ಯಕ್ಷ ಪ್ರಶ್ನೆ ಎಂದರೇನು? ಪಾಂಡವರ ಕುಡಿಯುವ ನೀರಿನ ಕಥೆಯಲ್ಲಿ ಬರುವ ಯಕ್ಷ ವಾಣಿಗೆ ಧರ್ಮರಾಯನ ಉತ್ತರ ತಿಳಿಯಿರಿ
ಮಹಾಭಾರತದಲ್ಲಿನ ಪಾಂಡವರ ಕಥೆಯ ಭಾಗವೊಂದು ಇಲ್ಲಿದೆ. ನಕುಲ, ಭೀಮ, ಅರ್ಜುನರು ಒಬ್ಬರಾದ ಮೇಲೆ ಒಬ್ಬರು ತನ್ನ ಅಣ್ಣನಿಗಾಗಿ ನೀರನ್ನು ತರಲು ಹೊರಡುತ್ತಾರೆ. ಆದರೆ ಯಾರೊಬ್ಬರೂ ಮರಳಿ ಬರುವುದಿಲ್ಲ. ಕೊನಗೆ ಧರ್ಮರಾಯ ಸ್ಥಳಕ್ಕೆ ತೆರಳಿದಾಗ ಯಕ್ಷ ವಾಣಿ ಕೇಳಿಸುತ್ತೆ. ಅದರ ವಿವರನ್ನು ಇಲ್ಲಿ ನೀಡಲಾಗಿದೆ.
ಪಾಂಡವರು ದ್ವೈತವನಕ್ಕೆ ಮರಳುತ್ತಾರೆ. ದೀರ್ಘಕಾಲದ ನಡಿಗೆಯಿಂದ ಧರ್ಮರಾಯನಿಗೆ ದಾಹವಾಗುತ್ತದೆ. ಆಗ ಸಹದೇವನನ್ನು ಕರೆದು ಎಲ್ಲಿಂದರಾದರು ಕುಡಿಯುವ ನೀರನ್ನು ತರಲು ತಿಳಿಸುತ್ತಾನೆ. ಅಣ್ಣನ ಮಾತಿಗೆ ಪ್ರತಿ ಆಡದ ಸಹದೇವನು ಸಮೀಪದಲ್ಲೇ ಕಾಣುವ ಒಂದು ಸರೋವರಕ್ಕೆ ಬರುತ್ತಾನೆ. ನೀರನ್ನು ಕುಡಿಯುವ ಮೂಲಕ ಮೊದಲು ತನ್ನ ಬಾಯಾರಿಕೆಯನ್ನು ತೀರಿಸಿಕೊಳ್ಳಲು ಸಹದೇವನು ನೀರನ್ನು ಕುಡಿಯುತ್ತಾನೆ. ಆನಂತರ ತಾವರೆ ಗಿಡದ ಎಲೆಯನ್ನು ತೆಗೆದುಕೊಂಡು ಧರ್ಮರಾಯನಿಗಾಗಿ ನೀರನ್ನು ಸಂಗ್ರಹಿಸಿಕೊಂಡು ಹೊರಡಲು ಅನುವಾಗುತ್ತಾನೆ. ಒಂದೆರಡು ಹೆಜ್ಜೆಯನ್ನು ಕ್ರಮಿಸುವ ಬಳಗಾಗಿ ಅವನ ಕಣ್ಣಿಗೆ ಅಂಧಕಾರ ಆವರಿಸಿ ಪ್ರಾಣತ್ಯಾಗ ಮಾಡುತ್ತಾನೆ. ಎಲ್ಲರೂ ಸಹದೇವನ ಆಗಮನಕ್ಕಾಗಿ ಕಾಯುತ್ತಾರೆ.
ಆನಂತರ ನಕುಲ, ಭೀಮ, ಅರ್ಜುನರು ಒಬ್ಬರಾದ ಮೇಲೆ ಒಬ್ಬರು ತನ್ನ ಅಣ್ಣನಿಗಾಗಿ ನೀರನ್ನು ತರಲು ಹೊರಡುತ್ತಾರೆ. ಆದರೆ ಯಾರೊಬ್ಬರೂ ಮರಳಿ ಬರುವುದಿಲ್ಲ. ಪಾಂಡವರಲ್ಲಿಯೇ ಬರಶಾಲಿಯಾದ ಭೀಮನು ಸಹ ಮರಳಿ ಬರಲಾಗದೆ ಹೋಗುತ್ತಾನೆ. ಈ ಕಾರಣದಿಂದಾಗಿ ಧರ್ಮರಾಯನಿಗೆ ಮನದಲ್ಲಿ ಆತಂಕವು ಆವರಿಸುತ್ತದೆ. ಯಾವುದಾದರೂ ಒಂದು ಪ್ರಾಣಿಗೆ ಆಹಾರವಾಗಿರಬಹುದೆಂದು ಭಯಪಡುತ್ತಾನೆ. ಆದರೆ ಅರ್ಜುನನ ಬಿಲ್ವಿವಿದ್ಯೆಯ ಮುಂದೆ ಪ್ರಾಣಿಗಳೇನು ವೀರಾಧಿವೀರನೆ ನಿಲ್ಲುವುದಿಲ್ಲ ಎಂಬ ಮಾತು ಸತ್ಯ. ಈ ಕಾರಣದಿಂದ ಇನ್ನು ಕಾಯುವುದರಲ್ಲಿ ಪ್ರಯೋಜನವಿಲ್ಲವೆಂದು ಸ್ವತಃ ಧರ್ಮರಾಯನೇ ತನ್ನ ಸಹೋದರರನ್ನು ಹುಡುಕಿ ತರಲು ಹೊರಡುತ್ತಾನೆ.
ಧರ್ಮರಾಯನು ತನ್ನಸೋದರರನ್ನು ಹುಡುಕುತ್ತಾ ಬರುತ್ತಾನೆ. ಆ ನಡುವೆ ಕೊಳವೊಂದು ಕಂಡುಬರುತ್ತದೆ. ಆ ಕೊಳದ ಬಳಿ ತನ್ನ ಎಲ್ಲಾ ಸೋದರರು ಸತ್ತು ಬಿದ್ದಿರುವುದನ್ನು ನೋಡಿ, ಧರ್ಮರಾಯನ ಮನಸ್ಸಿಗೆ ಬೇಸರ ಉಂಟಾಗುತ್ತದೆ. ದುಃಖ ತಪ್ತನಾದ ಧರ್ಮರಾಯನು ಸಹೋದರರಿಗೆ ನೀರು ಕುಡಿಸುವ ಸಲುವಾಗಿ ಆ ಕೊಳದಿಂದ ನೀರನ್ನು ಸಂಗ್ರಹಿಸಿಕೊಳ್ಳಲು ಮುಂದಾಗುತ್ತಾನೆ. ತಕ್ಷಣವೇ ಅಶರೀರವಾಣಿಯೊಂದು ಕೇಳಿ ಬರುತ್ತದೆ. ನನ್ನ ಅಪ್ಪಣೆ ಇಲ್ಲದೆ ಯಾರೊಬ್ಬರೂ ಇಲ್ಲಿಂದ ಒಂದು ತೊಟ್ಟು ನೀರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತದೆ.
ಧರ್ಮರಾಯನು ನೀನಾರೆಂದು ಕೇಳಲು ನಾನೊಬ್ಬ ಯಕ್ಷ ಎಂಬ ಉತ್ತರ ಬರುತ್ತದೆ. ನನ್ನ ತಮ್ಮಂದಿರಿಗೆ ಈ ಅವಸ್ತೆ ಬರಲು ಕಾರಣವೇನು ಎಂದು ಕೇಳುತ್ತಾನೆ. ಆಗ ಯಕ್ಷನು ನನ್ನ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಎಂದು ಕೇಳಿದೆ. ಅವರು ನನ್ನ ಸೂಚನೆಯನ್ನು ಕಡೆಗಣಿಸಿ ನೀರನ್ನು ಸಂಗ್ರಹಿಸಿದರು. ಆದ್ದರಿಂದ ಅವರು ತಮ್ಮ ಪ್ರಾಣತ್ಯಾಗ ಮಾಡಬೇಕಾಯಿತು. ಒಂದು ವೇಳೆ ನೀನು ಸಹ ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಹೋದಲ್ಲಿ ನಿನಗೂ ಇದೇ ರೀತಿಯ ತೊಂದರೆ ಎದುರಾಗುತ್ತದೆ ಎಂದು ಎಚ್ಚರಿಸುತ್ತಾನೆ. ಆಗ ಧರ್ಮರಾಯನು ಒಳ್ಳೆಯ ಭಾವನೆ ಮತ್ತು ಗೌರವದಿಂದ ಯಕ್ಷನನ್ನು ಅವನನ್ನು ಪ್ರಶ್ನೆಗಳನ್ನು ಕೇಳುವಂತೆ ತಿಳಿಸುತ್ತಾನೆ.
ಅಪಾರವಾದ ಹಣವನ್ನು ಸಂಪಾದಿಸುವ ಪರಿಯೇನು?
ಪ್ರಪಂಚದಲ್ಲಿ ಕೀರ್ತಿವಂತರಾಗಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಧರ್ಮರಾಯನು ದಾನದಿಂದ ಮಾತ್ರ ಎಂದು ಹೇಳುತ್ತಾನೆ. ಸುಖದಿಂದ ಬಾಳಲು ಮತ್ತು ಸ್ವರ್ಗ ಸೇರಲು ಏನು ಮಾಡಬೇಕೆಂಬ ಪ್ರಶ್ನೆಗೆ ಧರ್ಮರಾಯನು ಸತ್ಯ ಮತ್ತು ಶೀಲವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸುತ್ತಾನೆ. ಅಪಾರವಾದ ಹಣವನ್ನು ಸಂಪಾದಿಸುವ ಪರಿಯೇನೆಂದು ವಿಚಾರಿಸಿದಾಗ ನ್ಯಾಯದ ಮತ್ತು ಒಳ್ಳೆಯ ವ್ಯವಹಾರವನ್ನು ಮಾಡಬೇಕೆಂದು ತಿಳಿಸುತ್ತಾನೆ.
ದಾನಗಳಲ್ಲಿ ಶ್ರೇಷ್ಠವಾದ ದಾನ ಯಾವುದೆಂದು ಕೇಳಿದಾಗ ಧರ್ಮರಾಯನು ವಿದ್ಯಾದಾನ ಎಂದು ಉತ್ತರಿಸುತ್ತಾನೆ. ಲಾಭದಲ್ಲಿ ಅತ್ಯುತ್ತಮ ಲಾಭ ಯಾವುದೆಂದು ಕೇಳಿದಾಗ ಧರ್ಮರಾಯನು ಆರೋಗ್ಯಲಾಭ ಎಂದು ಉತ್ತರಿಸುತ್ತಾನೆ. ಸುಖಗಳಲ್ಲಿ ಉತ್ತಮ ಸುಖ ಯಾವುದೆಂದು ಕೇಳಿದಾಗ ಮಾನಸಿಕ ಸಂತೋಷ ಎಂದು ಉತ್ತರಿಸುತ್ತಾನೆ. ದುಃಖವನ್ನು ಹೇಗೆ ಗೆಲ್ಲಬಹುದು ಎಂದು ಕೇಳಿದಾಗ ಮನು ಮನೋನಿಗ್ರಹದಿಂದ ಮಾತ್ರ ಗೆಲ್ಲಬಹುದು ಎಂದು ಹೇಳುತ್ತಾನೆ.
ಸ್ನೇಹವನ್ನು ಬೆಳೆಸಿದರೆ ಯಾರೊಂದಿಗೆ ಬೆಳೆಸಬೇಕು ಎಂಬ ಮಾತಿಗೆ ಧರ್ಮರಾಯನು ಸಜ್ಜರ ಜೊತೆ ಸ್ನೇಹ ಬೆಳಸಬೇಕು ಎಂಬ ಉತ್ತರವನ್ನು ನೀಡುತ್ತಾನೆ. ಎಲ್ಲರೊಂದಿಗೆ ಒಳ್ಳೆಯರಾಗಿ ಇರಬೇಕೆಂದರೆ ಮಾನವನು ಯಾವುದನ್ನು ಬಿಡಬೇಕು ಎಂದು ತಿಳಿಸುತ್ತಾನೆ ಆಗ ಧರ್ಮರಾಯನು ಅಭಿಮಾನ ಎಂದು ಹೇಳುತ್ತಾನೆ. ಭೂಮಿಗಿಂತಲೂ ವಿಶಾಲವಾಗಿ ಇರುವುದು ಯಾವುದೆಂದು ಕೇಳಲು ಧರ್ಮರಾಯನು ತಾಯಿ ಎಂದು ಉತ್ತರಿಸುತ್ತಾನೆ.
ಇದರಿಂದ ಸಂತುಷ್ಠನಾದ ಯಕ್ಷನು ನಿನಗೆ ಯಾವ ವರ ಬೇಕೆಂದು ಕೇಳುತ್ತಾನೆ. ಆಗ ಧರ್ಮರಾಯನು ನನ್ನ ಸೋದರರಿಗೆ ಮರುಜನ್ಮ ನೀಡುವಂತೆ ಕೇಳುತ್ತಾನೆ. ಧರ್ಮರಾಯನ ಆಶಯದಂತೆ ಸೋದರರಿಗೆ ಮರುಜನ್ಮ ಬರುತ್ತದೆ. ಈ ಕಾರಣದಿಂದಾಗಿ ಇಂದಿಗೂ ಅತಿ ಕಠಿಣವಾದ ಪ್ರಶ್ನೆಗಳಿಗೆ ಯಕ್ಷಪ್ರಶ್ನೆ ಎಂದು ಕರೆಯುತ್ತೇವೆ.