ಮನೆಯಲ್ಲಿ ಒಂದೇ ದೇವರ ಎರಡು ವಿಗ್ರಹಗಳು ಇದ್ದರೆ ಒಳ್ಳೆಯದಾ, ಕೆಟ್ಟದಾ? ಈ ವಾಸ್ತು ಸಲಹೆಗಳು ತಿಳಿದಿರಲಿ-spiritual news is it good or bad to have two idols of the same god in the house vastu tips here rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯಲ್ಲಿ ಒಂದೇ ದೇವರ ಎರಡು ವಿಗ್ರಹಗಳು ಇದ್ದರೆ ಒಳ್ಳೆಯದಾ, ಕೆಟ್ಟದಾ? ಈ ವಾಸ್ತು ಸಲಹೆಗಳು ತಿಳಿದಿರಲಿ

ಮನೆಯಲ್ಲಿ ಒಂದೇ ದೇವರ ಎರಡು ವಿಗ್ರಹಗಳು ಇದ್ದರೆ ಒಳ್ಳೆಯದಾ, ಕೆಟ್ಟದಾ? ಈ ವಾಸ್ತು ಸಲಹೆಗಳು ತಿಳಿದಿರಲಿ

ವಾಸ್ತು ಸಲಹೆಗಳು: ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಎಷ್ಟೇ ದುಡಿದರೂ ನೆಮ್ಮದಿ ಇರುವುದಿಲ್ಲ. ವಾಸ್ತು ಪ್ರಕಾರ, ಮನೆಯಲ್ಲಿ ಧನಾತ್ಮಕ ಶಕ್ತಿ ಇರುವಂತೆ ನೋಡಿಕೊಳ್ಳಬೇಕು. ಆಗ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ಒಂದೇ ದೇವರ ಎರಡು ವಿಗ್ರಹಗಳು ಇರಬಹುದೇ ಎಂಬುದನ್ನು ತಿಳಿಯಿರಿ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಒಂದೇ ದೇವರ ಎರಡು ವಿಗ್ರಹಗಳು ಇಟ್ಟುಕೊಳ್ಳಬಹುದೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಒಂದೇ ದೇವರ ಎರಡು ವಿಗ್ರಹಗಳು ಇಟ್ಟುಕೊಳ್ಳಬಹುದೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ.

ಒಬ್ಬ ವ್ಯಕ್ತಿಯ ಜೀವನದಲ್ಲಿನ ಪ್ರಗತಿಗೆ ಶಕ್ತಿ ಅಥವಾ ಆತ ವಾಸಿಸುವ ಮನೆಯ ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆ. ಉದ್ಯೋಗದ ಸ್ಥಳದ ಪರಿಸರ ಆತನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡುತ್ತಾನೆ, ಆದರೆ ಇದರ ಹೊರತಾಗಿಯೂ, ಆತನು ಯಶಸ್ಸನ್ನು ಪಡೆಯುವುದಿಲ್ಲ. ವಾಸ್ತು ಪ್ರಕಾರ, ಇದಕ್ಕೆ ಒಂದು ಕಾರಣವೆಂದರೆ ಆ ವ್ಯಕ್ತಿ ಇರುವ ಸುತ್ತಲಿನ ಪರಿಸರದಲ್ಲಿ ಆವರಿಸಿರುವ ನಕಾರಾತ್ಮಕ ಶಕ್ತಿ. ಒಂದು ವೇಳೆ ನಿಮ್ಮ ಜೀವನದಲ್ಲೂ ಇಂಥ ನಕಾರಾತ್ಮಕ ಶಕ್ತಿ ಇದ್ದರೆ ಅದನ್ನು ತೆಗೆದುಹಾಕಿ ಸಕಾರಾತ್ಮಕ ಶಕ್ತಿ ಉಂಟಾಗುವಂತೆ ಮಾಡಬಹುದು. ಆಗ ನಿಮ್ಮ ಜೀವನದಲ್ಲಿ ಪ್ರಗತಿಯ ಮಾರ್ಗ ತೆರೆದುಕೊಳ್ಳುತ್ತದೆ.

ವಾಸ್ತುವಿನಲ್ಲಿ ಕೆಲವು ಸಲಹೆಗಳಿವೆ. ಸಕಾರಾತ್ಮಕ ಶಕ್ತಿಯು ಪ್ರಸಾರವಾಗುವ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ ಎಂದು ಆಚಾರ್ಯ ಮುಕುಲ್ ರಸ್ತೋಗಿ ಅವರು ಹೇಳುತ್ತಾರೆ. ಮನೆ ಮತ್ತು ಕಚೇರಿಯಲ್ಲಿ ವಾಸ್ತು ಪ್ರಕಾರ ವಾತಾವರಣ ಹೇಗಿರಬೇಕು ಎಂಬುದನ್ನು ಮುಕುಲ್ ಅವರು ವಿವರಿಸಿದ್ದು, ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

ಮನೆ ಅಥವಾ ಕಚೇರಿಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ವಾಸ್ತು ಸಲಹೆಗಳು

ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿ ಉಂಟಾಗಲು ಮೊದಲು ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಎರಡು ಶಿವಲಿಂಗಗಳು, ಮೂರು ಗಣೇಶ, ಎರಡು ಸಾಲಿಗ್ರಾಮಗಳು ಇದ್ದರೆ ಅವುಗಳನ್ನು ತೆರೆವು ಗೊಳಿಸಬೇಕು. ಮನೆಯಲ್ಲಿ ಒಂದೇ ದೇವರ ಎರಡು ವಿಗ್ರಹಗಳು ಇಡಬಾರದು. ಅದರಲ್ಲೂ ಶಿವಲಿಂಗವನ್ನು ಮನೆಯಲ್ಲಿ ಇಡಬಾರದು, ಆದರೆ ನೀವು ಇದನ್ನು ಇಡಬೇಕಾದರೆ ತುಂಬಾ ಸಣ್ಣ ಪ್ಯಾರಾಡ್ ಅಥವಾ ಹರಳುಗಳನ್ನು ಇಡಬಹುದು.

ಸಾಲಿಗ್ರಾಮ ಚಿಕ್ಕದಿದ್ದಷ್ಟೂ ಒಳ್ಳೆಯದು. ದೀಪವನ್ನು ದೀಪದಿಂದ ಬೆಳಗಿಸಬಾರದು. ದೀಪದ ಕೆಳಗೆ ಸ್ವಲ್ಪ ಅಕ್ಕಿಯನ್ನು ಇಡಬೇಕು. ನಿಮ್ಮ ಪೂಜೆಯಲ್ಲಿ ನೀರಿನ ಮಡಕೆ ಇಡಬೇಕು. ಪೂಜೆಯ ಸಂದರ್ಭದಲ್ಲಿ ದೇವರಿಗೆ ಹಣ್ಣುಗಳನ್ನು ಅರ್ಪಿಸಿ. ಕಟ್ ಮಾಡಿದ ಹಣ್ಣುಗಳನ್ನು ದೇವರಿಗೆ ಇಡಬೇಡಿ. ನೀವು ಪೂಜಿಸುತ್ತೀರೋ ಇಲ್ಲವೋ, ಮನೆಯ ಶುಭ ದಿಕ್ಕಿನಲ್ಲಿ ಒಂದು ಸ್ಥಳವನ್ನು ಮಾಡಿ, ಅಲ್ಲಿ ನೀವು ಸ್ವಲ್ಪ ಸಮಯ ಧ್ಯಾನದಲ್ಲಿ ಕುಳಿತುಕೊಳ್ಳಿ. ಇದು ನಿಮ್ಮ ಮನಸ್ಸಿನ ಶಾಂತಿಯನ್ನು ನೀಡುತ್ತದೆ.

ಮನೆಯ ಮುಖ್ಯ ಬಾಗಿಲಿಗೆ ಸಂಬಂಧಿಸಿದ ಸುಲಭ ವಾಸ್ತು ಸಲಹೆಗಳು

ಮನೆಯ ಮುಖ್ಯ ಬಾಗಿಲಿನಲ್ಲಿ ಕುಂಕುಮ-ಅರಿಶಿನವನ್ನು ಬೆರೆಸಿ ಸ್ವಸ್ತಿಕ್ ಅವನ್ನು ಬರೆಯಿರಿ. ಮುಖ್ಯ ದ್ವಾರದಲ್ಲಿ ಅಶೋಕ ಮತ್ತು ಮಾವಿನ ಎಲೆಗಳ ತೋರಣವನ್ನು ಕಟ್ಟಿ. ಇದನ್ನು ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಬದಲಾಯಿಸಬೇಕು. ಹೀಗೆ ಮಾಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ.

ಬೆಳಿಗ್ಗೆ ಎದ್ದು ಮುಖ್ಯ ಬಾಗಿಲನ್ನು ಸ್ವಚ್ಛಗೊಳಿಸಬೇಕು. ಬಾಗಿಲಿಗೆ ನೀರು ಮತ್ತು ಗೋಮೂತ್ರವನ್ನು ಸಿಂಪಡಿಸಿ. ಮುಖ್ಯ ದ್ವಾರದ ಮುಂದೆ ಕಂಬ ಅಥವಾ ಮರವಿದ್ದರೆ, ಅದನ್ನು ತೆಗೆದುಹಾಕಿ. ಈರೀತಿ ಮಾಡುವುದರಿಂದ, ಜೀವನದಲ್ಲಿ ಸಕಾರಾತ್ಮಕ ಶಕ್ತಿ ಪ್ರಸಾರವಾಗುತ್ತದೆ. ನಕಾರಾತ್ಮಕ ಶಕ್ತಿ ಓಡಿ ಹೋಗುತ್ತೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.