ಭಾರತದಲ್ಲಷ್ಟೇ ಅಲ್ಲ ಈ 5 ದೇಶಗಳಲ್ಲೂ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸ್ತಾರೆ, ದುರ್ಗಾ ಪೂಜೆ ಮಾಡ್ತಾರೆ ಜನ-navaratri around the world durga puja not not just in india five countries embracing durga devi during navratri uks ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಾರತದಲ್ಲಷ್ಟೇ ಅಲ್ಲ ಈ 5 ದೇಶಗಳಲ್ಲೂ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸ್ತಾರೆ, ದುರ್ಗಾ ಪೂಜೆ ಮಾಡ್ತಾರೆ ಜನ

ಭಾರತದಲ್ಲಷ್ಟೇ ಅಲ್ಲ ಈ 5 ದೇಶಗಳಲ್ಲೂ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸ್ತಾರೆ, ದುರ್ಗಾ ಪೂಜೆ ಮಾಡ್ತಾರೆ ಜನ

ನವರಾತ್ರಿ ಉತ್ಸವಕ್ಕೆ ಹಿಂದೂಗಳು ಸಜ್ಜಾಗತೊಡಗಿದ್ದಾರೆ. ಈ ಸಲ ಅಕ್ಟೋಬರ್ 3 ರಿಂದ 12 ರ ತನಕ ನವರಾತ್ರಿ ಉತ್ಸವ ನಡೆಯಲಿದೆ. ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಹಬ್ಬದ ಆಚರಣೆಗೆ ಸಿದ್ಧತೆ ಭಾರಿ ಜೋರಾಗಿ ನಡೆದಿದೆ. ಪ್ರಮುಖ 5 ದೇಶಗಳ ನವರಾತ್ರಿ ಆಚರಣೆಯ ಕಿರುನೋಟ ಇಲ್ಲಿದೆ.

ಕೋಲ್ಕತದಲ್ಲಿ ದುರ್ಗಾ ದೇವಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ಸಂದರ್ಭ. (ಸಾಂಕೇತಿಕ ಚಿತ್ರ)
ಕೋಲ್ಕತದಲ್ಲಿ ದುರ್ಗಾ ದೇವಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ಸಂದರ್ಭ. (ಸಾಂಕೇತಿಕ ಚಿತ್ರ) (PTI)

ಭಾರತೀಯರು ಆಚರಿಸುವ ಪ್ರಮುಖ ಹಬ್ಬಗಳ ಪೈಕಿ ನವರಾತ್ರಿ, ದಸರಾ ಹಬ್ಬವೂ ಒಂದು. ನವರಾತ್ರಿ ವೇಳೆ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಆರಾಧಿಸುವುದು, ಪೂಜಿಸುವುದು, ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸುವುದು ನಡೆಯುತ್ತದೆ. ಈ ಸಲ ನವರಾತ್ರಿ ಉತ್ಸವ ಅಕ್ಟೋಬರ್ 3 ರಿಂದ 12 ರ ತನಕ ನಡೆಯಲಿದೆ. ಈಗಾಗಲೇ ಈ ಹಬ್ಬಕ್ಕೆ ತಯಾರಿ ಭರದಿಂದ ಸಾಗಿದೆ. ದೇಶದ ಎಲ್ಲ ಭಾಗಗಳಲ್ಲೂ ಈ ಆಚರಣೆ ಇದೆ. ಉತ್ತರ ಭಾರತದಲ್ಲಿ ನವರಾತ್ರಿಯ ಕೊನೆಯ ದಿನ ರಾಮ್‌ಲೀಲಾ ಪ್ರದರ್ಶನ, ರಾವಣನ ಪ್ರತಿಕೃತಿ ಸುಡುವ ಪದ್ಧತಿ ರೂಢಿಯಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ಹೆಚ್ಚು ಮಹತ್ವ. ಮುಂಬಯಿಯಲ್ಲಿ ಗಣೇಶೋತ್ಸವ ಆಚರಿಸುವಂತೆ ಪಂಡಾಲ್‌ಗಳಲ್ಲಿ ದುರ್ಗೆಯ ಪೂಜೆ ನಡೆಯುತ್ತದೆ. 9 ದಿನಗಳ ಕಾಲ ರಾಜ್ಯದ ಉದ್ದಗಲಕ್ಕೂ ಹಬ್ಬದ ವಾತಾವರಣ ಇರುತ್ತದೆ. ಅಂದ ಹಾಗೆ, ಭಾರತದಲ್ಲಷ್ಟೆ ನವರಾತ್ರಿ ಆಚರಣೆ ಎಂದುಕೊಳ್ಳಬೇಡಿ. ವಿದೇಶಗಳಲ್ಲೂ ನವರಾತ್ರಿ ಆಚರಣೆ ಇದೆ. ನವರಾತ್ರಿ ಆಚರಣೆ ನಡೆಯುವ 5 ದೇಶಗಳ ವಿವರ ಇಲ್ಲಿದೆ.

ವಿದೇಶಗಳಲ್ಲಿ ದುರ್ಗಾ ಪೂಜೆ, ನವರಾತ್ರಿ ಉತ್ಸವ

ವಿವಿಧ ದೇಶಗಳ ಜನರು ಕೂಡ ದುರ್ಗಾ ದೇವಿಗೆ ಪೂಜೆ ಸಲ್ಲಿಸುತ್ತಾರೆ. ನಮ್ಮಂತೆಯೇ ದುರ್ಗಾ ಮಂಟಪಗಳನ್ನು ಸ್ಥಾಪಿಸಿ ಒಂಬತ್ತು ದಿನಗಳ ಕಾಲ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ದುರ್ಗಾ ದೇವಿಯನ್ನು ಯಾವ ಯಾವ ದೇಶಗಳಲ್ಲಿ ಪೂಜಿಸುತ್ತಾರೆ, ನವರಾತ್ರಿ ಉತ್ಸವ ಆಚರಿಸುತ್ತಾರೆ ನೋಡೋಣ.

1) ನೇಪಾಳದಲ್ಲಿ ದಶಾಯಿನ್ : ನೇಪಾಳದಲ್ಲಿ ದುರ್ಗಾ ಮಾತೆಯ ಆರಾಧನೆಯನ್ನು ದಶಾಯಿನ್‌ (ನೇಪಾಳಿ ಭಾಷೆಯಲ್ಲಿ ಬಡದಶಾಯಿನ್‌, ಬಡಶಾಯಿನ್‌) ಎಂದೂ ಕರೆಯುತ್ತಾರೆ. ಈ ಹತ್ತು ದಿನಗಳ ಹಬ್ಬವು ನೇಪಾಳದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಭಾರತದಂತೆಯೇ ಅಲ್ಲಿಯೂ ಆಚರಿಸಲಾಗುತ್ತದೆ. ಹತ್ತು ದಿನಗಳ ಕಾಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗುತ್ತದೆ. ಭಾರತದ ಆಚರಣೆಗೂ ಇಲ್ಲಿನ ಆಚರಣೆಗೂ ವ್ಯತ್ಯಾಸವಿದೆ. ಈ ಹಬ್ಬವನ್ನು ಭೂತಾನ್‌ನ ಲೋತ್‌ಶಂಪಾ ಜನರು ಮತ್ತು ಮ್ಯಾನ್ಮಾರ್‌ನ ಬರ್ಮೀಸ್ ಗೂರ್ಖಾಗಳೂ ಆಚರಿಸುತ್ತಾರೆ. ]

2) ಯುನೈಟೆಡ್ ಕಿಂಗ್ಡಮ್‌ನಲ್ಲಿ ನವರಾತ್ರಿ ಉತ್ಸವ: ಭಾರತವನ್ನು ತೊರೆದು ಗ್ರೇಟ್ ಬ್ರಿಟನ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಕೂಡ ನವರಾತ್ರಿ ಹಬ್ಬದ ವೇಳೆ ದುರ್ಗಾಪೂಜೆಯನ್ನು ನೆರವೇರಿಸುತ್ತಾರೆ. ಈ ಉತ್ಸವದಲ್ಲಿ ಅನೇಕ ಮಹಿಳಾ ಸಂಘಟನೆಗಳು ಭಾಗವಹಿಸುತ್ತವೆ. ದುರ್ಗಾ ಮಾತೆಯ ವಿಗ್ರಹಗಳನ್ನು ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಎಲ್ಲರೂ ಒಂದೆಡೆ ಸೇರಿ ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಕೆನಡಾದಲ್ಲೂ ನವರಾತ್ರಿ ಆಚರಣೆ ಇದೆ.

3) ಅಮೆರಿಕದ ಹಿಂದಗಳ ನವರಾತ್ರಿ ಆಚರಣೆ: ಅಮೆರಿಕದಲ್ಲಿ 1970 ರಿಂದ, ದುರ್ಗಾ ಪೂಜೆ ಆಚರಣೆಗಳು ಪ್ರಾರಂಭವಾದವು. ಇದು ಈಗ ಕಾಲಾಂತರದಲ್ಲಿ ವಿವಿಧ ಪ್ರದೇಶಗಳಿಗೆ ಹರಡಿದೆ. ಪ್ರಸ್ತುತ, ಬಂಗಾಳಿ ಜನಸಂಖ್ಯೆಯಿರುವ ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲಿ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ಕೆಲವು ಸಮುದಾಯಗಳು ಐದು ದಿನಗಳ ಹಬ್ಬವನ್ನು ಆಚರಿಸುತ್ತಾರೆ. ಎಲ್ಲರೂ ಒಂದೆಡೆ ಸೇರಿ ದುರ್ಗಾ ದೇವಿಯನ್ನು ಪೂಜಿಸುತ್ತಾರೆ.

4) ಬಾಂಗ್ಲಾದೇಶದಲ್ಲೂ ದುರ್ಗಾಪೂಜೆ: ಬಾಂಗ್ಲಾದೇಶದ ಜನರು ದುರ್ಗಾ ಪೂಜೆಯನ್ನು ಎಷ್ಟು ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಪ್ರತಿ ನಗರದಲ್ಲಿ ಕಂಡುಬರುತ್ತದೆ. ದುರ್ಗಾದೇವಿ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಬಹುಪಾಲು ಬೆಂಗಾಲಿಗಳು ಇಲ್ಲಿ ನೆಲೆಸಿದ್ದಾರೆ. ಢಾಕಾದಲ್ಲಿರುವ ಢಾಕೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿಶೇಷ.

5) ಆಸ್ಟ್ರೇಲಿಯಾದಲ್ಲಿ ಭಾರತೀಯರ ಸಂಭ್ರಮ: 1974ರಲ್ಲಿ, ನ್ಯೂ ಸೌತ್ ವೇಲ್ಸ್‌ನಲ್ಲಿ ವಾಸಿಸುವ 12 ಕುಟುಂಬಗಳು ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ದುರ್ಗಾದೇವಿ ಪೂಜೆಯನ್ನು ಆಯೋಜಿಸಿದವು. ಅಂದಿನಿಂದ ಇದು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಹರಡಿತು. ಸಿಡ್ನಿಯಲ್ಲಿ ವಾಸಿಸುವ ಬಂಗಾಳಿ ವಲಸಿಗರು ಇತರ ಅನಿವಾಸಿ ಭಾರತೀಯರಂತೆ ನವರಾತ್ರಿಯನ್ನು ಆಚರಿಸುತ್ತಾರೆ. ಮೆಲ್ಬೋರ್ನ್‌ನಲ್ಲಿ, ಸೌತ್ ಕೀಸ್‌ಬರೋ ಪ್ರದೇಶದಲ್ಲಿ ಆಚರಣೆಗಳು ಸಕ್ರಿಯವಾಗಿವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ವಿಚಾರವಾಗಿದ್ದು, ಅಂತರ್ಜಾಲ ತಾಣದಲ್ಲಿ ಲಭ್ಯ ಮಾಹಿತಿಯನ್ನು ಒಳಗೊಂಡಿದೆ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.