ಪದೇ ಪದೇ ತುಳಸಿ ಗಿಡ ಒಣಗುತ್ತಿದ್ಯಾ, ತುಳಸಿ ಸೊಂಪಾಗಿ ಚಿಗುರಿ ಸದಾ ಹಸಿರಾಗಿರಲು ಈ ಕ್ರಮ ತಪ್ಪದೇ ಪಾಲಿಸಿ
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಬಹುತೇಕ ಹಿಂದೂಗಳ ಮನೆ ಎದುರು ತುಳಸಿ ಗಿಡ ನೆಡಲಾಗುತ್ತದೆ. ಆದರೆ ಕೆಲವರು ಎಷ್ಟೇ ತುಳಸಿ ಗಿಡ ನೆಟ್ಟರೂ ಸಾಯುತ್ತದೆ, ಇಲ್ಲ ಅಂದ್ರೆ ಗಿಡ ತಾನಾಗಿಯೇ ಬಾಡಿ ಹೋಗುತ್ತದೆ. ಹಾಗಾದರೆ ತುಳಸಿ ಗಿಡ ಸೊಂಪಾಗಿ ಬೆಳೆದು ಸದಾ ಹಸಿರಾಗಿರಲು ಏನು ಮಾಡಬೇಕು ನೋಡಿ.
ಹಿಂದೂಗಳಲ್ಲಿ ತುಳಸಿ ಗಿಡಕ್ಕೆ ವಿಶೇಷ ಪ್ರಾಮುಖ್ಯವನ್ನು ನೀಡಲಾಗುತ್ತದೆ. ಇದನ್ನು ದೈವಿಕ ರೂಪದಲ್ಲಿ ಪೂಜಿಸಲಾಗುತ್ತದೆ. ಪ್ರತಿ ಮನೆಯ ಎದುರುಗಡೆ ತುಳಸಿ ಗಿಡ ಇರುತ್ತದೆ. ಇದರಿಂದ ಲಕ್ಷ್ಮೀನಾರಾಯಣರು ಆ ಸ್ಥಳದಲ್ಲಿ ನೆಲೆಸುತ್ತಾರೆ ಎಂಬ ನಂಬಿಕೆಯೂ ಹಿಂದೂಗಳಲ್ಲಿದೆ. ಪ್ರತಿನಿತ್ಯ ತುಳಸಿಗೆ ಪೂಜೆ ಮಾಡಲಾಗುತ್ತದೆ.
ಇಂತಹ ಪವಿತ್ರ ತುಳಸಿಯು ಆಗಾಗ ಬಾಡಿ ಹೋಗುತ್ತದೆ. ಕೆಲವೊಮ್ಮೆ ಬೇಗನೆ ಒಣಗುತ್ತದೆ, ಎಷ್ಟೇ ನೆಟ್ಟರೂ ಪದೇ ಪದೇ ಸಾಯುತ್ತದೆ.ಅಂತಹ ಸಂದರ್ಭದಲ್ಲಿ ತುಳಸಿ ಗಿಡ ಬಾಡಲು ಅಥವಾ ಒಣಗಲು ಕಾರಣವೇನು ಎಂಬುದನ್ನು ಕಂಡುಕೊಳ್ಳಬೇಕು. ಅಲ್ಲದೆ ಗಿಡ ಒಣಗದೇ ಸೊಂಪಾಗಿ ಬೆಳೆದು, ಸದಾ ಹಸಿರಾಗಿರಲು ಯಾವ ಮುನ್ನೆಚ್ಚರಿಕೆ ವಹಿಸಬೇಕು ಎಂಬ ವಿವರ ಇಲ್ಲಿದೆ.
ತುಳಸಿ ಗಿಡ ಒಣಗಲು ಕಾರಣಗಳು
ತುಳಸಿ ದಳ: ತುಳಸಿ ದಳ ಅಥವಾ ಹೂ ಗಿಡಕ್ಕೆ ಹಾನಿ ಮಾಡಬಹುದು. ಕೆಲವೆಡೆ ಇದನ್ನು ತುಳಸಿ ಕದಿರು ಎಂದು ಕೂಡ ಕರೆಯುತ್ತಾರೆ. ಕಾಲ ಕಾಲಕ್ಕೆ ತುಳಸಿ ಕದಿರನ್ನು ಕತ್ತರಿಸಬೇಕು, ಇದನ್ನು ಬೆಳೆಯಲು ಬಿಟ್ಟರೆ ಗಿಡಕ್ಕೆ ಹಾನಿಯಾಗುವುದು ಖಂಡಿತ. ಇದನ್ನು ಕತ್ತರಿಸುವುದರಿಂದ ತುಳಸಿ ಗಿಡವು ಸೊಂಪಾಗಿ ಬೆಳೆಯುತ್ತದೆ.
ಒಣ ಕೊಂಬೆಗಳು: ತುಳಸಿಯ ಸಣ್ಣ ಕಾಂಡಗಳು ಒಣಗಿದರೂ ಕತ್ತರಿಸುವುದು ಮುಖ್ಯ. ಇದರಿಂದ ಉಳಿದ ಕಾಂಡಗಳು ಕೊಂಬೆಗಳು ಬೆಳೆಯುವುದಿಲ್ಲ. ಆದ್ದರಿಂದ ಸಣ್ಣ ಒಣ ಕಾಂಡವಿದ್ದರೆ ಅದನ್ನು ತಕ್ಷಣವೇ ಕತ್ತರಿಸಿ. ಆಗ ಆ ಜಾಗದಲ್ಲಿ ಹೊಸ ಹಸಿರು ಕಾಂಡವು ಹೊರಹೊಮ್ಮುತ್ತದೆ.
ಎಲೆಗಳು: ತುಳಸಿಯ ಎಲೆಗಳು ಬೇರುಗಳ ಬಳಿ ಬೀಳುತ್ತವೆ. ಅವುಗಳನ್ನು ಆಗಾಗ ತೆಗೆದು ಸ್ವಚ್ಛ ಮಾಡಬೇಕು.
ನೀರು ಹಾಕುವುದು: ತುಳಸಿ ಗಿಡವನ್ನು ಪೂಜಿಸುವುದು ಮತ್ತು ಅದಕ್ಕೆ ಪ್ರತಿದಿನ ನೀರು ಹಾಕುವುದು ಬಹುತೇಕ ಎಲ್ಲ ಮನೆಗಳಲ್ಲಿ ಆಚರಣೆಯಾಗಿದೆ. ಆದರೆ ಸ್ವಲ್ಪ ನೀರು ಹಾಕಿದರೆ ಪರವಾಗಿಲ್ಲ, ಹೆಚ್ಚು ನೀರು ಹಾಕಿದರೂ ತುಳಸಿ ಒಣಗಲು ಪ್ರಾರಂಭಿಸುತ್ತದೆ. ಹಾಗಾಗಿ ತುಳಸಿ ಗಿಡಕ್ಕೆ ಯಾವಾಗಲೂ ಮಧ್ಯಮ ಪ್ರಮಾಣದಲ್ಲಿ ನೀರು ಹಾಕಿ.
ತುಳಸಿ ಒಣಗದಂತೆ ನೋಡಿಕೊಳ್ಳಲು ಹೀಗೆ ಮಾಡಿ
* ತುಳಸಿ ಒಣಗುವುದನ್ನು ತಡೆಯಲು ಮಣ್ಣು ಎಂದಿಗೂ ತೇವವಾಗಿರಬಾರದು. ನೀವು ಕಡಿಮೆ ನೀರು ಹಾಕಿದರೆ, ತೇವವು ಸ್ವಲ್ಪ ವೇಗವಾಗಿ ಒಣಗುತ್ತದೆ. ಇದು ಸಸ್ಯಕ್ಕೆ ಗಾಳಿಯ ಪೂರೈಕೆಯನ್ನು ಒದಗಿಸುತ್ತದೆ.
* ಹವಾಮಾನ ಬದಲಾವಣೆಯಿಂದ ತುಳಸಿ ಎಲೆಗಳಿಗೆ ಕ್ರಿಮಿಗಳು ಬಂದರೆ ಬೇವಿನ ಎಣ್ಣೆಯನ್ನು ನೀರಿಗೆ ಸಿಂಪಡಿಸಬೇಕು ಅಥವಾ ನೀರಿನಲ್ಲಿ ಅರಿಶಿನವನ್ನು ಸಿಂಪಡಿಸಿ. ಇದು ತುಳಸಿ ಎಲೆಗಳಲ್ಲಿರುವ ಕೀಟಗಳನ್ನೂ ಕೊಲ್ಲುತ್ತದೆ.
* ತುಂಬಾ ಚಳಿಯ ಸಮಯದಲ್ಲಿ ತಂಪಾದ ಗಾಳಿಯಿಂದ ರಕ್ಷಿಸಲು, ರಾತ್ರಿಯಲ್ಲಿ ತೆಳುವಾದ ಬಟ್ಟೆಯಿಂದ ಮುಚ್ಚಿ ಮತ್ತು ಬೆಳಿಗ್ಗೆ ಅದನ್ನು ತೆಗೆದುಹಾಕಿ. ಇದು ಸಸ್ಯಕ್ಕೆ ಹಾನಿಯಾಗದಂತೆ ತಡೆಯುತ್ತದೆ.
* ತುಳಸಿ ಗಿಡವನ್ನು ಹಗಲಿನಲ್ಲಿ ಬಿಸಿಲಿನ ಜಾಗದಲ್ಲಿ ಇಡಲು ಮರೆಯದಿರಿ