Horoscope Today: ಕುಟುಂಬಕ್ಕೆ ಹೊಸಬರ ಆಗಮನ, ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ
ಮಾರ್ಚ್ 5, ಮಂಗಳವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (5 March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (5 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಮಂಗಳವಾರ
ತಿಥಿ : ದಶಮಿ ರಾ.01.24 ರವರೆಗು ಇದ್ದು ಆನಂತರ ಏಕಾದಶಿ ಆರಂಭವಾಗುತ್ತದೆ.
ನಕ್ಷತ್ರ : ಮೂಲ ನಕ್ಷತ್ರವು ಹ.11.12 ರವರೆಗೆ ಇರುತ್ತದೆ. ಆನಂತರ ಪೂರ್ವಾಷಾಡ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.33
ಸೂರ್ಯಾಸ್ತ: ಸ.06.27
ರಾಹುಕಾಲ : ಬೆ.03.00 ರಿಂದ ಬೆ.04.30
ರಾಶಿ ಫಲಗಳು
ಧನಸ್ಸು
ಕುಟುಂಬದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುವ ಕಾರಣ ಬೇಸರ ಉಂಟಾಗಲಿದೆ. ಅನಾವಶ್ಯಕವಾದ ವಿಚಾರಗಳಿಂದ ಖಿನ್ನತೆಗೆ ಒಳಗಾಗುವಿರಿ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳು ಉಂಟಾಗಲಿವೆ. ಅನಿರೀಕ್ಷಿತ ಧನಲಾಭ ಇದ್ದರೂ ಹಣದ ಕೊರತೆ ಕಂಡುಬರುತ್ತದೆ. ವಿದ್ಯಾರ್ಥಿಗಳು ಮನರಂಜನೆಯ ನಡುವೆ ಕಲಿಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ನಿಮ್ಮಲ್ಲಿ ಏಕತೆಯ ಮನೋಭಾವನೆ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ಸಂಗಾತಿಯ ಜೊತೆ ಮಧುರ ಭಾಂದವ್ಯ ಇರುತ್ತದೆ. ಅಜೀರ್ಣತೆಯ ತೊಂದರೆ ಉಂಟಾಗುತ್ತದೆ. ಉಳಿಸಿದ್ದ ಹಣವು ಖರ್ಚಾಗುವ ಸಾಧ್ಯತೆಗಳಿವೆ. ಸಿಹಿ ತಿಂಡಿಗಳಿಂದ ದೂರವಿರಿ.
ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
ಮಕರ
ಸಹನೆಯ ಗುಣ ಕುಟುಂಬದಲ್ಲಿನ ಆತ್ಮೀಯತೆಯನ್ನು ಹೆಚ್ಚಿಸುತ್ತದೆ. ಅತಿ ಮುಖ್ಯವೆನಿಸುವ ಕೆಲಸಗಳನ್ನು ಮಾತ್ರ ಮಾಡಲಿಚ್ಚಿಸುವಿರಿ. ಉದ್ಯೋಗದಲ್ಲಿನ ಜವಾಬ್ದಾರಿಯನ್ನು ನಿರ್ವಹಿಸಲು ಹೆಚ್ಚಿನ ಆತ್ಮವಿಶ್ವಾಸ ಬೇಕಾಗುತ್ತದೆ. ತಪ್ಪು ತಿಳುವಳಿಕೆಯಿಂದ ಚಿಕ್ಕ ವಿವಾದವೊಂದು ದೊಡ್ಡದಾಗುತ್ತದೆ. ಉದ್ಯೋಗದಲ್ಲಿ ಅಡಚಣೆ ಕಂಡುಬರುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಚುರುಕಿನಿಂದ ಮುಂದುವರೆಯುತ್ತಾರೆ. ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವರು. ವಿವಾದಗಳನ್ನು ಸಹನೆಯಿಂದ ಗೆಲ್ಲುವಿರಿ. ಉದ್ಯೋಗ ಬದಲಿಸುವಿರಿ. ಹಿರಿಯರ ಅನುಕಂಪ ದೊರೆಯುತ್ತದೆ. ಕಮೀಷನ್ ವ್ಯವಹಾರದಲ್ಲಿ ಲಾಭವಿದೆ.
ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ಕುಂಭ
ಕುಟುಂಬದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಿರಿ. ಉದ್ಯೋಗದಲ್ಲಿನ ಯೋಜನೆಯೊಂದರಲ್ಲಿ ಹಿನ್ನಡೆ ಇರುತ್ತದೆ. ಅನಿವಾರ್ಯವಾಗಿ ಉದಗಯೋಗ ಬದಲಿಸುವ ತೀರ್ಮಾನ ಮಾಡುವಿರಿ. ಸ್ವಂತ ವ್ಯಾಪಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹಣವನ್ನು ಸಂಪಾದಿಸಬಲ್ಲಿರಿ. ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕೆ ಪರಸ್ಥಳಕ್ಕೆ ತೆರಳಲಿದ್ದಾರೆ. ಆತ್ಮೀಯರೊಂದಿಗೆ ಸಂತೋಷಕೂಟ ಆಯೋಜಿಸುವಿರಿ. ಬೇಸರದಿಂದ ದೂರವಾಗಲು ಧ್ಯಾನದ ಮಾರ್ಗದಲ್ಲಿ ಸಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ತನ್ಮಯರಾಗುವಿರಿ. ಅವಿವಾಹಿತರಿಗೆ ವಿವಾಹದ ಮಾತುಕತೆ ನಡೆಯಲಿದೆ. ಷ್ಟಾಕ್ ಷೇರಿನ ವ್ಯವಹಾರದಲ್ಲಿ ಉತ್ತಮ ಹಣಗಳಿಕೆ ಇರುತ್ತದೆ. ಸೋದರರ ನಡುವೆ ಅನಾವಶ್ಯಕ ವಾದ ವಿವಾದ ಉಂಟಾಗುತ್ತದೆ.
ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ನೀಲಿ ಬಣ್ಣ
ಮೀನ
ಕುಟುಂಬಕ್ಕೆ ಹೊಸಬರ ಆಗಮನ ಆಗಲಿದೆ. ಕುಟುಂಬದವರೊಂದಿಗೆ ದೀರ್ಘಕಾಲದ ಪ್ರಯಾಣಕ್ಕೆ ಯೋಜನೆ ರೂಪಿಸುವಿರಿ. ಉದ್ಯೋಗದಲ್ಲಿನ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವಿರಿ. ಹಣಕಾಸಿನ ವಿಚಾರದಲ್ಲಿ ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಿಸದಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ಇರಲಿದೆ. ಆತ್ಮೀಯರ ಸಹಾಯದಿಂದ ಹಣ ಉಳಿಸುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹಯೋಗವಿದೆ. ಎಲ್ಲರೂ ಮೆಚ್ಚುವಂತಹ ಕೆಲಸವನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳು ವಿದೇಶೀ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ತಲೆನೋವಿನ ತೊಂದರೆಯಿಂದ ಬಳಲುವಿರಿ. ಯಂತ್ರೋಪಕರಣಗಳಿಂದ ತೊಂದರೆ ಉಂಟಾಗಬಹುದು.
ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಎಲೆ ಹಸಿರು ಬಣ್ಣ
-----------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ