ಗಣಾಧಿಪ ಸಂಕಷ್ಟ ಚತುರ್ಥಿಯಂದು ಮೂರು ಯೋಗಗಳ ಸಂಯೋಗ; ಈ ವಿಶೇಷ ದಿನದ ಮಹತ್ವ, ಪೂಜಾ ಕ್ರಮ, ಶುಭ ಮುಹೂರ್ತದ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗಣಾಧಿಪ ಸಂಕಷ್ಟ ಚತುರ್ಥಿಯಂದು ಮೂರು ಯೋಗಗಳ ಸಂಯೋಗ; ಈ ವಿಶೇಷ ದಿನದ ಮಹತ್ವ, ಪೂಜಾ ಕ್ರಮ, ಶುಭ ಮುಹೂರ್ತದ ವಿವರ ಇಲ್ಲಿದೆ

ಗಣಾಧಿಪ ಸಂಕಷ್ಟ ಚತುರ್ಥಿಯಂದು ಮೂರು ಯೋಗಗಳ ಸಂಯೋಗ; ಈ ವಿಶೇಷ ದಿನದ ಮಹತ್ವ, ಪೂಜಾ ಕ್ರಮ, ಶುಭ ಮುಹೂರ್ತದ ವಿವರ ಇಲ್ಲಿದೆ

Ganadhipa Sankashti Chaturthi: ಹಿಂದೂ ಧರ್ಮದಲ್ಲಿ ಗಣಾಧಿಪ ಸಂಕಷ್ಟ ಚತುರ್ಥಿಗೆ ವಿಶೇಷ ಪ್ರಾಧಾನ್ಯವಿದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಈ ದಿನದಂದು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ನವೆಂಬರ್‌ 30 ರಂದು ಗಣಾಧಿಪ ಸಂಕಷ್ಟ ಚತುರ್ಥಿ ಇದೆ.

ಗಣಾಧಿಪ ಸಂಕಷ್ಟಿ ಚತುರ್ಥಿ
ಗಣಾಧಿಪ ಸಂಕಷ್ಟಿ ಚತುರ್ಥಿ

ಕಾರ್ತಿಕ ಮಾಸ ಕೃಷ್ಣ ಪಕ್ಷದ ಚತುರ್ಥಿಯ ದಿನದಂದು ಗಣಾಧಿಪ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ಗಣಪತಿಯು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ ಮತ್ತು ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ.

ಸಂಕಷ್ಟಿ ಚತುರ್ಥಿಯಂದು ಚಂದ್ರದೇವನ ಆರಾಧನೆಗೂ ಹೆಚ್ಚಿನ ಮಹತ್ವವಿದೆ. ಈ ದಿನ ಚಂದ್ರದೇವನಿಗೆ ಅರ್ಘ್ಯವನ್ನು ಅರ್ಪಿಸದೆ ಉಪವಾಸದ ಪೂರ್ಣ ಫಲ ದೊರೆಯುವುದಿಲ್ಲ ಎಂದು ಹೇಳಲಾಗುತ್ತದೆ.

ಈ ಬಾರಿ ಗಣಾಧಿಪ ಸಂಕಷ್ಟ ಚತುರ್ಥಿಯಂದು 3 ಶುಭಯೋಗಗಳು ರೂಪುಗೊಳ್ಳುತ್ತಿವೆ. ಆ ಕಾರಣಕ್ಕೆ ಭಕ್ತರು ಗಣೇಶನನ್ನು ಪೂಜಿಸಿದರೆ ದುಪ್ಪಟ್ಟು ಪುಣ್ಯಫಲಗಳನ್ನು ಪಡೆಯುತ್ತಾರೆ.

ಗಣಾಧಿಪ ಸಂಕಷ್ಟಿ ಚತುರ್ಥಿಯ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಚಂದ್ರೋದಯದ ಸಮಯದ ಕುರಿತ ಮಾಹಿತಿ ಇಲ್ಲಿದೆ.

ಗಣಾಧಿಪ ಸಂಕಷ್ಟಿ ದಿನ ಹಾಗೂ ಸಮಯ

ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಮಾಸ ಕೃಷ್ಣ ಪಕ್ಷದ ಚತುರ್ಥಿ ತಿಥಿಯು ನವೆಂಬರ್ 30 ರಂದು 2 ಗಂಟೆಗೆ ಆರಂಭವಾಗಲಿದೆ. ಇದು ಡಿಸೆಂಬರ್ 1ರ ಮಧ್ಯಾಹ್ನ 3:31ಕ್ಕೆ ಕೊನೆಗೊಳ್ಳುತ್ತದೆ.

* ನವೆಂಬರ್‌ 30, ಗಣಾಧಿಪ ಸಂಕಷ್ಟಿ ಚತುರ್ಥಿ.

* ಚೌತಿ ಆರಂಭ ನವೆಂಬರ್‌ 30ರ ಮಧ್ಯಾಹ್ನ 2.24ಕ್ಕೆ

* ಚೌತಿ ಮುಗಿಯುವುದು ಡಿಸೆಂಬರ್‌ 1ರ 3.31ಕ್ಕೆ.

* ಸಂಕಷ್ಟಿ ದಿನ ಚಂದ್ರ ಮೂಡುವ ಸಮಯ: ಸಂಜೆ 7.42 (ಈ ದಿನ ಚಂದ್ರದೇವನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರವೇ ಪಾರಣ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ)

ಪೂಜೆಗೆ ಶುಭ ಗಳಿಗೆ

ಮುಹೂರ್ತ: ಬೆಳಗ್ಗೆ 6:55 ರಿಂದ 8:14 ರವರೆಗೆ, ಲಾಭ ಉನ್ನತಿ ಮುಹೂರ್ತ: ಮಧ್ಯಾಹ್ನ 12:10 ರಿಂದ 1:28 ರವರೆಗೆ, ಅಮೃತ ಅತ್ಯುತ್ತಮ ಮುಹೂರ್ತ: ಮಧ್ಯಾಹ್ನ 1:28 ರಿಂದ 2:47 ರವರೆಗೆ

ಶುಭ ಯೋಗ

ಈ ವರ್ಷ ಗಣಾಧಿಪ ಸಂಕಷ್ಟ ಚತುರ್ಥಿಯಂದು ಸರ್ವಾರ್ಥ ಸಿದ್ಧಿ ಯೋಗ, ಶುಭ ಯೋಗ ಮತ್ತು ಶುಕ್ಲ ಯೋಗ ಈ ಮೂರು ಯೋಗಗಳು ಸಂಧಿಸಲಿವೆ.

ಪೂಜಾ ವಿಧಾನ

ಗಣಾಧಿಪ ಸಂಕಷ್ಟ ಚತುರ್ಥಿಯ ದಿನ ಬೆಳಗ್ಗೆ ಬೇಗ ಏಳಬೇಕು. ಸಾಧ್ಯವಾದರೆ, ಸ್ನಾನದ ನಂತರ ಕೆಂಪು ಬಟ್ಟೆಗಳನ್ನು ಧರಿಸಿ. ಇದರ ನಂತರ, ಗಣೇಶನನ್ನು ಧ್ಯಾನಿಸಿ ಮತ್ತು ಉಪವಾಸದ ಸಂಕಲ್ಪವನ್ನು ತೆಗೆದುಕೊಳ್ಳಿ. ಪೂಜೆಯ ಸ್ಥಳದಲ್ಲಿ ಗಣೇಶನ ವಿಗ್ರಹವನ್ನು ಸಣ್ಣ ಪೀಠದ ಮೇಲೆ ಇರಿಸಿ. ಗಣೇಶನಿಗೆ ಹಣ್ಣುಗಳು, ಹೂವುಗಳು, ಧೂಪದ್ರವ್ಯಗಳು ಮತ್ತು ನೈವೇದ್ಯಗಳನ್ನು ಅರ್ಪಿಸಿ. ಸಂಜೆ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರವೇ ಪಾರಣವನ್ನು ಮಾಡಿ.

ಗಣಾಧಿಪ ಸಂಕಷ್ಟಿಯ ಮಹತ್ವ

ಹಿಂದೂ ಧರ್ಮದಲ್ಲಿ ಸಂಕಷ್ಟಿ ಚತುರ್ಥಿಗೆ ತನ್ನದೇ ಆದ ಪ್ರಾಮುಖ್ಯವಿದೆ. ಪ್ರತಿ ತಿಂಗಳ ಸಂಕಷ್ಟಿ ಚತುರ್ಥಿ ಇರುತ್ತದೆ. ಈ ದಿನದಂದು ಉಪವಾಸ ವ್ರತ ಮಾಡುವ ಮೂಲಕ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಈ ದಿನ ಉಪವಾಸವಿದ್ದು ಭಕ್ತಿ ಭಾವದಿಂದ ಗಣೇಶನನ್ನು ಭಜಿಸಲಾಗುತ್ತದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.