ನಿಮ್ಮ ಮೂಗು ಹೇಗಿದೆ? ಮೂಗಿನ ಆಕಾರದಿಂದಲೂ ವ್ಯಕ್ತಿತ್ವ, ಅದೃ ಷ್ಟ, ಶುಭ ಫಲಗಳನ್ನು ಹೀಗೆ ತಿಳಿಯಬಹುದು-horoscope personality test how is your nose luck and good result can also be known from shape of nose sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಮೂಗು ಹೇಗಿದೆ? ಮೂಗಿನ ಆಕಾರದಿಂದಲೂ ವ್ಯಕ್ತಿತ್ವ, ಅದೃ ಷ್ಟ, ಶುಭ ಫಲಗಳನ್ನು ಹೀಗೆ ತಿಳಿಯಬಹುದು

ನಿಮ್ಮ ಮೂಗು ಹೇಗಿದೆ? ಮೂಗಿನ ಆಕಾರದಿಂದಲೂ ವ್ಯಕ್ತಿತ್ವ, ಅದೃ ಷ್ಟ, ಶುಭ ಫಲಗಳನ್ನು ಹೀಗೆ ತಿಳಿಯಬಹುದು

ಮೂಗಿನ ಆಕಾರ ಹೇಗಿದ್ದರೆ ನಮ್ಮ ವ್ಯಕ್ತಿತ್ವ ಚೆನ್ನಾಗಿರುತ್ತೆ? ಇಲ್ಲಿ ಕೆಲವರಿಗೆ ವ್ಯಾಪಾರ, ವ್ಯವಹಾರ ಮಾಡಲು ಆಸಕ್ತಿ ಇರುತ್ತದೆ. ಆದರೆ ಮನಸ್ಸು ಮಾಡುವುದಿಲ್ಲ. ಇದಕ್ಕೆ ಮೂಗಿನ ಆಕಾರವೇ ಕಾರಣವೇ ಅಥವಾ ಬೇರೆ ಏನಾದರೂ ಇದೆಯಾ? ಇಲ್ಲಿ ಓದಿ.

ನಿಮ್ಮ ಮೂಗು ಹೇಗಿದೆ? ಮೂಗಿನ ಆಕಾರದಿಂದಲೂ ವ್ಯಕ್ತಿತ್ವ, ಅದೃಷ್ಟ, ಶುಭ ಫಲಗಳನ್ನು ಹೀಗೆ ತಿಳಿಯಬಹುದು
ನಿಮ್ಮ ಮೂಗು ಹೇಗಿದೆ? ಮೂಗಿನ ಆಕಾರದಿಂದಲೂ ವ್ಯಕ್ತಿತ್ವ, ಅದೃಷ್ಟ, ಶುಭ ಫಲಗಳನ್ನು ಹೀಗೆ ತಿಳಿಯಬಹುದು

ಕೆಲವರ ಮೂಗು ಕಂಡೂ ಕಾಣದಂತೆ ಇರುತ್ತದೆ. ಅಂದರೆ ಮೂಗಿನ ಹೊಳ್ಳೆ ಸಣ್ಣದ್ದಿರುತ್ತದೆ. ಮೂಗು ದಪ್ಪಗಿದ್ದರೂ ರಂದ್ರಗಳು ಕಂಡೂ ಕಾಣದಂತೆ ಇರುತ್ತದೆ. ಸಾಮಾನ್ಯವಾಗಿ ಇವರು ಎತ್ತರವಾಗಿರುತ್ತಾರೆ. ತಮಗೆ ಒಪ್ಪಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬಲ್ಲರು. ಇವರು ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಸದಾಕಾಲ ಕ್ರಿಯಾಶೀಲರಾಗಿ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗುತ್ತಾರೆ. ಸಾಮಾನ್ಯವಾಗಿ ಇವರಿಗೆ ಅಸಾಧ್ಯವೆನಿಸುವ ಯಾವುದೇ ಕೆಲಸ ಕಾರ್ಯಗಳು ಇರುವುದಿಲ್ಲ. ಇವರಿಗೆ ಬುದ್ದಿವಂತಿಕೆಯ ಜೊತೆಯಲ್ಲಿ ಧೈರ್ಯವೂ ಇರುತ್ತದೆ. ವಯಸ್ಸಿಗೆ ಮೀರಿದ ಬುದ್ಧಿವಂತಿಕೆ ಇವರಲ್ಲಿ ಇರುತ್ತದೆ. ಅನೇಕ ಬಾರಿ ಹಿರಿಯರಿಗೆ ಅಸಾಧ್ಯವೆನಿಸುವ ಕೆಲಸವನ್ನು ಇವರು ಸುಲಭವಾಗಿ ಪೂರೈಸುತ್ತಾರೆ. ವಿದ್ಯಾರ್ಥಿಗಳು ಸರಳ ರೀತಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸುತ್ತಾರೆ. ಇವರಿಗೆ ವಿದ್ಯೆಗಿಂತಲೂ ಬುದ್ಧಿಶಕ್ತಿ ಇರುತ್ತದೆ.

ಓದಿನ ವೇಳೆಯಲ್ಲಿ ಸಂಪಾದಿಸುವ ಚಾತುರ್ಯ ಇವರಿಗೆ ಹಣಕಾಸಿನ ವಿಚಾರದಲ್ಲಿ ಸುಲಭವಾಗಿ ಯಾರನ್ನು ನಂಬುವುದಿಲ್ಲ. ಬೇರೆಯವರಿಗೆ ಹಣದ ಸಹಾಯ ಮಾಡುತ್ತಾರೆ. ಆದರೆ ಯಾರಿಂದಲೂ ಹಣದ ಸಹಾಯವನ್ನು ನಿರೀಕ್ಷಿಸುವುದೇ ಇಲ್ಲ. ಸಾಮಾನ್ಯವಾಗಿ ಇವರಿಗೆ ಎರಡಕ್ಕಿಂತಲೂ ಹೆಚ್ಚಿನ ಪದವಿ ಪುರಸ್ಕಾರಗಳು ದೊರೆಯುತ್ತವೆ. ಚಿಕ್ಕ ವಯಸ್ಸಿನಲ್ಲಿ ಅವಶ್ಯಕತೆ ಇದ್ದವರಿಗೆ ಸಹಾಯ ಹಸ್ತ ನೀಡುವಿರಿ. ಹಣಕಾಸಿನ ವ್ಯವಹಾರದಲ್ಲಿ ವಿಶೇಷವಾದಂತಹ ಆಸಕ್ತಿ ಮತ್ತು ಪ್ರತಿಭೆ ತೋರುವಿರಿ. ಹಣವನ್ನು ಉಳಿತಾಯ ಮಾಡುವ ಮನಸ್ಸು ಇವರಿಗೆ ಇರುವುದಿಲ್ಲ.

ಸ್ವಂತ ವ್ಯಾಪಾರ, ವ್ಯವಹಾರದಲ್ಲಿ ಆಸಕ್ತಿ ಇದ್ದರು ಮನಸ್ಸು ಮಾಡದಿರುವುದಕ್ಕೆ ಇದೇ ಕಾರಣವೇ?

ವಿದ್ಯಾಭ್ಯಾಸವು ಮುಗಿದ ಕೂಡಲೇ ಆತ್ಮೀಯರ ಸಹಾಯದಿಂದ ಉದ್ಯೋಗ ದೊರೆಯುತ್ತದೆ. ಇವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಗೌರವ ದೊರೆಯುತ್ತದೆ. ಸಹೋದ್ಯೋಗಿಗಳ ಜೊತೆಯಲ್ಲಿ ಸೋದರತ ಭಾವನೆಯಿಂದ ವರ್ತಿಸುತ್ತಾರೆ. ತಾವಾಗಿಯೇ ಇವರು ಉದ್ಯೋಗ ಬದಲಿಸುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಇದ್ದರು ಮನಸ್ಸು ಮಾಡುವುದಿಲ್ಲ. ಇವರ ಚರ್ಮದಲ್ಲಿ ವಿಶೇಷವಾದಂತಹ ಕಾಂತಿ ಇರುತ್ತದೆ. ಭವಿಷ್ಯದ ದಿನಗಳಲ್ಲಿ ನಡೆಯುವ ಅನೇಕ ವಿಚಾರಗಳು ಇವರಿಗೆ ಕನಸಿನಲ್ಲಿ ಗೋಚರವಾಗುತ್ತದೆ. ಇವರ ಊಹ ಶಕ್ತಿಯು ವಿಶೇಷವಾಗಿರುತ್ತದೆ. ಬೇರೆಯವರ ಭವಿಷ್ಯದ ಬಗ್ಗೆ ಸುಲಭವಾಗಿ ತಿಳಿಸಬಲ್ಲರು. ತಂದೆ ತಾಯಿಯ ಮೇಲೆ ವಿಶೇಷವಾದ ಪ್ರೀತಿ ವಿಶ್ವಾಸ ಮೂಡುತ್ತದೆ. ಇದರಿಂದಾಗಿ ಉದ್ಯೋಗದಲ್ಲಿನ ಅಪರೂಪದ ಅವಕಾಶಗಳನ್ನು ದೂರ ಮಾಡಿಕೊಳ್ಳುತ್ತಾರೆ.

ಆದಾಯದ ವಿಚಾರದಲ್ಲಿ ಇವರು ಸಂಯಮದಿಂದ ವರ್ತಿಸುವುದಿಲ್ಲ. ಇವರು ಅರಿವಿಗೆ ಬಾರದಂತೆಯೇ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸೋದರ ಅಥವಾ ಸೋದರಿಯ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿ ಕಷ್ಟಕ್ಕೆ ಸಿಲುಕುತ್ತಾರೆ. ಮನದಲ್ಲಿರುವ ಆಸೆ ಆಕಾಂಕ್ಷೆಗಳನ್ನು ಸುಲಭವಾಗಿ ಪೂರೈಸಿಕೊಳ್ಳುತ್ತಾರೆ. ಮಕ್ಕಳ ಮೇಲೆ ವಿಶೇಷವಾದಂತಹ ಕಾಳಜಿ ವಹಿಸುವರು. ಸಮಯ ದೊರೆತಾಗ ಕುಟುಂಬದ ಜನರ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ಭೇಟಿ ನೀಡುತ್ತಾರೆ.

ವಿವಾಹದ ವಿಚಾರದಲ್ಲಿ ಕುಟುಂಬದ ಹಿರಿಯರ ಮನಸ್ಸನ್ನು ನೋಯಿಸದಂತೆ ನಡೆದುಕೊಳ್ಳುತ್ತಾರೆ. ಪರಿಚಯದವರ ಜೊತೆಯಲ್ಲಿ ವಿವಾಹವಾದರೂ ಹಿರಿಯರ ಒಪ್ಪಿಗೆಯಂತೆ ನಡೆದುಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ಪರಸ್ಪರ ಉತ್ತಮ ಅನುಬಂಧ ಕಂಡುಬರುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಯಶಸ್ಸು ಸಂತಸಕ್ಕೆ ಕಾರಣವಾಗುತ್ತದೆ. ಸದಾಕಾಲ ಒಳ್ಳೆಯ ಬದಲಾವಣೆಗಳನ್ನು ನಿರೀಕ್ಷಿಸುತ್ತಾ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ. ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ.

ವಯಸ್ಸಿನ ಮಿತಿ ಇಲ್ಲವೇ ಸದಾ ಕಾಲ ಯಾವುದಾದರೂ ಒಂದು ಹೊಸ ವಿಚಾರವನ್ನು ಕಲಿಯುವ ಆಸಕ್ತಿ ತೋಳುವರು. ಸಂಗಾತಿಯ ಸಹಾಯ ಮತ್ತು ಸಹಕಾರದಿಂದ ಸ್ವಂತ ಮನೆ ಅಥವಾ ಜಮೀನನ್ನು ಕೊಳ್ಳುವ ಆಸೆಯು ಕೈಗೂಡುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಟ್ಟರು ಬೇರೆಯವರ ಸಹಾಯ ಬಯಸುವುದಿಲ್ಲ. ಇಳಿ ವಯಸ್ಸಿನಲ್ಲಿಯೂ ಸಹ ಯಾವುದಾದರೂ ಒಂದು ಹೊಸ ಬದಲಾವಣೆಗಳಿಗೆ ಕಾರಣರಾಗುತ್ತಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.