Lunar Eclipse 2022: ನಾಳೆ ಖಗ್ರಾಸ ಚಂದ್ರಗ್ರಹಣ, ಕನಿಷ್ಠ ಭಾಗದ ಮೇಲೆ ಪರಿಣಾಮ, ಅವಧಿ 4 ಗಂಟೆ, ಸೂತಕ ಅವಧಿ, ಹುಣ್ಣಿಮೆಯವರೆಗಿನ ತಿಥಿಯ ವಿವರ
Lunar Eclipse 2022: ಕಾರ್ತಿಕ ಪೂರ್ಣಿಮೆಯ ದಿನವಾದ ಮಂಗಳವಾರ ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ಬಾರಿಯ ಕಾರ್ತಿಕ ಪೂರ್ಣಿಮೆಯನ್ನು ಅತ್ಯಂತ ವಿಶೇಷವಾಗಿಸುತ್ತಿದೆ. ಆದರೆ ಚಂದ್ರಗ್ರಹಣದ ಪರಿಣಾಮ ಸಾಮಾಜಿಕವಾಗಿ, ಭೌಗೋಳಿಕವಾಗಿ ಮತ್ತು ವೈಯಕ್ತಿಕವಾಗಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಕಾರ್ತಿಕ ಪೂರ್ಣಿಮೆಯ ದಿನವಾದ ಮಂಗಳವಾರ ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ಬಾರಿಯ ಕಾರ್ತಿಕ ಪೂರ್ಣಿಮೆಯನ್ನು ಅತ್ಯಂತ ವಿಶೇಷವಾಗಿಸುತ್ತಿದೆ. ಆದರೆ ಚಂದ್ರಗ್ರಹಣದ ಪರಿಣಾಮ ಸಾಮಾಜಿಕವಾಗಿ, ಭೌಗೋಳಿಕವಾಗಿ ಮತ್ತು ವೈಯಕ್ತಿಕವಾಗಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಗ್ರಹಣ ಅವಧಿಯನ್ನು ದಾನ ಮತ್ತು ಆಧ್ಯಾತ್ಮಿಕ ಅಭ್ಯಾಸಕ್ಕೆ ಅತ್ಯಂತ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆರಾಧನೆ, ಸಾಧನೆ, ದಾನ ಇತ್ಯಾದಿಗಳಿಗೆ ಕಾರ್ತಿಕ ಪೂರ್ಣಿಮೆಯು ವರ್ಷದಲ್ಲಿ ಅತ್ಯುತ್ತಮ ದಿನವಾಗಿದೆ. ಆದ್ದರಿಂದ ಈ ಬಾರಿಯ ಆಧ್ಯಾತ್ಮಿಕ ದೃಷ್ಟಿಯಿಂದ ಕಾರ್ತಿಕ ಪೂರ್ಣಿಮೆಯ ದಿನ ಬಹಳ ವಿಶೇಷವಾಗಿರುತ್ತದೆ.
ಈ ಚಂದ್ರಗ್ರಹಣವು ಖಗ್ರಾಸ ಚಂದ್ರಗ್ರಹಣವಾಗಿದ್ದು, ಇದರಲ್ಲಿ ಚಂದ್ರನ ಕನಿಷ್ಠ ಭಾಗ ಮಾತ್ರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷಿ ವಿಭೋರ್ ಇಂದುಸುತ್ ಹೇಳುತ್ತಾರೆ. ಈ ಚಂದ್ರಗ್ರಹಣವು ಅಪರಾಹ್ನ 2:39 ಕ್ಕೆ ಪ್ರಾರಂಭವಾಗಲಿದೆ ಮತ್ತು ಸಂಜೆ 6.19 ರವರೆಗೆ ಇರುತ್ತದೆ, ಅಂದರೆ ಸುಮಾರು ನಾಲ್ಕು ಗಂಟೆಗಳ ಗ್ರಹಣ. ಚಂದ್ರಗ್ರಹಣವು ಮಧ್ಯಾಹ್ನ ಪ್ರಾರಂಭವಾಗುತ್ತದೆ ಆದರೆ ಭಾರತದಲ್ಲಿ ಚಂದ್ರೋದಯವು ಸಂಜೆ ಸಂಭವಿಸುತ್ತದೆ ಎಂದು ಅವರು ಹೇಳುತ್ತಾರೆ, ಆದ್ದರಿಂದ ಈ ಚಂದ್ರಗ್ರಹಣವು ಭಾರತದಲ್ಲಿ ಸಂಜೆ 5.30 ರಿಂದ 6.20 ರ ಸುಮಾರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬುದರ ಕಡೆಗೆ ಲೈವ್ ಹಿಂದುಸ್ತಾನ್ ವರದಿ ಗಮನಸೆಳೆದಿದೆ.
ಈ ಚಂದ್ರಗ್ರಹಣದ ಸೂತಕವು ಮಂಗಳವಾರ ದಿನ ಬೆಳಗ್ಗೆ 8.29 ರಿಂದ ಪ್ರಾರಂಭವಾಗುವುದರಿಂದ ಈ ಬಾರಿ ಕಾರ್ತಿಕ ಪೂರ್ಣಿಮೆಯಂದು ಇಡೀ ದಿನ ದೇವಾಲಯಗಳನ್ನು ಮುಚ್ಚಲಾಗುತ್ತದೆ ಮತ್ತು ಸಂಜೆ 6.19 ರ ನಂತರ ಗ್ರಹಣ ಮೋಕ್ಷದ ನಂತರ ಮಾತ್ರ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ. ಈ ಬಾರಿ ಹುಣ್ಣಿಮೆಯು ನ.7ರ ಸಂಜೆ 4.16ರಿಂದ ಆರಂಭಗೊಂಡು ನ.8ರ ಸಂಜೆ 4.31ರವರೆಗೆ ನಡೆಯಲಿದೆ. ಹೀಗಾಗಿ ನ.8ರಂದು ಹುಣ್ಣಿಮೆಯ ತಿಥಿ ಹಾಗೂ ಚಂದ್ರಗ್ರಹಣದ ಸ್ಥಿತಿಯನ್ನು ಪರಿಗಣಿಸಿ ಈ ಬಾರಿ ದೇವ್-ದೀಪಾವಳಿ ಹಬ್ಬವನ್ನು ನ.7ರ ಸಂಜೆ ಆಚರಿಸಲಾಗುತ್ತದೆ.
ಈ ಚಂದ್ರಗ್ರಹಣದಿಂದಾಗಿ ಹೆಚ್ಚಿನವರಲ್ಲಿ ಮಾನಸಿಕ ಒತ್ತಡ, ಕಿರಿಕಿರಿ, ಖಿನ್ನತೆಯಂತಹ ಸಮಸ್ಯೆಗಳು ಹೆಚ್ಚಾಗುತ್ತವೆ ಅದರಲ್ಲೂ ಖಿನ್ನತೆಯಿಂದ ಬಳಲುತ್ತಿರುವವರು ಈ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಚಂದ್ರನು ಮನಸ್ಸಿನ ನಿಯಂತ್ರಕ ಗ್ರಹವಾಗಿರುವುದರಿಂದ, ಈ ಸಮಯದಲ್ಲಿ ಜನರಲ್ಲಿ ಮಾನಸಿಕ ಸಮಸ್ಯೆಗಳು ವಿಶೇಷವಾಗಿ ಹೆಚ್ಚಾಗುತ್ತವೆ ಎಂದು ವಿಭೋರ್ ಇಂದುಸುತ್ ಹೇಳುತ್ತಾರೆ.
ಚಂದ್ರಗ್ರಹಣ ಸಂಬಂಧಿತ ಇತರೆ ವಿಚಾರಗಳು
1. ನಾಳೆಯೇ ಚಂದ್ರಗ್ರಹಣ, ಈ 4 ರಾಶಿಚಕ್ರದವರು ಎಚ್ಚರದಿಂದಿರಿ
Lunar Eclipse 2022: ನಾಳೆಯೇ ಚಂದ್ರಗ್ರಹಣ! 4 ರಾಶಿಚಕ್ರದವರು ಈ ಸಮಯದಲ್ಲಿ ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಯಾವ ರಾಶಿಯವರು? ವಿವರ ಇಲ್ಲಿದೆ ಗಮನಿಸಿ.
2. ಚಂದ್ರಗ್ರಹಣ ಕುರಿತ ಆಸಕ್ತಿದಾಯಕ ವಿಚಾರಗಳಿವು
Lunar Eclipse 2022: ಚಂದ್ರ ಗ್ರಹಣ (Lunar Eclipse or Chandra Grahan) ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿ ಮತ್ತು ನಿಮಗೆ ಗೊತ್ತಿರಲಾರದ ಕೆಲವು ವಿಚಾರ ವಿವರ ಇಲ್ಲಿದೆ.
3. ಕಾರ್ತಿಕ ಹುಣ್ಣಿಮೆಯಂದೇ ಚಂದ್ರಗ್ರಹಣ! ಈ 4 ರಾಶಿಯವರು ಅದೃಷ್ಟವಂತರು, ಯಾರು ಜಾಗರೂಕರಾಗಿರಬೇಕು?
ದೀಪಾವಳಿ ನಡುವೆಯಷ್ಟೆ ಸೂರ್ಯಗ್ರಹಣ ಸಂಭವಿಸಿದೆ. ಇನ್ನೆರಡು ವಾರದಲ್ಲಿ ಚಂದ್ರಗ್ರಹಣ ಎದುರಾಗುತ್ತಿದೆ. ಹೌದು, ನವೆಂಬರ್ 8 ರಂದು ಚಂದ್ರಗ್ರಹಣ ನಡೆಯಲಿದೆ. ಅಂದು ಕಾರ್ತಿಕ ಹುಣ್ಣಿಮೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣ 4 ರಾಶಿಯವರಿಗೆವಿಶೇಷ ಪ್ರಯೋಜನ ನೀಡುತ್ತದೆ. ಇನ್ನು ನಾಲ್ಕು ರಾಶಿಯವರು ಜಾಗರೂಕರಾಗಿರಬೇಕು. ವಿವರ ಓದಿಗೆ ಈ ಕೊಂಡಿ ಕ್ಲಿಕ್ಕಿಸಿ.