ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಒಂದೇ ಗೋತ್ರದವರು ಮದುವೆಯಾಗಬಾರದು ಯಾಕೆ? ವಿವಾಹಕ್ಕಿದು ಯಾಕೆ ಮುಖ್ಯ, ಗೋತ್ರದ ಮಹತ್ವ ತಿಳಿಯಿರಿ

ಒಂದೇ ಗೋತ್ರದವರು ಮದುವೆಯಾಗಬಾರದು ಯಾಕೆ? ವಿವಾಹಕ್ಕಿದು ಯಾಕೆ ಮುಖ್ಯ, ಗೋತ್ರದ ಮಹತ್ವ ತಿಳಿಯಿರಿ

ಹಿಂದೂ ಧರ್ಮದಲ್ಲಿ ವಂಶ ಅಥವಾ ಕುಲವನ್ನು ಕುರುತಿಸಲು ಗೋತ್ರಗಳನ್ನು ಬಳಸಲಾಗುತ್ತದೆ. ಪ್ರಾಚೀನ ಕಾಲದ ಋಷಿಗಳ ಹೆಸರುಗಳನ್ನು ಗೋತ್ರಗಳಿಗೆ ಇಡಲಾಗಿರುತ್ತದೆ. ಒಂದೇ ಗೋತ್ರದವರು ಮದುವೆಯಾಗುವುದಿಲ್ಲ. ಯಾಕೆ ಅನ್ನೋದನ್ನೇ ಇಲ್ಲಿ ನೀಡಲಾಗಿದೆ.

ಒಂದೇ ಗೋತ್ರದವರು ಮದುವೆಯಾಗಬಾರದು ಯಾಕೆ? ವಿವಾಹಕ್ಕಿದು ಯಾಕೆ ಮುಖ್ಯ, ಗೋತ್ರದ ಮಹತ್ವ ತಿಳಿಯಿರಿ
ಒಂದೇ ಗೋತ್ರದವರು ಮದುವೆಯಾಗಬಾರದು ಯಾಕೆ? ವಿವಾಹಕ್ಕಿದು ಯಾಕೆ ಮುಖ್ಯ, ಗೋತ್ರದ ಮಹತ್ವ ತಿಳಿಯಿರಿ

ಬೆಂಗಳೂರು: ಹಿಂದೂ ಪುರಾಣಗಳಲ್ಲಿ ಗೋತ್ರಕ್ಕೆ (Importance of Gotra) ತುಂಬಾ ಪ್ರಾಮುಖ್ಯವಿದೆ. ಧಾರ್ಮಿಕ ವಿಧಿ ವಿಧಾನಗಳು, ಮದುವೆಯಂತಹ ಶುಭ ಕಾರ್ಯಗಳಿಗೆ ಗೋತ್ರಗಳನ್ನು ಪರಿಗಣಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವೂ ಆಗಿದೆ. ಒಬ್ಬ ವ್ಯಕ್ತಿ ಯಾವ ವಂಶ ಅಥವಾ ಕುಲಕ್ಕೆ ಸೇರಿದವರು ಎಂಬುದನ್ನು ಗುರುತಿಸಲು ಗೋತ್ರವನ್ನು ಬಳಸಲಾಗುತ್ತದೆ. ಇದೇ ಗೋತ್ರದ ಆಧಾರ ಮೇಲೆ ಕುಲವನ್ನು ತಿಳಿಯಬಹುದು. ಈ ವ್ಯವಸ್ಥೆ ಶತಮಾನಗಳಿಂದ ರೂಢಿಯಲ್ಲಿದೆ. ಒಂದೇ ಗೋತ್ರದವರು ಮದುವೆಯಾಗುವುದಿಲ್ಲ. ಗೋತ್ರಗಳ ಹಿನ್ನೆಲೆ ಹಾಗೂ ಮಹತ್ವವನ್ನು ತಿಳಿಯಿರಿ.

ಪ್ರತಿಯೊಂದು ಗೋತ್ರಕ್ಕೂ ಪ್ರಾಚೀನ ಕಾಲದ ಋಷಿಗಳ ಒಬೊಬ್ಬರ ಹೆಸರನ್ನು ಇಡಲಾಗಿರುತ್ತದೆ. ಉದಾರಣೆಯಾಗಿ ನೋಡುವುದಾದರೆ ಭಾರದ್ವಾಜ ಗೋತ್ರಕ್ಕೆ ಭಾರದ್ವಾಜ ಋಷಿಯ ಹೆಸರನ್ನು ಇಡಲಾಗಿದೆ. ಕಶ್ಯಪ್ ಗೋತ್ರಕ್ಕೆ ಕಶ್ಯಪ್ ಋಷಿಯ ಹೆಸರನ್ನು ಇಡಲಾಗಿದೆ. ಹೀಗೆ ಬಹುತೇಕ ಗೋತ್ರಗಳಿಗೆ ಋಷಿಗಳ ಹೆಸರುಗಳನ್ನು ಇಡಲಾಗಿರುತ್ತದೆ.

ಇನ್ನು ಒಂದೇ ಗೋತ್ರದ ಇಬ್ಬರು ಮದುವೆಯಾಗಲು ಬಯಸಿದರೆ ಇದಕ್ಕೆ ತುಂಬಾ ವಿರೋಧ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಒಂದೇ ಗೋತ್ರದವರಿಗೆ ಹೆಣ್ಣನ್ನು ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡುವುದಿಲ್ಲ. ರಕ್ತ ಸಂಬಂಧಿಗಳಾಗಿದ್ದರೂ ವಿವಾಹ ನಡೆಯುವುದನ್ನು ಖಚಿತ ಪಡಿಸಿಕೊಳ್ಳಲು ನಡೆಸುವ ಎಕ್ಸೋಗಾಮಿ ಎಂದು ಕರೆಯುವ ಈ ಅಭ್ಯಾಸವನ್ನು ಅನುಸರಿಸಲಾಗುತ್ತದೆ. ಇದು ಸಮುದಾಯದಲ್ಲಿನ ಆನುವಂಶಿಕ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಪುರಾತನ ಗ್ರಂಥಗಳ ಪ್ರಕಾರ, ಏಳು ಪ್ರಾಥಮಿಕ ಗೋತ್ರಗಳು ಸಪ್ತಋಷಿಗಳಿಗೆ ಸಂಬಂಧಿಸಿವೆ. ಬ್ರಹ್ಮಾಂಡದ ಸೃಷ್ಟಿಕರ್ತನಾದ ಭಗವಾನ್ ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಪುತ್ರರಾದ ಏಳು ಮಹಾನ್ ಋಷಿಗಳ ಹೆಸರನ್ನು ಗೋತ್ರಗಳಿಗೆ ಇಡಲಾಗಿದೆ. ಅವುಗಳೆಂದರೆ ವಶಿಷ್ಠ, ವಿಶ್ವಾಮಿತ್ರ, ಅತ್ರಿ, ಜಮದಗ್ನಿ, ಗೌತಮ, ಭಾರದ್ವಾಜ ಹಾಗೂ ಕಶ್ಯಪ್. ಈ ಪ್ರತಿಯೊಂದು ಋಷಿಗಳು ತಮ್ಮ ವಂಶಾವಳಿಗಳನ್ನು ಸ್ಥಾಪಿಸಿದ್ದಾರೆ ಎಂದು ಗ್ರಂಥಗಳಲ್ಲಿ ಹೇಳಲಾಗುತ್ತದೆ.

ಗೋತ್ರಕ್ಕೆ ಸಂಬಂಧಿಸಿದ ಆಸಕ್ತಿಕರ ವಿಚಾರಗಳು

  • ಹಿಂದೂ ಸಮಾಜದಲ್ಲಿ 49 ಕ್ಕೂ ಹೆಚ್ಚು ಗೋತ್ರಗಳಿವೆ. ಬಹುತೇಕ ಗೋತ್ರಗಳು ಋಷಿಗಳ ಹೆಸರುಗಳಿಂದ ಕೂಡಿರುತ್ತವೆ
  • ಗೋತ್ರಗಳನ್ನು ಸಾಮಾನ್ಯವಾಗಿ ಪುರುಷ ರೇಖೆಯ ಮೂಲಕ ರವಾನಿಸಲಾಗುತ್ತದೆ. ಒಂದು ಮಗು ತಂದೆಯ ಗೋತ್ರವನ್ನು ಆನುವಂಶಿಕವಾಗಿ ಪಡೆಯುತ್ತೆ
  • ಮಹಿಳೆಯರು ಮದುವೆಯಾದ ಬಳಿಕ ತಮ್ಮ ಗಂಡನ ಗೋತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಮದುವೆಗೆ ಮುನ್ನ ಇವರ ಗೋತ್ರಿಕಾರಿಣಿ ಅಂತ ಕರೆಯಲಾಗುತ್ತೆ. ಇದು ತಂಡೆ ವಂಶವನ್ನು ಸೂಚಿಸುತ್ತೆ

ಇದನ್ನೂ ಓದಿ: ಇಲ್ಲಿ ಶಿವಲಿಂಗ ದರ್ಶನ ಮಾಡಲು ನೀರಿನಲ್ಲಿ ಮುಳುಗಿ ಮತ್ತೊಂದು ಬದಿಯಲ್ಲಿ ಏಳಬೇಕು; ಬಾದಾಮಿ ಮಹಾಕೂಟೇಶ್ವರ ದೇವಸ್ಥಾನ ದರ್ಶನ

  • ಭಾರತೀಯ ಸಂಪ್ರದಾಯಗಳಲ್ಲಿ ಗೋತ್ರ ದೀರ್ಘಕಾಲದ ಪ್ರಾಮುಖ್ಯವನ್ನು ಎತ್ತ ತೋರಿಸುತ್ತೆ
  • ಹಿಂದೂ ಅಷ್ಟೇ ಅಲ್ಲದೆ ಜೈನ ಹಾಗೂ ಬೌದ್ಧರು ಸೇರಿದಂತೆ ಇತರೆ ಕಲವು ಧರ್ಮಗಳಲ್ಲಿ ಗೋತ್ರಗಳನ್ನು ಗುರುತಿಸಲಾಗುತ್ತದೆ
  • ವಿವಿಧ ರಾಜ್ಯಗಳು ಮತ್ತು ವಿವಿಧ ಭಾಷೆಗಳ ಆಧಾರದ ಮೇಲೆ ಗೋತ್ರಗಳ ನಿರ್ದಿಷ್ಟವಾಗಿ ಬದಲಾಗಿವೆ
  • ಜನರು ಸಾಮಾನ್ಯವಾಗಿ ತಮ್ಮ ಮನೆಯ ಹಿರಿಯರಿಂದ ಗೋತ್ರಗಳನ್ನು ತಿಳಿದುಕೊಳ್ಳುತ್ತಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)