Horoscope Today: ಮನೆತನದ ಹಣ ಮತ್ತು ಆಸ್ತಿ ವಿವಾದ ಕೊನೆಗೊಳ್ಳಲಿದೆ, ಉದ್ಯೋಗ ಬದಲಾವಣೆ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ
ಮಾರ್ಚ್ 8, ಶುಕ್ರವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (8 March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (8 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಶುಕ್ರವಾರ
ತಿಥಿ : ತ್ರಯೋದಶಿ ರಾ.08.00 ರವರೆಗು ಇದ್ದು ಆನಂತರ ಚತುರ್ದಶಿ ಆರಂಭವಾಗುತ್ತದೆ.
ನಕ್ಷತ್ರ: ಶ್ರವಣ ನಕ್ಷತ್ರವು ಬೆ.08.23 ರವರೆಗೆ ಇರುತ್ತದೆ. ಆನಂತರ ಧನಿಷ್ಠ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.29
ಸೂರ್ಯಾಸ್ತ: ಸ.06.28
ರಾಹುಕಾಲ : ಬೆ.10.30 ರಿಂದ ಮ.12.00
ರಾಶಿ ಫಲಗಳು
ಸಿಂಹ
ಸಣ್ಣ ಪುಟ್ಟ ತಪ್ಪುಗಳನ್ನು ಸಹ ಮನ್ನಿಸಿದರೆ ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಮೂಡುತ್ತದೆ. ಉದ್ಯೋಗದಲ್ಲಿ ಹೊಸ ಯೋಜನೆಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿಗಳ ವೃತ್ತಿಜೀವನದಲ್ಲಿ ನಿರೀಕ್ಷಿತ ಬದಲಾವಣೆ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉನ್ನತ ಮಟ್ಟ ತಲುಪುವಿರಿ. ವಿದ್ಯಾರ್ಥಿಗಳು ಹಠದಿಂದ ಎಲ್ಲರ ವಿಶ್ವಾಸ ಕಳೆದುಕೊಳ್ಳಬಹುದು. ಮನೆತನದ ಹಣ ಮತ್ತು ಆಸ್ತಿಯ ವಿಚಾರದಲ್ಲಿನ ವಿವಾದ ಕೊನೆಗೊಳ್ಳಲಿದೆ. ಆಸ್ತಿ ವಿಸ್ತರಿಸುವ ಆಶಯ ಇರುತ್ತದೆ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಕೈಕಾಲುಗಳ ಶಕ್ತಿ ಕುಂಠಿತಗೊಳ್ಳಬಹುದು. ಹೊಸ ಹಣಕಾಸಿನ ವ್ಯವಹರದ ಬಗ್ಗೆ ಮಾತುಕತೆ ನಡೆಯುತ್ತದೆ. ವೃಥಾ ತಿರುಗಾಟ ಇರುತ್ತದೆ.
ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ನೀಲಿಯುಕ್ತ ಬಿಳಿ ಬಣ್ಣ
ಕನ್ಯಾ
ಮಾಡುವ ತಪ್ಪನ್ನು ಒಪ್ಪದೆ ಕೋಪದಿಂದ ವರ್ತಿಸಿ ಪಾರಾಗುವಿರಿ. ಕುಟುಂಬದಲ್ಲಿ ಪರಸ್ಪರ ಅಸಮಾಧಾನ ಇರಬಹುದು. ಒಲ್ಲದ ಮನಸ್ಸಿನಿಂದ ಮಾಡುವ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರದು. ಉದ್ಯೋಗದಲ್ಲಿ ಎಲ್ಲರ ಜೊತೆ ಅನುಸರಣೆ ಮುಖ್ಯ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಬೆಳೆಸಿಕೊಂಡರೆ ಶುಭ ಫಲಿತಾಂಶಗಳು ದೊರೆಯುತ್ತವೆ. ಸ್ನೇಹಿತರೊಂದಿಗೆ ಸಂತೋಷಕೂಟಕ್ಕೆ ತೆರಳುವಿರಿ. ವಂಶಾನುಗತವಾಗಿ ಬಂದ ವಿದ್ಯೆಯೊಂದು ಜೀವನಕ್ಕೆ ಆಧಾರವಾಗುತ್ತದೆ. ಆತ್ಮೀಯರೊಬ್ಬರು ಮನೆಗೆ ಭೇಟಿ ನೀಡಲಿದ್ದಾರೆ. ಸೋದರ ಮಾವನಿಂದ ಅನುಕೂಲತೆ ಉಂಟಾಗಲಿದೆ. ಮಾನಸಿಕವಾಗಿ ದುರ್ಬಲರಾಗುವಿರಿ. ಅನಿರೀಕ್ಷಿತವಾದ ಧನಲಾಭ ಇರುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ತುಲಾ
ಕುಟುಂಬದ ಸದಸ್ಯರ ಜೊತೆ ಹಣಕಾಸಿನ ವಿವಾದವೊಂದು ಉಂಟಾಗುತ್ತದೆ. ಉದ್ಯೋಗದಲ್ಲಿ ಸಂತಸದ ಕ್ಷಣಗಳು ನೆಲೆಸಿರುತ್ತವೆ. ಹೊಸ ನಿರೀಕ್ಷೆಗಳು ಉದ್ಯೋಗವನ್ನು ಬದಲಿಸಲು ಪ್ರೇರೇಪಿಸುತ್ತದೆ. ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನ ಮಾನ ಲಭಿಸುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ. ಸಹನೆಯಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಮಕ್ಕಳ ಸಂತಸ ಹೊಸ ಅವಕಾಶವನ್ನು ಕಲ್ಪಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಸಂತೃಪ್ತಿ ಕಾಣುವಿರಿ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ಕಷ್ಟಕ್ಕೆಂದು ನೀಡಿದ್ದ ಹಣವನ್ನು ಸಂಬಂಧಿಕರು ಮರಳಿಸುತ್ತಾರೆ. ಅಲ್ಪ ತೃಪ್ತಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಎಲೆ ಹಸಿರು ಬಣ್ಣ
ವೃಶ್ಚಿಕ
ಯಾರ ಸಲಹೆಯನ್ನೂ ಸುಲಭವಾಗಿ ಒಪ್ಪುವುದಿಲ್ಲ. ಅತಿಯಾದ ನಿರೀಕ್ಷೆ ಕುಟುಂಬದಲ್ಲಿ ಹೊಸತನವನ್ನು ಉಂಟುಮಾಡುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರಕ್ಕೆ ಹಾತೊರೆಯುವಿರಿ. ನಿರಾಸೆಯ ಕಾರಣ ಉದ್ಯೋಗವನ್ನು ಬದಲಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಹಿನ್ನಡೆ ಲಭಿಸುತ್ತದೆ. ಕುಟುಂಬದವರ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಪ್ರಥಮ ಆದ್ಯತೆಯನ್ನು ವಿದ್ಯಾಭ್ಯಾಸಕ್ಕೆ ನೀಡುತ್ತಾರೆ. ಹೆಚ್ಚಿನ ಕಲಿಕೆಗಾಗಿ ವಿದೇಶಕ್ಕೆ ತೆರಳುವ ಅವಕಾಶವಿದೆ. ಜಾಣ್ಮೆಯ ಮಾತಿನಿಂದ ಜನರ ಮನಸ್ಸನ್ನು ಗೆಲ್ಲುವಿರಿ. ಆಧ್ಯಾತ್ಮಿಕತೆಯ ಕಡೆಗೆ ಮನಸ್ಸು ವಾಲುತ್ತದೆ. ಹಣಕಾಸಿನ ವ್ಯವಹಾರ ಒಳ್ಳೆಯದಲ್ಲ. ತಾಯಿಯವರಿಗೆ ಸಂಬಂಧಿಸಿದ ಕೆಲಸವೊಂದು ಪೂರ್ಣಗೊಳ್ಳುತ್ತದೆ.
ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಬಿಸಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
------------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ