ದಿನ ಭವಿಷ್ಯ: ಅಡೆತಡೆಗಳು ಇಲ್ಲದೆ ಕೆಲಸ ಪೂರ್ಣಗೊಳ್ಳುತ್ತೆ, ವ್ಯವಹಾರದಲ್ಲಿ ಹೆಚ್ಚಿನ ಗಮನ ನೀಡುತ್ತೀರಿ
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ.
ಮೇಷ ರಾಶಿ
ಭಾಗ್ಯ ಯೋಗ ಮುಂದುವರಿಯುತ್ತದೆ. ಯಾವುದೇ ಕೆಲಸ ಪ್ರಾರಂಭವಾದರೂ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಉದ್ಯೋಗಿಗಳು ಒಗ್ಗೂಡುವ ಸಮಯ ಬಂದಿದೆ. ನಾಲ್ಕು ಜನಕ್ಕೆ ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಸಾಧಿಸುವಿರಿ. ಹಣ ಪಡೆಯುತ್ತೀರಿ. ಭೂಮಿ, ಗೃಹ ಮತ್ತು ವಾಹನ ಯೋಗಗಳಿವೆ. ಕುಟುಂಬಕ್ಕೆ ಅನುಕೂಲವಾಗಲಿದೆ.
ವೃಷಭ ರಾಶಿ
ರಾಹುವಿನ ಪ್ರಭಾವದಿಂದ ಲಾಭವನ್ನು ಕಾಣುತ್ತೀರಿ. ಕಾಲಹರಣ ಮಾಡಬೇಡಿ. ಉದ್ದೇಶಗಳನ್ನು ಪೂರ್ಣಗೊಳಿಸುತ್ತೀರಿ. ಕೆಟ್ಟ ಆಲೋಚನೆಗಳಿಗೆ ಅವಕಾಶ ನೀಡಬೇಡಿ. ತೊಂದರೆ ಕೊಡುವವರ ಬಗ್ಗೆ ಎಚ್ಚರದಿಂದಿರಿ. ಸ್ನೇಹಿತರಿಂದ ಸಲಹೆ ಪಡೆಯಿರಿ. ವೆಚ್ಚವನ್ನು ನಿಯಂತ್ರಣದಲ್ಲಿಡಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಗುರಿ ಸಾಧನೆಗೆ ಸಹಾಯವಾಗುವ ಕೆಲಸಗಳನ್ನು ಪ್ರಾರಂಭಿಸುತ್ತೀರಿ. ಜೀವನದ ಹೊಸ ಅವಕಾಶಗಳನ್ನು ಸ್ವೀಕರಿಸುತ್ತೀರಿ.
ಮಿಥುನ ರಾಶಿ
ಮನೋಬಲದಿಂದ ಯಶಸ್ಸು ಸಾಧಿಸುವಿರಿ. ಬುದ್ಧಿವಂತಿಕೆ ಅಗತ್ಯವಿದೆ. ವ್ಯಾಪಾರವು ಹೆಚ್ಚು ಬೆಳೆಯುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಮಹತ್ವಾಕಾಂಕ್ಷೆಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುತ್ತೀರಿ. ವಾಸ್ತವಿಕವಾಗಿ ಯೋಚಿಸಿ. ಉದ್ಯೋಗದಲ್ಲಿ ಮಿಶ್ರ ಫಲಿತಾಂಶಗಳು ಇರುತ್ತವೆ. ಅಧಿಕಾರಿಗಳ ಒತ್ತಡ ಕಡಿಮೆಯಾಗಲಿದೆ. ಒಳ್ಳೆಯ ಸುದ್ದಿಯು ಸಂತೋಷವನ್ನು ತರುತ್ತದೆ.
ಕಟಕ ರಾಶಿ
ನಿಮ್ಮ ಆತ್ಮವಿಶ್ವಾಸವೇ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಬಲವಾದ ಇಚ್ಛಾಶಕ್ತಿಯ ಅಗತ್ಯವಿದೆ. ಕೆಲಸಕ್ಕೆ ಸೇರುತ್ತೀರಿ. ಅಧಿಕಾರಿಗಳು ನಿಮ್ಮನ್ನು ಶ್ಲಾಘಿಸುತ್ತಾರೆ. ಸ್ಥಿರತೆ ಸಾಧಿಸುತ್ತೀರಿ. ವ್ಯವಹಾರದಲ್ಲಿ ಹೆಚ್ಚಿನ ಗಮನ ನೀಡಬೇಕು. ಕೆಲವು ಸಂದರ್ಭಗಳಲ್ಲಿ ಸಂಭಾಷಣೆಯ ಜಾಣ್ಮೆ ಅಗತ್ಯವಿರುತ್ತದೆ. ತಪ್ಪು ತಿಳುವಳಿಕೆಗೆ ಮಣಿಯಬೇಡಿ.
ಸಿಂಹ ರಾಶಿ
ಸ್ಥೈರ್ಯದಿಂದ ಕೆಲಸ ಆರಂಭಿಸುತ್ತೀರಿ. ನಿರ್ಧಾರಗಳನ್ನು ಬಲವಾಗಿ ಜಾರಿಗೊಳಿಸುತ್ತೀರಿ. ವ್ಯಾಪಾರದಲ್ಲಿ ಲಾಭವಿದೆ. ಮಿತವ್ಯಯದ ತತ್ವಗಳನ್ನು ಅನುಸರಿಸುತ್ತೀರಿ. ಸ್ಥಿರಾಸ್ತಿ ವೃದ್ಧಿಯಾಗಲಿದೆ. ಅಧಿಕಾರಿಗಳ ಮೇಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಪರಿಸ್ಥಿತಿಯನ್ನು ನಿರ್ಣಯಿಸಿ ಒಂದು ಹೆಜ್ಜೆ ಮುಂದಿಡಿ.
ಕನ್ಯಾ ರಾಶಿ
ಪ್ರಮುಖ ವಿಷಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಪರಿಸ್ಥಿತಿಯನ್ನು ನಿರ್ಣಯಿಸುವ ಮೂಲಕ ವ್ಯವಹಾರವನ್ನು ವಿಸ್ತರಿಸಿಕೊಳ್ಳವ ಯೋಜನೆ ಮಾಡುತ್ತೀರಿ. ಹಿಂದಿನ ಪ್ರಯತ್ನಗಳು ಫಲ ನೀಡುತ್ತವೆ. ಹಣ ಪಡೆಯುತ್ತೀರಿ. ಕೆಲವೊಮ್ಮೆ ಮೌನವೇ ಉತ್ತಮ ಉತ್ತರವಾಗಿರಲಿದೆ.
ತುಲಾ ರಾಶಿ
ಸ್ಥಿರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಏಕಾಗ್ರತೆಯೊಂದಿಗೆ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಲಾಗುತ್ತದೆ. ಸಹೋದ್ಯೋಗಿಗಳೊಂದಿಗೆ ಸಂಬಂಧವನ್ನು ಸುಧಾರಿಸಬೇಕು. ತಪ್ಪು ತಿಳುವಳಿಕೆಗೆ ಅವಕಾಶ ನೀಡಬೇಡಿ. ಸ್ನೇಹಿತರೊಂದಿಗೆ ಸಂಬಂಧ ವೃದ್ಧಿಸಲಿದೆ. ವ್ಯಾಪಾರ ನಿರ್ಧಾರಗಳಿಗಾಗಿ ಇತರರನ್ನು ಅವಲಂಬಿಸುವುದು ಉತ್ತಮ. ವಿವಾದಗಳನ್ನು ತಪ್ಪಿಸಬೇಕು.
ವೃಶ್ಚಿಕ ರಾಶಿ
ಕೆಲಸದ ಫಲಿತಾಂಶಗಳು ಉತ್ತಮವಾಗಿರುತ್ತವೆ. ದೀರ್ಘಾವಧಿಯ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಮೇಲಧಿಕಾರಿಗಳ ಗಮನ ಸೆಳೆಯುವಿರಿ. ತಪ್ಪುಗಳನ್ನು ಮಾಡಬೇಡಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಗೆಳೆಯರಿಂದ ಪ್ರೋತ್ಸಾಹ ಸಿಗುತ್ತೆ. ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಸಮಯ ಕಳೆಯುವಿರಿ.
ಧನು ರಾಶಿ
ಧನಯೋಗವಿದೆ. ಆರ್ಥಿಕ ಪರಿಸ್ಥಿತಿಗಳು ಅನುಕೂಲಕರವಾಗಿವೆ. ಏಕಾದಶದಲ್ಲಿ ಶುಕ್ರನ ಉಪಸ್ಥಿತಿಯಿಂದ ಸಂಪತ್ತು ಹೆಚ್ಚಾಗುತ್ತದೆ. ಕೆಲಸದ ಫಲಿತಾಂಶಗಳು ಧನಾತ್ಮಕವಾಗಿರುತ್ತವೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಶಿಸ್ತು ಅಡೆತಡೆಗಳನ್ನು ನಿವಾರಿಸುತ್ತದೆ. ಕುಟುಂಬ ಸದಸ್ಯರಿಗೆ ಒಳ್ಳೆಯದಾಗುತ್ತದೆ.
ಮಕರ ರಾಶಿ
ಸಂಕಲ್ಪದಿಂದ ಕೆಲಸ ಆರಂಭಿಸುತ್ತೀರಿ. ನಂಬಿದ ಧರ್ಮವು ನಿಮ್ಮನ್ನು ಸದಾ ಕಾಪಾಡುತ್ತದೆ. ಶಾಂತವಾಗಿರಿ. ತಾಳ್ಮೆ ಅಗತ್ಯ. ಸದ್ಯದ ಮಟ್ಟಿಗೆ ವ್ಯಾಪಾರದಲ್ಲಿ ಹೊಸ ಪ್ರಯೋಗಗಳು ಮಾಡಲು ಹೋಗಬೇಡಿ. ಪ್ರಯತ್ನಗಳು ದಾರಿ ತಪ್ಪಿದರೆ, ನಷ್ಟಕ್ಕೆ ಹೆಚ್ಚಿನ ಅವಕಾಶವಿದೆ. ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಬೇಡಿ. ಮೌನವೇ ಶ್ರೇಷ್ಠ ಎಂದು ಭಾವಿಸುತ್ತೀರಿ.
ಕುಂಭ ರಾಶಿ
ಧೈರ್ಯದಿಂದ ಮುನ್ನಡೆಯುತ್ತೀರಿ. ಭಾಗ್ಯ ಸ್ಥಾನದಲ್ಲಿ ಲಕ್ಷ್ಮೀಗ್ರಹ ಶುಕ್ರನಿಂದಾಗಿ ಆರ್ಥಿಕ ಪ್ರಗತಿ ಸಾಧ್ಯವಾಗುತ್ತೆ. ತಾಳ್ಮೆ ಕಳೆದುಕೊಂಡರೆ ನಷ್ಟ ಅನಿವಾರ್ಯವಾಗುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ಗೆಳೆಯರೊಂದಿಗೆ ಸ್ನೇಹದಿಂದಿರಿ.
ಮೀನ ರಾಶಿ
ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಅಂತಿಮವಾಗಿ ಗೆಲುವು ನಿಮ್ಮದೇ ಆಗುತ್ತೆ. ತಾತ್ಕಾಲಿಕ ಅಡೆತಡೆಗಳಿಗೆ ತಾಳ್ಮೆ ಕಳೆದುಕೊಳ್ಳಬೇಡಿ. ಕುಟುಂಬ ಸದಸ್ಯರ ಸಲಹೆಯನ್ನು ಅನುಸರಿಸಿ. ಶುಕ್ರನು ಸಂಪತ್ತನ್ನು ನೀಡುತ್ತಾನೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಅದೇ ಸಮಯದಲ್ಲಿ ವ್ಯಾಪಾರವು ಮಿಶ್ರ ಫಲಿತಾಂಶಗಳನ್ನು ಹೊಂದಿದೆ. ಹೊಸ ಪ್ರಯತ್ನಗಳಿಗೆ ಉತ್ತಮ ಸಮಯವಲ್ಲ.
ವಿಭಾಗ