ಈ ರಾಶಿಗಳಲ್ಲಿ ಜನಿಸಿದವರಿಗೆ ಧೈರ್ಯ ಹೆಚ್ಚು, ಜನ್ಮಜಾತವಾಗಿರುತ್ತೆ ನಾಯಕತ್ವದ ಸ್ವಭಾವ-numerology one who born on these dates and zodiac signs are fearless and leadership quality arc ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಗಳಲ್ಲಿ ಜನಿಸಿದವರಿಗೆ ಧೈರ್ಯ ಹೆಚ್ಚು, ಜನ್ಮಜಾತವಾಗಿರುತ್ತೆ ನಾಯಕತ್ವದ ಸ್ವಭಾವ

ಈ ರಾಶಿಗಳಲ್ಲಿ ಜನಿಸಿದವರಿಗೆ ಧೈರ್ಯ ಹೆಚ್ಚು, ಜನ್ಮಜಾತವಾಗಿರುತ್ತೆ ನಾಯಕತ್ವದ ಸ್ವಭಾವ

ಕೆಲವರಲ್ಲಿ ಧೈರ್ಯ ಹಾಗೂ ನಾಯಕತ್ವ ಗುಣಗಳು ಹುಟ್ಟಿನಿಂದಲೇ ಇರುತ್ತವೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಹ ಎದೆಗುಂದದೆ ಮುನ್ನಡೆಯುತ್ತಾರೆ. ಅದಕ್ಕೆ ಕಾರಣ ಅವರು ಜನಿಸಿದ ದಿನಾಂಕ ಮತ್ತು ರಾಶಿ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾರಲ್ಲಿ ಈ ಗುಣಗಳು ಕಂಡುಬರುತ್ತವೆ ಎಂಬುದನ್ನು ತಿಳಿಯಿರಿ. (ಬರಹ: ಅರ್ಚನಾ ವಿ.ಭಟ್)

ಈ ರಾಶಿಗಳಲ್ಲಿ ಜನಿಸಿದವರಿಗೆ ಧೈರ್ಯ ಹೆಚ್ಚು, ಜನ್ಮಜಾತವಾಗಿರುತ್ತೆ ನಾಯಕತ್ವದ ಸ್ವಭಾವ
ಈ ರಾಶಿಗಳಲ್ಲಿ ಜನಿಸಿದವರಿಗೆ ಧೈರ್ಯ ಹೆಚ್ಚು, ಜನ್ಮಜಾತವಾಗಿರುತ್ತೆ ನಾಯಕತ್ವದ ಸ್ವಭಾವ (HT File Photo)

ಬಹಳಷ್ಟು ಸಲ ಕೆಲವರನ್ನು ನೋಡಿದಾಗ ಅವರೆಷ್ಟು ಧೈರ್ಯವಂತರು ಎಂದು ಅನಿಸುತ್ತದೆ. ಎಂತಹುದೇ ಪರಿಸ್ಥಿತಿಯಲ್ಲೂ ಅವರು ಹೆದರಿ ಹಿಂದೇಟು ಹಾಕಿದ್ದು ಕಾಣುವುದೇ ಇಲ್ಲ. ಆಗೆಲ್ಲ ಬಹುಷಃ ಇವರು ಹುಟ್ಟುವಾಗಲೇ ಧೈರ್ಯವನ್ನು ಪಡೆದುಕೊಂಡೇ ಹುಟ್ಟಿರಬೇಕು ಎಂದು ಹೇಳುವುದನ್ನು ಕೇಳಿರುತ್ತೇವೆ. ಅದು ನಿಜ ಎಂದು ಹೇಳುತ್ತದೆ ಸಂಖ್ಯಾಶಾಸ್ತ್ರ. ಇದು ಸಹ ಮನುಷ್ಯನ ಸ್ವಭಾವ, ಭವಿಷ್ಯ ಮುಂತಾದವುಗಳನ್ನು ಹೇಳುತ್ತದೆ. ಕೆಲವು ದಿನಾಂಕ ಹಾಗೂ ರಾಶಿಯ ಅಡಿಯಲ್ಲಿ ಜನಿಸಿದವರು ಜನ್ಮತಃ ಧೈರ್ಯವಂತರಾಗಿರುತ್ತಾರಂತೆ. ಸವಾಲು, ಸಾಹಸ ಅವರ ಪ್ರವರ್ತಿಯಾಗಿರುತ್ತದೆ. ಬರುವ ಎಲ್ಲಾ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವವರಾಗಿರುತ್ತಾರೆ. ಅಂತಹ ಅದೃಷ್ಟ ಸಂಖ್ಯೆ ಹಾಗೂ ರಾಶಿಯ ಬಗ್ಗೆ ತಿಳಿಯುವ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗಾದರೆ ಆ ಸಂಖ್ಯೆಗಳು ಯಾವವು ಮತ್ತು ಯಾವ ರಾಶಿಯವರು ಇಲ್ಲಿದೆ ಓದಿ.

ಮೇಷ ರಾಶಿ

ಈ ರಾಶಿಯು ಗ್ರಹಗಳ ಸೇನಾಪತಿ ಎಂದು ಕರೆಯಿಸಿಕೊಳ್ಳುವ ಮಂಗಳನಿಂದ ಆಳಲ್ಪಡುತ್ತದೆ. ಹಾಗಾಗಿ ಮೇಷ ರಾಶಿಯಲ್ಲಿ ಜನಿಸಿದವರು ಹುಟ್ಟಿನಿಂದಲೇ ಧೈರ್ಯವಂತರಾಗಿರುತ್ತಾರೆ. ಮಕ್ಕಳಲ್ಲಂತೂ ಯಾವುದೇ ರೀತಿಯ ಹೆದರಿಕೆ ಅಥವಾ ಹಿಂಜರಿಕೆ ಇರುವುದಿಲ್ಲ. ಶಾಲೆಯಲ್ಲಿ ಶಿಕ್ಷಕರೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ ಜೊತೆಗೆ ಚೇಷ್ಟೆಯ ಸ್ವಭಾವದವರಾಗಿರುತ್ತಾರೆ. ಅವರು ಸವಾಲುಗಳನ್ನು ಎದುರಿಸಲು ಶಕ್ತರಾಗಿರುತ್ತಾರೆ. ಇದು ಅವರನ್ನು ನಾಯಕನನ್ನಾಗಿ ಮಾಡುತ್ತದೆ. ಹಾಗಾಗಿ ಈ ದಿನಾಂಕ ಮತ್ತು ರಾಶಿಯ ಅಡಿಯಲ್ಲಿ ಜನಿಸಿದವರು ಹೊಸ ಉದ್ಯಮ ಅಥವಾ ಹೊಸ ನಾಯಕತ್ವದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ.

ವೃಶ್ಚಿಕ ರಾಶಿ

ನಿರ್ಭಯದಿಂದ ಜೀವಿಸುವವರಲ್ಲಿ ಇವರೂ ಒಬ್ಬರು. ಜ್ಞಾನ ಮತ್ತು ವಿಮೋಚನೆಯ ಗ್ರಹ ಎಂದು ಕರೆಯಲ್ಪಡುವ ಕೇತು ಗ್ರಹದಿಂದ ಈ ರಾಶಿಯು ಆಳಲ್ಪಡುತ್ತದೆ. ವೃಶ್ಚಿಕ ರಾಶಿಯ ವಿದ್ಯಾರ್ಥಿಗಳು ಶಾಂತ ಸ್ವಭಾವದವರಾಗಿದ್ದರೂ ಸುಲಭಕ್ಕೆ ಹೆದರುವುದಿಲ್ಲ. ಇವರು ಕೆಲಸಗಳನ್ನು ಯೋಚಿಸಿ ಮಾಡುವವರಾಗಿರುತ್ತಾರೆ. ಇವರು ಯಾವುದಕ್ಕೂ ಅಂಜುವುದಿಲ್ಲ ಮತ್ತು ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಎಲ್ಲರೂ ಭಯದಿಂದ ಇದ್ದಾಗ ವೃಶ್ಚಿಕ ರಾಶಿಯವರು ಶಾಂತ ಮತ್ತು ಸಂಯಮದಿಂದ ಯೋಚಿಸುತ್ತಾರೆ.

ಸಿಂಹ ರಾಶಿ

ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು ಸಹಜವಾಗಿಯೇ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಅದರಿಂದ ಅವರಲ್ಲಿ ಭಯ ಕಾಣಿಸುವುದಿಲ್ಲ. ಆತ್ಮವಿಶ್ವಾಸ ಇವರಲ್ಲಿರುವುದರಿಂದ ನಾಯಕತ್ವದ ಗುಣವೂ ಇವರಲ್ಲಿರುತ್ತದೆ. ಸಿಂಹ ರಾಶಿಯವರು ಅಭಿವೃದ್ಧಿ ಹೊಂದುವ ಹಾದಿಯಲ್ಲಿ ಸ್ವಲ್ಪ ಮುಜುಗರವುಂಟಾದರೂ ಸಹ ಇನ್ನೊಬ್ಬರ ಗಮನ ಸೆಳೆಯುವಷ್ಟು ಧೈರ್ಯಶಾಲಿಗಳಾಗಿರುತ್ತಾರೆ.

ಧನು ರಾಶಿ

ಸಾಹಸಮಯ ಪ್ರವೃತ್ತಿಯನ್ನು ಹೊಂದಿರುವ ಈ ರಾಶಿಯ ಮಕ್ಕಳು ತಮಗೆ ಅರ್ಥವಾಗದೇ ಇರುವುದನ್ನು ಯಾವಾಗಲೂ ಪ್ರಶ್ನಿಸುತ್ತಿರುತ್ತಾರೆ. ಹಾಗೂ ಅವರಲ್ಲಿರುವ ಕುತೂಹಲವನ್ನು ಬಗೆಹರಿಸಿಕೊಳ್ಳಲು ಶಿಕ್ಷಕರಿಗೆ ಆಗಾಗ ಪ್ರಶ್ನೆ ಕೇಳುತ್ತಿರುತ್ತಾರೆ. ಧನು ರಾಶಿಯವರು ಜೀವನಕ್ಕೆ ಹೆದರುವುದಿಲ್ಲ ಏಕೆಂದರೆ ಇವರು ಜೀವನವನ್ನು ಒಂದು ದೊಡ್ಡ ಸವಾಲು ಎಂದು ಪರಿಗಣಿಸಿ ಹೋರಾಟ ಮುಂದುವರಿಸುತ್ತಾರೆ. ಈ ರಾಶಿಯ ಅಡಿಯಲ್ಲಿ ಜನಿಸಿದವರು ಚಿಕ್ಕಂದಿನಿಂದಲೇ ಧೈರ್ಯಶಾಲಿಗಳಾಗಿರುತ್ತಾರೆ. ಏಕೆಂದರೆ ಇವರು ಜೀವನದಲ್ಲಿ ದೊಡ್ಡ ದೊಡ್ಡ ಸಾಹಸಗಳನ್ನು ಮಾಡಿರುತ್ತಾರೆ. ಇವರಲ್ಲಿ ಏನನ್ನಾದರೂ ಪ್ರಯತ್ನಿಸುವ ಗುಣವಿರುವುದರಿಂದ ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ. (ಬರಹ: ಅರ್ಚನಾ ವಿ.ಭಟ್)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.