ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಕೃಷ್ಣನ ಪರಿಶುದ್ಧ ಭಕ್ತರಾಗದೆ ಯಾರೂ ದೈವಿಕರಾಗುವುದು ಸಾಧ್ಯವಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಕೃಷ್ಣನ ಪರಿಶುದ್ಧ ಭಕ್ತರಾಗದೆ ಯಾರೂ ದೈವಿಕರಾಗುವುದು ಸಾಧ್ಯವಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಕೃಷ್ಣನ ಪರಿಶುದ್ಧ ಭಕ್ತರಾಗದೆ ಯಾರೂ ದೈವಿಕರಾಗುವುದು ಸಾಧ್ಯವಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 48ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 48

ನ ವೇದಯಜ್ಞಾಧ್ಯರ್ಯನೈರ್ನ ದಾನೈರ್

ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ |

ಏವಂರೂಪಃ ಶಕ್ಯ ಅಹಂ ನೃಲೋಕೇ

ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ||48||

ಅನುವಾದ: ಕುರು ಯೋಧರಲ್ಲಿ ಅತ್ಯಂತ ಶ್ರೇಷ್ಠನಾದ ಅರ್ಜುನನೆ, ನಿನಗೆ ಮೊದಲು ಯಾರೂ ಈ ನನ್ನ ವಿಶ್ವರೂಪವನ್ನು ನೋಡಿರಲಿಲ್ಲ. ಏಕೆಂದರೆ ವೇದಾಧ್ಯಯನದಿಂದಾಗಲೀ, ಯಜ್ಞಗಳನ್ನು ಮಾಡುವುದರಿಂದಾಗಲೀ, ದಾನದಿಂದಲಾಗಲೀ, ಪುಣ್ಯಕಾರ್ಯಗಳಿಂದಾಗಲೀ, ಉಗ್ರ ತಪಸ್ಸಿನಿಂದಾಗಲೀ ಈ ಐಹಿಕ ಜಗತ್ತಿನಲ್ಲಿ ನನ್ನ ಈ ರೂಪವನ್ನು ನೋಡಲು ಸಾಧ್ಯವಿಲ್ಲ.

ಭಾವಾರ್ಥ: ಈ ಸಂದರ್ಭದಲ್ಲಿ ದೈವೀದೃಷ್ಟಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ದೈವೀದೃಷ್ಟಿಯು ಯಾರಿಗೆ ಆಗಬಹುದು? ದೈವೀ ಎಂದರೆ ದೇವರಿಗೆ ಸಂಬಂಧಿಸಿದ್ದು. ದೇವತೆಯಾಗಿ ದೈವೀ ಅಂತಸ್ತನ್ನು ಮನುಷ್ನು ಪಡೆಯದಿದ್ದರೆ ಅವನಿಗೆ ದೈವೀದೃಷ್ಟಿಯು ಸಾಧ್ಯವಿಲ್ಲ. ದೇವತೆಯೆಂದರೆ ಏನು? ಪವಿತ್ರ ಗ್ರಂಥಗಳಲ್ಲಿ ಹೀಗೆ ಹೇಳಿದೆ - ವಿಷ್ಣುಭಕ್ತರೇ ದೇವತೆಗಳು (ವಿಷ್ಣು ಭಕ್ತಾಃ ಸ್ಮೃತಾ ದೇವಾಃ) ನಾಸ್ತಿಕರಾದವರು ಎಂದರೆ ವಿಷ್ಣುವಿನಲ್ಲಿ ನಂಬಿಕೆ ಇಲ್ಲದವರು ಅಥವಾ ಕೃಷ್ಣನ ನಿರಾಕಾರ ಭಾಗವನ್ನು ಮಾತ್ರ ಪರಮವೆಂದು ಮನ್ನಣೆಮಾಡುವವರು ದೈವೀದೃಷ್ಟಿಯನ್ನು ಪಡೆಯಲಾರರು. ಕೃಷ್ಣನನ್ನು ತೆಗಳಿ ಆಗಲೇ ದೈವೀದೃಷ್ಟಿಯನ್ನು ಪಡೆಯುವುದು ಸಾಧ್ಯವಿಲ್ಲ. ತಾನೇ ದೇವತೆಯಾಗದೆ ದೈವೀದೃಷ್ಟಿ ದೊರೆಯುವುದು ಸಾಧ್ಯವಿಲ್ಲ. ಎಂದರೆ ದೈವೀದೃಷ್ಟಿಯಿರುವವರು ಅರ್ಜುನನಂತೆ ನೋಡಬಲ್ಲರು (Bhagavad Gita Updesh in Kannada).

ಭಗವದ್ಗೀತೆಯು ವಿಶ್ವರೂಪವನ್ನು ವರ್ಣಿಸುತ್ತದೆ. ಅರ್ಜುನನಿಗಿಂತ ಮೊದಲು ಈ ವರ್ಣನೆಯು ಯಾರಿಗೂ ತಿಳಿಯದಿದ್ರೂ ಈಗ ಈ ಘಟನೆಯನಂತರ ವಿಶ್ವರೂಪದ ಒಂದು ಕಲ್ಪನೆಯನ್ನು ಪಡೆದುಕೊಳ್ಳಲು ಸಾಧ್ಯ. ವಾಸ್ತವವಾಗಿ ದೈವಿಕರಾದವರು ಪ್ರಭುವಿನ ವಿಶ್ವರೂಪವನ್ನು ಕಾಣಬಲ್ಲರು. ಆದರೆ ಕೃಷ್ಣನ ಪರಿಶುದ್ಧ ಭಕ್ತರಾಗದೆ ಯಾರೂ ದೈವಿಕರಾಗುವುದು ಸಾಧ್ಯವಿಲ್ಲ. ವಾಸ್ತವವಾಗಿ ದೈವಿಕ ಸ್ವಭಾವವಿದ್ದು ದೈವಿಕ ದೃಷ್ಟಿ ಇರುವವರಿಗೆ ಪ್ರಭುವಿನ ವಿಶ್ವರೂಪವನ್ನು ನೋಡುವುದರಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ. ಹಿಂದಿನ ಶ್ಲೋಕದಲ್ಲಿ ವರ್ಣಿಸಿದಂತೆ ಅರ್ಜುನನು ವಿಷ್ಣುವಾಗಿ ಶ್ರೀಕೃಷ್ಣನ ಚತುರ್ಭುಜ ರೂಪವನ್ನು ನೋಡಲು ಬಯಸಿದನು. ವಿಶ್ವರೂಪದಿಂದ ಅವನಿಗೆ ಭಯವೇ ಆಯಿತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.