ಸೂರ್ಯ ಮುಳುಗಿದ ನಂತರ ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು, ಯಾವ ದಿಕ್ಕಿಗೆ ಕುಳಿತು ಊಟ ಮಾಡಬೇಕು?: ವಾಸ್ತುಶಾಸ್ತ್ರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೂರ್ಯ ಮುಳುಗಿದ ನಂತರ ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು, ಯಾವ ದಿಕ್ಕಿಗೆ ಕುಳಿತು ಊಟ ಮಾಡಬೇಕು?: ವಾಸ್ತುಶಾಸ್ತ್ರ

ಸೂರ್ಯ ಮುಳುಗಿದ ನಂತರ ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು, ಯಾವ ದಿಕ್ಕಿಗೆ ಕುಳಿತು ಊಟ ಮಾಡಬೇಕು?: ವಾಸ್ತುಶಾಸ್ತ್ರ

ವಾಸ್ತು ಇಂದು ನಿನ್ನೆಯದಲ್ಲ, ಪುರಾತನ ಕಾಲದಿಂದಲೂ ವಾಸ್ತುವಿಗೆ ಬಹಳ ಪ್ರಾಮುಖ್ಯತೆ ಇದೆ. ವಾಸ್ತುವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಖ, ಸಂತೋಷದಿಂದ ಜೀವನ ನಡೆಸಬಹುದು. ಆರೋಗ್ಯ ಸಮಸ್ಯೆಯೂ ಕಾಡುವುದಿಲ್ಲ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಸೂರ್ಯ ಮುಳುಗಿದ ನಂತರ ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು, ಯಾವ ದಿಕ್ಕಿಗೆ ಕುಳಿತು ಊಟ ಮಾಡಬೇಕು?: ವಾಸ್ತುಶಾಸ್ತ್ರ
ಸೂರ್ಯ ಮುಳುಗಿದ ನಂತರ ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು, ಯಾವ ದಿಕ್ಕಿಗೆ ಕುಳಿತು ಊಟ ಮಾಡಬೇಕು?: ವಾಸ್ತುಶಾಸ್ತ್ರ

ವಾಸ್ತುವಿನಲ್ಲಿ ಅನೇಕ ವಿಚಾರಗಳನ್ನು ತಿಳಿಸಲಾಗಿದೆ. ಮನೆಯ ಮುಖ್ಯದ್ವಾರದಿಂದ ಹಿಡಿದು ಶೌಚಾಲಯದವರೆಗೂ ವಾಸ್ತು ಅಳವಡಿಸಿಕೊಂಡರೆ ಯಾವುದೇ ನಕಾರಾತ್ಮಕ ಅಂಶಗಳು ಮನೆಯಲ್ಲಿ ಇರುವುದಿಲ್ಲ. ಹಣಕಾಸು, ವೃತ್ತಿ ಜೀವನ, ಆರೋಗ್ಯ ಎಲ್ಲವೂ ಚೆನ್ನಾಗಿರುತ್ತದೆ. ಇಲ್ಲಿ ವಾಸ್ತುವಿಗೆ ಸಂಬಂಧಿಸಿದ ಕೆಲವೊಂದು ಅಂಶಗಳನ್ನು ಉಲ್ಲೇಖಿಸಲಾಗಿದೆ.

  • ದಕ್ಷಿಣ ದಿಕ್ಕಿಗೆ ಮುಖ ಮಾಡಿ ಯಾವುದೇ ರೀತಿಯ ಪೂಜೆ ಪುನಸ್ಕಾರ ಅಥವಾ ಶುಭ ಕಾರ್ಯಕ್ರಮಗಳನ್ನು ಮಾಡಬಾರದು.
  • ಕಾಲು ತೊಳೆದ ನಂತರ ಕಾಲು ಒದ್ದೆಯಾಗಿರುವ ವೇಳೆ ಆಹಾರ ಸೇವನೆ ಮಾಡಬಾರದು.
  • ಸೂರ್ಯನು ಮುಳುಗಿದ ನಂತರ ಎಳ್ಳನ್ನು ಉಪಯೋಗಿಸಿ ಯಾವುದೇ ಆಹಾರ ತಯಾರಿಸಬಾರದು ಮತ್ತು ತಿನ್ನಬಾರದು.
  • ದೇವರಿಗೆ ಮಾಡಿದ ಮಂಗಳಾರತಿ ಆಗಲಿ ಅಥವಾ ಇನ್ನಾವುದೇ ಆರತಿಯಾಗಲಿ ಅದನ್ನು ಬಾಯಿಯಿಂದ ಗಾಳಿ ಊದಿ ಆರಿಸಬಾರದು.
  • ಸೂರ್ಯನು ಉದಯಿಸುವ ವೇಳೆ ಮತ್ತು ಸೂರ್ಯನು ಮುಳುಗುವ ವೇಳೆ ಹಾಸಿಗೆ ಮೇಲೆ ಮಲಗಬಾರದು.
  • ಯಾವುದೇ ಕಾರಣಕ್ಕೂ ಮುಂಬಾಗಿಲಿಗೆ ಎದುರಾಗಿ ಕಾಲು ಇಟ್ಟು ಮಲಗಬಾರದು.

ಇದನ್ನೂ ಓದಿ: ಆಗಸ್ಟ್ 11 ರಂದು ಶುಕ್ರ ಪೂರ್ವ ಫಲ್ಗುಣಿ ನಕ್ಷತ್ರ ಪ್ರವೇಶ; ಈ 4 ರಾಶಿಯವರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆ ಇರಲ್ಲ

  • ಮುಂಭಾಗದಾಗಲಿ ಅಥವಾ ಯಾವುದೇ ಕೊಠಡಿಯ ಬಾಗಿಲಿನ ಹೊಸ್ತಿಲ ಮೇಲೆ ತಲೆ ಅಥವಾ ಕಾಲನ್ನು ಇಟ್ಟು ಮಲಗಬಾರದು.
  • ದಕ್ಷಿಣ ಅಥವಾ ಆಗ್ನೇಯ ದಿಕ್ಕನ್ನು ವಿಸ್ತರಿಸಬಾರದು.
  • ಮನೆಯನ್ನು ಕಟ್ಟುವ ಕೆಲಸವನ್ನು ದೇವಮೂಲೆ ಅಂದರೆ ಈಶಾನ್ಯದ ದಿಕ್ಕಿನಿಂದ ಆರಂಭಿಸಬೇಕು. ಪೂರ್ವ ದಿಕ್ಕಿನ ಕೆಲಸವು ಪೂರ್ಣಗೊಳ್ಳುವುದು ಒಳ್ಳೆಯದು.
  • ಮನೆಯನ್ನು ಅಭಿವೃದ್ಧಿಗೊಳಿಸಲು ಅಥವಾ ವಿಸ್ತರಿಸಲು ಆದರೆ ಪೂರ್ವದಿಕ್ಕು ಶ್ರೇಷ್ಠವಾಗಿರುತ್ತದೆ.
  • ಹೊಸ ಮನೆಗೆ ಒಳಗೆ ಗೋವಿನ ಪ್ರವೇಶ ಆಗುವವರೆಗೂ ಆ ಮನೆಯಲ್ಲಿ ಭೋಜನವನ್ನು ಸೇವಿಸಬಾರದು.
  • ಮನೆಗೆ ಬಂದ ಅತಿಥಿಗಳಿಗೆ ಭೋಜನ ನೀಡುವವರೆಗೂ ಹೊಸ ಮನೆಯ ಶೌಚಾಲಯವನ್ನು ಬಳಸಬಾರದು.
  • ಕಿಟಕಿಯನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ತೆರೆಯುವಂತೆ ಇರಬೇಕು.
  • ಪಶ್ಚಿಮದಲ್ಲಿ ವಾಯುಕಾರಕನಾದ ಶನಿದೇವನು ಇರುತ್ತಾನೆ, ಆದ್ದರಿಂದ ಭೋಜನ ಮಾಡುವ ವೇಳೆ ಪಶ್ಚಿಮ ದಿಕ್ಕನ್ನು ಆಯ್ಕೆ ಮಾಡಬೇಕು ಇದರಿಂದಾಗಿ ಶಕ್ತಿಯು ಹೆಚ್ಚುತ್ತದೆ.
  • ದೇವಮೂಲೆಯಲ್ಲಿ ಕಸವನ್ನು ಇಡಬಾರದು, ಸೂರ್ಯ ಉದಯಿಸುವ ವೇಳೆ ಮತ್ತು ಸೂರ್ಯನು ಮುಳುಗುವ ವೇಳೆ ಮನೆಯಿಂದ ಕಸವನ್ನು ಹೊರಗೆ ತೆಗೆದುಕೊಂಡು ಹೋಗಬಾರದು.
  • ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಭಾರವಾದ ವಸ್ತುವನ್ನು ಇರಿಸಬೇಕು. ಆದರೆ ತೂಕವು ಪೂರ್ವ ಮತ್ತು ಉತ್ತರದ ಕಡೆಗೆ ಇರಬಾರದು.

ಇದನ್ನೂ ಓದಿ: ಮನೆಯ ಯಾವ ದಿಕ್ಕಿನಲ್ಲಿ ಕೊಳವೆ ಬಾವಿ ಇರಬೇಕು, ತೆಂಗಿನ ಮರ ಯಾವ ದಿಕ್ಕಿಗೆ ಇದ್ದರೆ ಒಳಿತು?; ವಾಸ್ತುಶಾಸ್ತ್ರ

  • ದೂರವಾಣಿಯಲ್ಲಿ ಮಾತನಾಡುವ ವೇಳೆ ವಾಯವ್ಯ ದಿಕ್ಕು ಮುಖ್ಯವಾಗುತ್ತದೆ.
  • ಈಶಾನ್ಯದ ಮೂಲೆಯಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಬಹುದು.
  • ಎಲ್ಲಾ ದ್ವಾರಗಳಿಗೂ ಬಾಗಿಲನ್ನು ಇಡಬೇಕು. ಇಲ್ಲವಾದಲ್ಲಿ ಕನಿಷ್ಠಪಕ್ಷ ಬಟ್ಟೆಯ ಪರದೆಯನ್ನಾದರೂ ಅಳವಡಿಸಬೇಕು.
  • ಉತ್ತರದಿಂದ ದಕ್ಷಿಣಕ್ಕೆ ಸಮಪಾಲು ಮಾಡಿ ಗೋಡೆಯನ್ನು ಹಾಕಿದಲ್ಲಿ ಹಣಕಾಸಿನ ತೊಂದರೆ ಇರುತ್ತದೆ.
  • ಪೂರ್ವದಿಂದ ಪಶ್ಚಿಮಕ್ಕೆ ಸಮಪಾಲು ಮಾಡಿ ಗೋಡೆಯನ್ನು ಹಾಕಿದಲ್ಲಿ ಸದಾ ಕಾಲ ಅನಾರೋಗ್ಯದಿಂದ ಬಳಲಬೇಕಾಗುತ್ತದೆ.
  • ಹಳೆಯಮನೆಯನ್ನು ಭಾಗಶಃ ನವೀಕರಿಸಿ ಅದರಲ್ಲಿ ವಾಸ ಮಾಡಬಾರದು. ಇದರಿಂದಾಗಿ ಕಷ್ಟಗಳು ಹೆಚ್ಚುತ್ತವೆ.
  • ಮನೆಯ ಸುತ್ತಮುತ್ತ ದೇವಸ್ಥಾನಗಳು ಇರಬಹುದು ಆದರೆ ಅದರ ಗೋಪುರದ ನೆರಳು ಮನೆಯ ಮೇಲೆ ಬೀಳಬಾರದು.
  • ಮನೆಯ ಮುಂಬಾಲಿಗೆ ಸರಿಯಾಗಿ ಶಕ್ತಿ ದೇವತೆಗಳ ಗುಡಿ ಇರಬಾರದು. ಮನೆಯ ಮೇಲೆ ಅರಳಿ ಮರದ ನೆರಳು ಇರಬಾರದು.
  • ಮನೆಯ ಮೇಲೆ ಅರಳಿ ಮರದ ಕೊಂಬೆಗಳು ಬರಬಾರದು. ಮನೆಗೆ ಮುಂದೆ ಅಥವಾ ಮನೆಯ ಒಳಗೆ ತೆಂಗಿನ ಮರ ಇದ್ದಲ್ಲಿ ಅದನ್ನು ಕಡಿಯಬಾರದು.
  • ಮನೆಯ ಆವರಣದಲ್ಲಿ ನಿಲ್ಲಿಸಿರುವ ವಾಹನವು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಚಾಲನೆ ಮಾಡುವಂತೆ ಇರಬಾರದು.

ಇದನ್ನೂ ಓದಿ: ಮಹಾ ಭಾರತ ಯುದ್ಧಕ್ಕೆ ಕಾರಣವಾಯ್ತು ದ್ರೌಪದಿಯ ನಗು; ಪಾಂಡವರನ್ನು ಸರ್ವನಾಶ ಮಾಡಲು ದುರ್ಯೋಧನ ನಿರ್ಧರಿಸಿದ್ದೇಕೆ?

  • ವಾಹನ ನಿಲುಗಡೆಯ ಜಾಗದ ಗೋಡೆ ಮತ್ತು ಪೂಜಾ ಗೃಹದ ಗೋಡೆಯು ಒಂದೇ ಆಗಿರಬಾರದು.
  • ಮನೆಯ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಹೂವು ಅಥವಾ ಹಣ್ಣು ಬಿಡದ ಗಿಡಗಳನ್ನು ಬೆಳೆಸಬಾರದು.
  • ಉತ್ತರ ಭಾಗದಲ್ಲಿ ಸಿಹಿ ಅಲ್ಲದ ಹಣ್ಣಿನ ಗಿಡಗಳನ್ನು ಬೆಳೆಸಿದರೆ ಮನೆಯ ಜನರಿಗೆ ಸಮಾಜದಲ್ಲಿ ಕೆಟ್ಟ ಹೆಸರು ಬರುತ್ತದೆ.
  • ಗರ್ಭಿಣಿಯರು ಹೊಸ ಮನೆಯ ಮುಂಬಾಗಿಲಿಗೆ ಅಡ್ಡಲಾಗಿ ಮಲಗಬಾರದು.
  • ಗರ್ಭಿಣಿಯರು ಹೊಸ ಮನೆಯ ಗೃಹಪ್ರವೇಶದ ವೇಳೆ ಅನ್ನ ಬಲಿ ಹಾಕುವ ವೇಳೆ ಎದುರು ನಿಲ್ಲಬಾರದು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.