ನವರಾತ್ರಿಯ 5ನೇ ದಿನ ಸ್ಕಂದಮಾತಾ ದೇವಿಗೆ ವಿಶೇಷ ಪೂಜೆ; ಈ ಹೆಸರು ಹೇಗೆ ಬಂತು, ಮಹತ್ವ ತಿಳಿಯಿರಿ
ಶರನ್ನವರಾತ್ರಿ ಆರಂಭವಾಗಿ ನಾಲ್ಕು ದಿನಗಳು ಕಳೆದಿದ್ದು, ಸಂಭ್ರಮದ ಪೂಜೆ ಮುಂದುವರಿದಿದೆ. ನವರಾತ್ರಿಯ ಐದನೇ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗೆಯ 9 ರೂಪಗಳಲ್ಲಿ ಸ್ಕಂದಮಾತೆ ಕೂಡ ಒಂದಾಗಿದೆ. ಸ್ಕಂದಮಾತೆಯ ಪೂಜಾ ವಿಧಾನ ಮತ್ತು ಆರತಿಯ ಕುರಿತ ಮಾಹಿತಿ ಇಲ್ಲಿದೆ.
ನವರಾತ್ರಿಯ 5 ನೇ ದಿನ ಸ್ಕಂದಮಾತಾ ದೇವಿ ಪೂಜೆ: ನವರಾತ್ರಿಯ ಐದನೇ ದಿನ ವಿಶೇಷವಾಗಿ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯ ಈ ರೂಪವನ್ನು ಪೂಜಿಸುವ ಮೂಲಕ ಭಕ್ತರ ಎಲ್ಲಾ ಆಸೆಗಳುಈಡೇರುತ್ತವೆ, ಆದರೆ ಮೋಕ್ಷದ ಮಾರ್ಗವನ್ನು ಸಹ ಪ್ರವೇಶಿಸಬಹುದು. ದೇವಿ ತನ್ನ ಭಕ್ತರ ಮೇಲೆ ಮಕ್ಕಳಂತೆ ವಾತ್ಸಲ್ಯವನ್ನು ತೋರಿಸುತ್ತಾಳೆ. ದೇವಿಯನ್ನು ಪೂಜಿಸುವುದರಿಂದ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ತಾಯಿಯನ್ನು ನೆನಪಿಸಿಕೊಂಡರೆ ಮಾತ್ರ ಅಸಾಧ್ಯ ಕಾರ್ಯಗಳು ಸಾಧ್ಯ. ಕಾರ್ತಿಕೇಯನ ತಾಯಿಯಾದ ಕಾರಣ, ದೇವಿಯ ಈ ರೂಪಕ್ಕೆ ಸ್ಕಂದಮಾತಾ ಎಂಬ ಹೆಸರು ಬಂದಿತು. ಕಾಶಿ ಖಂಡ, ದೇವಿ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ದೇವಿಯ ಬಗ್ಗೆ ವಿಶಾಲವಾದ ವರ್ಣನೆ ಇದೆ. ದೇವಿಯನ್ನು ಪೂಜಿಸಿದರೆ ಶಾಂತಿ ಮತ್ತು ಸಂತೋಷ ಇರುತ್ತದೆ.
ಸ್ಕಂದಮಾತಾ ಸ್ಕಂದ ಕುಮಾರ್ ಕಾರ್ತಿಕೇಯನ ತಾಯಿ. ತಾಯಿಯ ರೂಪದ ಬಗ್ಗೆ ಮಾತನಾಡುವಾಗ, ಸ್ಕಂದ ದೇವನು ಸ್ಕಂದಮಾತೆಯ ತೊಡೆಯ ಮೇಲೆ ಕುಳಿತಿದ್ದಾನೆ. ತಾಯಿ ಸ್ಕಂದಮಾತಾ ಕಮಲದ ಆಸನದ ಮೇಲೆ ಕುಳಿತಿದ್ದಾಳೆ, ಆದ್ದರಿಂದ ಅವಳನ್ನು ಪದ್ಮಾಸನ ದೇವಿ ಅಂತಲೂ ಕರೆಯಲಾಗುತ್ತದೆ. ಸ್ಕಂದಮಾತೆಯನ್ನು ಗೌರಿ, ಮಹೇಶ್ವರಿ, ಪಾರ್ವತಿ ಹಾಗೂ ಉಮಾ ಅಂತಲೂ ಕರೆಯುತ್ತಾರೆ. ದೇವಿಯ ವಾಹನವು ಸಿಂಹವಾಗಿದೆ. ತಾಯಿಯನ್ನು ಪೂಜಿಸಿದರೆ ಮಕ್ಕಳು ಇಲ್ಲದವರಿಗೆ ಸಂತಾನ ಭಾಗ್ಯವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ. ಸ್ಕಂದಮಾತೆಯ ಪೂಜಾ ವಿಧಾನ ಮತ್ತು ಆರತಿಯ ಬಗ್ಗೆ ತಿಳಿಯೋಣ.
ಸ್ಕಂದಮಾತಾ ಪೂಜಾ ವಿಧಾನ
- ಬೆಳಿಗ್ಗೆ ಬೇಗನೆ ಎದ್ದು ಸ್ನಾನದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ, ಪೂಜೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು
- ತಾಯಿಯ ಪ್ರತಿಮೆಯನ್ನು ಗಂಗಾ ನೀರಿನಿಂದ ಸ್ನಾನ ಮಾಡಿಸಬೇಕು
- ಸ್ನಾನ ಮಾಡಿದ ನಂತರ ಹೂವುಗಳನ್ನು ಅರ್ಪಿಸಬೇಕು
- ದೇವಿಗೆ ಅರಿಶಿನ ಕುಂಕುಮವನ್ನು ಹಚ್ಚಬೇಕು
- ದೇವಿಗೆ ಸಿಹಿತಿಂಡಿಗಳು ಹಾಗೂ ಐದು ರೀತಿಯ ಹಣ್ಣುಗಳನ್ನು ಅರ್ಪಿಸಬೇಕು
- ಸಾಧ್ಯವಾದಷ್ಟು ಸ್ಕಂದಮಾತಾಯನ್ನು ಧ್ಯಾನಿಸಿ
- ದೇವಿ ಸ್ಕಂದಮಾತೆಗೆ ಆರತಿ ಮಾಡಲು ಮರೆಯದಿರ
ಸ್ಕಂದಮಾತಾ ದೇವಿ ಪೂಜೆ ವೇಳೆ ಪಠಿಸಬೇಕಾದ ಮಂತ್ರಗಳು
ಸಿಂಹಾಸನ ಗತ ನಿತ್ಯಂ ಪದ್ಮಾಶ್ರೀ ತಕರದ್ವಯಾ |
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ||
ಯಾ ದೇವಿ ಸರ್ವಭೂತೇಷು ಮಾಂ ಸ್ಕಂದಮಾತಾ ರೂಪೇಣಾ ಸಂಸ್ಥಿತಾ|
ನಮಸ್ತಸ್ತ್ಯೈ ನಮಸ್ತಸ್ತ್ಯೈ ನಮಸ್ತಸ್ತ್ಯೈ ನಮೋ ನಮಃ||
ಓಂ ದೇವಿ ಸ್ಕಂದಮಾತಾಯೈ ನಮಃ
ಓಂ ಸ್ಕಂದಮಾತಾಯೈ ನಮಃ
ನವರಾತ್ರಿಯ 5ನೇ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸಿ ಮಂತ್ರಗಳನ್ನು ಪಠಿಸುವುದರಿಂದ ಭಕ್ತರಲ್ಲಿ ಅಧ್ಯಾತ್ಮಿಕ ಶಕ್ತಿ ವೃದ್ಧಿಯಾಗುತ್ತದೆ. ದೇವಿಯನ್ನು ಪಂಚಮ ತಿಥಿಯ ಅಧಿದೇವತೆ ಸ್ಕಂದಮಾತಾ ಅಂತಲೂ ಕರೆಯಲಾಗುತ್ತದೆ. ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಧನ ಲಾಭವೂ ಇರುತ್ತದೆ ಎಂಬ ನಂಬಿಕೆ ಇದೆ.