Unlucky Zodiacs for Lunar Eclipse 2022: ನಾಳೆಯೇ ಚಂದ್ರಗ್ರಹಣ, ಈ 4 ರಾಶಿಚಕ್ರದವರು ಎಚ್ಚರದಿಂದಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Unlucky Zodiacs For Lunar Eclipse 2022: ನಾಳೆಯೇ ಚಂದ್ರಗ್ರಹಣ, ಈ 4 ರಾಶಿಚಕ್ರದವರು ಎಚ್ಚರದಿಂದಿರಿ

Unlucky Zodiacs for Lunar Eclipse 2022: ನಾಳೆಯೇ ಚಂದ್ರಗ್ರಹಣ, ಈ 4 ರಾಶಿಚಕ್ರದವರು ಎಚ್ಚರದಿಂದಿರಿ

  • Lunar Eclipse 2022: ನಾಳೆಯೇ ಚಂದ್ರಗ್ರಹಣ! 4 ರಾಶಿಚಕ್ರದವರು ಈ ಸಮಯದಲ್ಲಿ ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಯಾವ ರಾಶಿಯವರು? ವಿವರ ಇಲ್ಲಿದೆ ಗಮನಿಸಿ.

ಕೆಲ ದಿನಗಳ ಹಿಂದೆ ಸೂರ್ಯಗ್ರಹಣ ಸಂಭವಿಸಿತ್ತು. ಈಗ ಎದುರಾಗಿರುವುದು ಚಂದ್ರಗ್ರಹಣ. ಒಂದು ಪಕ್ಷದ ಅವಧಿಯೊಳಗೆ ಎರಡು ಗ್ರಹಣಗಳು ಸಂಭವಿಸುತ್ತಿವೆ. ಅದಕ್ಕಾಗಿಯೇ ಅನೇಕ ರೀತಿಯ ಕಳವಳಗಳು ವ್ಯಕ್ತವಾಗಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೇ ಅವಧಿಯಲ್ಲಿ ಎರಡು ಗ್ರಹಣ ಸಂಭವಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ.
icon

(1 / 7)

ಪುರಾಣಗಳ ಪ್ರಕಾರ, ಮಹಾಭಾರತದ ಕಾಲಘಟ್ಟದಲ್ಲಿ, ಒಂದು ಪಕ್ಷದಲ್ಲಿ ಎರಡು ಬಾರಿ ಗ್ರಹಣ ಸಂಭವಿಸಿತ್ತು. ಅದರ ನಂತರ ಕುರುಕ್ಷೇತ್ರ ಯುದ್ಧ ಸಂಭವಿಸಿತು. ಆ ಯುದ್ಧದಲ್ಲಿ ಅನೇಕ ಜನರು ಸತ್ತರು. ಈ ಬಾರಿ ಖಂಡಿತವಾಗಿಯೂ ಅಂತಹ ಯಾವುದೇ ಅಪಾಯವಿಲ್ಲ. ಆದರೆ ಈ ಚಂದ್ರಗ್ರಹಣವು ಕೆಲವು ರಾಶಿಯವರಿಗೆ ಕೆಟ್ಟದ್ದನ್ನು ಉಂಟುಮಾಡಬಹುದು.
icon

(2 / 7)

ನವೆಂಬರ್ 8 ರಂದು ಚಂದ್ರಗ್ರಹಣವು ಕೆಲವು ರಾಶಿಚಕ್ರದವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು? ಇಲ್ಲಿದೆ ವಿವರ.
icon

(3 / 7)

ಮೇಷ: ಈ ರಾಶಿಯವರಿಗೆ ಚಂದ್ರಗ್ರಹಣದ ಸಮಯವು ಸಮಸ್ಯಾತ್ಮಕವಾಗಿರುತ್ತದೆ. ಈ ರಾಶಿಯವರು ಚಂದ್ರಗ್ರಹಣದ ಸಮಯದಲ್ಲಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಮೂಲಭೂತವಾಗಿ ಅವರ ಆರೋಗ್ಯವು ಕೆಡಬಹುದು. ಅವರು ಗಾಯದ ಸಮಸ್ಯೆಗಳಿಂದ ಬಳಲುತ್ತಿರಬಹುದು. ಸಂಧಿವಾತದಂತಹ ಸಮಸ್ಯೆಗಳಿರುವವರು ನೋವು ಹೆಚ್ಚಾಗಬಹುದು. ಹಾಗಾಗಿ ಅವರು ಜಾಗರೂಕರಾಗಿರಬೇಕಾಗದ್ದು ಅವಶ್ಯ.
icon

(4 / 7)

ವೃಷಭ: ಈ ರಾಶಿಯವರಿಗೆ ಚಂದ್ರಗ್ರಹಣವು ತುಂಬಾ ಸಂತೋಷದ ಸಮಯವಲ್ಲ ವಿಶೇಷವಾಗಿ ಕುಟುಂಬದ ವಿಷಯಗಳಲ್ಲಿ ಅವರು ವಿವಿಧ ಸಮಸ್ಯೆಗಳನ್ನು ಎದುರಿಸಬಹುದು. ದಾಂಪತ್ಯದಲ್ಲಿ ಕಲಹ ಉಂಟಾಗಬಹುದು. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿ ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗಬಹುದು. ಈ ಸಮಯವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕಾದ್ದು ಅಗತ್ಯ.
icon

(5 / 7)

ಕನ್ಯಾ: ಈ ರಾಶಿಯ ಸ್ಥಳೀಯರು ಚಂದ್ರಗ್ರಹಣ ಮತ್ತು ಅದರ ಮುಂದಿನ ಕೆಲವು ದಿನಗಳಲ್ಲಿ ಸ್ವಲ್ಪ ಎಚ್ಚರವಾಗಿರುವುದು ಅಗತ್ಯ. ಏಕೆಂದರೆ ಈ ಸಮಯದಲ್ಲಿ ಅವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಅವರು ಶಾರೀರಿಕ ಸಮಸ್ಯೆಗಳನ್ನೂ ಎದುರಿಸಬಹುದು.
icon

(6 / 7)

ಮಕರ: ಈ ರಾಶಿಯವರಿಗೆ ಚಂದ್ರಗ್ರಹಣವು ತುಂಬಾ ಶುಭವಾಗುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಕೈಯಲ್ಲಿರುವ ಹಣವೂ ಕಡಿಮೆಯಾಗುತ್ತದೆ. ಹಣಕಾಸಿನ ತೊಂದರೆ ಸ್ಟ್ರೆಸ್‌ಗೆ ಕಾರಣವಾಗಬಹುದು. ಶಾರೀರಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ. ಏಕೆಂದರೆ ಈ ಸಮಯದಲ್ಲಿ ಶಾರೀರಿಕ ಆರೋಗ್ಯ ಕೆಡಬಹುದು.
icon

(7 / 7)

ಇತರ ಗ್ಯಾಲರಿಗಳು