ಮಂಗಳ ಸಂಕ್ರಮಣ; ಈ 4 ರಾಶಿಯವರಿಗೆ ಆರೋಗ್ಯ ಸಮಸ್ಯೆ, ಖರ್ಚು ಹೆಚ್ಚಾಗುವ ಸಾಧ್ಯತೆ -Mars Transit
Mars Transit: ಜೂನ್ 1 ರಿಂದ ಮಂಗಳ ಮೇಷ ರಾಶಿಯಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಪ್ರತಿಕೂಲ ಫಲಿತಾಂಶಗಳಿವೆ. ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಪ್ರತಿಯೊಂದು ರಾಶಿಯವರ ಮೇಲೆ ಗ್ರಹಗಳ ಸಂಕ್ರಮಣ ಪರಿಣಾಮವನ್ನು ಬೀರುತ್ತದೆ. ಕೆಲವೊಮ್ಮೆ ಸಕಾರಾತ್ಮಕವಾಗಿದ್ದರೆ, ಮತ್ತೆ ಕೆಲವು ಸಲ ನಕಾರಾತ್ಮಕವಾದಂತ ಫಲಿತಾಂಶ ಇರುತ್ತವೆ. ಜೂನ್ 1 ರಿಂದ ಮಂಗಳ ಗ್ರಹ (Mars Transit) ಮೇಷ ರಾಶಿಯಲ್ಲಿ ಚಲಿಸುತ್ತಿದೆ. ಈ ಸಂಕ್ರಣದಿಂದ ಕೆಲವು ರಾಶಿಯವರಿಗೆ ವಿಭಿನ್ನ ಪರಿಣಾಮಗಳನ್ನು ಇವೆ. ಮೇಷವು ಮಂಗಳದ ಆಡಳಿತ ಗ್ರಹವಾಗಿದೆ. ಮಂಗಳವು ತನ್ನದೇ ಆದ ರಾಶಿಯನ್ನು ಪ್ರವೇಶಿಸಿದಾಗ ಅದರ ಬಲವು ದ್ವಿಗುಣಗೊಳ್ಳುತ್ತದೆ. ಮಂಗಳ ಧೈರ್ಯ, ಶೌರ್ಯ ಹಾಗೂ ಪರಾಕ್ರಮಗಳ ಸಂಕೇತವಾಗಿದೆ.
ಮೇಷ ರಾಶಿಯಲ್ಲಿ ಮಂಗಳ ಸಂಚಾರವು ಕೆಲವರಿಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ಈ ಗ್ರಹಕ್ಕೆ ಇಚ್ಛಾಶಕ್ತಿ ಹೆಚ್ಚು. ಮೇಷ ರಾಶಿಯ ಜನರು ಈ ಸಮಯದಲ್ಲಿ ಧೈರ್ಯಶಾಲಿಗಳು. ಇತರರನ್ನು ರಕ್ಷಿಸುತ್ತಾರೆ. ಸವಾಲುಗಳಿಗೆ ಹೆದರುವುದಿಲ್ಲ. ಇಷ್ಟಾರ್ಥಗಳು ಈಡೇರುತ್ತವೆ. ಸ್ವತಂತ್ರವಾಗಿ ಬದುಕು ಆಸಕ್ತಿ ಇರುತ್ತದೆ.
ಮಂಗಳವು ತನ್ನದೇ ರಾಶಿಯಲ್ಲಿ ಕೇಂದ್ರ ಸ್ಥಾನದಲ್ಲಿರುವುದಿಂದ, ಈ ಸಂಕ್ರಮಣದಲ್ಲಿ ಅತ್ಯಂತ ಶಕ್ತಿಶಾಲಿ ರುಚಕ ರಾಜಯೋಗವು ರೂಪುಗೊಳ್ಳುತ್ತದೆ. ಆದರೆ ಮೇಷ ರಾಶಿಯಲ್ಲಿ ಮಂಗಳ ಸಂಕ್ರಮಣದಿಂದ ಕೆಲವು ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಮಂಗಳವು ಪ್ರತಿಕೂಲ ಸ್ಥಾನದಲ್ಲಿದ್ದಾಗ ಧೈರ್ಯವು ದುರ್ಬಲಗೊಳ್ಳುತ್ತದೆ. ಹಣಕಾಸಿನ ಪರಿಸ್ಥಿತಿ ಏರಿಳಿತಗಳಿವೆ. ಸಣ್ಣ ಸಣ್ಣ ವಿಷಯಗಳಿಗೂ ಸಹ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾರೆ. ಇತರರ ಮೇಲೆ ಕೋಪಗೊಳ್ಳುತ್ತಾರೆ. ಮಂಗಳ ಗ್ರಹದ ಸಂಚಾರದಿಂದ ಯಾರಿಗೆ ತೊಂದರೆ, ಸಮಸ್ಯೆಗಳಿವೆ ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ವೃಷಭ ರಾಶಿಯ ಏಳನೇ ಮತ್ತು ಹನ್ನೆರಡನೇ ಮನಗೆ ಮಂಗಳನು ಅಧಿಪತಿ. ಆದರೆ ಪ್ರಸ್ತುತ ಸಂಕ್ರಮಣವು ವೃಷಭ ರಾಶಿಯ 12ನೇ ಮನೆಯಲ್ಲಿ ನಡೆಯುತ್ತದೆ. ಪರಿಣಮವಾಗಿ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಕೆಲವು ಕಣ್ಣಿನ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಇದಷ್ಟೇ ಅಲ್ಲ ಹಲ್ಲುನೋವು ಕೂಡ ಅನುಭವಕ್ಕೆ ಬರಬಹುದು. ಅದಕ್ಕಾಗಿಯೇ ಯಾವುದೇ ಸಣ್ಣ ಆರೋಗ್ಯ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಬೇಕು.
ಕನ್ಯಾ ರಾಶಿ
ಕನ್ಯಾ ರಾಶಿಯ ಮೂರನೇ ಮತ್ತು ಎಂಟನೇ ಮನೆಗಳಿಗೆ ಮಂಗಳ ಅಧಿಪತಿ. ಮಂಗಳವು ಈಗ ಎಂಟನೇ ಮನೆಯ ಮೂಲಕ ಸಾಗುತ್ತಿದೆ. ಈ ಸಂಚಾರದಿಂದ ಕನ್ಯಾ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಕಣ್ಣುಗಳನ್ನು ರಕ್ಷಿಸಲು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಅತ್ಯಂತ ಕಿರಿಕಿರಿ ಪರಿಸ್ಥಿತಿಗೆ ಕಾರಣವಾಗುತ್ತವೆ. ಆದ್ದದರಿಂದ ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು.
ತುಲಾ ರಾಶಿ
ತುಲಾ ರಾಶಿಯ ಆಡಳಿತ ಗ್ರಹ ಶುಕ್ರ. ಆದರೆ ಮಂಗಳವು ತುಲಾ ರಾಶಿಯ ಎರಡನೇ ಮತ್ತು ಏಳನೇ ಮನೆಗಳಿಗೆ ಅಧಿಪತಿ. ಈ ಸಮಯದಲ್ಲಿ ಮಂಗಳ ಏಳನೇ ಮನೆಗೆ ಪ್ರವೇಶಿಸುತ್ತಾನೆ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಂಚಾರವು ತುಲಾ ರಾಶಿಯವರಿಗೆ ತಲೆನೋವು ಮತ್ತು ಮೈಗ್ರೇನ್‌ನಂತಹ ಸಮಸ್ಯೆಗಳನ್ನು ತರುತ್ತದೆ. ಇವುಗಳನ್ನ ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಮಕರ ರಾಶಿ
ಮಕರ ರಾಶಿಯ ನಾಲ್ಕನೇ ಮತ್ತು ಹನ್ನೊಂದನೇ ಮನೆಗಳ ಅಧಿಪತಿ ಮಂಗಳ. ಜೂನ್ 1 ರಿಂದ ನಾಲ್ಕನೇ ಮನೆಯಲ್ಲಿ ಸಾಗುತ್ತಿದೆ. ಇದರಿಂದ ಮಕರ ರಾಶಿಯವರಿಗೆ ವ್ಯತಿರಿಕ್ತ ಪರಿಣಾಮಗಳಿವೆ. ವಿಶ್ರಾಂತಿ ಪಡೆಯಲು ಹೆಚ್ಚು ಸಮಯ ಇರುವುದಿಲ್ಲ. ಒತ್ತಡ, ಆಲಸ್ಯ ಹಾಗೂ ಆಯಾಸವು ನಿಮ್ಮನ್ನು ಕಾಡುತ್ತದೆ. ಕುಟುಂಬದಲ್ಲಿ ತಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಅವರ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಅಲ್ಲದೆ, ಆಸ್ಪತ್ರೆ ಸುತ್ತವಂತ ಪರಿಸ್ಥಿತಿ ನಿರ್ಮಾಣವಾಗಲಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)