ್ಲಿ ವರಲಕ್ಷ್ಮೀ ಇಲ್ಲವೆಂದು ಬೇಸರ
ಮಜಾ ಟಾಕೀಸ್ ಕಾಮಿಡಿ ಶೋನಲ್ಲಿ ವರಲಕ್ಷ್ಮಿ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು ಅಪರ್ಣಾ ವಸ್ತಾರೆ. ಆದರೆ ದುರದೃಷ್ಟವಷಾತ್ ಅವರು ಈಗ ನಮ್ಮೊಂದಿಗಿಲ್ಲ. ನಟಿಯಾಗಿ, ನಿರೂಪಕಿಯಾಗಿ, ಕಿರುತೆರೆಯಲ್ಲಿ ಗುರುತಿಸಿಕೊಂಡು, ಅದರಲ್ಲೂ ಅಚ್ಚ ಕನ್ನಡದ ನಿರೂಪಣೆಯಲ್ಲಿ ತಮ್ಮದೇ ಆದ ಛಾಪೊತ್ತಿ ನಿರ್ಗಮಿಸಿದ್ದಾರೆ ಅಪರ್ಣಾ ವಸ್ತಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ಅಪರ್ಣಾ, ಈ ಕಾಯಿಲೆ ಬಗ್ಗೆಯೂ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರ್ಣಾ, ಆರೋಗ್ಯ ಸ್ಥಿತಿಯೂ ತೀರಾ ಹದಗೆಟ್ಟಿತ್ತು. ಜುಲೈ 11ರಂದು ಅಪರ್ಣಾ ಇಹಲೋಕ ತ್ಯಜಿಸಿದ್ದರು. ಆದರೆ ಅಪರ್ಣಾ ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ನಟಿಸುತ್ತಿದ್ದ ಮಜಾ ಟಾಕೀಸ್ ಇದೀಗ ಇನ್ನೊಮ್ಮೆ ಕಿರುತೆರೆಗೆ ಅಪ್ಪಳಿಸಲಿದ್ದು ಅಭಿಮಾನಿಗಳು ವರಲಕ್ಷ್ಮಿಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಸಹಜ ಎಂಬಂತೆ ಪ್ರೋಮೋದಲ್ಲೇ ಹೊರಬಿದ್ದಿದೆ.
ಜನಾಭಿಪ್ರಾಯ
"ಅಪರ್ಣಾ ಮೇಡಂ ಇರುವಾಗಲೇ ಶುರು ಮಾಡಿದ್ರೆ ಇನ್ನು ಚೆನ್ನಾಗಿರುತ್ತಿತ್ತು ಈಗ ಅಪರ್ಣಾ ಮೇಡಂನ ತುಂಬಾ ಮಿಸ್ ಮಾಡ್ಕೊಳ್ತಿದ್ದೀವಿ" ಎಂದು ಸಾಗರ್ ಎಂಬುವವರು ಕಾಮೆಂಟ್ ಮಾಡಿದ್ದಾರೆ.
"ಮಜಾ ಟಾಕೀಸ್ ಒನ್ ಅಂಡ್ ಓನ್ಲಿ ವರಲಕ್ಷ್ಮೀ (ಅಪರ್ಣಾ) ಅವರನ್ನ ತುಂಬಾ ಮಿಸ್ ಮಾಡ್ಕೊಂತೀವಿ" ಎಂದಿದ್ದಾರೆ ದೀಶ್.
ಇನ್ನೋರ್ವ ಪ್ರೇಕ್ಷಕ “ಮೊದ್ಲು ಇದ್ದ ಆಕ್ಟರ್ಸ್ ಇದ್ರೆ ಇನ್ನು ಚೆನ್ನಾಗ್ ಇರುತ್ತೆ ಅಪರ್ಣಾ ಮೇಡಂನ ತುಂಬಾ ಮಿಸ್ ಮಾಡ್ಕೋತೀವಿ ಒನ್ ಅಂಡ್ ಓನ್ಲಿ ವರಲಕ್ಷ್ಮಿ ನೇ ಅವ್ರು ಅವರ ಪಾತ್ರ ಯಾರಿಂದಲೂ ತುಂಬಲು ಆಗಲ್ಲ ” ಎಂಬ ಕಾಮೆಂಟ್ ಮಾಡಲಾಗಿದೆ.